Site icon Vistara News

Rishabh Pant : ರಿಷಭ್​ ಪಂತ್​ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ

Rishabh Pant

ಬೆಂಗಳೂರು: ದೆಹಲಿ ಪ್ರೀಮಿಯರ್ ಲೀಗ್ 2024 ರ ಉದ್ಘಾಟನಾ ಆವೃತ್ತಿಯು ಆಗಸ್ಟ್ 17 ರಂದು ಶನಿವಾರ ನಡೆಯಿತು. ಆಕರ್ಷಣೆ ಮತ್ತು ಮತ್ತು ಅಬ್ಬರ ತುಂಬಿದ್ದ ಉದ್ಘಾಟನಾ ಸಮಾರಂಭದಲ್ಲಿ ನಟಿ ಸೋನಮ್ ಬಾಜ್ವಾ ಮತ್ತು ಗಾಯಕ ಬಾದ್ ಶಾ ಪ್ರದರ್ಶನಗಳನ್ನು ನೀಡಿದರು. ಡಿಪಿಎಲ್ 2024 ರ ಎಲ್ಲಾ ಪಂದ್ಯಗಳು ನಡೆಯುವ ಅರುಣ್ ಜೇಟ್ಲಿ ಕ್ರೀಡಾಂಗಣವು ಸ್ಟಾರ್ ಆಟಗಾರರಿಂದ ತುಂಬಿತ್ತು. ಉದ್ಘಾಟನಾ ಸಮಾರಂಭದಲ್ಲಿ ಡಿಡಿಸಿಎಯ ಉನ್ನತ ಮ್ಯಾನೇಜ್ಮೆಂಟ್, ಫ್ರಾಂಚೈಸಿ ತಂಡದ ಮಾಲೀಕರು, ಆಟಗಾರರು ಮತ್ತು ಭಾಗವಹಿಸುವ ಎಲ್ಲಾ ಪುರುಷರ ಮತ್ತು ಮಹಿಳಾ ತಂಡಗಳ ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ಅವರು ಲೀಗ್ ಅನ್ನು ಅಧಿಕೃತವಾಗಿ ಘೋಷಿಸಿದರು. ಈ ವೇಳೆ ರಿಷಭ್​ ಪಂತ್​ಗೆ (Rishab Pant) ವಿಶೇಷ ಸನ್ಮಾನ ಆಯೋಜಿಸಲಾಗಿತ್ತು.

ರಿಷಭ್ ಪಂತ್ ಅವರನ್ನು ಡಿಡಿಸಿಎ ಅಧ್ಯಕ್ಷ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸನ್ಮಾನಿಸಿದರು. 2024 ರ ಟಿ 20 ವಿಶ್ವಕಪ್ ಗೆಲುವಿನಲ್ಲಿ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲಾಯಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಡೆಲ್ಲಿ ಸೂಪರ್​ ಸ್ಟಾರ್​ ತಂಡವನ್ನು ಎದುರಿಸಿದ ಪುರಾನಿ ಡೆಲ್ಲಿ 6 ತಂಡದ ನಾಯಕ ಪಂತ್. ಜೂನ್​​ನಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​​ನಲ್ಲಿ ನಡೆದ ಟಿ 20 ವಿಶ್ವಕಪ್​ ವೇಳೆ ಭಾರತ ತಂಡಕ್ಕೆ ಮರಳಿದ್ದರು. ಬಳಿಕ ರಿಷಭ್ ಪಂತ್ ಶ್ರೀಲಂಕಾ ವಿರುದ್ಧದ ಭಾರತದ ಏಕದಿನ ಮತ್ತು ಟಿ 20 ಐ ತಂಡದ ಭಾಗವಾಗಿದ್ದರು. ಆದರೆ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

ಡೆಲ್ಲಿ ಪ್ರೀಮಿಯರ್ ಲೀಗ್ ಪಂತ್ ಆಕರ್ಷಣೆ

32 ಎಸೆತಗಳಲ್ಲಿ ಕೇವಲ 35 ರನ್ ಗಳಿಸಲಷ್ಟೇ ಶಕ್ತರಾದ 26ರ ಹರೆಯದ ಪಂತ್​ ತಮ್ಮ ನಿಧಾನಗತಿಯ ಫಾರ್ಮ್ ಅನ್ನು ಮುಂದುವರಿಸಿದರು. ದಕ್ಷಿಣ ಡೆಲ್ಲಿ ಸೂಪರ್ಸ್ಟಾರ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಪುರಾನಿ ಡೆಲ್ಲಿ 6 ನಾಯಕ ಕೇವಲ 109 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟಿಂಗ್ ಮಾಡಿದರು.

ಇದನ್ನೂ ಓದಿ: Mohammed Shami Comeback: ಟೀಮ್​ ಇಂಡಿಯಾಕ್ಕೆ ಮರಳುವ ಸೂಚನೆ ನೀಡಿದ ಶಮಿ; ಎನ್​ಸಿಎಯಲ್ಲಿ ಕಠಿಣ ಅಭ್ಯಾಸ

ಡೆಲ್ಲಿ ಪ್ರೀಮಿಯರ್ ಲೀಗ್​​ನ ಮೊದಲ ಆವೃತ್ತಿಯು 33 ಪುರುಷರ ಮತ್ತು 7 ಮಹಿಳಾ ಪಂದ್ಯಗಳು ಸೇರಿದಂತೆ 40 ಪಂದ್ಯಗಳನ್ನು ಒಳಗೊಂಡಿದೆ. 2024ರ ಆಗಸ್ಟ್ 17ರಿಂದ ಸೆಪ್ಟೆಂಬರ್ 8ರವರೆಗೆ ಟೂರ್ನಿ ನಡೆಯಲಿದೆ. ಡೆಲ್ಲಿ 6 ತಂಡವು ಸೆಪ್ಟೆಂಬರ್ 2 ರವರೆಗೆ 10 ಪಂದ್ಯಗಳನ್ನು ಆಡಲಿದ್ದು, ಪಂತ್​​ ಎಲ್ಲಾ ಪಂದ್ಯಗಳಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಅನಿಶ್ಚಿತ. ಪಂತ್ ಟೆಸ್ಟ್ ಕ್ರಿಕೆಟ್​​ಗೆ ಮರಳುವ ನಿರೀಕ್ಷೆಯಿದೆ ಮತ್ತು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್​ ಆಗಿ ಕಾಣಿಸಿಕೊಳ್ಳಬಹುದು.

Exit mobile version