Site icon Vistara News

World Athletics Championship | ರೋಹಿತ್‌ಗೆ 10, ಎಲ್ದೋಸ್‌ಗೆ 9ನೇ ಸ್ಥಾನ

World Athletics Championship

ಒರೆಗಾನ್‌ : World Athletics Championship ಕೂಟದಲ್ಲಿ ಜಾವೆಲಿನ್‌ ಎಸತ ಸ್ಪರ್ಧೆಯ ಫೈನಲ್‌ಗೇರಿದ್ದ ಭಾರತದ ಮತ್ತೊಬ್ಬರು ಸ್ಪರ್ಧಿ ರೋಹಿತ್‌ ಯಾದವ್‌ ೧೦ನೇ ಸ್ಥಾನ ಪಡೆದುಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ೮೨ ಮೀಟರ್‌ಗಿಂತಲೂ ದೂರ ಎಸೆದು ಫೈನಲ್‌ಗೆ ಪ್ರವೇಶ ಪಡೆದಿದ್ದ ಅವರು ಪ್ರಶಸ್ತಿ ಸುತ್ತಿನಲ್ಲಿ 78.72 ಮೀಟರ್‌ ದೂರ ಎಸೆಯುವ ಮೂಲಕ ೧೦ನೇ ಸ್ಥಾನ ಪಡೆದುಕೊಂಡರು.

ಕೂಟದ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡಿದ್ದ ವಿಶ್ವದ ೩೨ ಅಥ್ಲೀಟ್‌ಗಳ ಪೈಕಿ ೧೨ನೆಯವರಾಗಿ ರೋಹಿತ್‌ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದರು. ಆದರೆ, ಪದಕಗ ಸ್ಪರ್ಧೆಯಲ್ಲಿ ಪ್ರದರ್ಶನ ಸುಧಾರಣೆ ಮಾಡುವಲ್ಲಿ ವಿಫಲಗೊಂಡು ೧೦ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 21 ವರ್ಷದ ಉತ್ತರ ಪ್ರದೇಶದ ಜಾವೆಲಿನ್‌ ಪಟು ಪದಕ ಗೆಲ್ಲಲು ವಿಫಲಗೊಂಡಿರುವ ಹೊರತಾಗಿಯೂ ವಿಶ್ವ ವೇದಿಕೆಯಲ್ಲಿ ಸ್ಪರ್ಧೆ ಮಾಡಿ ಉತ್ತಮ ಅನುಭವ ಪಡೆದುಕೊಂಡರು. ಇದು ಭವಿಷ್ಯದಲ್ಲಿ ಅವರಿಗೆ ತಮ್ಮ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗಲಿದೆ.

ಎಲ್ದೋಸ್‌ಗೆ ೯ನೇ ಸ್ಥಾನ

ಇದೇ ವೇಳೆ ಟ್ರಿಪಲ್‌ ಜಂಪ್‌ನಲ್ಲಿ ಫೈನಲ್‌ಗೇರಿದ್ದ ಕೇರಳದ ಪ್ರತಿಭೆ ಎಲ್ದೋಸ್‌ ಪಾಲ್‌, ೯ನೇ ಸ್ಥಾನ ಗಳಿಸಿಕೊಂಡಿದ್ದಾರೆ. ಅವರು 16.79 ಮೀಟರ್‌ ದೂರ ಜಿಗಿದರು.

ಪದಕ ಗೆಲ್ಲಲು ಸಾಧ್ಯವಾಗಿದ್ದರೂ, ಫೈನಲ್‌ಗೆ ಅರ್ಹತೆ ಗಿಟ್ಟಿಸುವ ಮೂಲಕ ಭರವಸೆ ಮೂಡಿಸಿದ್ದ ರೋಹಿತ್‌ ಹಾಗೂ ಎಲ್ದೋಸ್‌ ಗೆ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ ಅಭಿನಂದನೆ ಸಲ್ಲಿಸಿದೆ.

ಇದನ್ನೂ ಓದಿ| World Athletics Championships | ಜಾವೆಲಿನ್‌ ಎಸೆತದಲ್ಲಿ ನೀರಜ್‌ ಛೋಪ್ರಾಗೆ ಬೆಳ್ಳಿಯ ಪದಕ!

Exit mobile version