ಮುಂಬಯಿ: ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024 ಆಟಗಾರ್ತಿಯರ ಹರಾಜು(WPL Auction 2024) ಪ್ರಕ್ರಿಯೆ ಇಂದು (ಡಿ.9) ಮುಂಬೈಯಲ್ಲಿ ನಡೆಯಿತು. ಒಟ್ಟು 165 ಆಟಗಾರ್ತಿಯರು ಹರಾಜು ಪಟ್ಟಿಯಲ್ಲಿದ್ದರು. ಇದರಲ್ಲಿ ಐದು ತಂಡಗಳಲ್ಲಿ 30 ಆಟಗಾರ್ತಿಯನ್ನು ಖರೀದಿ ಮಾಡಿತು. ಎಲ್ಲ ತಂಡಗಳ ಆಟಗಾರ್ತಿಯ ಪಟ್ಟಿ ಇಂತಿದೆ.
ಮಲ್ಲಿಕಾ ಸಾಗರ್ ಪ್ರಮುಖ ಆಕರ್ಷಣೆ
ಬಿಡ್ಡಿಂಗ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಹರಾಜುಗಾರ್ತಿ ಮಲ್ಲಿಕಾ ಸಾಗರ್. ಮುಂಬೈ ಮೂಲದವರಾದ ಮಲ್ಲಿಕಾ ಆರ್ಟ್ ಕಲೆಕ್ಟರ್ ಆಗಿದ್ದವರು. ಈಗ ಕಳೆದೆರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಾಜಿನ ಭಾಗವಾಗಿದ್ದರು. ಡಿಸೆಂಬರ್ 19ರಂದು ದುಬೈನಲ್ಲಿ ನಡೆಯುವ ಪುರುಷರ ಐಪಿಎಲ್ ಬಿಡ್ಡಿಂಗ್ನಲ್ಲಿಯೂ ಇವರು ಪಾಲ್ಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
Here is the final set of players who were bought in the final round of WPL 2024 auction.#AshwaniKumari #SophieMolineux #TarannumPathan #WPL #WPL2024 #WPL2024Auction #WPLAuction #WomensPremierLeague #Cricket #SBM pic.twitter.com/YdjZbL7JJU
— SBM Cricket (@Sbettingmarkets) December 9, 2023
ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು
ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಹಾಗೂ ಭಾರತದ ಅನ್ಕ್ಯಾಪ್ಡ್ ಆಟಗಾರ್ತಿ ಕಾಶ್ವಿ ಗೌತಮ್ ಈ ಬಾರಿಯ ಬಿಡ್ಡಿಂಗ್ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು. ಉಭಯ ಆಟಗಾರ್ತಿಯರರು ತಲಾ 2 ಕೋಟಿ ಮೊತ್ತಕ್ಕೆ ಸೇಲ್ ಆದರು. ಕರ್ನಾಟಕದ ವೃಂದಾ ದಿನೇಶ್ 1.3 ಕೋಟಿ ರೂ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1.2 ಕೋಟಿ ರೂ., ಆಸ್ಟ್ರೇಲಿಯಾದ ಯುವ ಆಟಗಾರ್ತಿ ಫೋಬಿ ಲಿಚ್ ಫೀಲ್ಡ್ 1 ಕೋಟಿ ರೂ.ಗೆ ಸೇಲ್ ಆದರು.
ಆರ್ಸಿಬಿ ತಂಡ
ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಶುಭಾ ಸತೀಶ್, ಎಸ್ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.
ಇದನ್ನೂ ಓದಿ RCB WPL 2024: ಬಲಿಷ್ಠ ತಂಡ ಕಟ್ಟಿದ ಮಹಿಳಾ ಆರ್ಸಿಬಿ; ಆಟಗಾರ್ತಿಯರ ಫುಲ್ ಲೀಸ್ಟ್ ಇಲ್ಲಿದೆ
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್, ಅಪರ್ಣಾ ಮೊಂಡಲ್, ಅಶ್ವನಿ ಕುಮಾರಿ.
ಗುಜರಾತ್ ಜೈಂಟ್ಸ್ ತಂಡ
ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.
ಮುಂಬೈ ಇಂಡಿಯನ್ಸ್
ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್, ಜಿಂಟಿಮಣಿ ಕಲಿತಾ, ನಟಾಲಿ ಸ್ಕೈವರ್, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಶಬ್ನಿಮ್ ಇಸ್ಮಾಯಿಲ್, ಎಸ್ ಸಜನಾ, ಅಮನ್‌ದೀಪ್ ಕೌರ್, ಫಾತಿಮಾ ಜಾಫರ್, ಕೀರ್ತನಾ ಬಾಲಕೃಷ್ಣನ್.
ಯುಪಿ ವಾರಿಯರ್ಸ್ ತಂಡ
ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್‌ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ, ಡ್ಯಾನಿಯಲ್ ವ್ಯಾಟ್, ವೃಂದಾ ದಿನೇಶ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಗೌಹರ್ ಸುಲ್ತಾನಾ.