Site icon Vistara News

Women’s T20 World Cup: ಅಗ್ರ ಸ್ಥಾನಕ್ಕಾಗಿ ಭಾರತ-ಇಂಗ್ಲೆಂಡ್ ಹೋರಾಟ

womens-t20-world-cup-india-england-fight-for-the-top-spot

womens-t20-world-cup-india-england-fight-for-the-top-spot

ಕೇಪ್​ಟೌನ್​: ಐಸಿಸಿ ವನಿತೆಯರ ಟಿ20 ವಿಶ್ವ ಕಪ್​ನಲ್ಲಿ(Women’s T20 World Cup) ಈಗಾಗಲೇ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ(England Women vs India Women) ಮತ್ತು ಇಂಗ್ಲೆಂಡ್ ತಂಡಗಳು​ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ಈ ಹೋರಾಟ ಇಂದು(ಫೆ.18) ಸಂಜೆ ನಡೆಯಲಿದೆ.​ ಈ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ನಕೌಟ್​ ಪ್ರವೇಶಿಸುವುದು ಹರ್ಮನ್​ಪ್ರೀತ್​ ಕೌರ್​ ಪಡೆಯ ಯೋಜನೆಯಾಗಿದೆ.

‘ಬಿ’ ಗುಂಪಿನಲ್ಲಿ ಉಭಯ ತಂಡಗಳು ಆಡಿದ 2 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ತಲಾ 4 ಅಂಕ ಸಂಪಾದಿಸಿದೆ. ಆದರೆ ರನ್​ರೇಟ್​ ಆಧಾರದಲ್ಲಿ ಇಂಗ್ಲೆಂಡ್​ ತಂಡ ಅಗ್ರಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದ ಸೆಮಿಫೈನಲ್‌ ಟಿಕೆಟ್ ಬಹುತೇಕ ಖಾತ್ರಿಯಾಗುವುದರಿಂದ ಈ ಪಂದ್ಯ ಭಾರಿ ಕುತೂಹಲ ಮೂಡಿಸಿದೆ.

ಇಂಗ್ಲೆಂಡ್​ ಬಲಿಷ್ಠ

ಭಾರತ ತಂಡಕ್ಕೆ ಹೋಲಿಸಿದರೆ ಇಂಗ್ಲೆಂಡ್​ ಹೆಚ್ಚು ಬಲಿಷ್ಠವಾಗಿ ಗೋಚರಿಸಿದೆ. ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಹೀದರ್ ನೈಟ್ ಅವರು ಯಾವ ಹಂತದಲ್ಲಿಯೂ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಭಾರತ ತಂಡದಲ್ಲಿ ಹಲವು ಲೋಪದೋಷಗಳು ಕಂಡುಬಂದಿವೆ. ತಿದ್ದಿಕೊಳ್ಳುವ ಅಂಶಗಳು ಸಾಕಷ್ಟಿವೆ.

ಇದನ್ನೂ ಓದಿ Women’s T20 World Cup : ಮತ್ತೆ ಮಿಂಚಿದ ರಿಚಾ ಘೋಷ್​; ವಿಂಡೀಸ್​ ವಿರುದ್ಧ ಭಾರತಕ್ಕೆ 6 ವಿಕೆಟ್​ ಸುಲಭ ಜಯ

ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ ಮತ್ತು ಶಫಾಲಿ ವರ್ಮ ಅವರಿಂದ ಇನ್ನೂ ನಿರೀಕ್ಷಿತ ಪ್ರದರ್ಶನಗಳು ಕಂಡುಬಂದಿಲ್ಲ. ಜತೆಗೆ ಬೌಲಿಂಗ್​ ವಿಭಾಗದಲ್ಲಿಯೂ ದೀಪ್ತಿ ಶರ್ಮಾ ಅವರನ್ನು ಹೊರತುಪಡಿಸಿ ಉಳಿದ ಆಟಗಾರ್ತಿಯರು ವಿಕೆಟ್​ ಕಿತ್ತರೂ ರನ್​ ಕಡಿವಾಣ ಹಾಕುವಲ್ಲಿ ಎಡವುತ್ತಿದ್ದಾರೆ. ಈ ಪಂದ್ಯದಲ್ಲಿಯೂ ಸುಧಾರಣೆ ಕಾಣದೇ ಹೋದರೆ ತಂಡಕ್ಕೆ ಸೋಲಿ ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.

ಪಂದ್ಯ ಆರಂಭ: ಸಂಜೆ 6.30, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Exit mobile version