IND vs NZ: ಪಿಚ್​ ಬಗ್ಗೆ ಮಾತನಾಡುವವರು ಮೂರ್ಖರು ಎಂದ ಸುನಿಲ್ ಗವಾಸ್ಕರ್ - Vistara News

ಕ್ರಿಕೆಟ್

IND vs NZ: ಪಿಚ್​ ಬಗ್ಗೆ ಮಾತನಾಡುವವರು ಮೂರ್ಖರು ಎಂದ ಸುನಿಲ್ ಗವಾಸ್ಕರ್

ಪಿಚ್ ಬದಲಾವಣೆ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಿ, ಇದು ಅಸಂಬದ್ಧ ಎಂದು ಸುನಿಲ್ ಗವಾಸ್ಕರ್ ತಿರುಗೇಟು ನೀಡಿದ್ದಾರೆ.

VISTARANEWS.COM


on

Gavaskar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಬುಧವಾರ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್​ನ ಮೊದಲ​ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ 70 ರನ್​ಗಳ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತು. ಸೆಮಿಫೈನಲ್​ ಪಂದ್ಯ ಆರಂಭಕ್ಕೂ ಮುನ್ನ ಕೆಲ ಮಾಧ್ಯಮಗಳು ಬಿಸಿಸಿಐ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್ ಸಿದ್ಧಪಡಿಸಿಕೊಂಡಿದೆ ಎಂದು ಸುದ್ದಿ ಬಿತ್ತರಿಸಿದ್ದವು. ಇದಕ್ಕೆ ತಿರುಗೇಟು ನೀಡಿದ ಮಾಜಿ ಆಟಗಾರ ಸುನಿಲ್ ಗವಾಸ್ಕರ್​, ಪಿಚ್ ಬದಲಾವಣೆ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಿ, ಇದು ಅಸಂಬದ್ಧ ಎಂದು ಹೇಳಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಆರಂಭಕ್ಕೂ ಕೆಲವೇ ಗಂಟೆಗಳು ಬಾಕಿ ಇರುವಾಗ ಕೆಲ ಮಾಧ್ಯಮಗಳಲ್ಲಿ ಪಿಚ್​ ವಿವಾದದ ಸುದ್ದಿಗಳು ಹರಿದಾಡಿದ್ದವು. ಐಸಿಸಿಗೆ ಮಾಹಿತಿಯನ್ನೇ ನೀಡದೆ ಬಿಸಿಸಿಐ ಭಾರತ ತಂಡಕ್ಕೆ ಅನುಕೂಲಕರವಾದ ಸ್ಲೋ ಪಿಚ್​ ನಿರ್ಮಾಣ ಮಾಡಿದೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಇದು ಬಾರಿ ಚರ್ಚೆಗೂ ಕಾರಣವಾಗಿತ್ತು. ಇದೇ ವೇಳೆ ಬಿಸಿಸಿಐ ಈ ರೀತಿಯ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿತ್ತು. ಟೂರ್ನಿಯ ನಾಕೌಟ್ ಪಂದ್ಯಗಳ ಪಿಚ್ ಐಸಿಸಿ ಕ್ಯುರೇಟರ್ ಅವರ ಸಮ್ಮುಕ್ಕದಲ್ಲೇ ಸಿದ್ಧಪಡಿಸಲಾಗಿದೆ. ಪಿಚ್​ ತಯಾರಿಯಲ್ಲಿ ಬಿಸಿಸಿಐ ಅಧಿಕಾರಿಗಳು ತಲೆ ಹಾಕಿಲ್ಲ ಎಂದು ಸ್ಪಷ್ಟಣೆ ನೀಡಿತ್ತು.

ಇದನ್ನೂ ಓದಿ IND vs NZ: ಹಾಟ್​​ಸ್ಟಾರ್​ನಲ್ಲಿ ದಾಖಲೆ ಬರೆದ ಭಾರತ-ನ್ಯೂಜಿಲ್ಯಾಂಡ್​ ಸೆಮಿ ಪಂದ್ಯ

ಮೂರ್ಖರು…

ಪಿಚ್​ ವಿವಾದದ ಬಗ್ಗೆ ಸುನಿಲ್ ಗವಾಸ್ಕರ್ ಅವರು “ಮೂರ್ಖರು” ಆತಿಥೇಯರ ಮೇಲೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಪಂದ್ಯ ಮುಗಿದ ಬಳಿಕದ ವಿಶ್ಲೇಷಣೆಯ ಸಂದರ್ಭದಲ್ಲಿ ಬಹಿರಂಗವಾಗಿಯೇ ಕಿಡಿಕಾರಿದರು. ಪಿಚ್ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಎಲ್ಲ ಮೂರ್ಖರು ಮೊದಲು ಸುಮ್ಮನಾಗಬೇಕು. ಭಾರತದ ಮೇಲೆ ಇಲ್ಲದೇ ಇರುವ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿ ಎಂದು ಗವಾಸ್ಕರ್ ಸುಳ್ಳು ಸುದ್ದಿ ಹಬ್ಬುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಐಸಿಸಿ ಪ್ರಕಾರ ಸೆಮಿಫೈನಲ್ ಪಂದ್ಯ ವಾಂಖೆಡೆಯ ಪಿಚ್ ಸಂಖ್ಯೆ 7 ರಲ್ಲಿ ಆಡಬೇಕಿತ್ತು. ಅದು ತಾಜಾ ಪಿಚ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ಪಿಚ್​ ಬದಲಾಯಿಸಿ ಲೀಗ್​ ಪಂದ್ಯಗಳು ನಡೆದ ಪಿಚ್​ ಸಂಖ್ಯೆ 6ರಲ್ಲಿ ನಡೆಸಲಾಗಿದೆ, ಇದು ತುಂಬ ಸ್ಲೋ ಪಿಚ್​ ಆಗಿದೆ ಎಂದು ಆಂಗ್ಲ ಮಾಧ್ಯವಮೊಂದು ವರದಿ ಮಾಡಿತ್ತು.

ಫೈನಲ್​ ಪಂದ್ಯದ ಪಿಚ್​ ಕೂಡ ಬದಲಾವಣೆ

ಭಾರತ ತಂಡ ಫೈನಲ್​ ಪ್ರವೇಶಿಸಿದರೂ ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್​ ಪಂದ್ಯದ ಪಿಚ್​ ಕೂಡ ಬದಲಾವಣೆ ಮಾಡಲಾಗುವುದು ಎಂಬ ಆರೋಪವೂ ಕೇಳಿ ಬಂದಿತ್ತು. ಭಾರತ ಫೈನಲ್‌ಗೆ ಬಂದರೆ, ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಧಾನಗತಿಯ ಪಿಚ್ ನಿರೀಕ್ಷಿಸಲಾಗಿದೆ ಎಂದು ವರದಿಯೊಂದು ಹೇಳಿತ್ತು. ಇದೆಲ್ಲದಕ್ಕೂ ಗವಾಸ್ಕರ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವತಂತ್ರ ಪಿಚ್ ಸಲಹೆಗಾರ ಆ್ಯಂಡಿ ಅಟ್ಕಿನ್ಸನ್ ಅವರ ನೇತೃತ್ವದಲ್ಲೇ ಮಾಡಲಾಗಿದೆ. ಬೇಕಿದ್ದರೆ ಅವರನ್ನೇ ಕೇಳಿ ಎಂದು ಚಾಟಿ ಬೀಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಸ್ಟೊಯ್ನಿಸ್ ಕಪಾಳಕ್ಕೆ ಬಾರಿಸಿದ ಕೋಚ್​​ ಕ್ಲೂಸ್ನರ್​; ಇಲ್ಲಿದೆ ವಿಡಿಯೊ

IPL 2024: ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭಾರಿ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಇದು​​ ಇದು ನಿರ್ಣಾಯಕ ಪಂದ್ಯವಾಗಿತ್ತು. ಕೆಎಲ್ ರಾಹುಲ್ ನೇತೃತ್ವದ ತಂಡವು ತಮ್ಮ ತವರಿನ ಪಂದ್ಯವನ್ನು 98 ರನ್ ಗಳಿಂದ ಕಳೆದುಕೊಂಡಿತು. ಕೋಲ್ಕತಾ ನೈಟ್ ರೈಡರ್ಸ್ 235 ರನ್​ಗಳ ಬೃಹತ್ ಮೊತ್ತವನ್ನು ಗಳಿಸಿದ ನಂತರ ಎಲ್ಎಸ್​​ಜೆ ಕೇವಲ 137 ರನ್​ಗಳಗಿಎ ಆಲೌಟ್ ಆಗಿತ್ತು.

VISTARANEWS.COM


on

IPL 2024
Koo

ಹೈದರಾಬಾದ್​: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ (IPL 2024) ಮುಕ್ತಾಯಗೊಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮೊದಲು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸ್ನರ್ ತಮ್ಮ ಆಟಗಾರರನ್ನು ಪ್ರೇರೇಪಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಈ ವೇಳೆ ಅವರು ತಮ್ಮ ತಂಡದ ಆಟಗಾರ ಆಸ್ಟ್ರೇಲಿಯಾದ ಆಲ್​ರೌಂಡರ್​​ ಮಾರ್ಕ್​ ಸ್ಟೊಯ್ನಿಸ್​ ಕೆನ್ನೆ ಮೇಲೆ ತಮಾಷೆಗೆ ಬಾರಿಸಿರುವ ಸುದ್ದಿ ವೈರಲ್ ಆಗಿದೆ.

ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭಾರಿ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಇದು​​ ಇದು ನಿರ್ಣಾಯಕ ಪಂದ್ಯವಾಗಿತ್ತು. ಕೆಎಲ್ ರಾಹುಲ್ ನೇತೃತ್ವದ ತಂಡವು ತಮ್ಮ ತವರಿನ ಪಂದ್ಯವನ್ನು 98 ರನ್ ಗಳಿಂದ ಕಳೆದುಕೊಂಡಿತು. ಕೋಲ್ಕತಾ ನೈಟ್ ರೈಡರ್ಸ್ 235 ರನ್​ಗಳ ಬೃಹತ್ ಮೊತ್ತವನ್ನು ಗಳಿಸಿದ ನಂತರ ಎಲ್ಎಸ್​​ಜೆ ಕೇವಲ 137 ರನ್​ಗಳಗಿಎ ಆಲೌಟ್ ಆಗಿತ್ತು.

ಈ ಸೋಲು ಅವರನ್ನು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ನಾಲ್ಕು ಸ್ಥಾನಗಳಿಂದ ಕೆಳಕ್ಕೆ ಇಳಿಯುವಂತೆ ಮಾಡಿತ್ತು. ಅವರ ನೆಟ್ ರನ್ ರೇಟ್ ಅನ್ನು ಹಾಳುಮಾಡಿತು. ಎಸ್​​ಆರ್​ಎ್​್ ವಿರುದ್ಧ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು, ಲ್ಯಾನ್ಸ್ ಕ್ಲೂಸ್ನರ್ ಆಟದ ಪ್ರಾರಂಭಕ್ಕೆ ಸ್ವಲ್ಪ ಅವರನ್ನು ಪ್ರೇರೇಪಿಸಲು ನಿರ್ಧರಿಸಿದರು. ಆದರೆ, ಈ ಪಂದ್ಯದಲ್ಲಿಯೂ ಸೋತ ಲಕ್ನೊ ಭಾರೀ ಹಿನ್ನಡೆಗೆ ಒಳಗಾಯಿತು.

ಇದನ್ನೂ ಓದಿ:

ಆದರೆ, ಪಂದ್ಯಕ್ಕಿಂತ ಮೊದಲು ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ತಂಡದ ಗುಂಪಿನ ಮಧ್ಯದಲ್ಲಿ ನಿಂತು ಆಟಗಾರರಿಗೆ ಭಾಷಣ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂತು. ಲ್ಯಾನ್ಸ್ ಕ್ಲೂಸ್ನರ್ ಅವರ ಭಾಷಣದಿಂದ ಎಲ್ಎಸ್​ಜಿ ಆಟಗಾರರು ಸ್ಪಷ್ಟವಾಗಿ ಭಾವಪರವಶರಾಗಿದ್ದರು. ಈ ವೇಲೆ ಮಾರ್ಕಸ್ ಸ್ಟೋಯ್ನಿ ಸ್​ಗೆ ನಗು ತಡೆಯಲಾಗಲಿಲ್ಲ. ನಂತರ ಲ್ಯಾನ್ಸ್ ಕ್ಲೂಸ್ನರ್ ತಮ್ಮ ಭಾಷಣವನ್ನು ಮುಂದುವರಿಸುವ ಮೊದಲು ಆಸ್ಟ್ರೇಲಿಯಾದ ಆಟಗಾರನಿಗೆ ತಮಾಷೆಯಾಗಿ ಕಪಾಳಮೋಕ್ಷ ಮಾಡಿದರು.

ಲ್ಯಾನ್ಸ್ ಕ್ಲೂಸ್ನರ್ ಭಾಷಣ ಇಂತಿದೆ

ಲ್ಯಾನ್ಸ್ ಕ್ಲೂಸ್ನರ್ ಅವರ ಭಾಷಣವು ಹೆಚ್ಚಿನ ವ್ಯತ್ಯಾಸವನ್ನುಂಟುಮಾಡಲಿಲ್ಲ, ಏಕೆಂದರೆ ಎಸ್ಆರ್ಹೆಚ್ ಲಕ್ನೋ ಮೂಲದ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸಿ ಪಾಯಿಂಟ್ಸ್ ಟೇಬಲ್​​ನಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಲಕ್ನೊ ಮೊದಲು ಬ್ಯಾಟ್ ಮಾಡಿ 164 ರನ್​ ಬಾರಿಸಿತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 10 ಓವರ್​ಗಳಲ್ಲಿ ಈ ಮೊತ್ತವನ್ನು ಎಸ್​ಆರ್​ಎಚ್​​ ಬೆನ್ನಟ್ಟಿತು. ಹೆಡ್ ಕೇವಲ 30 ಎಸೆತಗಳಲ್ಲಿ 89 ರನ್ ಗಳಿಸಿದರೆ, ಶರ್ಮಾ 28 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರು.

Continue Reading

ಕ್ರೀಡೆ

MS Dhoni: ಧೋನಿಗೆ ವಿಶೇಷ ಉಡುಗೊರೆ ನೀಡಿದ ಅಭಿಮಾನಿ; ವಿಡಿಯೊ ವೈರಲ್​

MS Dhoni: ಯಶ್​ ಎನ್ನುವ ಧೋನಿಯ ಅಪ್ಪಟ ಅಭಿಮಾನಿ ತಾನು ಬಿಡಿಸಿದ ಧೋನಿಯ ಚಿತ್ರವನ್ನು ಅವರಿಗೆ ಸ್ಮರಣಿಕೆಯಾಗಿ ನೀಡಿದ್ದಾನೆ. ಇದರ ವಿಡಿಯೊ ವೈರಲ್(Viral Video)​ ಆಗಿದೆ.

VISTARANEWS.COM


on

MS Dhoni
Koo

ಚೆನ್ನೈ: ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಯಾವಾಗಲೂ ತಮ್ಮ ವ್ಯಕ್ತಿತ್ವದಿಂದ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಹೀಗಾಗಿ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು(MS Dhoni Fan) ಹೊಂದಿದ್ದಾರೆ. ಅವರ ಭೇಟಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಕೆಲ ಅಭಿಮಾನಿಗಳು ಧೋನಿಯನ್ನು ಭೇಟಿಯಾಗಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಾರೆ. ಇದೀಗ ಚೆನ್ನೈಯಲ್ಲಿ ಧೋನಿಯ ಅಪ್ಪಟ ಅಭಿಮಾನಿಯೊಬ್ಬ ತಾನು ಬಿಡಿಸಿದ ಧೋನಿಯ ಚಿತ್ರವನ್ನು ಅವರಿಗೆ ಸ್ಮರಣಿಕೆಯಾಗಿ ನೀಡಿದ್ದಾನೆ. ಇದರ ವಿಡಿಯೊ ವೈರಲ್(Viral Video)​ ಆಗಿದೆ.

ಯಶ್​ ಎನ್ನುವ ಈ ಅಭಿಮಾನಿ ಧೋನಿ ಕೆಲ ವರ್ಷಗಳ ಹಿಂದೆ ಭಾರತ ತಂಡ ಪರ ಆಡುತ್ತಿದ್ದಾಗ ಮತ್ತು ಈಗ ಇರುವ ಅವರ ಸ್ಟ್ರೈಲ್​ನ 2 ಚಿತ್ರಗಳನ್ನು ಬಿಡಿಸಿ ಇದರಲ್ಲೊಂದು ಚಿತ್ರಕಲೆಯನ್ನು ಧೋನಿಗೆ ನೀಡಿದ್ದಾನೆ. ಇದರಲ್ಲಿ ಆತನ ಹಸ್ತಾಕ್ಷರ ಕೂಡ ಹಾಕಲಾಗಿದೆ. ಇನ್ನೊಂದು ಚಿತ್ರವನ್ನು ಧೋನಿಯಿಂದ ಆಟೋಗ್ರಾಫ್​ ಹಾಕಿಸಿ ತನ್ನ ಬಳಿಯೆ ಇರಿಸಿಕೊಂಡಿದ್ದಾನೆ.

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ಇದನ್ನೂ ಓದಿ MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

ಈ ಬಾರಿಯ ಐಪಿಎಲ್​ ಆರಂಭದ ವೇಳೆಯೂ ಅಭಿಮಾನಿಯೊಬ್ಬ ಧೋನಿಯನ್ನು ಭೇಟಿಯಾಗಿ ವಿಷ್ಣುವಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದ. ಧೋನಿ ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್​ ಸಿದ್ಧತೆಯದ್ದ ವೇಳೆ ಅಭಿಮಾನಿಯೊಬ್ಬರು ಭೇಟಿ ಮಾಡಿ ಸಾಲು ಹೊದಿಸಿ ಸನ್ಮಾನಿಸಿದ್ದ. ಜತೆಗೆ ಶ್ರೀ ವಿಷ್ಣುವಿನ ಮೂರ್ತಿಯನ್ನು ನೀಡಿದ್ದ. ಇದನ್ನು ಧೋನಿ ಸಂತಸದಿಂದಲೇ ಸ್ವೀಕರಿಸಿದ್ದರು.

ಧೋನಿ ಸ್ನಾಯು(Dhoni Muscle Tear) ನೋವಿನಿಂದ ಬಳಲುತ್ತಿದ್ದರೂ ಕೂಡ ತಂಡಕ್ಕೆ ಹಿನ್ನಡೆಯಾಗಬಾರದೆಂದು ವೈದ್ಯರ ಸಲಹೆಯನ್ನು ಲೆಕ್ಕಿಸದೇ ಈ ಬಾರಿಯ ಐಪಿಎಲ್​ ಆಡುತ್ತಿದ್ದಾರೆ ಎಂದು ತಂಡದ ಮೂಲಗಳು ಮಾಹಿತಿ ನೀಡಿದೆ. “ಧೋನಿ ತನ್ನ ಗಾಯವನ್ನು ಮರೆಮಾಚಿ ಆಡುತ್ತಿದ್ದಾರೆ. ಈ ವಿಚಾರ ಯಾರಿಗೂ ತಿಳಿದಿಲ್ಲ. ಅವರನ್ನು ಟೀಕಿಸುವವರಿಗೆ ಅವರು ಈ ತಂಡಕ್ಕಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ತಿಳಿದಿಲ್ಲ ”ಎಂದು ಸಿಎಸ್‌ಕೆ ಮೂಲಗಳು ತಿಳಿಸಿತ್ತು.

Continue Reading

ಕ್ರಿಕೆಟ್

Virender Sehwag: ಏಕದಿನ ವಿಶ್ವಕಪ್​ ಸೋಲಿಗೆ ಕೊಹ್ಲಿ, ರಾಹುಲ್​ ನೇರ ಕಾರಣ ಎಂದ ಮಾಜಿ ಆಟಗಾರ

Virender Sehwag: ಸಂದರ್ಶನವೊಂದರಲ್ಲಿ ಮಾತನಾಡಿದ ಸೆಹವಾಗ್​, ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮಾಡುವಾಗ 11ನೇ ಓವರ್ ಮತ್ತು 40ನೇ ಓವರ್ ನಡುವೆ ನಿರ್ಭೀತವಾಗಿ ಬ್ಯಾಟ್​ ಬೀಸದೇ ಇದದ್ದು ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ಸೆಹವಾಗ್​​ ಹೇಳಿದ್ದಾರೆ.

VISTARANEWS.COM


on

Virender Sehwag
Koo

ನವದೆಹಲಿ: ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ(ODI World Cup 2023 Loss) ಒಂದೇ ಒಂದು ಪಂದ್ಯ ಸೋಲದೆ ಫೈನಲ್​ ಪ್ರವೇಶಿಸಿದ್ದ ಟೀಮ್​ ಇಂಡಿಯಾ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಕಪ್​ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಸೋಲಿನ ಆಘಾತ ಈಗಲೂ ಕೂಡ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡುತ್ತಲೇ ಇದೆ. ಅಂದಿನ ಭಾರತದ ಸೋಲಿಗೆ ಕಾರಣ ಏನೆಂಬುದನ್ನು ಮಾಜಿ ಡ್ಯಾಶಿಂಗ್​ ಬ್ಯಾಟರ್​ ವೀರೇಂದ್ರ ಸೆಹವಾಗ್(Virender Sehwag) ವಿವರಿಸಿದ್ದಾರೆ.​

ಸಂದರ್ಶನವೊಂದರಲ್ಲಿ ಮಾತನಾಡಿದ ಸೆಹವಾಗ್​, ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮಾಡುವಾಗ 11ನೇ ಓವರ್ ಮತ್ತು 40ನೇ ಓವರ್ ನಡುವೆ ನಿರ್ಭೀತವಾಗಿ ಬ್ಯಾಟ್​ ಬೀಸದೇ ಇದದ್ದು ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ಸೆಹವಾಗ್​​ ಹೇಳಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದೇ ತಂಡದ ಹಿನ್ನಡೆಗೆ ಕಾರಣ ಎಂದು ಸೆಹವಾಗ್​ ಪರೋಕ್ಷವಾಗಿ ಟೀಕಿಸಿದ್ದಾರೆ. 2007 ಮತ್ತು 2011ರ ನಡುವೆ ನಾವು ಪ್ರತಿ ಪಂದ್ಯವನ್ನು ನಾಕೌಟ್ ಪಂದ್ಯವಾಗಿ ಆಡಿದೆವು. ಹೀಗಾಗಿಯೇ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದೆವು ಎಂದು ಹೇಳಿದರು. ಸೆಹವಾಗ್ ಹೇಳಿಕೆಯ ವಿಡಿಯೊ ಇದೀಗ ವೈರಲ್​ ಆಗಿದೆ.

ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.

ಇದನ್ನೂ ಓದಿ World Cup 2023 : ದ್ರಾವಿಡ್​, ರೋಹಿತ್ ಮೇಲೆ ವಿಶ್ವ ಕಪ್​ ಫೈನಲ್ ಪಂದ್ಯದ ಪಿಚ್​ ತಿರುಚಿದ ಆರೋಪ!

ಟ್ರಾವಿಸ್​ ಹೆಡ್​​ ಅವರು ಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2ನೇ ಬಾರಿಯೂ ವಿಫಲ

ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್​ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಪುವಾ ನ್ಯೂಗಿನಿಯಾ, ಐರ್ಲೆಂಡ್

T20 World Cup 2024: ಟಿ20 ವಿಶ್ವಕಪ್​ ಟೂರ್ನಿ(T20 World Cup 2024)ಯಲ್ಲಿ ಪಾಲ್ಗೊಳ್ಳುವ 20 ದೇಶಗಳ ಪೈಕಿ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ,ನಮೀಬಿಯಾ ಮತ್ತು ನೆದರ್ಲ್ಯಾಂಡ್ಸ್ ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ. ಸಂಭಾವ್ಯ ತಂಡ ಪ್ರಕಟಕ್ಕೆ ಮೇ 1 ಅಂತಿಮ ದಿನವಾಗಿತ್ತಾದರೂ ಕೂಡ ಈ ದೇಶಗಳು ಇನ್ನೂ ತಂಡ ಪ್ರಕಟಿಸಲು ತಡವರಿಸಿದ್ದು ಯಾಕೆ ಎನ್ನುವುದು ಅಚ್ಚರಿಯ ಸಂಗತಿ.

VISTARANEWS.COM


on

T20 World Cup 2024
Koo

ದುಬೈ: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ಐರ್ಲೆಂಡ್(Ireland T20 World Cup squad) ಮತ್ತು ಪಪುವಾ ನ್ಯೂಗಿನಿಯಾ(Papua New Guinea T20 World Cup squad) 15 ಸದಸ್ಯರ ಸಂಭಾವ್ಯ ತಂಡಗಳನ್ನು ಪ್ರಕಟಿಸಿದೆ. ಅನುಭವಿ ಆರಂಭಿಕ ಆಟಗಾರ ಪಾಲ್‌ ಸ್ಟರ್ಲಿಂಗ್ ಐರ್ಲೆಂಡ್ ತಂಡವನ್ನು ಮುನ್ನಡೆಸಿದರೆ, ಪಪುವಾ ನ್ಯೂಗಿನಿಯಾ ತಂಡವನ್ನು ಅಸ್ಸಾದ್ ವಾಲಾ ಮುನ್ನಡೆಸಲಿದ್ದಾರೆ. ಐರ್ಲೆಂಡ್ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಪ್ರಾರಂಭಿಸಲಿದೆ. ಭಾರತಕ್ಕೂ ಇದು ಮೊದಲ ಪಂದ್ಯವಾಗಿದೆ.

ಐರ್ಲೆಂಡ್ ತಂಡ

ಪಾಲ್ ಸ್ಟರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಆಂಡ್ರ್ಯೂ ಬಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಲಾರ್ಕನ್ ಟಕರ್ (ವಿಕೆಟ್ ಕೀಪರ್), ಬೆನ್ ವೈಟ್ ಮತ್ತು ಕ್ರೇಗ್ ಯಂಗ್.

ಇದನ್ನೂ ಓದಿ T20 World Cup 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​​; ಈ ಮೊಬೈಲ್‌ ಆ್ಯಪ್​ನಲ್ಲಿ ಟಿ20 ವಿಶ್ವಕಪ್ ಉಚಿತ ಪ್ರಸಾರ

ಪಪುವಾ ನ್ಯೂಗಿನಿಯಾ ತಂಡ


ಅಸ್ಸಾದ್ ವಾಲಾ(ನಾಯಕ),ಸಿಜೆ ಅಮಿನಿ(ಉಪನಾಯಕ),ಅಲೆಯ್ ನಾವೊ, ಚಾಡ್ ಸೋಪರ್, ಹಿಲಾ ವರೇ, ಹಿರಿ ಹಿರಿ, ಜ್ಯಾಕ್ ಗಾರ್ಡ್ನರ್, ಜಾನ್ ಕರಿಕೊ, ಕಬುವಾ ವಾಗಿ ಮೋರಿಯಾ, ಕಿಪ್ಲಿಂಗ್ ಡೊರಿಗಾ, ಲೆಗಾ ಸಿಯಾಕಾ, ನಾರ್ಮನ್ ವನುವಾ, ಸೆಮಾ ಕಾಮಿಯಾ, ಸೆಸೆ ಬೌ, ಟೋನಿ ಉರಾ.

ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ,ನಮೀಬಿಯಾ ಮತ್ತು ನೆದರ್ಲ್ಯಾಂಡ್ಸ್ ಇನ್ನಷ್ಟೇ ತಂಡ ಪ್ರಕಟಿಸಬೇಕಿರುವ ದೇಶಗಳು. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ತಲಾ 2 ಅಭ್ಯಾಸ ಪಂದ್ಯ


ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ

ಮೊದಲ ಸುತ್ತಿನ ಇತರ ಪಂದ್ಯಗಳು

ದಿನಾಂಕಪಂದ್ಯಸ್ಥಳ
ಜೂನ್ 3ಶ್ರೀಲಂಕಾ-ದಕ್ಷಿಣ ಆಫ್ರಿಕಾನ್ಯೂಯಾರ್ಕ್
ಜೂನ್​ 7ನ್ಯೂಜಿಲ್ಯಾಂಡ್​-ಅಫಘಾನಿಸ್ತಾನಗಯಾನ
ಜೂನ್​ 7 ಶ್ರೀಲಂಕಾ-ಬಾಂಗ್ಲಾದೇಶಡಲ್ಲಾಸ್
ಜೂನ್​ 8ಆಸ್ಟ್ರೇಲಿಯಾ-ಇಂಗ್ಲೆಂಡ್ಬಾರ್ಬಡೋಸ್​
ಜೂನ್​ 10ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶನ್ಯೂಯಾರ್ಕ್
ಜೂನ್​ 12ವೆಸ್ಟ್​ ಇಂಡೀಸ್​-ನ್ಯೂಜಿಲ್ಯಾಂಡ್ನ್ಯೂಯಾರ್ಕ್
ಜೂನ್​ 15ಆಸ್ಟ್ರೇಲಿಯಾ-ಸ್ಕಾಟ್ಲೆಂಡ್ಸೇಂಟ್​ ಲೂಸಿಯಾ
ಜೂನ್​ 17ವೆಸ್ಟ್​ ಇಂಡೀಸ್​-ಅಫಘಾನಿಸ್ತಾನಸೇಂಟ್​ ಲೂಸಿಯಾ


ನಾಕೌಟ್​ ಪಂದ್ಯಗಳ ವೇಳಾಪಟ್ಟಿ

ದಿನಾಂಕಪಂದ್ಯಸ್ಥಳ
ಜೂನ್​ 26 ಮೊದಲ ಸೆಮಿಫೈನಲ್ಗಯಾನ
ಜೂನ್​ 27ದ್ವಿತೀಯ ಸೆಮಿಫೈನಲ್ಟ್ರಿನಿಡಾಡ್
ಜೂನ್​ 29ಫೈನಲ್ಬಾರ್ಬಡೋಸ್
Continue Reading
Advertisement
Silent Heart Attack
ಆರೋಗ್ಯ10 mins ago

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

Olive Oil benefits
ಆರೋಗ್ಯ11 mins ago

Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

SSLC Result 2024
ಮಂಡ್ಯ14 mins ago

SSLC Result 2024: ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

IPL 2024
ಪ್ರಮುಖ ಸುದ್ದಿ14 mins ago

IPL 2024 : ಸ್ಟೊಯ್ನಿಸ್ ಕಪಾಳಕ್ಕೆ ಬಾರಿಸಿದ ಕೋಚ್​​ ಕ್ಲೂಸ್ನರ್​; ಇಲ್ಲಿದೆ ವಿಡಿಯೊ

Akshaya Tritiya Fashion
ಫ್ಯಾಷನ್41 mins ago

Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಆಕರ್ಷಕ ಮೂಗಿನ ಸ್ಟಡ್ಸ್

SSLC Result 2024
ಶಿಕ್ಷಣ48 mins ago

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

MS Dhoni
ಕ್ರೀಡೆ48 mins ago

MS Dhoni: ಧೋನಿಗೆ ವಿಶೇಷ ಉಡುಗೊರೆ ನೀಡಿದ ಅಭಿಮಾನಿ; ವಿಡಿಯೊ ವೈರಲ್​

Janhvi Kapoor Wears Cricket-Themed Dress
ಬಾಲಿವುಡ್55 mins ago

Janhvi Kapoor: ಕ್ರಿಕೆಟ್ ಥಿಮ್‌ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟ ಜಾನ್ವಿ ಕಪೂರ್; ಚೆಂಡಿದೆ ಬೆನ್ನ ಹಿಂದೆ!

Job Alert
ಉದ್ಯೋಗ1 hour ago

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಅಪ್ಲೈ ಮಾಡಿ

Kannada Serials TRP Puttakkana makkalu TOP one
ಕಿರುತೆರೆ2 hours ago

Kannada Serials TRP: ಟಾಪ್‌ 3ರಲ್ಲಿ ಇವೆ ಎರಡು ಧಾರಾವಾಹಿಗಳು; ʻಪುಟ್ಟಕ್ಕನ ಮಕ್ಕಳುʼ ಸೀರಿಯಲ್‌ನದ್ದೇ ಪಾರುಪತ್ಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ4 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ4 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ5 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು7 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌