ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಡಲು ಇಂಗ್ಲೆಂಡ್ಗೆ ತೆರಳಲಿದೆ. ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದಾದ ಬಳಿಕ ನಡೆಯಲಿರುವ ಐಸಿಸಿ ಟೂರ್ನಿಯೆಂದರೆ ಏಕ ದಿನ ವಿಶ್ವ ಕಪ್. ಇದು ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದೆ. ಅದಕ್ಕಾಗಿ ಬಿಸಿಸಿಐ ಸಜ್ಜಾಗುತ್ತಿದೆ. ವರ್ಷದ ಕೊನೆಯಲ್ಲಿ ನಡೆಯಲಿರುವ ಈ ಟೂರ್ನಿಯ ವೇಳಾಪಟ್ಟಿ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಜತೆಗೆ ಪಂದ್ಯದ ತಾಣಗಳು ಎಲ್ಲೆಲ್ಲಿ ಎಂದು ತಿಳಿಯುವ ಕುತೂಹಲವೂ ಸೃಷ್ಟಿಯಾಗಿದೆ. ಮಾಹಿತಿಯೊಂದರ ಪ್ರಕಾರ ಟೂರ್ನಿಯ ವೇಳಾಪಟ್ಟಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದ ಬಳಿಕ ನಡೆಯಲಿದೆ.
ಡಬ್ಲ್ಯುಟಿಸಿ ಫೈನಲ್ ಸಮೀಪಿಸುತ್ತಿರುವುದರಿಂದ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಮಯದಲ್ಲಿ ಬಿಸಿಸಿಐ ವಿಶ್ವಕಪ್ನ ಸ್ಥಳಗಳು ಮತ್ತು ವೇಳಾಪಟ್ಟಿಯನ್ನು ಅನಾವರಣ ಮಾಡಲಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ.
ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ಮೇ 27 ರಂದು ಅಹಮದಾಬಾದ್ನಲ್ಲಿ ನಡೆದಿದೆ. ಅಲ್ಲಿ ಕ್ರೀಡಾಂಗಣಗಳ ಗುಣಮಟ್ಟ ಹದಗೆಡುತ್ತಿರುವುದನ್ನು ಮಂಡಳಿಯು ಬೊಟ್ಟು ಮಾಡಿ ತೋರಿಸಿದೆ. ದೇಶಾದ್ಯಂತ ಅನೇಕ ಸ್ಟೇಡಿಯಮ್ಗಳೂ ಇರುವುದರಿಂದ ಸೌಲಭ್ಯಗಳ ಗುಣಮಟ್ಟವನ್ನು ಸುಧಾರಿಸುವ ಜವಾಬ್ದಾರಿಯನ್ನು ಆಯಾಯ ಕ್ರಿಕೆಟ್ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಹೇಳಲಾಗಿದೆ. ಮೂಲ ಸೌಕರ್ಯ ಹೆಚ್ಚಿಸಲು ಬೇಕಾದ ಅನುದಾನ ವಿತರಣೆಗೂ ವ್ಯವಸ್ಥೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ :IPL 2023: ಟಿ20 ವಿಶ್ವ ಕಪ್ಗೆ ಹಾರ್ದಿಕ್ ಪಾಂಡ್ಯ ಸೂಕ್ತ ನಾಯಕ; ರವಿಶಾಸ್ತ್ರಿ ವಿಶ್ವಾಸ
ಬಿಸಿಸಿಐ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಕ್ರೀಡಾಂಗಣಗಳ ಸಂಭಾವ್ಯ ನವೀಕರಣಗಳ ಬಗ್ಗೆ ಚರ್ಚಿಸಲಾಯಿತು. ಮೂಲಸೌಕರ್ಯ ಸುಧಾರಣೆಯು ಹೆಚ್ಚು ಚರ್ಚಿಸಲಾದ ವಿಷಯಗಳಲ್ಲಿ ಒಂದು. ಏಕದಿನ ವಿಶ್ವ ಕಪ್ ವೇಗವಾಗಿ ಸಮೀಪಿಸುತ್ತಿರುವುದರಿಂದ, ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸು ನಿರ್ಧಾರ ಕೈಗೊಳ್ಳಲಾಯಿತು. ವಿಶ್ವ ಕಪ್ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ನಡೆಯುವ ಕಾರಣ ಅದಕ್ಕಿಂತ ಮೊದಲು ಸಜ್ಜುಗೊಳಿಸುವಂತೆ ಸೂಚಿಸಲಾಯಿತು.
ವಿಶ್ವಕಪ್ನ ಸ್ಥಳಗಳ ಯೋಜನೆಯೊಂದಿಗೆ, ಪದಾಧಿಕಾರಿಗಳಿಗೆ ನಿರ್ದಿಷ್ಟ ಸ್ಥಳಗಳ ಉಸ್ತುವಾರಿ ನೀಡುವ ಯೋಜನೆ ರೂಪಿಸಲಾಯಿತು. ನಾವು ಎಲ್ಲಾ ಮಹಾನಗರಗಳನ್ನು ಪಂದ್ಯಗಳಿಗೆ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.