ಯೂಜಿನ್ (ಅಮೆರಿಕ) : ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಛೋಪ್ರಾ ಅವರು ಪುರುಷರ ಜಾವೆಲಿನ್ ಎಸೆತದ ಅಂತಿಮ ಹಣಾಹಣಿಯಲ್ಲಿದ್ದು, ೪ನೇ ಸುತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಅಂತಿಮವಾಗಿ ಭಾರತಕ್ಕೆ ಪದಕ ಗೆದ್ದು ಕೊಡುವರೇ ಎಂಬ ಕಾತರ ಮೂಡಿದೆ.
ಫೈನಲ್‌ನ ಮೊದಲ ಸುತ್ತಿನಲ್ಲಿ ವಿಫಲರಾಗಿರುವ ನೀರಜ್ ಛೋಪ್ರಾ, ಎರಡನೇ ಎಸೆತದಲ್ಲಿ ೮೨.೩೯ ಮೀಟರ್ ಹಾಗೂ ಮೂರನೇ ಯತ್ನದಲ್ಲಿ ೮೬.೩೭ ಮೀಟರ್ ದೂರಕ್ಕೆ ಹಾಗೂ ೪ನೇ ಸುತ್ತಿನಲ್ಲಿ ೮೮.೧೩ ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದಾರೆ.
ಇದೇ ಫೈನಲ್‌ನಲ್ಲಿ ಮತ್ತೊಬ್ಬ ಭಾರತೀಯ ರೋಹಿತ್ ಯಾದವ್ ಕೂಡ ಸ್ಪರ್ಧಿಸುತ್ತಿದ್ದು, ಎರಡನೆಯ ಯತ್ನದಲ್ಲಿ ೭೮.೦೫ ಮೀಟರ್ ದೂರಕ್ಕೆ ಎಸೆದಿದ್ದಾರೆ. ಆದರೆ ಪ್ರಬಲ ಸ್ಪರ್ಧೆಯ ಹಣಾಹಣಿಯಲ್ಲಿ ಅಂಡ್ರೆಸನ್ ಪೀಟರ್ಸ್ ಮೊದಲ ಯತ್ನದಲ್ಲಿ ೯೦.೩೧ ಮೀಟರ್‌ಗೆ ಜಾವೆಲಿನ್ ಎಸೆದು ಮುಂಚೂಣಿಯಲ್ಲಿದ್ದಾರೆ.