Site icon Vistara News

Women’s T20 world Cup: ಭಾರತ ತಂಡ ಪ್ರಕಟ; ಫಿಟ್​ನೆಸ್​ ಪಾಸ್​ ಆದರೆ ಕನ್ನಡತಿ ಶ್ರೇಯಾಂಕಾಗೆ ಅವಕಾಶ

Women's T20 world Cup

Women's T20 world Cup: Harmanpreet, Smriti Mandhana lead India's strong 15-member squad for T20 World Cup

ಮುಂಬಯಿ: ಪ್ರತಿಷ್ಠಿತ ಮಹಿಳಾ ಟಿ20 ವಿಶ್ವಕಪ್(Women’s T20 world Cup)​ ಟೂರ್ನಿಗೆ ಭಾರತದ 15 ಸದಸ್ಯರ ತಂಡ ಪ್ರಕಟಗೊಂಡಿದೆ. ಮಂಗಳವಾರ ಬಿಸಿಸಿಐ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ತಂಡವನ್ನು ಪ್ರಕಟಿಸಿತು. ಒಂಬತ್ತನೇ ಆವೃತ್ತಿಯ ಈ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಅಕ್ಟೋಬರ್ 3 ರಿಂದ 20 ರವರೆಗೆ ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ.

ತಂಡವನ್ನು ಹರ್ಮನ್​ಪ್ರೀತ್​ ಕೌರ್​ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಉಳಿದಂತೆ ತಂಡದಲ್ಲಿ ಶಫಾಲಿ ವರ್ಮಾ, ರಿಚಾ ಘೋಷ್ ಮತ್ತು ರೇಣುಕಾ ಸಿಂಗ್, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್​ ಪ್ರಮುಖ ಆಟಗಾರ್ತಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ್ದ ಲೆಗ್ ಸ್ಪಿನ್ನರ್ ಆಶಾ ಶೋಭನಾ ಕೂಡ ಸ್ಥಾನ ಪಡೆದಿದ್ದಾರೆ.

ಭಾರತ ತಂಡ ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅಕ್ಟೋಬರ್ 6 ರಂದು ಪಂದ್ಯವನ್ನಾಡಲಿದೆ. ಅಕ್ಟೋಬರ್ 13 ರಂದು ಆರು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ಆಡಲಿದೆ. ಭಾರತ ತಂಡ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಶ್ರೀಲಂಕಾ​ ಮತ್ತು ಪಾಕಿಸ್ತಾನ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ Women’s T20 World Cup 2024: ಟಿ20 ವಿಶ್ವ ಕಪ್‌ಗೆ ನೇರ ಅರ್ಹತೆ ಸಂಪಾದಿಸಿದ ಟೀಮ್‌ ಇಂಡಿಯಾ

ಗಾಯದಿಂದ ಚೇತರಿಕೆ ಕಾಣುತ್ತಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್ ಮತ್ತು ಯಾಸ್ತಿಕಾ ಭಾಟಿಯಾ ಅವರ ಲಭ್ಯತೆಯು ಫಿಟ್‌ನೆಸ್ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಒಂದೊಮ್ಮೆ ಇವರು ಫಿಟ್​ ಆದರೆ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ. ಇಲ್ಲವಾದಲ್ಲಿ ಬೇರೆ ಆಟಗಾರ್ತಿಯರ ಆಯ್ಕೆಯಾಗಲಿದೆ.

ಭಾರತ ತಂಡ


ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೀ), ಯಾಸ್ತಿಕಾ ಭಾಟಿಯಾ(ಫಿಟ್​ನೆಸ್​ ಆಧಾರ), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್(ಫಿಟ್​ನೆಸ್​ ಆಧಾರ), ಸಜನಾ ಸಜೀವನ್.

ಭಾರತದ ಟಿ20 ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ


ಅಕ್ಟೋಬರ್ 4 : ಭಾರತ vs ನ್ಯೂಜಿಲ್ಯಾಂಡ್​, ದುಬೈ

ಅಕ್ಟೋಬರ್ 6: ಭಾರತ vs ಪಾಕಿಸ್ತಾನ, ದುಬೈ

ಅಕ್ಟೋಬರ್ 9: ಭಾರತ vs ಶ್ರೀಲಂಕಾ, ದುಬೈ

ಅಕ್ಟೋಬರ್ 13: ಭಾರತ vs ಆಸ್ಟ್ರೇಲಿಯಾ, ಶಾರ್ಜಾ

Exit mobile version