World Cup 2023 schedule to be out during World Test Championship final World Cup 2023 : ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ Vistara News
Connect with us

ಕ್ರಿಕೆಟ್

World Cup 2023 : ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ

ಬಹುತೇಕ ಎಲ್ಲ ಮೆಟ್ರೋ ಸಿಟಿಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹೇಳಿದ್ದಾರೆ.

VISTARANEWS.COM


on

BCCI
Koo

ಅಹಮದಾಬಾದ್​​: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​​ನಲ್ಲಿ ಆಡಲು ಇಂಗ್ಲೆಂಡ್​ಗೆ ತೆರಳಲಿದೆ. ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದಾದ ಬಳಿಕ ನಡೆಯಲಿರುವ ಐಸಿಸಿ ಟೂರ್ನಿಯೆಂದರೆ ಏಕ ದಿನ ವಿಶ್ವ ಕಪ್​. ಇದು ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದೆ. ಅದಕ್ಕಾಗಿ ಬಿಸಿಸಿಐ ಸಜ್ಜಾಗುತ್ತಿದೆ. ವರ್ಷದ ಕೊನೆಯಲ್ಲಿ ನಡೆಯಲಿರುವ ಈ ಟೂರ್ನಿಯ ವೇಳಾಪಟ್ಟಿ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಜತೆಗೆ ಪಂದ್ಯದ ತಾಣಗಳು ಎಲ್ಲೆಲ್ಲಿ ಎಂದು ತಿಳಿಯುವ ಕುತೂಹಲವೂ ಸೃಷ್ಟಿಯಾಗಿದೆ. ಮಾಹಿತಿಯೊಂದರ ಪ್ರಕಾರ ಟೂರ್ನಿಯ ವೇಳಾಪಟ್ಟಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಪಂದ್ಯದ ಬಳಿಕ ನಡೆಯಲಿದೆ.

ಡಬ್ಲ್ಯುಟಿಸಿ ಫೈನಲ್ ಸಮೀಪಿಸುತ್ತಿರುವುದರಿಂದ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಮಯದಲ್ಲಿ ಬಿಸಿಸಿಐ ವಿಶ್ವಕಪ್​ನ ಸ್ಥಳಗಳು ಮತ್ತು ವೇಳಾಪಟ್ಟಿಯನ್ನು ಅನಾವರಣ ಮಾಡಲಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ.

ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ಮೇ 27 ರಂದು ಅಹಮದಾಬಾದ್​​ನಲ್ಲಿ ನಡೆದಿದೆ. ಅಲ್ಲಿ ಕ್ರೀಡಾಂಗಣಗಳ ಗುಣಮಟ್ಟ ಹದಗೆಡುತ್ತಿರುವುದನ್ನು ಮಂಡಳಿಯು ಬೊಟ್ಟು ಮಾಡಿ ತೋರಿಸಿದೆ. ದೇಶಾದ್ಯಂತ ಅನೇಕ ಸ್ಟೇಡಿಯಮ್​ಗಳೂ ಇರುವುದರಿಂದ ಸೌಲಭ್ಯಗಳ ಗುಣಮಟ್ಟವನ್ನು ಸುಧಾರಿಸುವ ಜವಾಬ್ದಾರಿಯನ್ನು ಆಯಾಯ ಕ್ರಿಕೆಟ್​ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಹೇಳಲಾಗಿದೆ. ಮೂಲ ಸೌಕರ್ಯ ಹೆಚ್ಚಿಸಲು ಬೇಕಾದ ಅನುದಾನ ವಿತರಣೆಗೂ ವ್ಯವಸ್ಥೆ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ :IPL 2023: ಟಿ20 ವಿಶ್ವ ಕಪ್​ಗೆ ಹಾರ್ದಿಕ್​ ಪಾಂಡ್ಯ ಸೂಕ್ತ ನಾಯಕ; ರವಿಶಾಸ್ತ್ರಿ ವಿಶ್ವಾಸ

ಬಿಸಿಸಿಐ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಕ್ರೀಡಾಂಗಣಗಳ ಸಂಭಾವ್ಯ ನವೀಕರಣಗಳ ಬಗ್ಗೆ ಚರ್ಚಿಸಲಾಯಿತು. ಮೂಲಸೌಕರ್ಯ ಸುಧಾರಣೆಯು ಹೆಚ್ಚು ಚರ್ಚಿಸಲಾದ ವಿಷಯಗಳಲ್ಲಿ ಒಂದು. ಏಕದಿನ ವಿಶ್ವ ಕಪ್ ವೇಗವಾಗಿ ಸಮೀಪಿಸುತ್ತಿರುವುದರಿಂದ, ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸು ನಿರ್ಧಾರ ಕೈಗೊಳ್ಳಲಾಯಿತು. ವಿಶ್ವ ಕಪ್​ ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ನಡೆಯುವ ಕಾರಣ ಅದಕ್ಕಿಂತ ಮೊದಲು ಸಜ್ಜುಗೊಳಿಸುವಂತೆ ಸೂಚಿಸಲಾಯಿತು.

ವಿಶ್ವಕಪ್ನ ಸ್ಥಳಗಳ ಯೋಜನೆಯೊಂದಿಗೆ, ಪದಾಧಿಕಾರಿಗಳಿಗೆ ನಿರ್ದಿಷ್ಟ ಸ್ಥಳಗಳ ಉಸ್ತುವಾರಿ ನೀಡುವ ಯೋಜನೆ ರೂಪಿಸಲಾಯಿತು. ನಾವು ಎಲ್ಲಾ ಮಹಾನಗರಗಳನ್ನು ಪಂದ್ಯಗಳಿಗೆ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Asian Games 2023: ಬಾಂಗ್ಲಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಮೃತಿ ಮಂಧಾನಾ ಪಡೆ

Asian Games 2023: ಏಷ್ಯನ್‌ ಗೇಮ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಫೈನಲ್‌ ತಲುಪಿದೆ. ಸೋಮವಾರ ಫೈನಲ್‌ ಕಾದಾಟ ನಡೆಯಲಿದೆ.

VISTARANEWS.COM


on

Edited by

Indian Women Cricket Team
Koo

ಹ್ಯಾಂಗ್ಝೌ: ಏಷ್ಯನ್‌ ಗೇಮ್ಸ್‌ನಲ್ಲಿ (Asian Games 2023) ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಪ್ರಾಬಲ್ಯ ಮುಂದುವರಿದಿದೆ. ಬಾಂಗ್ಲಾದೇಶ ಮಹಿಳಾ ತಂಡವನ್ನು ಎಂಟು ವಿಕೆಟ್‌ಗಳಿಂದ ಸುಲಭವಾಗಿ ಮಣಿಸುವ ಮೂಲಕ ಸ್ಮೃತಿ ಮಂಧಾನಾ (Smriti Mandhana) ಬಳಗವು ಫೈನಲ್‌ಗೆ ಲಗ್ಗೆ ಇಟ್ಟಿದೆ.

ಚೀನಾದ ಹ್ಯಾಂಗ್ಝೌನಲ್ಲಿರುವ ಝಡ್‌ಜೆಯುಟಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್‌ ತಂಡವು ಬಾಂಗ್ಲಾದೇಶ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾ ತಂಡವು 17.5 ಓವರ್‌ಗಳಲ್ಲಿ ಕೇವಲ 51 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸುಲಭದ ಗುರಿ ಬೆನ್ನತ್ತಿದ ಸ್ಮೃತಿ ಮಂಧಾನಾ ಬಳಗವು ಕೇವಲ 8.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು.

ಪೂಜಾ ವಸ್ತ್ರಾಕರ್‌ ಮಾರಕ ಬೌಲಿಂಗ್‌

ಬಾಂಗ್ಲಾದೇಶ ತಂಡವು ಪೂಜಾ ವಸ್ತ್ರಾಕರ್‌ ಬೌಲಿಂಗ್‌ ದಾಳಿಗೆ ಸಿಲುಕಿ ಕೇವಲ 51 ರನ್‌ ಗಳಿಸಿತು. ಕೇವಲ 18 ರನ್‌ ಆಗುವಷ್ಟರಲ್ಲಿಯೇ ಪೂಜಾ ವಸ್ತ್ರಾಕರ್‌ ಪ್ರಮುಖ ಮೂರು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ್ದು ಬಾಂಗ್ಲಾ ತಂಡಕ್ಕೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ ಬಾಂಗ್ಲಾ 51 ರನ್‌ ಗಳಿಸಲಷ್ಟೇ ಶಕ್ತವಾಯಿತು. 4 ಓವರ್‌ಗಳಲ್ಲಿ 17 ರನ್‌ ನೀಡಿದ ಪೂಜಾ ವಸ್ತ್ರಾಕರ್‌ ನಾಲ್ಕು ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ: Asian Games 2023: 19ನೇ ಏಷ್ಯನ್‌ ಗೇಮ್ಸ್‌ಗೆ ಅದ್ಧೂರಿ ಚಾಲನೆ; ನನಸಾಗಲಿ ಭಾರತದ ‘ಪದಕ ಶತಕ’ದ ಕನಸು…

51 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ಸುಲಭವಾಗಿ ಗೆಲುವಿನ ದಡ ಸೇರಿತು. ಸ್ಮೃತಿ ಮಂಧಾನಾ 7 ರನ್‌ ಗಳಿಸಿದರೆ, ಶಫಾಲಿ ವರ್ಮಾ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಜೆಮಿಮಾ ರೊಡ್ರಿಗಸ್ ಅವರು 20 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸುಲಭದ ಗೆಲುವಿನೊಂದಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡವು ಫೈನಲ್‌ ತಲುಪಿದ ಮೊದಲ ತಂಡ ಎನಿಸಿತು. ಭಾನುವಾರ (ಸೆಪ್ಟೆಂಬರ್‌ 24) ಶ್ರೀಲಂಕಾ ಹಾಗೂ ಪಾಕಿಸ್ತಾನದ ಮಧ್ಯೆ ಸೆಮಿಫೈನಲ್‌ ಕಾಳಗ ನಡೆಯಲಿದ್ದು, ಗೆದ್ದ ತಂಡ ಭಾರತವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಸೋಮವಾರ (ಸೆಪ್ಟೆಂಬರ್‌ 25) ಫೈನಲ್‌ ಸೆಣಸಾಟ ನಡೆಯಲಿದೆ.

Continue Reading

ಕ್ರಿಕೆಟ್

ವಿಸ್ತಾರ ಸಂಪಾದಕೀಯ: ಮಾನವ ಹಕ್ಕುಗಳ ಪ್ರಶ್ನೆ; ಪಾಕ್‌ ಮೊದಲು ತನ್ನ ಹುಳುಕು ಸರಿಪಡಿಸಿಕೊಳ್ಳಲಿ

ಕಾಶ್ಮೀರದ ಬಗ್ಗೆ ಪಾಕ್‌ ಪ್ರಧಾನಿ ಆಡಿರುವ ಮಾತುಗಳಲ್ಲಿ ಹುರುಳಿಲ್ಲ. ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾಗಿ ಎರಡು ವರ್ಷಗಳಾದವು. ಈ ಎರಡು ವರ್ಷಗಳಲ್ಲಿ ಅಲ್ಲಿನ ಜನಜೀವನ ಸುಧಾರಿಸಿದೆ. ಪ್ರವಾಸೋದ್ಯಮ ಚಿಗುರಿದೆ. ದೇಶೀಯ ಹಾಗೂ ವಿದೇಶೀಯ ಹೊಸ ಹೂಡಿಕೆಗಳು ಬರುತ್ತಿವೆ. ಇವನ್ನೆಲ್ಲ ನೋಡಿ ಪಾಕಿಸ್ತಾನ ಮೈ ಪರಚಿಕೊಳ್ಳುತ್ತಿದೆ.

VISTARANEWS.COM


on

Edited by

pak human right
Koo

ವಿಶ್ವಸಂಸ್ಥೆ ಸಾಮಾನ್ಯ ಸಭೆಯ (UNGA) 78ನೇ ಅಧಿವೇಶನದಲ್ಲಿ ಜಮ್ಮು-ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್‌ ಅವರಿಗೆ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ (India At UNGA) ಕಾರ್ಯದರ್ಶಿ ಪೆತಲ್‌ ಗೆಹ್ಲೋಟ್‌, “ಪಾಕಿಸ್ತಾನವು ಭಾರತದ ಅವಿಭಾಜ್ಯ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ” ಎಂದು ಚಾಟಿ ಬೀಸಿದ್ದಾರೆ. “ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಚಾಳಿಯನ್ನು ಪಾಕಿಸ್ತಾನ ಬಿಡಬೇಕು. ಪಾಕಿಸ್ತಾನವು ತನ್ನ ದೇಶದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ದಮನದ ವಿಷಯವನ್ನು ಜಗತ್ತಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾವಾಗಲೂ ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುತ್ತದೆ. ಆದರೆ, ಪಾಕಿಸ್ತಾನದಲ್ಲಿಯೇ ಸಾಕಷ್ಟು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಾಗಾಗಿ, ಅದು ಮೊದಲು ತನ್ನ ದೇಶದ ಹುಳುಕನ್ನು ಸರಿಪಡಿಸಿಕೊಳ್ಳಬೇಕು” ಎಂದು ಪೆತಲ್‌ ಗೆಹ್ಲೋಟ್‌ ಹೇಳಿದ್ದಾರೆ.

ಗೆಹ್ಲೋಟ್‌ ಸರಿಯಾಗಿಯೇ ಹೇಳಿದ್ದಾರೆ. ಪಾಕಿಸ್ತಾನದ ಹುಳುಕುಗಳು ಲೋಕದ ಕಣ್ಣಿನ ಮುಂದೆ ಸಾಕಷ್ಟು ಸ್ಪಷ್ಟವಾಗಿಯೇ ಇವೆ. ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜಿಹಾದಿ ಉಗ್ರರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ. ಇದನ್ನು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ನಿರ್ವಹಿಸುತ್ತದೆ. ಅಲ್ಲಿಂದ ಕಾಶ್ಮೀರಕ್ಕೆ ಅಕ್ರಮವಾಗಿ ನುಸುಳುವ ಈ ಉಗ್ರರು ಅಲ್ಲಿ ನರಮೇಧ ನಡೆಸುತ್ತಾರೆ. ಇತ್ತೀಚೆಗೆ ತಾನೆ ನಡೆದ ಒಂದು ವಾರ ದೀರ್ಘಾವಧಿಯ ಎನ್‌ಕೌಂಟರ್‌ ಹಾಗೂ ಅಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ನೆನಪಿಸಿಕೊಳ್ಳಬಹುದು. ಪಿಒಕೆಯಲ್ಲಿಯೇ ತಯಾರಾದ ಉಗ್ರರೇ ತಾಲಿಬಾನ್‌ನಲ್ಲಿಯೂ ಇದ್ದು, ಅಲ್ಲಿ ಮಾನವ ಹಕ್ಕುಗಳ ದಮನಕ್ಕೆ ಕಾರಣರಾಗಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಷ್ಟಿಷ್ಟಲ್ಲ. ಮುಸ್ಲಿಮರು ಹೊರತುಪಡಿಸಿದ ಇನ್ಯಾವ ಧರ್ಮದವರೂ ಅಲ್ಲಿ ಬದುಕಲಾಗದಂಥ ಸ್ಥಿತಿಯನ್ನು ತಂದಿಡಲಾಗಿದೆ. ಹಿಂದೂ, ಕ್ರೈಸ್ತ, ಸಿಖ್‌ ಧರ್ಮದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳು ಜಗತ್ತಿನಲ್ಲೇ ಕೆಟ್ಟದಾಗಿದ್ದರೆ, ಅದು ಪಾಕಿಸ್ತಾನದಲ್ಲಿ ಮಾತ್ರ. ಪ್ರತಿ ವರ್ಷ ಪಾಕಿಸ್ತಾನದಲ್ಲಿ ಒಂದು ಸಾವಿರ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇಂತಹ ಅನಿಷ್ಟಗಳನ್ನು ಪಾಕಿಸ್ತಾನ ನಿರ್ಮೂಲನೆ ಮಾಡಬೇಕು ಎಂದು ಗೆಹ್ಲೋಟ್‌ ಆಗ್ರಹಿಸಿರುವುದು ಸರಿಯಾಗಿದೆ.

2022ರಲ್ಲಿ ವಿಶ್ವಾದ್ಯಂತ ಭಯೋತ್ಪಾದನೆ ಸಂಬಂಧಿತ ಸಾವುಗಳಲ್ಲಿ ಪಾಕಿಸ್ತಾನವು ಎರಡನೇ ಅತಿದೊಡ್ಡ ಹೆಚ್ಚಳವನ್ನು ದಾಖಲಿಸಿದೆ. 2021ರಲ್ಲಿ 292 ಇದ್ದ ಸಾವಿನ ಸಂಖ್ಯೆ ಕಳೆದ ವರ್ಷದ ಶೇ.120 ಏರಿಕೆ ದಾಖಲಿಸಿದ್ದು, ಒಟ್ಟು 643 ಸಾವು ವರದಿಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಅತಿದೊಡ್ಡ ಹೆಚ್ಚಳವನ್ನು ಕಾಣುತ್ತಿದೆ. ಅದರಲ್ಲೂ ಭಯೋತ್ಪಾದನೆಯಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ.55 ಮಂದಿ ಸೇನೆಯ ಸಿಬ್ಬಂದಿ. ಭಯೋತ್ಪಾದನೆ ಸಂಬಂಧಿಸಿ ಜನರು ಸಾವನ್ನಪ್ಪುತ್ತಿರುವ ಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕು ಸ್ಥಾನ ಮೇಲಕ್ಕೆ ಹೋಗಿದ್ದು ಸದ್ಯ ಆರನೇ ಸ್ಥಾನದಲ್ಲಿದೆ. ಇದೆಲ್ಲವೂ ಆಸ್ಟ್ರೇಲಿಯಾ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿರುವ ವಾರ್ಷಿಕ ಜಾಗತಿಕ ಭಯೋತ್ಪಾದನಾ ಸೂಚ್ಯಂಕ(ಜಿಟಿಐ) ವರದಿಯಲ್ಲಿದೆ. ಪಾಕಿಸ್ತಾನವು ಭಯೋತ್ಪಾದನೆಯ ರಾಜಧಾನಿ ಎನ್ನುವುದು ಸಾಬೀತಾದ ಸಂಗತಿ. ಮತಾಂಧರನ್ನು, ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸಿ ಅವರಿಗೆ ಆಯುಧಗಳನ್ನೂ ಪೂರೈಸಿ, ಪಂಜಾಬ್‌ನಲ್ಲೂ ಖಲಿಸ್ತಾನ್‌ವಾದಿಗಳಿಗೆ ತೆರೆಮರೆಯ ಬೆಂಬಲ ನೀಡಿ ಅದು ಸೃಷ್ಟಿಸಿದ ಅನಾಹುತ, ಮಾನವ ಹಕ್ಕು ಉಲ್ಲಂಘನೆ ಅಷ್ಟಿಷ್ಟಲ್ಲ. ಇಂಥ ದೇಶಕ್ಕೆ ಭಾರತಕ್ಕೆ ಉಪದೇಶ ಮಾಡುವ ನೈತಿಕ ನೆಲೆಯಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಏಷ್ಯನ್‌ ಗೇಮ್ಸ್‌ನಲ್ಲಿ ಅರುಣಾಚಲ ತಗಾದೆ, ಚೀನಾದ ಅಧಿಕ ಪ್ರಸಂಗ

ಕಾಶ್ಮೀರದ ಬಗ್ಗೆ ಪಾಕ್‌ ಪ್ರಧಾನಿ ಆಡಿರುವ ಮಾತುಗಳಲ್ಲಿ ಹುರುಳಿಲ್ಲ. ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾಗಿ ಎರಡು ವರ್ಷಗಳಾದವು. ಈ ಎರಡು ವರ್ಷಗಳಲ್ಲಿ ಅಲ್ಲಿನ ಜನಜೀವನ ಸುಧಾರಿಸಿದೆ. ಪ್ರವಾಸೋದ್ಯಮ ಚಿಗುರಿದೆ. ದೇಶೀಯ ಹಾಗೂ ವಿದೇಶೀಯ ಹೊಸ ಹೂಡಿಕೆಗಳು ಬರುತ್ತಿವೆ. ಭಾರತೀಯರು ಇಲ್ಲಿ ಆಸ್ತಿ ಹೊಂದುವಂತಾಗಿದೆ. ಇದು ಸಹಜವಾಗಿಯೇ ಇಲ್ಲಿ ಪ್ರತ್ಯೇಕತಾವಾದವನ್ನು ಬಿತ್ತಲು ದಶಕಗಳಿಂದ ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಆದ ಹಿನ್ನಡೆಯಾಗಿದೆ. ಅದಕ್ಕಾಗಿಯೇ ಆ ದೇಶ ಮೈಪರಚಿಕೊಳ್ಳುತ್ತಿದೆ. ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧತೆ ಇಂದು ಅದನ್ನೇ ತಿನ್ನುತ್ತಿದೆ. ಇದಕ್ಕೆ ಬರ್ಬರ ಆರ್ಥಿಕ ದುಃಸ್ಥಿತಿಯೂ ಸೇರಿಕೊಂಡು ಹಸಿವು, ಬಡತನ, ನಿರುದ್ಯೋಗ, ಭಯೋತ್ಪಾದನೆಗಳ ಗೂಡಾಗಿಬಿಟ್ಟಿದೆ ಆ ದೇಶ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಮಾನವ ಹಕ್ಕುಗಳ ವಿಚಾರದಲ್ಲಿ ಭಾರತವನ್ನು ನೋಡಿ ಪಾಕ್‌ ಪಾಠ ಕಲಿಯಲಿ.

Continue Reading

ಕ್ರಿಕೆಟ್

NZ vs BAN: ಮಂಕಡ್​ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ಲಿಟನ್‌ ದಾಸ್‌‌ಗೆ ನೆಟ್ಟಿಗರ ಮೆಚ್ಚುಗೆ

ಮಂಕಡಿಂಗ್ ರೂಪದಲ್ಲಿ ರನೌಟ್(mankading out) ಆದ ಇಶ್ ಸೋಧಿ ಅಂಪೈರ್ ಜತೆ ಮಾತನಾಡಿ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ ಬಾಂಗ್ಲಾ ನಾಯಕ ಲಿಟನ್‌ ದಾಸ್‌‌ ಅವರ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

VISTARANEWS.COM


on

Edited by

Hasan Mahmud running out Ish Sodhi at the non-striker's end
Koo

ಢಾಕಾ: ನ್ಯೂಜಿಲ್ಯಾಂಡ್​(NZ vs BAN) ವಿರುದ್ಧದ ತವರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹೀನಾಯ ಸೋಲು ಕಂಡಿದೆ. ಆದರೆ ಪಂದ್ಯದಲ್ಲಿ ಹಂಗಾಮಿ ನಾಯಕ ಲಿಟನ್‌ ದಾಸ್‌‌(Litton Das) ಅವರು ತೋರಿದ ಕ್ರೀಡಾಸ್ಫೂರ್ತಿಗೆ ಎದುರಾಳಿ ತಂಡದ ಆಟಗಾರರು ಮಾತ್ರವಲ್ಲದೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿವೀಸ್​ ಬ್ಯಾಟಿಂಗ್​ ಸರದಿಯಲ್ಲಿ ಬಾಂಗ್ಲಾ ಬೌಲರ್‌ ಹಸನ್(Hasan Mahmud) 46ನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ನಾನ್ ಸ್ಟ್ರೈಕ್​ನಲ್ಲಿದ್ದ ಇಶ್ ಸೋಧಿ(Ish Sodhi) ಬೌಲಿಂಗ್​ ನಡೆಸುವ ಮುನ್ನವೇ ಕ್ರೀಸ್ ತೊರೆದು ಮಂಕಡಿಂಗ್ ರೂಪದಲ್ಲಿ ರನೌಟ್(mankading out) ಆದರು. ಆದರೆ ಅಂಪೈರ್ ಜತೆ ಮಾತನಾಡಿ ಲಿಟ್ಟನ್ ದಾಸ್ ಅವರು ಇಶ್ ಸೋಧಿಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಅವರ ಈ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಕಡಿಂಗ್ ವೇಳೆ ಸೋಧಿ 17 ರನ್ ಗಳಿಸಿದರು. ಬಳಿಕ 35 ರನ್ ಬಾರಿಸಿದರು. ಇದರಲ್ಲಿ ಮೂರು ಸೊಗಸಾದ ಸಿಕ್ಸರ್​ ಕೂಡ ಸಿಡಿಯಿತು.

ಸೋಲು ಕಂಡ ಬಾಂಗ್ಲಾ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ ತಂಡ 49.2 ಓವರ್​ಗಳಲ್ಲಿ 254ರನ್​ಗೆ ಆಲೌಟ್​ ಆಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ಸತತ ವಿಕೆಟ್​ ಕಳೆದುಕೊಂಡು 41.1 ಓವರ್​ಗಳಲ್ಲಿ ಕೇವಲ 168 ರನ್​ಗೆ ಸರ್ವಪತನ ಕಂಡಿತು. ಕಿವೀಸ್​ 86 ರನ್​ಗಳ ಗೆಲುವು ಸಾಧಿಸಿತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಕಿವೀಸ್​ ತಂಡ 1-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ಸೆಪ್ಟೆಂಬರ್​ 26ರಂದು ನಡೆಯಲಿದೆ.

ಏನಿದು ಮಂಕಡಿಂಗ್​ ಔಟ್​

ಕ್ರಿಕೆಟ್‌ ಆಟದಲ್ಲಿ ಬೌಲರ್‌ ಒಬ್ಬ ಚೆಂಡನ್ನು ಬ್ಯಾಟರ್​ನತ್ತ ಎಸೆಯುವ ಮೊದಲೇ ನಾನ್‌ ಸ್ಟ್ರೈಕ್‌ ನಲ್ಲಿರುವ ಬ್ಯಾಟರ್​ ಕ್ರೀಸ್‌ ಬಿಟ್ಟಿದ್ದರೆ ಆಗ ಬೌಲರ್‌ ಆತನನ್ನು ರನೌಟ್‌ ಮಾಡುವ ಅವಕಾಶವನ್ನು ಕ್ರಿಕೆಟ್‌ ಕಾನೂನಿನ 41.46 ನಿಯಮ ನೀಡುತ್ತದೆ. ನಾನ್‌ ಸ್ಟ್ರೈಕ್​ನಲ್ಲಿರುವ ಬ್ಯಾಟರ್​ ಒಬ್ಬನನ್ನು ಆತನ ಅರಿವಿಗೆ ಬರದಂತೆ ರನೌಟ್‌ ಮಾಡುವ ವಿಧಾನ ಇದಾಗಿದೆ. ಈ ಅವಕಾಶ ಆ ಓವರ್‌ ಬೌಲಿಂಗ್‌ ಮಾಡುತ್ತಿರುವ ಬೌಲರ್​ಗೆ ಮಾತ್ರವೇ ಇರುತ್ತದೆ. ಮತ್ತು ಇದು ಸಂಪೂರ್ಣವಾಗಿ ಬೌಲರೊಬ್ಬನ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿರುತ್ತದೆ.

ಇದನ್ನೂ ಓದಿ Litton Das: ಬಾಂಗ್ಲಾ ತಂಡಕ್ಕೆ ಲಿಟ್ಟನ್​ ದಾಸ್​ ನಾಯಕ

ಮಂಕಡಿಂಗ್ ಹೆಸರು ಬರಲು ಕಾರಣವೇನು?

1947ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ವೀನ್ಸ್‌ ಲ್ಯಾಂಡ್‌ ವಿರುದ್ಧದ ಪಂದ್ಯವೊಂದರಲ್ಲಿ ಭಾರತದ ಎಡಗೈ ಸ್ಪಿನ್ನರ್‌ ವೀನೂ ಮಂಕಡ್‌ ಅವರು ಬಿಲ್‌ ಬ್ರೌನ್‌ ಅವರನ್ನು ನಾನ್‌ ಸ್ಟ್ರೈಕ್‌ ಭಾಗದಲ್ಲಿ ರನೌಟ್‌ ಮಾಡಿದ್ದರು. ಆ ಬಳಿಕ ಕ್ರಿಕೆಟ್‌ ನ ಈ ವಿಚಿತ್ರ ನಿಯಮಕ್ಕೆ ‘ಮಂಕಡ್‌’ ನಿಯಮ ಎಂದೇ ಪ್ರಸಿದ್ಧಿ ಪಡೆಯಿತು.

Continue Reading

ಕ್ರಿಕೆಟ್

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಕಿತ್ತ ಮೂರನೇ ವೇಗಿ ಎಂಬ ಖ್ಯಾತಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಆ ಮೂಲಕ ದಿಗ್ಗಜರಾದ ಕಪಿಲ್ ದೇವ್ ಹಾಗೂ ಅಜಿತ್ ಅಗರ್ಕರ್ ಅವರನ್ನೊಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

VISTARANEWS.COM


on

Edited by

Mohammed Shami finished with 5 for 51
Koo

ಮೊಹಾಲಿ: ಆಸ್ಟ್ರೇಲಿಯಾ(India vs Australia, 1st ODI) ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಘಾತಕ ಬೌಲಿಂಗ್​ ಮೂಲಕ ಗಮನಸೆಳೆದ ಮೊಹಮ್ಮದ್​ ಶಮಿ(Mohammed Shami) 16 ವರ್ಷಗಳ ಬಳಿಕ ದಾಖಲೆಯೊಂದನ್ನು ಬರೆದಿದ್ದಾರೆ. ಇದಕ್ಕೂ ಮುನ್ನ 2007ರಲ್ಲಿ ಜಹೀರ್ ಖಾನ್(Zaheer Khan) ಗೋವಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ವಿರುದ್ಧ 5 ವಿಕೆಟ್ ಸಾಧನೆ ಮಾಡಿದ್ದರು. ಇದೀಗ 16 ವರ್ಷಗಳ ಬಳಿಕ ಶಮಿ ತವರು ಅಂಗಣದಲ್ಲಿ 5 ವಿಕೆಟ್ ಸಾಧನೆ ಮಾಡಿದ್ದಾರೆ.

ಮೂರನೇ ವೇಗಿ

ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಕಿತ್ತ ಮೂರನೇ ವೇಗಿ ಎಂಬ ಖ್ಯಾತಿಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಆ ಮೂಲಕ ದಿಗ್ಗಜರಾದ ಕಪಿಲ್ ದೇವ್ ಹಾಗೂ ಅಜಿತ್ ಅಗರ್ಕರ್ ಅವರನ್ನೊಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

2019ರ ವಿಶ್ವಕಪ್​​ನಲ್ಲಿ ಬರ್ಮಿಂಗ್ ಹ್ಯಾಮ್​​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 69 ರನ್​​ಗೆ 5 ವಿಕೆಟ್ ಪಡೆದದ್ದು ಶಮಿಯ ಇದುವರೆಗಿನ ಶ್ರೇಷ್ಠ ಬೌಲಿಂಗ್​ ಸಾಧನೆಯಾಗಿತ್ತು. ಆದರೆ ಆಸೀಸ್​ ವಿರುದ್ಧ ಶಮಿ 51 ರನ್​ಗೆ 5 ವಿಕೆಟ್​ ಕೆಡವಿ ಈ ಸಾಧನೆಯನ್ನು ಉತ್ತಮ ಪಡಿಸಿಕೊಂಡರು. ಇದು ಏಕದಿನ ಕ್ರಿಕೆಟ್​​ನಲ್ಲಿ ಶಮಿ ಅವರ ಎರಡನೇ ಐದು ವಿಕೆಟ್ ಸಾಧನೆಯಾಗಿದೆ. ಒಟ್ಟಾರೆ 50 ಓವರ್​ಗಳ ಸ್ವರೂಪದಲ್ಲಿ ಶಮಿ ಒಂಬತ್ತು ಬಾರಿ ನಾಲ್ಕು ವಿಕೆಟ್​ಗಳನ್ನು ಕಿತ್ತ ಸಾಧನೆ ಮಾಡಿದ್ದಾರೆ.

ಶಮಿ ಈಗ ಏಕದಿನ ಪಂದ್ಯಗಳಲ್ಲಿ ಕಾಂಗರೂ ಬಳಗದ ವಿರುದ್ಧ 37 ವಿಕೆಟ್​ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ವಿಕೆಟ್ (45) ಪಡೆದ ಕಪಿಲ್ ದೇವ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ 277 ರನ್​ಗಳ ಗುರಿ ಬೆನ್ನತ್ತಿದಿದೆ. ಸರಣಿಯ ಎರಡನೇ ಪಂದ್ಯ ಇಂದೋರ್​ನಲ್ಲಿ ಮತ್ತು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ರಾಜ್​​ಕೋಟ್​​ನಲ್ಲಿ ನಡೆಯಲಿದೆ.

ಇದನ್ನೂ ಓದಿ IND vs AUS: ಆಸೀಸ್​ಗೆ ಬೀಳಲಿ ಸರಣಿ ಸೋಲಿನ ಏಟು

ಪಂದ್ಯ ಗೆದ್ದ ಭಾರತ

ಇಲ್ಲಿನ ಐಎಸ್​ ಬಿಂದ್ರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 276 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ. 48.4 ಓವರ್​ಗಳಲ್ಲಿ. 5 ವಿಕೆಟ್​ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್​ನಲ್ಲಿ 51 ರನ್​ಗಳಿಗೆ 5 ವಿಕೆಟ್​ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್​ಮನ್​ ಗಿಲ್​ (74) ಹಾಗೂ ಋತುರಾಜ್​ ಗಾಯಕ್ವಾಡ್​ (71), ಸೂರ್ಯಕುಮಾರ್​ ಯಾದವ್​ (50), ಮತ್ತು ಕೆ. ಎಲ್​ ರಾಹುಲ್​ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು. ಶಮಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

Continue Reading
Advertisement
Indian Women Cricket Team
ಕ್ರಿಕೆಟ್39 mins ago

Asian Games 2023: ಬಾಂಗ್ಲಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಮೃತಿ ಮಂಧಾನಾ ಪಡೆ

Raja Marga world heart day
ಅಂಕಣ52 mins ago

Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!

Sudha Murty
ಕರ್ನಾಟಕ1 hour ago

Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್‌

Cauvery water Dispute
ಕರ್ನಾಟಕ2 hours ago

Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?

Bus Accident In Raichur
ಕರ್ನಾಟಕ2 hours ago

Bus Accident: ನಿಂತಿದ್ದ ಲಾರಿಗೆ ಸಾರಿಗೆ ಬಸ್‌ ಡಿಕ್ಕಿ; 32 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

DUSU Election Result
ದೇಶ2 hours ago

DUSU Election: ದೆಹಲಿ ವಿವಿಯಲ್ಲಿ ಎಬಿವಿಪಿ ದರ್ಬಾರ್;‌ ಚುನಾವಣೆಯಲ್ಲಿ ಭಾರಿ ಗೆಲುವು, ದೇಶ ಮೊದಲು ಎಂದ ಬಿಜೆಪಿ

fruits and cold cough
ಆರೋಗ್ಯ3 hours ago

Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

new kannada book yabli
ಕಲೆ/ಸಾಹಿತ್ಯ3 hours ago

Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ

cryptocurrency fraud
ಅಂಕಣ3 hours ago

ಸೈಬರ್‌ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!

pak human right
ಕ್ರಿಕೆಟ್4 hours ago

ವಿಸ್ತಾರ ಸಂಪಾದಕೀಯ: ಮಾನವ ಹಕ್ಕುಗಳ ಪ್ರಶ್ನೆ; ಪಾಕ್‌ ಮೊದಲು ತನ್ನ ಹುಳುಕು ಸರಿಪಡಿಸಿಕೊಳ್ಳಲಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

dina bhavishya
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

ಟ್ರೆಂಡಿಂಗ್‌