Site icon Vistara News

Women’s T20 World Cup: ಇಂಡೋ-ಪಾಕ್​ ಕದನಕ್ಕೆ ಕ್ಷಣಗಣನೆ ಆರಂಭ

Women's T20 World Cup

#image_title

ಕೇಪ್​ಟೌನ್​: ಮಹಿಳಾ ವಿಶ್ವ ಕಪ್​ ಟೂರ್ನಿಯ(Women’s T20 World Cup) ಮೊದಲ ಪಂದ್ಯದಲ್ಲಿ ಭಾರತ ತಂಡ ಬದ್ಧ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಈ ಪಂದ್ಯ ಇಂದು (ಭಾನುವಾರ ಫೆ. 12) ಕೇಪ್​ಟೌನ್​ನಲ್ಲಿ ನಡೆಯಲಿದೆ. ಪುರುಷರ ಕ್ರಿಕೆಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾದಾಗ ಇರುವ ಕ್ರೇಜ್​ ಮಹಿಳಾ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಕಂಡುಬಂದಿಲ್ಲ. ಕಾರಣ ಇಲ್ಲಿ ಇತ್ತಂಡಗಳದ್ದೂ ಕೂಲ್​​ ಗೇಮ್.

ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ ಪಾಕಿಸ್ತಾನ ವಿರುದ್ಧ 13 ಪಂದ್ಯಗಳಲ್ಲಿ ಭಾರತ 10 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಆದ್ದರಿಂದ ಈ ಪಂದ್ಯದಲ್ಲಿಯೂ ಹರ್ಮನ್​ಪ್ರೀತ್​ ಕೌರ್​ ಪಡೆಯೇ ನೆಚ್ಚಿನ ತಂಡವಾಗಿದೆ. ಇನ್ನೊಂದೆಡೆ ವಿಶ್ವ ಕಪ್‌ನಲ್ಲಿ ಭಾರತದ ವನಿತೆಯರದ್ದು ತೀರಾ ಕಳಪೆ ಸಾಧನೆ. ಆದರೆ ಕಳೆದ 2020ರ ಪಂದ್ಯಾವಳಿ ಮಾತ್ರ ಇದಕ್ಕೆ ಅಪವಾದವಾಗಿತ್ತು. ಆಸ್ಟ್ರೇಲಿಯಾ ಆತಿಥ್ಯದ ಈ ಕೂಟದಲ್ಲಿ ಭಾರತ ಫೈನಲ್‌ ತನಕ ಸಾಗಿತ್ತು. ಅಲ್ಲಿ ಆಸೀಸ್‌ ವಿರುದ್ಧ ತೀವ್ರ ಬ್ಯಾಟಿಂಗ್‌ ಬರಗಾಲಕ್ಕೆ ಸಿಲುಕಿ 99ಕ್ಕೆ ಕುಸಿದು ಟ್ರೋಫಿಯನ್ನು ಕಳೆದುಕೊಳ್ಳಬೇಕಾಯಿತು

ಕಳೆದ ಒಂದು ವರ್ಷಗಳಿಂದ ಭಾರತ ಉತ್ತಮ ಸಾಧನೆಯನ್ನು ಕಾಯ್ದುಕೊಂಡು ಬಂದಿದೆ. ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂಥ ಬಲಿಷ್ಠ ತಂಡಗಳನ್ನು ಮಣಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಆದರೆ ಕೊನೆಯ ಹಂತದಲ್ಲಿ ಒತ್ತಡ ನಿಭಾಯಿಸಲಾಗದೆ ಸೋಲು ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ಗಾಯದ ಚಿಂತೆಯಲ್ಲಿ ಭಾರತ

ತಂಡದ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನಾ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೈ ಬೆರಳಿನ ಗಾಯಕ್ಕೆ ತುತ್ತಾಗಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರು ಈ ಪಂದ್ಯದಲ್ಲಿ ಕಣ್ಣಕ್ಕಿಳಿಯುವ ಬಗ್ಗೆ ಇನ್ನೂ ಖಚಿತಗೊಂಡಿಲ್ಲ. ಇನ್ನೊಂದೆಡೆ ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಕೂಡ ದಕ್ಷಿಣ ಆಫ್ರಿಕಾ ಎದುರಿನ ತ್ರಿಕೋನ ಸರಣಿಯ ಫೈನಲ್‌ ವೇಳೆ ಭುಜದ ನೋವಿಗೆ ಒಳಗಾಗಿ ಚೇತರಿಕೆ ಕಂಡಿದ್ದಾರೆ. ಅವರ ಫಿಟ್‌ನೆಸ್‌ ಕೂಡ ಚಿಂತೆಗೆ ಕಾರಣವಾಗಿದೆ.

ಇದನ್ನೂ ಓದಿ Women’s T20 World Cup: ಆಶ್ಲೀಗ್ ಗಾರ್ಡ್ನರ್​ ಬೌಲಿಂಗ್​ ದಾಳಿಗೆ ಮಂಡಿಯೂರಿದ ಕಿವೀಸ್​; ಆಸೀಸ್​ಗೆ 97 ರನ್​ಗಳ ಭರ್ಜರಿ ಗೆಲುವು

ಪಾಕಿಸ್ಥಾನ ಕೂಡ ಭಾರತಕ್ಕೆ ಸವಾಲು ನೀಡಲು ಸಜ್ಜಾಗಿದೆ. ಅಭ್ಯಾಸ ಪಂದ್ಯದಲ್ಲಿ 1-1 ಫ‌ಲಿತಾಂಶ ದಾಖಲಿಸಿದೆ. ನಿದಾ ದಾರ್‌, ನಾಯಕಿ ಬಿಸ್ಮಾ ಮರೂಫ್ ಅವರು ಪಾಕ್‌ ತಂಡದ ನೆಚ್ಚಿನ ಆಟಗಾರ್ತಿಯರಾಗಿದ್ದಾರೆ.

ಪಂದ್ಯ ಆರಂಭ: ಸಂ. 6.30, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Exit mobile version