Site icon Vistara News

Women’s T20 World Cup: ಸೆಮಿ ಫೈನಲ್​ ಪಂದ್ಯದಿಂದ ಹೊರಬಿದ್ದ ಪೂಜಾ ವಸ್ತ್ರಾಕರ್

Women's T20 World Cup: Pooja Vastrakar out of the semi-final match

Women's T20 World Cup: Pooja Vastrakar out of the semi-final match

ಕೇಪ್​ಟೌನ್​: ಆಸ್ಟ್ರೇಲಿಯಾ ವಿರುದ್ಧದ ವನಿತಾ ಟಿ20 ವಿಶ್ವ ಕಪ್​ ಸೆಮಿ ಫೈನಲ್(Women’s T20 World Cup)​ ಪಂದ್ಯವನ್ನಾಡಲು ಸಜ್ಜಾಗಿದ್ದ ಟೀಮ್​ ಇಂಡಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಧಾನ ವೇಗಿ ಪೂಜಾ ವಸ್ತ್ರಾಕರ್(pooja vastrakar) ಅನಾರೋಗ್ಯದಿಂದಾಗಿ ಈ ಪಂದ್ಯದಿಂದ ಹೊರಬಿದ್ದಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಪೂಜಾ ವಸ್ತ್ರಕಾರ್ ಅವರನ್ನು ಕೇಪ್​ಟೌನ್​ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೀಗಾಗಿ ಅವರ ಬದಲಿಗೆ ಸ್ನೇಹ್​ ರಾಣಾ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ Women’s T20 World Cup: ಆಸ್ಟ್ರೇಲಿಯಾವನ್ನು ಮಣಿಸಲು ದೊಡ್ಡ ಮೊತ್ತ ಅಗತ್ಯ; ರಿಚಾ ಘೋಷ್​

ಇನ್ನೊಂದೆಡೆ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ ಕೂಡ ಅನಾರೋಗ್ಯದಿಂದ ಬಳಲಿ ಇದೀಗ ಚೇತರಿಕೆ ಕಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಒಟ್ಟಾರೆ ಭಾರತಕ್ಕೆ ಸೆಮಿ ಪಂದ್ಯ ಆಡುವ ಮೊದಲೇ ಆಘಾತವೊಂದು ಎದುರಾಗಿರುವುದು ವಿಪರ್ಯಾಸವೇ ಸರಿ.

Exit mobile version