Rishabh Pant : ರಿಷಭ್​ ಪಂತ್​ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ - Vistara News

ಕ್ರೀಡೆ

Rishabh Pant : ರಿಷಭ್​ ಪಂತ್​ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ

Rishabh Pant : 32 ಎಸೆತಗಳಲ್ಲಿ ಕೇವಲ 35 ರನ್ ಗಳಿಸಲಷ್ಟೇ ಶಕ್ತರಾದ 26ರ ಹರೆಯದ ಪಂತ್​ ತಮ್ಮ ನಿಧಾನಗತಿಯ ಫಾರ್ಮ್ ಅನ್ನು ಮುಂದುವರಿಸಿದರು. ದಕ್ಷಿಣ ಡೆಲ್ಲಿ ಸೂಪರ್ಸ್ಟಾರ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಪುರಾನಿ ಡೆಲ್ಲಿ 6 ನಾಯಕ ಕೇವಲ 109 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟಿಂಗ್ ಮಾಡಿದರು.

VISTARANEWS.COM


on

Rishabh Pant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದೆಹಲಿ ಪ್ರೀಮಿಯರ್ ಲೀಗ್ 2024 ರ ಉದ್ಘಾಟನಾ ಆವೃತ್ತಿಯು ಆಗಸ್ಟ್ 17 ರಂದು ಶನಿವಾರ ನಡೆಯಿತು. ಆಕರ್ಷಣೆ ಮತ್ತು ಮತ್ತು ಅಬ್ಬರ ತುಂಬಿದ್ದ ಉದ್ಘಾಟನಾ ಸಮಾರಂಭದಲ್ಲಿ ನಟಿ ಸೋನಮ್ ಬಾಜ್ವಾ ಮತ್ತು ಗಾಯಕ ಬಾದ್ ಶಾ ಪ್ರದರ್ಶನಗಳನ್ನು ನೀಡಿದರು. ಡಿಪಿಎಲ್ 2024 ರ ಎಲ್ಲಾ ಪಂದ್ಯಗಳು ನಡೆಯುವ ಅರುಣ್ ಜೇಟ್ಲಿ ಕ್ರೀಡಾಂಗಣವು ಸ್ಟಾರ್ ಆಟಗಾರರಿಂದ ತುಂಬಿತ್ತು. ಉದ್ಘಾಟನಾ ಸಮಾರಂಭದಲ್ಲಿ ಡಿಡಿಸಿಎಯ ಉನ್ನತ ಮ್ಯಾನೇಜ್ಮೆಂಟ್, ಫ್ರಾಂಚೈಸಿ ತಂಡದ ಮಾಲೀಕರು, ಆಟಗಾರರು ಮತ್ತು ಭಾಗವಹಿಸುವ ಎಲ್ಲಾ ಪುರುಷರ ಮತ್ತು ಮಹಿಳಾ ತಂಡಗಳ ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ಅವರು ಲೀಗ್ ಅನ್ನು ಅಧಿಕೃತವಾಗಿ ಘೋಷಿಸಿದರು. ಈ ವೇಳೆ ರಿಷಭ್​ ಪಂತ್​ಗೆ (Rishab Pant) ವಿಶೇಷ ಸನ್ಮಾನ ಆಯೋಜಿಸಲಾಗಿತ್ತು.

ರಿಷಭ್ ಪಂತ್ ಅವರನ್ನು ಡಿಡಿಸಿಎ ಅಧ್ಯಕ್ಷ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸನ್ಮಾನಿಸಿದರು. 2024 ರ ಟಿ 20 ವಿಶ್ವಕಪ್ ಗೆಲುವಿನಲ್ಲಿ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲಾಯಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಡೆಲ್ಲಿ ಸೂಪರ್​ ಸ್ಟಾರ್​ ತಂಡವನ್ನು ಎದುರಿಸಿದ ಪುರಾನಿ ಡೆಲ್ಲಿ 6 ತಂಡದ ನಾಯಕ ಪಂತ್. ಜೂನ್​​ನಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​​ನಲ್ಲಿ ನಡೆದ ಟಿ 20 ವಿಶ್ವಕಪ್​ ವೇಳೆ ಭಾರತ ತಂಡಕ್ಕೆ ಮರಳಿದ್ದರು. ಬಳಿಕ ರಿಷಭ್ ಪಂತ್ ಶ್ರೀಲಂಕಾ ವಿರುದ್ಧದ ಭಾರತದ ಏಕದಿನ ಮತ್ತು ಟಿ 20 ಐ ತಂಡದ ಭಾಗವಾಗಿದ್ದರು. ಆದರೆ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

ಡೆಲ್ಲಿ ಪ್ರೀಮಿಯರ್ ಲೀಗ್ ಪಂತ್ ಆಕರ್ಷಣೆ

32 ಎಸೆತಗಳಲ್ಲಿ ಕೇವಲ 35 ರನ್ ಗಳಿಸಲಷ್ಟೇ ಶಕ್ತರಾದ 26ರ ಹರೆಯದ ಪಂತ್​ ತಮ್ಮ ನಿಧಾನಗತಿಯ ಫಾರ್ಮ್ ಅನ್ನು ಮುಂದುವರಿಸಿದರು. ದಕ್ಷಿಣ ಡೆಲ್ಲಿ ಸೂಪರ್ಸ್ಟಾರ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಪುರಾನಿ ಡೆಲ್ಲಿ 6 ನಾಯಕ ಕೇವಲ 109 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟಿಂಗ್ ಮಾಡಿದರು.

ಇದನ್ನೂ ಓದಿ: Mohammed Shami Comeback: ಟೀಮ್​ ಇಂಡಿಯಾಕ್ಕೆ ಮರಳುವ ಸೂಚನೆ ನೀಡಿದ ಶಮಿ; ಎನ್​ಸಿಎಯಲ್ಲಿ ಕಠಿಣ ಅಭ್ಯಾಸ

ಡೆಲ್ಲಿ ಪ್ರೀಮಿಯರ್ ಲೀಗ್​​ನ ಮೊದಲ ಆವೃತ್ತಿಯು 33 ಪುರುಷರ ಮತ್ತು 7 ಮಹಿಳಾ ಪಂದ್ಯಗಳು ಸೇರಿದಂತೆ 40 ಪಂದ್ಯಗಳನ್ನು ಒಳಗೊಂಡಿದೆ. 2024ರ ಆಗಸ್ಟ್ 17ರಿಂದ ಸೆಪ್ಟೆಂಬರ್ 8ರವರೆಗೆ ಟೂರ್ನಿ ನಡೆಯಲಿದೆ. ಡೆಲ್ಲಿ 6 ತಂಡವು ಸೆಪ್ಟೆಂಬರ್ 2 ರವರೆಗೆ 10 ಪಂದ್ಯಗಳನ್ನು ಆಡಲಿದ್ದು, ಪಂತ್​​ ಎಲ್ಲಾ ಪಂದ್ಯಗಳಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಅನಿಶ್ಚಿತ. ಪಂತ್ ಟೆಸ್ಟ್ ಕ್ರಿಕೆಟ್​​ಗೆ ಮರಳುವ ನಿರೀಕ್ಷೆಯಿದೆ ಮತ್ತು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್​ ಆಗಿ ಕಾಣಿಸಿಕೊಳ್ಳಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Neeraj Chopra: ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ; ಆಗಸ್ಟ್​ 22ಕ್ಕೆ ಟೂರ್ನಿ

Neeraj Chopra: ಹಲವು ವರ್ಷಗಳಿಂದ 90 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವುದಕ್ಕೆ ಸತತ ಪ್ರಯತ್ನ ನಡೆಸುತ್ತಿರುವ ನೀರಜ್​ ಇನ್ನು ಮುಂದೆ 90 ಮೀ. ಗುರಿಯನ್ನು ದೇವರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.

VISTARANEWS.COM


on

Neeraj Chopra
Koo

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತ, ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಇದೇ ತಿಂಗಳು 22ರಿಂದ ಆರಂಭಗೊಳ್ಳಲಿರುವ ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ(Lausanne Diamond League) ಪಾಲ್ಗೊಳ್ಳಲಿದ್ದಾರೆ. ಈ ವಿಚಾರವನ್ನು ಸ್ವತಃ ನೀರಜ್‌ ಖಚಿತಪಡಿಸಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನೀರಜ್​ ಅವರು ಜರ್ಮನಿಯಲ್ಲಿ ತೊಡೆಸಂಧು ನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರಿಗೆ ವೈದ್ಯರು ಸದ್ಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನೀರಜ್​ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ಕೊನೆಯ ಡೈಮಂಡ್‌ ಲೀಗ್‌ ನಡೆಯಲಿದೆ. ಇದಾದ ಮೇಲೆ ನೀರಜ್​ ಮತ್ತೆ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಹಲವು ವರ್ಷಗಳಿಂದ 90 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವುದಕ್ಕೆ ಸತತ ಪ್ರಯತ್ನ ನಡೆಸುತ್ತಿರುವ ನೀರಜ್​ ಇನ್ನು ಮುಂದೆ 90 ಮೀ. ಗುರಿಯನ್ನು ದೇವರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ. ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. 

ನೋವಿನ ಮಧ್ಯೆಯೂ ನೀರಜ್​ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 89.45 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಬೆಳ್ಳಿ ಗೆದ್ದಿದ್ದರು. ಪಾಕಿಸ್ತಾನದ ಅರ್ಷದ್​ ನದೀಮ್​ ಒಲಿಂಪಿಕ್ಸ್​ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಇದೀಗ ಮತ್ತೆ ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ಇಂಡೋ-ಪಾಕ್​ ಅಥ್ಲೀಟ್​ಗಳು ಕಾಣಿಸಿಕೊಳ್ಳಲಿದ್ದಾರೆ. ಜರ್ಮನಿಯ ಜೂಲಿಯನ್ ವೆಬ್ಬರ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರಿಂದ ನೀರಜ್​ಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು.

ಇದನ್ನೂ ಓದಿ Neeraj Chopra: ಫೈನಲ್​ ವೇಳೆ ನೀರಜ್​ ಚೋಪ್ರಾ ಧರಿಸಿದ್ದ ವಾಚ್​ ಕಂಪನಿ ಯಾವುದು?, ಇದರ ಬೆಲೆ ಎಷ್ಟು?

ಪ್ಯಾರಿಸ್​ ಒಲಿಂಪಿಕ್ಸ್ ಮುಕ್ತಾಯದ ಬೆನ್ನಲ್ಲೇ​ ನೀರಜ್ ಚೋಪ್ರಾ(Manu Bhaker-Neeraj Chopra) ಹಾಗೂ ಶೂಟಿಂಗ್​ನಲ್ಲಿ ಅವಳಿ ಕಂಚಿನ ಪದಕ ಗೆದ್ದ ಮನು ಭಾಕರ್ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಇವರಿಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೊ ಭಾರೀ ಚರ್ಚೆಗೆ ಗ್ರಾಸವಾಗಿತ್ತು,. ಅಲ್ಲದೆ ಮನು(Manu Bhaker) ತಾಯಿ ಕೂಡ ನೀರಜ್​ ಜತೆ ಕಾಣಿಸಿಕೊಂಡಿದ್ದ ಕಾರಣ ನೀರಜ್​-ಮನು ಮಧ್ಯೆ ಪ್ರೀತಿ ಇರುವುದು ಖಚಿತ ಎನ್ನಲಾಗಿತ್ತು. ಬಳಿಕ ಮನು ಭಾಕರ್​ ತಂದೆ(Manu Bhaker Father) ರಾಮ್ ಕಿಶನ್(Ram Kishan) ಸ್ಪಷ್ಟನೆ ನೀಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.

“ನನ್ನ ಮಗಳು ಇನ್ನೂ ಚಿಕ್ಕ ವಯಸ್ಸಿನವಳು. ಈಗ ವಿವಾಹವಾಗುವ ವಯಸ್ಸು ಕೂಡ ಅವಳದ್ದಲ್ಲ. ಸದ್ಯ ಮದುವೆ ಬಗ್ಗೆ ಯಾವ ಯೋಚನೆಯೂ ಇಲ್ಲ. ಮನು ತಾಯಿ ನೀರಜ್​ರನ್ನು ತನ್ನ ಸ್ವಂತ ಮಗನಂತೆ ಕಾಣುತ್ತಾರೆ. ಹೀಗಾಗಿ ನೀರಜ್​ ಜತೆ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡರು” ಎಂದು ಹೇಳಿದ್ದರು.

Continue Reading

ಕ್ರೀಡೆ

Virat Kohli: ಕೊಹ್ಲಿಯ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ತುಂಬಿತು 16 ವರ್ಷ

Virat Kohli: ವಿರಾಟ್​ ಕೊಹ್ಲಿ ಅವರು ಆಗಸ್ಟ್​ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್​-19 ವಿಶ್ವಕಪ್​ ಗೆದ್ದಿದ್ದ ಅವರಿಗೆ ಸಚಿನ್​ ತೆಂಡೂಲ್ಕರ್​ ಮತ್ತು ವೀರೇಂದ್ರ ಸೆಹವಾಗ್​ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು.

VISTARANEWS.COM


on

virat kohli
Koo

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ದಾಖಲೆಗಳ ಸರದಾರ, ಕಿಂಗ್​ ಖ್ಯಾತಿಯ(king kohli) ವಿರಾಟ್​ ಕೊಹ್ಲಿ(Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿರಿಸಿ ಇದಿಂದಿಗೆ 16 ವರ್ಷ ತುಂಬಿದೆ. ಅವರ ಈ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ.

ಲಂಕಾ ವಿರುದ್ಧ ಪದಾರ್ಪಣೆ


ವಿರಾಟ್​ ಕೊಹ್ಲಿ ಅವರು ಆಗಸ್ಟ್​ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್​-19 ವಿಶ್ವಕಪ್​ ಗೆದ್ದಿದ್ದ ಅವರಿಗೆ ಸಚಿನ್​ ತೆಂಡೂಲ್ಕರ್​ ಮತ್ತು ವೀರೇಂದ್ರ ಸೆಹವಾಗ್​ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 12 ರನ್​ ಗಳಿಸಿ ನುವಾನ್ ಕುಲಶೇಖರ ಅವರಿಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 54 ರನ್​ ಗಳಿಸಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೊಹ್ಲಿಗೆ 19 ವರ್ಷ. ಕೇವಲ 8 ಲಿಸ್ಟ್​ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.

ಡಿಸೆಂಬರ್ 24, 2009ರಲ್ಲಿ ಶ್ರೀಲಂಕಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು 111 ಎಸೆತಗಳಲ್ಲಿ 1 ಸಿಕ್ಸರ್​ ಹಾಗೂ 14 ಫೋರ್​ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕವಾಗಿತ್ತು.

ಅಮೋಘ ಸಾಧನೆ

35 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್​​ ಅವರ ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು. ಇದುವರೆಗೆ ಕೊಹ್ಲಿ ಒಟ್ಟು 295 ಏಕದಿನ ಪಂದ್ಯಗಳನ್ನು ಆಡಿದ್ದು 58.18 ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ 13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 5 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ Virat Kohli: ಲಂಡನ್​ನ ಸಿಗ್ನಲ್​ನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತ ಕೊಹ್ಲಿ; ವಿಡಿಯೊ ವೈರಲ್

ಟೆಸ್ಟ್​ನಲ್ಲಿ 113 ಪಂದ್ಯಗಳಲ್ಲಿ 8848 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 30 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 125 ಟಿ20 ಪಂದ್ಯವಾಡಿ 4188 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ ಫೈನಲ್​ ಪಂದ್ಯವನ್ನಾಡುವ ಮೂಲಕ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಈಗ ಟೆಸ್ಟ್​ ಮತ್ತು ಏಕದಿನ ಮಾತ್ರ ಆಡುತ್ತಿದ್ದಾರೆ.

Continue Reading

ಕ್ರಿಕೆಟ್

Mohammed Shami Comeback: ಟೀಮ್​ ಇಂಡಿಯಾಕ್ಕೆ ಮರಳುವ ಸೂಚನೆ ನೀಡಿದ ಶಮಿ; ಎನ್​ಸಿಎಯಲ್ಲಿ ಕಠಿಣ ಅಭ್ಯಾಸ

Mohammed Shami Comeback: ಎನ್​ಸಿಎಯಲ್ಲಿ(NCA) ಕಠಿಣ ಬ್ಯಾಟಿಂಗ್, ಬೌಲಿಂಗ್​​ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಶಮಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Mohammed Shami comeback
Koo

ಬೆಂಗಳೂರು: ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಂಡಿರುವ ಮೊಹಮ್ಮದ್ ಶಮಿ(Mohammed Shami) ಮತ್ತೆ ಟೀಮ್​ ಇಂಡಿಯಾಕ್ಕೆ(Team India) ಕಮ್​ಬ್ಯಾಕ್​(Mohammed Shami Comeback) ಮಾಡುವ ನಿರೀಕ್ಷೆಯಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಕಠಿಣ ಬೌಲಿಂಗ್ ಮತ್ತು ಜಿಮ್​ ವರ್ಕೌಟ್​​ ಮಾಡುತ್ತಿರುವ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ತಿಂಗಳು ನಡೆಯುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಎನ್​ಸಿಎಯಲ್ಲಿ(NCA) ಕಠಿಣ ಬ್ಯಾಟಿಂಗ್, ಬೌಲಿಂಗ್​​ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಶಮಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಲಂಕಾ ವಿರುದ್ಧದ ಸರಣಿಯಲ್ಲಿ ಶಮಿ ಆಡಲಿದ್ದಾರೆ ಎನ್ನಲಾಗಿತ್ತು. ಆದರೆ, ಶಮಿ ಇನ್ನೂ ಫಿಟ್​ನೆಸ್​ ಕ್ಲೀಯರೆನ್ಸ್​ ಪಡೆಯದ ಕಾರಣ ಅವರು ಲಂಕಾ ಸರಣಿಗೆ ಆಯ್ಕೆಯಾಗಿರಲಿಲ್ಲ. ದುಲೀಪ್​ ಟ್ರೋಫಿ ಟೂರ್ನಿಯಲ್ಲಿಯೂ ಶಮಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ.

ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು. ವಿಶ್ವಕಪ್​ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್​ ಪಂದ್ಯ ಆಡಿಲ್ಲ. ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಶಮಿ ಈಗಾಗಲೇ ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಶೀಘ್ರದಲ್ಲೇ ಅವರು ಭಾರತ ತಂಡ ಸೇರುವಂತಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿಗೆ ಲಂಡನ್​ನಲ್ಲಿ ಪಾದದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವಿಶ್ವಕಪ್​ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್​ ಪಂದ್ಯ ಆಡಿಲ್ಲ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ Mohammed Shami : ಭಾರತ ತಂಡ ಬಿಟ್ಟು ಬೇರೆ ತಂಡಕ್ಕೆ ಮರಳಲು ಮೊಹಮ್ಮದ್ ಶಮಿ ನಿರ್ಧಾರ

ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading

ಕ್ರೀಡೆ

Viral Video: ಜಸ್​ಪ್ರೀತ್​ ಬುಮ್ರಾಗಿಂತ ವೇಗವಾಗಿ ಬೌಲಿಂಗ್​ ನಡೆಸಿ ವಿಕೆಟ್ ಕಿತ್ತ ಶಾಲಾ ಬಾಲಕಿ; ವಿಡಿಯೊ ವೈರಲ್​​

Viral Video: ಫೀಮೇಲ್ ಕ್ರಿಕೆಟ್​ ಎನ್ನುವ ಟ್ವಿಟರ್​ ಎಕ್ಸ್​ ಖಾತೆಯಿಂದ ಪೋಸ್ಟ್ ಆಗಿರುವ ಈ ವಿಡಿಯೊದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬಳು ತನ್ನ ಶಾಲೆಯ ಸಮವಸ್ತ್ರದಲ್ಲೇ ಅತ್ಯಂತ ವೇಗದ ಬೌಲಿಂಗ್​ ನಡೆಸುವ ಮೂಲಕ ಬ್ಯಾಟರ್​ ಅನ್ನು ಕ್ಲೀನ್​ ಬೌಲ್ಟ್​ ಮಾಡಿದ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Koo

ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್​ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಕ್ರಿಕೆಟ್​ ಪ್ರಿಯರ ಮನಗೆದ್ದಿದೆ. ಶಾಲಾ ವಿದ್ಯಾರ್ಥಿಯೊಬ್ಬಳು ಜಸ್​ಪ್ರೀತ್​ ಬುಮ್ರಾ ಅವರಂತೆ ವೇಗದ ಬೌಲಿಂಗ್​ ನಡೆಸುತ್ತಿರುವ ವಿಡಿಯೊ ವೈರಲ್​ ಆಗಿದೆ.

ಫೀಮೇಲ್ ಕ್ರಿಕೆಟ್​ ಎನ್ನುವ ಟ್ವಿಟರ್​ ಎಕ್ಸ್​ ಖಾತೆಯಿಂದ ಪೋಸ್ಟ್ ಆಗಿರುವ ಈ ವಿಡಿಯೊದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬಳು ತನ್ನ ಶಾಲೆಯ ಸಮವಸ್ತ್ರದಲ್ಲೇ ಅತ್ಯಂತ ವೇಗದ ಬೌಲಿಂಗ್​ ನಡೆಸುವ ಮೂಲಕ ಬ್ಯಾಟರ್​ ಅನ್ನು ಕ್ಲೀನ್​ ಬೌಲ್ಟ್​ ಮಾಡುತ್ತಿರುವುದನ್ನು ಕಾಣಬಹುದು. ಅತ್ಯುತ್ತಮ ಲೆಂತ್​ ಮತ್ತು ಲೈನ್​ನಲ್ಲಿ ಬೌಲಿಂಗ್​ ನಡೆಸುವ ಈಕೆ ಭವಿಷ್ಯದ ಭಾರತ ಮಹಿಳಾ ತಂಡದ ಸ್ಟಾರ್(Indian Women’s Cricket team)​ ವೇಗಿ ಎಂದು ನೆಟ್ಟಿಗರು ಈಗಲೇ ಭವಿಷ್ಯ ನುಡಿಯಲಾರಂಭಿಸಿದ್ದಾರೆ.

ಕಳೆದ ವರ್ಷ ಹಳ್ಳಿ ಹುಡುಗಿಯೊಬ್ಬಳ ಬ್ಯಾಟಿಂಗ್​ ಕಂಡು ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್(sachin tendulkar)​ ಕೂಡ ಅಚ್ಚರಿಗೊಂಡಿದ್ದರು. ತೆಂಡೂಲ್ಕರ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿ ಈ ಹುಡುಗಿಯ ಬ್ಯಾಟಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಅತ್ಯದ್ಭುತ ಬ್ಯಾಟಿಂಗ್​ಗೆ ನಾನು ಮನಸೋತಿರುವೆ. ಇದೇ ರೀತಿ ಆಟ ಮುಂದುವರಿಸಿ ಮುಂದೊಂದು ದಿನ ಟೀಮ್​ ಇಂಡಿಯಾದಲ್ಲಿ ನೀವು ಕಾಣಿಸಿಕೊಳ್ಳುವಂತಾಗಲಿ ಎಂದು ಹಾರೈಸಿದ್ದರು.

ಹಳ್ಳಿ ಹುಡುಗಿಯ ಈ ಪರ್ಫೆಕ್ಟ್​ ಬ್ಯಾಟಿಂಗ್​ ಕಂಡು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ, ಹುಡುಗಿಯ ಬ್ಯಾಟಿಂಗ್​ ಕೊಂಡಾಡಿದ್ದರು. ಮಹಿಳೆಯರ ಕ್ರಿಕೆಟ್ ಬೆಳವಣಿಗೆಯ ಹಾದಿಯಲ್ಲಿದೆ ಎಂದು ಹೇಳಿದ್ದರು.

ಎಬಿಡಿ ವಿಲಿಯರ್ಸ್ ಶೈಲಿಯಲ್ಲೇ ಕ್ಯಾಚ್​ ಹಿಡಿದ ಇಂಗ್ಲೆಂಡ್​ ಆಟಗಾರ್ತಿ ಮ್ಯಾಡಿ ವಿಲಿಯರ್ಸ್


ಲಂಡನ್​: ವಿಶ್ವ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ಅದ್ಭುತ ಕ್ಯಾಚ್‌ಗಳು(stunning catch) ದಾಖಲಾಗಿವೆ. ಆ ಸಾಲಿಗೆ ಇದೀಗ ಇಂಗ್ಲೆಂಡ್​ ತಂಡದ ಆಟಗಾರ್ತಿ ಮ್ಯಾಡಿ ವಿಲಿಯರ್ಸ್(Mady Villiers) ಸೇರ್ಪಡೆಗೊಂಡಿದ್ದಾರೆ. ‘ದಿ ಹಂಟ್ರೆಡ್​’ ಕ್ರಿಕೆಟ್(The Hundred)​ ಟೂರ್ನಿಯ ಪಂದ್ಯವೊಂದರಲ್ಲಿ ಮ್ಯಾಡಿ ವಿಲಿಯರ್ಸ್ ಯಾರೂ ಊಹಿಸದ ರೀತಿಯಲ್ಲಿ ಮೇಲಕ್ಕೆ ಜಂಪ್ ಮಾಡಿ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಒಂದನ್ನು ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸದ್ಯ ಈ ಕ್ಯಾಚ್​ನ ವಿಡಿಯೊ ವೈರಲ್​ ಆಗುತ್ತಿದ್ದು, ಮಹಿಳಾ ಕ್ರಿಕೆಟ್​ನಲ್ಲಿ ಕಂಡು ಬಂದ ಅತ್ಯದ್ಭುತ ಕ್ಯಾಚ್​ ಎಂದು ಕ್ರಿಕೆಟ್​ ಪಂಡಿತರು ಹೇಳಿದ್ದಾರೆ.

ಇದನ್ನೂ ಓದಿ Viral Video: ಕಂಬಕ್ಕೆ ಸಿಲುಕಿದ ತ್ರಿವರ್ಣ ಧ್ವಜ; ಮಿಂಚಂತೆ ಬಂದು ಧ್ವಜ ಬಿಡಿಸಿದ ಹಕ್ಕಿ; ಅಪರೂಪದ ಘಟನೆ!

ಓವಲ್‌ ಇನ್ವಿನ್ಸಿಬಲ್‌ ತಂಡದ ಪರವಾಗಿ ಆಡುತ್ತಿರುವ 25 ವರ್ಷದ ಮ್ಯಾಡಿ ವಿಲಿಯರ್ಸ್‌ 30ಯಾರ್ಡ್​ನಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದರು. ಈ ವೇಳೆ ಎದುರಾಳಿ ತಂಡದ ಆಟಗಾರ್ತಿ ಬೌಂಡರಿ ಕಡೆಗೆ ಬಾರಿಸಿದ ಚೆಂಡನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಮೇಲಕ್ಕೆ ಜಿಗಿದು ತನ್ನ ಎಡಗೈಯಿಂದ ಕ್ಯಾಚ್​ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಕ್ಯಾಚ್​ ಕಂಡ ಪ್ರೇಕ್ಷಕರು ಒಂದು ಕ್ಷಣ ದಂಗಾಗಿದ್ದಾರೆ. ಅತ್ತ ಕಾಮೆಂಟ್ರಿ ನಡೆಸುತ್ತಿದ್ದವರು, ಕ್ಯಾಚ್‌ ಆಫ್‌ ದಿ ಟೂರ್ನಮೆಂಟ್‌ ಎಂದು ಬಣ್ಣಿಸಿದ್ದಾರೆ. ಟ್ರೆಂಟ್‌ ರಾಕೆಟ್ಸ್‌ ತಂಡ ಆರಂಭಿ ಆಟಗಾರ್ತಿ ಬ್ರಯೋನಿ ಸ್ಮಿತ್ ಅವರ ಕ್ಯಾಚ್​ ಇದಾಗಿತ್ತು.

Continue Reading
Advertisement
Air India Hostess
ವಿದೇಶ13 mins ago

Air India Hostess: ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಗಗನಸಖಿ ಮೇಲೆ ಹಲ್ಲೆ; ನೆಲಕ್ಕೆ ಕೆಡವಿ ಎಳೆದಾಡಿದ ದುಷ್ಕರ್ಮಿ

70th National Film Awards Nithya Menen REACTS For 1st Time
ಕಾಲಿವುಡ್16 mins ago

70th National Film Awards : ರಾಷ್ಟ್ರ ಪ್ರಶಸ್ತಿ ಗೆದ್ದ ಬಳಿಕ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ಹೀಗೆ!

Accident News:
ಪ್ರಮುಖ ಸುದ್ದಿ39 mins ago

Accident News : ನರಗುಂದಲ್ಲಿ ಭೀಕರ ಅಫಘಾತ; ಸಾರಿಗೆ ಬಸ್​ ಗುದ್ದಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ

Neeraj Chopra
ಕ್ರೀಡೆ40 mins ago

Neeraj Chopra: ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ; ಆಗಸ್ಟ್​ 22ಕ್ಕೆ ಟೂರ್ನಿ

Liquor theft:
ಪ್ರಮುಖ ಸುದ್ದಿ1 hour ago

Liquor Theft : ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

Thalapathy Vijay plays both father and son in this time travel saga.
ಕಾಲಿವುಡ್1 hour ago

Thalapathy Vijay: ದಳಪತಿ ವಿಜಯ್‌ ಕೊನೆ ಚಿತ್ರದ ಟ್ರೈಲರ್‌ ಔಟ್‌;  ಅಬ್ಬರಿಸಿದ ನಟ!

Kolkata Doctor Murder Case
ದೇಶ1 hour ago

Kolkata Doctor Murder Case: ಜನರಲ್ಲಿ ಗೊಂದಲ ಮೂಡಿಸುವ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ; ನಿರ್ಭಯಾ ತಾಯಿ

virat kohli
ಕ್ರೀಡೆ1 hour ago

Virat Kohli: ಕೊಹ್ಲಿಯ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ತುಂಬಿತು 16 ವರ್ಷ

Chikkodi News
ಪ್ರಮುಖ ಸುದ್ದಿ2 hours ago

Chikkodi News : ಒಮ್ಮೆ ಶಾಸಕರಿಂದ ಮತ್ತೊಮ್ಮೆ ಸಂಸದರಿಂದ; ಒಂದೇ ಗ್ರಾಮ ಪಂಚಾಯಿತಿ ಕಟ್ಟಡ ಎರಡೆರಡು ಬಾರಿ ಉದ್ಘಾಟನೆ!

Tahawwur Rana
ವಿದೇಶ2 hours ago

Tahawwur Rana: 26/11 ಮುಂಬೈ ದಾಳಿಯ ಭಾಗವಾಗಿದ್ದ ಪಾಕ್‌ ಮೂಲದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಗೆ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌