Site icon Vistara News

ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌ ಕನಸೊಂದು ಸಾಕಾರಗೊಂಡದ್ದು 2011ರ ವಿಶ್ವಕಪ್​ನಲ್ಲಿ…

icc world cup 2011 winner

ಬೆಂಗಳೂರು: ‘ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್, ಆಫ್ಟರ್ 28 ಇಯರ್ಸ್” ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೂ ಮರೆಯದ ಸಾಲುಗಳಿವು. 2011ರ(2011 Cricket World Cup) ಏಪ್ರಿಲ್‌ 2ರ ರಾತ್ರಿ ಹತ್ತು ದಾಟಿದ ಹೊತ್ತು. ಮುಂಬೈಯ ವಾಂಖೆಡೆ ಮೈದಾನದಲ್ಲಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಶ್ರೀಲಂಕಾದ ಕುಲಶೇಖರನ್​ ಎಸೆತಕ್ಕೆ ಸಿಕ್ಸರ್​ ಬಾರಿಸಿ ಭಾರತಕ್ಕೆ ಜಯ ತಂದಿತ್ತರೆ, ಇಡೀ ದೇಶವೇ ಹುಚ್ಚೆದ್ದು ಕುಣಿದಿತ್ತು. ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌(World Cup History) ಕನಸೊಂದು ಸಾಕಾರಗೊಂಡಿತು. 1983 ಕಪಿಲ್​ ಡೆವಿಲ್ಸ್​ ಬಳಿಕ ಭಾರತ ಕಪ್​ ಎತ್ತಿ ಮೆರೆದಾಡಿತ್ತು. ಸಚಿನ್​ ಅವರ ವಿಶ್ವಕಪ್ ​ಬಯಕೆಯೂ ಇಲ್ಲಿ ತೀರಿತು.

ಅರಬ್ಬಿ ಸಮುದ್ರ ಕೂಡ ಸ್ತಬ್ಧವಾಗಿತ್ತು!

ಫೈನಲ್​ನಲ್ಲಿ ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧ ಆರು ವಿಕೆಟ್​ಗಳ ಅಂತರದಿಂದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ನಾಯಕ ಮಹೇಲಾ ಜಯವರ್ಧನೆ ಶತಕದ ನೆರವಿನಿಂದ 275 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ ಗೌತಮ್ ಗಂಭೀರ್(gautam gambhir) ಅವರ 97 ರನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ನೆರವಿನಿಂದ ಜಯಭೇರಿ ಬಾರಿಸಿ ಇತಿಹಾಸ ನಿರ್ಮಿಸಿತ್ತು. ಕ್ರಿಕೆಟ್‌ ಅಭಿಮಾನಿಗಳ ಸಂತಸದ ಅಬ್ಬರಕ್ಕೆ ಸ್ಟ್ರೇಡಿಯಂ ಸಮೀಪದ ಅರಬ್ಬಿ ಸಮುದ್ರ ಕೂಡ ಒಂದು ಕ್ಷಣ ಸ್ತಬ್ಧವಾಗಿತ್ತು!

ಇದನ್ನೂ ಓದಿ World Cup History: ಲಾರ್ಡ್ಸ್​ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್​ ಎತ್ತಿದ ‘ಕಪಿಲ್ ಡೆವಿಲ್ಸ್’


1983ರಲ್ಲಿ ಕಪಿಲ್‌ ದೇವ್​ ಸಾರಥ್ಯದ ತಂಡ ಯಾರು ನಿರೀಕ್ಷೆಯನ್ನು ಮಾಡದ ರೀತಿಯಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಗೆದ್ದು ದೇಶದ ಕ್ರಿಕೆಟ್‌ ದಿಕ್ಕನ್ನೇ ಬದಲಾಯಿಸಿದ್ದು. ಅಲ್ಲೊಂದು ಕ್ರಾಂತಿ ಸಂಭವಿಸಿತ್ತು. ದೇಶದ ಕ್ರೀಡಾಭಿಮಾನಿಗಳ ಪಾಲಿಗೆ ಕಪಿಲ್‌ ಡೆವಿಲ್ಸ್​ ಪಡೆಯ ಸಾಧನೆ ದೊಡ್ಡ ಸ್ಫೂರ್ತಿಯಾಗಿತ್ತು. ಇಲ್ಲಿಂದ ಮುಂದೆ ನಡೆದ ಪ್ರತೀ ವಿಶ್ವಕಪ್‌ ನಲ್ಲಿಯೂ ಭಾರತ ತಂಡದ ಮೇಲೆ ನಿರೀಕ್ಷೆ ಹೆಚ್ಚುತ್ತಲೇ ಸಾಗಿತು. ಆದರೆ ಅಜರುದ್ದೀನ್‌, ಗಂಗೂಲಿ, ದ್ರಾವಿಡ್‌ ಅವರಂತಹ ಶ್ರೇಷ್ಠ ಆಟಗಾರರ ಸಾರಥ್ಯದಲ್ಲಿ ಭಾರತಕ್ಕೆ ಮತ್ತೊಂದು ಕಪ್‌ ಒಲಿದಿರಲಿಲ್ಲ.

ಇದನ್ನೂ ಓದಿ World Cup History: ರೋಚಕ ಫೈನಲ್​ನಲ್ಲಿ ಗೆದ್ದು ಬೀಗಿ ಮತ್ತೆ ಚಾಂಪಿಯನ್​ ಪಟ್ಟ ಅಲಂಕರಿಸಿದ ವೆಸ್ಟ್​ ಇಂಡೀಸ್​!

2003ರಲ್ಲಿ ಫೈನಲ್​ ಪ್ರವೇಶ

ದಾದಾ ಖ್ಯಾತಿಯ ಸೌರವ್​ ಗಂಗೂಲಿ ಅವರ ನಾಯಕತ್ವದಲ್ಲಿ 2003ರಲ್ಲಿ ನಡೆದ ವಿಶ್ವಕಪ್​ನಲ್ಲಿ ಭಾರತ ಅಭೂತಪೂರ್ವ ಸಾಧನೆ ತೋರಿ ಫೈನಲ್​ ಪ್ರವೇಶ ಪಡೆದಿತ್ತು. ಆಗ ಭಾರತ 2ನೇ ವಿಶ್ವಕಪ್​ ಗೆಲ್ಲಲಿದೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಕಾಂಗರೂ ಪಡೆದ ಅಬ್ಬರದ ಮುಂದೆ ಭಾರತದ ಆಟ ನಡೆಯಲಿಲ್ಲ. ಈ ಕೊರತೆ ನೀಗಿದ್ದು 2011ರಲ್ಲಿ. ಭಾರತ 6 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿಸಿ ತವರಲ್ಲೇ ವಿಶ್ವಕಪ್‌ ಎತ್ತಿದ ಮೊದಲ ತಂಡವೆಂಬ ಹಿರಿಮೆಗೂ ಪಾತ್ರವಾಗಿತ್ತು.


ಭಾರತವೇ ಫೇವರಿಟ್‌ ತಂಡ

2011ರ ವಿಶ್ವಕಪ್​ ಕೂಟದಲ್ಲಿ ಭಾರತವೇ ಫೇವರಿಟ್‌ ತಂಡವಾಗಿತ್ತು. ಅಷ್ಟೊಂದು ಬಲಿಷ್ಠ ಹಾಗೂ ವೈವಿಧ್ಯಮಯ ತಂಡ ನಮ್ಮದಾಗಿತ್ತು. ಭಾರತದಕ್ಕೆ ಎದುರಾದದ್ದು ಒಂದು ಸೋಲು ಮಾತ್ರ ಅದು ದಕ್ಷಿಣ ಆಫ್ರಿಕಾ ವಿರುದ್ಧ. ಸೆಮಿಫೈನಲ್​ನಲ್ಲಿ ಭಾರತಕ್ಕೆ ಬದ್ಧ ಎದುರಾಳಿ ಪಾಕ್​ ತಂಡದ ಸವಾಲು ಎದುರಾಗಿತ್ತು. ಇಲ್ಲಿ ಭಾರತೀಯ ಆಟಗಾರರು ಪಾಕ್​ ತಂಡವನ್ನು ಬಗ್ಗುಬಡಿದು ಫೈನಲ್​ ಪ್ರವೇಶ ಪಡೆಯಿತು.

ಇದನ್ನೂ ಓದಿ World Cup History: ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್​

ಸಚಿನ್‌ಗೆ ಅರ್ಪಣೆ

ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರಿಗೆ ಈ ಪ್ರಶಸ್ತಿಯನ್ನು ಆಟಗಾರರೆಲ್ಲ ಸೇರಿ ಅರ್ಪಿಸಿದರು. ಅವರನ್ನು ಹೆಗಲ ಮೇಲೆ ಹೊತ್ತು ಮೈದಾನಕ್ಕೆ ಸುತ್ತು ಬಂದರು. ಇಲ್ಲಿಗೆ ಸಚಿನ್​ ಅವರ ವರ್ಣರಂಜಿತ ಕ್ರಿಕೆಟ್‌ ಬದುಕು ಸಾರ್ಥಕವಾಯಿತು. ಸಚಿನ್‌ 6ನೇ ಹಾಗೂ ಕೊನೆಯ ವಿಶ್ವಕಪ್‌ ಆಡಲಿಳಿದಿದ್ದರು. ಪಾಕ್‌ ಎದುರಿನ ಸೆಮಿಫೈನಲ್‌ನಲ್ಲಿ 85 ರನ್‌ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.


ಫೈನಲ್​ನಲ್ಲಿ ಧೋನಿ-ಗಂಭೀರ್​ ಸಾಹಸ

ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ ನಿಗದಿತ 50 ಓವರ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು 274 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತಕ್ಕೆ ಲಸೀತ್​ ಮಾಲಿಂಗ್​ ಆರಂಭದಲ್ಲೇ ಅವಳಿ ಆಘಾತವಿಕ್ಕಿದರು. ಸಚಿನ್‌(18) ಮತ್ತು ಸೆಹವಾಗ್‌(0) ವಿಕೆಟ್​ ಕಿತ್ತರು. ಈ ವೇಳೆ ಭಾರತದ ಅಭಿಮಾನಿಗಳು ನಿರಾಸೆಗೊಂಡರು. ಆದರೆ ಗೌತಮ್‌ ಗಂಭೀರ್‌(97) ಹಾಗೂ ನಾಯಕ ಮಹೇಂದ್ರ ಸಿಂಗ್‌ ಧೋನಿ(91*) ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ಪಂದ್ಯವನ್ನು ಗೆಲ್ಲಿಸಿದರು.

ಇದನ್ನೂ ಓದಿ World Cup Recap : ಭಾರತ ಆತಿಥ್ಯದಲ್ಲಿ ನಡೆದ ಮೊದಲ ವಿಶ್ವ ಕಪ್ ಟೂರ್ನಿಯ ಕೌತುಕದ ಸಂಗತಿಗಳು ಇಲ್ಲಿವೆ

ಕ್ಯಾನ್ಸರ್​ ಮಧ್ಯೆಯೂ ಹೋರಾಡಿದ್ದ ಯುವಿ


ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿದ ಯುವರಾಜ್​ ಸಿಂಗ್​ ತಮ್ಮ ಕ್ಯಾನ್ಸರ್​ ಕಾಯಿಲೆಯನ್ನು ಮರೆಮಾಚಿ ದೇಶಕ್ಕಾಗಿ ಹೋರಾಟ ನಡೆಸಿದ್ದರು. ಮೈದಾನದಲ್ಲೇ ಹಲವು ಬಾರಿ ರಕ್ತ ಕಾರಿದರೂ ಛಲ ಬಿಡದೆ ಆಟವಾಡಿದ್ದರು. ಅವರ ಅಸಾಮಾನ್ಯ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಒಂದು ಶತಕ, ನಾಲ್ಕು ಅರ್ಧಶತಕ ಸೇರಿ ಒಟ್ಟು 362 ರನ್​ ಬಾರಿಸಿದ್ದರು. ಬೌಲಿಂಗ್​ನಲ್ಲಿಯೂ ಮಿಂಚಿ 15 ವಿಕೆಟ್​ ಕೆಡವಿದ್ದರು.

Exit mobile version