Site icon Vistara News

Cricket : ಕನ್ನಡತಿಯ ಮಾರಕ ಬೌಲಿಂಗ್​ಗೆ ಹಾಂಕಾಂಗ್​​ ತಂಡ ಚಿಂದಿ!

Shreyanka Patil

#image_title

ಹಾಂಕಾಂಗ್: ಉದಯೋನ್ಮುಖ ಆಲ್​ರೌಂಡರ್​ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಹಾಂಕಾಂಗ್ ತಂಡ ಮಹಿಳೆಯರ ಎಮರ್ಜಿಂಗ್​ ಏಷ್ಯಾ ಕಪ್​ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿರುದ್ಧ 9 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಬೆಂಗಳೂರು ಮೂಲದ ಶ್ರೇಯಾಂಕ ಪಾಟೀಲ್ ಅವರು ಮಹಿಳೆಯರ ಪ್ರಿಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಮಿಂಚಿದ್ದರು. ಇದೀಗ ಏಷ್ಯಾ ಕಪ್​ನಲ್ಲಿ ಅದ್ವಿತೀಯ ಪ್ರದರ್ಶನ ನೀಡಿರುವ ಅವರು ಕೇವಲ 2 ರನ್ ನೀಡಿ 5 ವಿಕೆಟ್​ಗಳನ್ನು ಪಡೆದು ಮಿಂಚಿದ್ದಾರೆ.

ಡಬ್ಲ್ಯುಪಿಎಲ್​​ನ ಉದ್ಘಾಟನಾ ಆವೃತ್ತಿಯಲ್ಲಿ ಆರ್​​ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ 20 ವರ್ಷದ ಶ್ರೇಯಾಂಕಾ ಹಾಂಕಾಂಗ್​ ತಂಡಕ್ಕೆ ಚೇತರಿಕೆಗೆ ಅವಕಾಶ ನೀಡಲೇ ಇಲ್ಲ. ಆ ತಂಡ ಆರಂಭಿಕ ಆಟಗಾರ್ತಿ ಮಾರಿಕೊ ಹಿಲ್ 19 ಎಸೆತಗಳಲ್ಲಿ 14 ರನ್ ಗಳಿಸುವುದರೊಂದಿಗೆ ಹಾಂಕಾಂಗ್ 14 ಓವರ್​​ಗಳಲ್ಲಿ 34 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಅಂಡರ್-19 ವಿಶ್ವ ಕಪ್ ತಾರೆಗಳಾದ ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್ (2/2) ಮತ್ತು ಲೆಗ್ ಸ್ಪಿನ್ನರ್ ಪಾರ್ಶವಿ ಚೋಪ್ರಾ (2/12) ಹಾಂಕಾಂಗ್​ ತಂಡದ ಬೆನ್ನೆಲುಬು ಮುರಿದ ಇತರ ಆಟಗಾರ್ತಿಯರು. ಇದಕ್ಕೆ ಉತ್ತರವಾಗಿ ಭಾರತ 5.2 ಓವರ್ ಗುರಿ ಮುಟ್ಟಿ ಜಯ ಸಾಧಿಸಿತು. ಗೊಂಗಾಡಿ ತ್ರಿಷಾ ಅಜೇಯ 19 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ಹಾಂಗ್ ಕಾಂಗ್ 14 ಓವರ್​​ಗಳಲ್ಲಿ 34 (ಶ್ರೇಯಾಂಕಾ ಪಾಟೀಲ್ 2 ರನ್​ಗೆ5 ವಿಕೆಟ್​).

ಭಾರತ 5.2 ಓವರ್ ಗಳಲ್ಲಿ 1 ವಿಕೆಟ್ ಗೆ 38 (ಜಿ ತ್ರಿಷಾ ಔಟಾಗದೆ 19).

ಇದನ್ನೂ ಓದಿ : Team India : ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಹಿರಂಗಪಡಿಸಿದ ಸೌರವ್​ ಗಂಗೂಲಿ!

ತಮ್ಮ ಅತ್ಯುತ್ತಮ ಸ್ಪೆಲ್ ನಂತರ ಮಾತನಾಡಿದ ಶ್ರೇಯಾಂಕ ಪಾಟೀಲ್, ಬಾಲ್ಯದಿಂದಲೂ ಭಾರತೀಯ ಜೆರ್ಸಿ ಧರಿಸುವ ಕನಸು ಕಾಣುತ್ತಿದ್ದೆ. ಅ ಕನಸು ಕಾಣುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು. ಇದು ತನಗೆ ಮಹತ್ವದ ಪ್ರದರ್ಶನ ಎಂಬುದಾಗಿಯೂ ಹೇಳಿದರು.

ಭಾರತದ ಜೆರ್ಸಿ ಧರಿಸಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಚಿಕ್ಕವಳಾಗಿದ್ದನಿಂದಲೇ ಈ ಜರ್ಸಿ ಧರಿಸುವ ಕನಸು ಕಾಣುತ್ತಿದ್ದೆ. ನಾನು ಕನಸು ಕಾಣುವುದನ್ನು ಮುಂದುವರಿಸುತ್ತೇನೆ. ಆರಂಭದಲ್ಲಿದೆ ಸಿಕ್ಕಿರುವ ಅವಕಾಶವನ್ನು ಸಂಪೂರ್ಣವಾಗಿ ಆನಂದಿಸಿದೆ. ಚೊಚ್ಚಲ ಪಂದ್ಯದಲ್ಲಿ ಐದು ವಿಕೆಟ್​ಗಳನ್ನು ಪಡೆಯುವುದು ಅದ್ಭುತ ಅನುಭವ” ಎಂದು 20 ವರ್ಷದ ಆಟಗಾರ್ತಿ ಹೇಳಿದ್ದಾರೆ.

ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ (ಆರ್ಸಿಬಿ-ಡಬ್ಲ್ಯೂ) ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಪಾಟೀಲ್ ಕೂಡ ಒಬ್ಬರು. ವಿಶೇಷವೆಂದರೆ, ಅವರು ಏಳು ಇನ್ನಿಂಗ್ಸ್​ಗಳಲ್ಲಿ 32.00 ಸರಾಸರಿಯಲ್ಲಿ 62 ರನ್ ಮತ್ತು ಆರು ವಿಕೆಟ್​ ಪಡೆದಿದ್ದಾರೆ.

Exit mobile version