ಮುಂಬಯಿ: ಭಾರತ ತಂಡ ಬುಧವಾರ ನಡೆದ ವಿಶ್ವಕಪ್ನ(icc world cup 2023) ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 70 ರನ್ ಅಂತರದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಫೈನಲ್(ICC World Cup Final) ಪಂದ್ಯ ಭಾನುವಾರ ಅಹಮದಾಬಾದ್ನಲ್ಲಿ ನಡೆಯಲಿದೆ. ಆದರೆ ಈ ಪಂದ್ಯವನ್ನು ದಯವಿಟ್ಟು ನೋಡಬೇಡಿ ಎಂದು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್(Amitabh Bachchan) ಅವರಲ್ಲಿ ಟೀಮ್ ಇಂಡಿಯಾದ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಹೌದು, ಅಭಿಮಾನಿಗಳು ಹೀಗೆ ಹೇಳಲು ಒಂದು ಕಾರಣವಿದೆ. ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ಬಳಿಕ ಅಮಿತಾಭ್ ಬಚ್ಚನ್ ಅವರು ತಂಡವನ್ನು ಪ್ರಶಂಸಿಸಿ ಟ್ವೀಟ್ ಒಂದುನ್ನು ಮಾಡಿದ್ದರು. ಈ ಟ್ವೀಟ್ನಲ್ಲಿ ಅಮಿತಾಭ್,” ನಾನು ಪಂದ್ಯವನ್ನು ನೋಡದೆ ಇದ್ದಾಗ ಟೀಮ್ ಇಂಡಿಯಾ ಗೆಲ್ಲುತ್ತದೆ” ಎಂದು ಬರೆದುಕೊಂಡಿದ್ದಾರೆ.
T 4831 – when i don't watch we WIN !
— Amitabh Bachchan (@SrBachchan) November 15, 2023
ಅಮಿತಾಭ್ ಅವರ ಟ್ವೀಟ್ಗೆ ಪ್ರತಿಕ್ರಿಕೆ ನೀಡಿದ ನೆಟ್ಟಿಗರು. ಸರ್ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ನೀವು ಫೈನಲ್ ಪಂದ್ಯವನ್ನು ಮಾತ್ರ ನೋಡಬೇಡಿ ಎಂದು ಕೇಳಿಕೊಂಡಿದ್ದಾರೆ. ಏಕೆಂದರೆ ಅವರು ಪಂದ್ಯ ನೋಡಿದರೆ ಭಾರತ ಸೋಲಬಹುದು ಎಂಬ ಭಯ ಅಭಿಮಾನಿಗಳದ್ದು. ಹೀಗಾಗಿ ನೆಟ್ಟಿಗರು ಅಮಿತಾಭ್ಗೆ ಪಂದ್ಯ ನೋಡದಂತೆ ಮನವಿ ಮಾಡಿದ್ದಾರೆ. ಇನ್ನು ಕೆಲ ನೆಟ್ಟಿಗರು ಅಮಿತಾಭ್ಗೆ ತಮಾಷೆಯ ಸಲಹೆಯೊಂದನ್ನು ನೀಡಿದ್ದಾರೆ. ಫೈನಲ್ ಪಂದ್ಯದ ಬಳಿಕ ನೀವು ಹೈಲೆಟ್ಸ್ ನೋಡುವ ಮೂಲಕ ಸಂಭ್ರಮಿಸಿ ಸರ್… ಎಂದು ಹೇಳಿದ್ದಾರೆ.
Dont watch final match please sir 🙏
— Lohith_Rebelified🔥🦖 (@Rebelism_18) November 15, 2023
ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಈ ಟೂರ್ನಿಗೆ ವಿಶೇಷ ಅತಿಥಿಯಾಗಿ ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಬಿಸಿಸಿಐ ಗೋಲ್ಡನ್ ಟಿಕೆಟ್ ನೀಡಿ ಆಹ್ವಾನಿಸಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah) ಅವರು ಮುಂಬಯಿಯ ಅಮಿತಾಬ್ ಬಚ್ಚನ್ ನಿವಾಸಕ್ಕೆ ತೆರಳಿ ಈ ಗೋಲ್ಡನ್ ಟಿಕೆಟ್ ನೀಡಿದ್ದರು. ಅಮಿತಾಭ್ಗೆ ಗೋಲ್ಡನ್ ಟಿಕೆಟ್ ನೀಡಿದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.
ಅಮಿತಾಭ್ ಸರ್ ಅವರು ಭಾರತೀಯ ಕ್ರಿಕೆಟ್ಗೆ ಹಲವು ಬಾರಿ ಬೆಂಬಲ ಸೂಚಿಸಿದ್ದಾರೆ. ವಿಶ್ವಕಪ್ ಸಂದರ್ಭದಲ್ಲಿಯೂ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಹಲವು ಜಾಹಿರಾತಿನಲ್ಲಿ ಅವರು ಯಾವುದೇ ಪಲಾಪೇಕ್ಷೆ ಇಲ್ಲದೆ ನಟಿಸಿ ಭಾರತ ತಂಡಕ್ಕೆ ಬೆಂಬಲಿಸಿದ್ದಾರೆ. ಹೀಗಾಗಿ ಅವರಿಗೆ ಗೋಲ್ಡನ್ ಟಿಕೆಟ್ ನೀಡಿ ಅವರನ್ನು ಆಹ್ವಾನಿಸಲಾಗಿದೆ ಎಂದು ಜಯ್ ಶಾ ಹೇಳಿದ್ದರು. ಒಂದೊಮ್ಮೆ ಅವರು ಫೈನಲ್ ವೀಕ್ಷಣೆಗೆ ಬಂದರೆ ಅವರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ IND vs NZ: ಪಿಚ್ ಬಗ್ಗೆ ಮಾತನಾಡುವವರು ಮೂರ್ಖರು ಎಂದ ಸುನಿಲ್ ಗವಾಸ್ಕರ್
ಪಂದ್ಯ ಗೆದ್ದ ಭಾರತ
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 397 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ 48.5 ಓವರ್ಗಳ ಮುಕ್ತಾಯಗೊಂಡಾಗ 327 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಅಂದ ಹಾಗೆ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಯಾವುದೇ ತಂಡಕ್ಕೆ 50 ಓವರ್ಗಳನ್ನು ಪೂರ್ತಿಯಾಗಿ ಆಡಲು ಬಿಡಲಿಲ್ಲ. ಇದು ಕೂಡ ಭಾರತ ತಂಡದ ಪಾಲಿಗೆ ದಾಖಲೆಯಾಗಿದೆ.
Then, please don't watch the final
— isHaHaHa (@hajarkagalwa) November 15, 2023
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ನ್ಯೂಜಿಲ್ಯಾಂಡ್ ತಂಡಕ್ಕೆ ನಿಜವಾಗಿಯೂ ಕಾಡಿದ್ದು ಮೊಹಮ್ಮದ್ ಶಮಿ. 9.5 ಓವರ್ಗಳನ್ನು ಎಸೆದ ಶಮಿ 57 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ನ್ಯೂಜಿಲ್ಯಾಂಡ್ ಪರ ಡ್ಯಾರಿಲ್ ಮಿಚೆಲ್ 134 ರನ್ ಬಾರಿಸಿ ಮಿಂಚಿದರು. ಕೇನ್ ವಿಲಿಯಮ್ಸನ್ 69 ರನ್ ಬಾರಿಸಿದರು. ಇವರಿಬ್ಬರೂ 181 ರನ್ಗಳ ಜತೆಯಾಟವಾಡಿದರು. ಈ ವೇಳೆ ಭಾರತಕ್ಕೆ ಆತಂಕ ಎದುರಾಯಿತು. ಆದರೆ, ಶಮಿ ಅವರಿಬ್ಬರನ್ನೂ ಔಟ್ ಮಾಡುವ ಮೂಲಕ ಭಾರತಕ್ಕೆ ನೆಮ್ಮದಿ ತಂದರು. ನ್ಯೂಜಿಲ್ಯಾಂಡ್ ತಂಡದ ಗ್ಲೆನ್ ಫಿಲಿಫ್ಸ್ 41 ರನ್ ಬಾರಿಸಿದರು. ಉಳಿದವರಿಗೆ ದೊಡ್ಡ ಮೊತ್ತಕ್ಕೆ ಸವಾಲಾಗಲು ಸಾಧ್ಯವಾಗಲಿಲ್ಲ.