ಬೆಂಗಳೂರು: ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯಕ್ಕೆ ಭಾನುವಾರ ತೆರೆ ಬೀಳಲಿದೆ. ಅಂತಿಮ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ನೆದರ್ಲೆಂಡ್ಸ್(IND vs NED) ಕಣಕ್ಕಿಳಿಯಲಿದೆ. ಅಜೇಯ ಗೆಲುವಿನ ಓಟ ಕಾಯ್ದುಕೊಂಡಿರುವ ರೋಹಿತ್ ಶರ್ಮ ಪಡೆಯೇ ನೆಚ್ಚಿನ ತಂಡದವಾಗಿದೆ.
ವಿಶ್ವಕಪ್ ಮುಖಾಮುಖಿ
ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು 2003ರಲ್ಲಿ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸಚಿನ್ ತೆಂಡೂಲ್ಕರ್(52) ಅವರ ಅರ್ಧಶತಕ ಮತ್ತು ದಿನೇಶ್ ಮೊಂಗಿಯ(42) ಅವರ ಬ್ಯಾಟಿಂಗ್ ಸಾಹಸದಿಂದ 48.5 ಓವರ್ಗಳಲ್ಲಿ 204 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ್ದ ನೆದರ್ಲೆಂಡ್ಸ್ ತಂಡ ವ್ಯಾನ್ ಬಂಗೆ(62) ಏಕಾಂಗಿ ಹೋರಾಟದ ಹೊರತಾಗಿಯೂ 48.1 ಓವರ್ಗಳಲ್ಲಿ 136 ರನ್ಗೆ ಸರ್ವಪತನ ಕಂಡಿತು. ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆ ತಲಾ ನಾಲ್ಕು ವಿಕೆಟ್ ಕಿತ್ತು ಡಚ್ಚರ ಸೊಕ್ಕಡಗಿಸಿದ್ದರು.
ಇದನ್ನೂ ಓದಿ IND vs NED: ನೆದರ್ಲೆಂಡ್ಸ್ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಅಲಭ್ಯ
ತಂದೆಯಂತೆ ಪ್ರರಾಕ್ರಮ ತೋರಬಹುದೇ ಮಗ?
ಟಿಮ್ ಡಿ ಲೀಡೆ ಅವರು ಭಾರತದ ವಿರುದ್ಧ 35 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಿತ್ತಿದ್ದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರ ವಿಕೆಟ್ ಉರುಳಿಸಿದ್ದರು. ಅಚ್ಚರಿ ಎಂದರೆ ಇವರ ಮಗ ಬಾಸ್ ಡಿ ಲೀಡೆ ಪ್ರಸಕ್ತ ವಿಶ್ವಕಪ್ನಲ್ಲಿ ಆಡುತ್ತಿದ್ದು ನಾಳೆ(ಭಾನುವಾರ) ಭಾರತ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಅವರೂ ಕೂಡ ತಂದೆಯಂತೆ ಪರಾಕ್ರಮ ತೋರಲಿದ್ದಾರಾ ಎಂದು ಕಾದು ನೋಡಬೇಕಿದೆ.
12 ರನ್ ಗಳಿಸಿದ್ದ ಕೊಹ್ಲಿ
ಇತ್ತಂಡಗಳು ಎರಡನೇ ಬಾರಿ ಮುಖಾಮುಖಿಯಾದದ್ದು 2011ರ ವಿಶ್ವಕಪ್ ಟೂರ್ನಿಯಲ್ಲಿ ಈ ಪಂದ್ಯ ಅಂದಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿತ್ತು. ಭಾರತ ಈ ಪಂದ್ಯವನ್ನು 5 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಅಂದು ನೆದರ್ಲೆಂಡ್ಸ್ ವಿರುದ್ಧ ಪಂದ್ಯ ಆಡಿದ್ದ ವಿರಾಟ್ ಕೊಹ್ಲಿ ಮಾತ್ರ ಈ ಬಾರಿಯೂ ಭಾರತ ತಂಡದಲ್ಲಿದ್ದಾರೆ. ಅಮದಿನ ಪಂದ್ಯದಲ್ಲಿ ವಿರಾಟ್ ಕೇವಲ 12 ರನ್ ಗಳಿಸಿದ್ದರು.
ಅಪಾಯಕಾರಿ ಡಚ್ಚರು
2011ರ ಆವೃತ್ತಿಯ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ತಂಡ 6 ಪಂದ್ಯಗಳನ್ನು ಆಡಿ 6ರಲ್ಲೂ ಸೋಲು ಕಂಡಿತ್ತು. ಇದಕ್ಕೂ ಮುನ್ನ ನಡೆದಿದ್ದ 2003ರ ವಿಶ್ವಕಪ್ನಲ್ಲಿ 5 ಪಂದ್ಯ ಆಡಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ 8 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ಸಾಧಿಸಿತ್ತು. ಅದರಲ್ಲೂ ಒಂದು ಗೆಲುವು ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಒಲಿದೆ. ಹೀಗಾಗಿ ಭಾರತ ಕೂಡ ಕೊನೆಯ ಪಂದ್ಯವನ್ನು ಹಗುರವಾಗಿ ಕಾಣಬಾರದು. ಬಲಿಷ್ಠ ತಂಡವನ್ನು ಸೋಲಿಸಿದ ಭಾರತ ದುರ್ಬಲ ತಂಡದ ವಿರುದ್ಧ ಸೋತರೆ ಅವಮಾನ ಖಚಿತ. ಇಷ್ಟು ದಿನದ ಗೆಲುವಿನ ಖ್ಯಾತಿ ಎಲ್ಲ ಈ ಸೋಲಿನಿಂದ ಕುಗ್ಗಬಹುದು. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನೂ ಮಹತ್ವದ ಪಂದ್ಯವೆಂದೇ ಆಡಬೇಕು.