ಮುಂಬಯಿ: ವಿಶ್ವಕಪ್ ಟೂರ್ನಿಯ(ICC World Cup 2023) ಲೀಗ್ ಹಂತದ ಪಂದ್ಯಗಳು ಮುಕ್ತಾಯ ಕಂಡಿದೆ. ಇನ್ನೊಂದು ದಿನದ ಅಂತರದಲ್ಲಿ ಸೆಮಿಫೈನಲ್ ಕಾದಾಟ ಆರಂಭಗೊಳ್ಳಲಿದೆ. ಮೊದಲ ಸೆಮಿಫೈನಲ್ನಲ್ಲಿ(semi-finals rules) ಭಾರತ ಮತ್ತು ನ್ಯೂಜಿಲ್ಯಾಂಡ್(India vs New Zealand) ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ(Australia vs South Africa) ಮುಖಾಮುಖಿಯಾಗಲಿವೆ. ಈ ಪಂದ್ಯಗಳು ಕ್ರಮವಾಗಿ ನ.15 ಮತ್ತ ನ.16ರಂದು ನಡೆಯಲಿವೆ. ಈ ಪಂದ್ಯಕ್ಕೆ ಐಸಿಸಿ ಮಳೆ ನಿಯಮ ಪ್ರಕಟಿಸಿದೆ. ಈ ನಿಯಮ ಹೇಗಿರಲಿದೆ ಎನ್ನುವ ವರದಿ ಇಂತಿದೆ.
ಮೀಸಲು ದಿನ
ವಿಶ್ವಕಪ್ ಲೀಗ್ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಲೀಗ್ ಹಂತದ ಪಂದ್ಯಗಳು ಮಳೆಯಿಂದ ರದ್ದುಗೊಂಡರೆ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೆಲವು ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ್ದರೂ, ಯಾವುದೇ ಪಂದ್ಯ ಕೂಡ ರದ್ದುಗೊಂಡಿರಲಿಲ್ಲ. ಇದೀಗ ಸೆಮಿಫೈನಲ್ಗೆ ಮಳೆ ಬಂದು ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಏಕಂದರೆ ಇಲ್ಲಿ ಮೀಸಲು ದಿನ ಇರಲಿದೆ. ಫೈನಲ್ಗೂ ಮೀಸಲು ದಿನ ಇದೆ.
🕹 Choose your winning #CWC23 team 🏆 pic.twitter.com/peZY1LKv8v
— ICC Cricket World Cup (@cricketworldcup) November 13, 2023
ಮೀಸಲು ದಿನ ಮಳೆ ಬಂದರೆ ಫಲಿತಾಂಶ ಹೇಗೆ?
ಒಂದೊಮ್ಮೆ ಸೆಮಿಫೈನಲ್ ಪಂದ್ಯಗಳು ಮಳೆಯಿಂದ ಅಡಚಣೆಯಾಗಿ ಮೀಸಲು ದಿನವೂ ನಡೆಯದಿದ್ದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪಶ್ನೆ ಎಲ್ಲ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ. ಮೀಸಲು ದಿನವೂ ಪಂದ್ಯ ಸಂಪೂರ್ಣವಾಗಿ ನಡೆಯದಿದ್ದರೆ ಆಗ ಲೀಗ್ ಹಂತದಲ್ಲಿ ಹೆಚ್ಚು ಅಂಕ ಮತ್ತು ರನ್ ರೇಟ್ ಹೊಂದಿರುವ ತಂಡ ಫೈನಲ್ ಪ್ರವೇಶಿಸಲಿದೆ. ಉದಾಹರಣೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ಸೆಮಿ ಫೈನಲ್ ರದ್ದುಗೊಂಡರೆ ಇದರ ಲಾಭ ಭಾರತಕ್ಕೆ ಲಭಿಸಲಿದೆ. ಏಕೆಂದರೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ. ಹೀಗಾಗಿ ಭಾರತ ಫೈನಲ್ ಪ್ರವೇಶ ಪಡೆಯುತ್ತದೆ.
ಸಮಾನ ಅಂಕ ಹೊಂದಿದ್ದರೆ?
ಒಂದೊಮ್ಮೆ ಸೆಮಿಫೈನಲ್ ಮುಖಾಮುಖಿಯಾಗುವ ತಂಡದ ಅಂಕಗಳು ಸಮಾನವಾಗಿದ್ದರೆ, ಆಗ ರನ್ರೇಟ್ನಲ್ಲಿ ಮುಂದಿರುವ ತಂಡಕ್ಕೆ ಇದರ ಲಾಭ ಸಿಗಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 14 ಅಂಕ ಹೊಂದಿದೆ. ಆದರೆ ರನ್ ರೇಟ್ನಲ್ಲಿ ದಕ್ಷಿಣ ಆಫ್ರಿಕಾ ಮುಂದಿದೆ. ಹೀಗಾಗಿ ಈ ಪಂದ್ಯ ಮಳೆಯಿಂದ ರದ್ದುಗೊಂಡರೆ ದಕ್ಷಿಣ ಆಫ್ರಿಕಾ ನೇರವಾಗಿ ಫೈನಲ್ ಪ್ರವೇಸಿಸಲಿದೆ.
ಇದನ್ನೂ ಓದಿ ICC World Cup 2023: 9 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಹೀಗಿತ್ತು…
ಬೌಂಡರಿ ಕೌಂಟ್ ಇಲ್ಲ
ಕಳೆದ ಬಾರಿಯ ವಿಶ್ವಕಪ್ ಫೈನಲ್ನಲ್ಲಿ ಸೂಪರ್ ಓವರ್ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಸೆಮಿ ಆಗಲಿ ಫೈನಲ್ ಆಗಲಿ ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್ ಓವರ್ ಆಡಿಸಲಾಗುತ್ತದೆ.
ಅಂಕಪಟ್ಟಿ ಹೇಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 9 | 9 | 0 | 18 | +2.570 |
ದಕ್ಷಿಣ ಆಫ್ರಿಕಾ | 9 | 7 | 2 | 14 | +1.261 |
ಆಸ್ಟ್ರೇಲಿಯಾ | 9 | 7 | 2 | 14 | +0.841 |
ನ್ಯೂಜಿಲ್ಯಾಂಡ್ | 9 | 5 | 4 | 10 | +0.743 |
ಪಾಕಿಸ್ತಾನ | 9 | 4 | 5 | 8 | -0.199 |
ಅಫಘಾನಿಸ್ತಾನ | 9 | 4 | 5 | 8 | -0.336 |
ಇಂಗ್ಲೆಂಡ್ | 9 | 3 | 6 | 6 | -0.572 |
ಬಾಂಗ್ಲಾದೇಶ | 9 | 2 | 7 | 4 | -1.087 |
ಶ್ರೀಲಂಕಾ | 9 | 2 | 7 | 4 | -1.419 |
ನೆದರ್ಲ್ಯಾಂಡ್ಸ್ | 9 | 2 | 7 | 4 | -1.825 |