ಒರೆಗಾನ್ (ಅಮೆರಿಕ): ಅಮೆರಿಕದ ಒರೆಗಾನ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ಅನ್ನು ರಾಣಿ ಅವರು ೭ನೇ ಸ್ಥಾನ ಗಳಿಸಿದ್ದಾರೆ.
ಉತ್ತರಪ್ರದೇಶ ಮೂಲದ ಅನ್ನು ರಾಣಿ ಅವರು ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಗಳಲ್ಲಿ ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಿರುವ ಮೊದಲ ಕ್ರೀಡಾಪಟು ಎಂಬ ಖ್ಯಾತಿ ಗಳಿಸಿದ್ದಾರೆ.
ಅನ್ನು ರಾಣಿ ಅವರು ೬ನೇ ಪ್ರಯತ್ನದಲ್ಲಿ ೫೮.೭೦ ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಅಂತಿಮ ಪಂದ್ಯದಲ್ಲಿ ಅಮೆರಿಕದ ಕಾರಾ ವಿಂಗರ್ ಅವರು ೬೪.೦೪ ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗಳಿಸಿದರು.
ಆಸ್ಟ್ರೇಲಿಯಾದ ಕೆಲ್ಸೆ-ಲೀ ಬಾರ್ಬೆರ್ ಅವರು ೬೬.೯೧ ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು.