ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು 4 ದಿನ ಬಾಕಿ ಇದೆ. ಅಕ್ಟೋಬರ್ 5ರಿಂದ ಆರಂಭವಾಗಿ ನವೆಂಬರ್ 19ರ ತನಕ ಈ ಕೂಟ ಸಾಗಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಕಾದಾಡಲಿವೆ. ಇದಕ್ಕೂ ಮುನ್ನ ಇದುವರೆಗಿನ 12 ವಿಶ್ವಕಪ್ ಟೂರ್ನಿಯಲ್ಲಿ(World Cup History) ಅತ್ಯಧಿಕ ವಿಕೆಟ್(world cup history bowling records) ಪಡೆದ ಟಾಪ್ 5 ಬೌಲರ್ಗಳ ಸಾಧನೆಗಳ ಇಣುಕು ನೋಡ ಇಲ್ಲಿದೆ.
1. ಗ್ಲೆನ್ ಮೆಕ್ಗ್ರಾತ್(Glenn McGrath)
ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್(Glenn McGrath) ಅವರು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿದ್ದಾರೆ. 1996-2007ರ ತನಕ ವಿಶ್ವಕಪ್ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್ ಪಂದ್ಯ ಆಡಿರುವ ಅವರು 1955 ಬಾಲ್ ಎಸೆದು 71 ವಿಕೆಟ್ ಕೆಡವಿದ್ದಾರೆ. 42 ಮೇಡನ್ ಒಳಗೊಂಡಿದೆ. 15 ರನ್ಗೆ 7 ವಿಕೆಟ್ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ಇದನ್ನೂ ಓದಿ World Cup Recap : ದುರ್ಬಲ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಹೇಗೆ? 1992ರ ವಿಶ್ವ ಕಪ್ ಸ್ಟೋರಿ ಇಲ್ಲಿದೆ
2.ಮುತ್ತಯ್ಯ ಮುರಳೀಧರನ್(M Muralidaran)
ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುರಳೀಧರನ್ 1996-2011ರ ವರೆಗೆ ವಿಶ್ವಕಪ್ ಆಡಿ 68 ವಿಕೆಟ್ ಪಡೆದಿದ್ದಾರೆ. ಒಟ್ಟು 40 ಪಂದ್ಯ ಆಡಿದ್ದಾರೆ. 15 ಮೇಡನ್, 19 ರನ್ಗೆ 4 ವಿಕೆಟ್ ಕಿತ್ತಿರುವದು ವೈಯಕ್ತಿಕ ಸಾಧನೆಯಾಗಿದೆ. 2061 ಬೌಲ್ ಎಸೆದಿದ್ದಾರೆ.
ಇದನ್ನೂ ಓದಿ World Cup History: ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್
3. ಲಸಿತ ಮಾಲಿಂಗ (SL Malinga)
ಯಾರ್ಕರ್ ಕಿಂಗ್ ಲಂಕಾದ ಲಸಿತ ಮಾಲಿಂಗ ಅವರು 2007-2019ರ ತನಕ ವಿಶ್ವಕಪ್ ಆಡಿ 56 ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇದಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. 29 ಪಂದ್ಯಗಳನ್ನು ಆಡಿದ್ದಾರೆ. 38ಕ್ಕೆ 6 ವಿಕೆಟ್ ಉತ್ತಮ ಬೌಲಿಂಗ್ ಸಾಧನೆಯಾಗಿದೆ.
ಇದನ್ನೂ ಓದಿ World Cup History: ಲಾರ್ಡ್ಸ್ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿದ ‘ಕಪಿಲ್ ಡೆವಿಲ್ಸ್’
4. ವಾಸಿಂ ಅಕ್ರಮ್ (Wasim Akram)
ಪಾಕಿಸ್ತಾನ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್ ವಾಸಿಂ ಅಕ್ರಮ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. 1987-2003ರ ಅವರದಿಯಲ್ಲಿ 38 ಪಂದ್ಯಗಳನ್ನು ಆಡಿ 55 ವಿಕೆಟ್ ಉರುಳಿಸಿದ್ದಾರೆ. 28ಕ್ಕೆ 5 ವಿಕೆಟ್ ಪಡೆದದ್ದು ಉತ್ತಮ ಬೌಲಿಂಗ್ ಸಾಧನೆಯಾಗಿದೆ. 16 ಮೇಡನ್ ಓವರ್ ಎಸೆದ್ದಾರೆ. 1992 ವಿಶ್ವಕಪ್ ವಿಜೇತ ತಂಡದ ಸದಸ್ಯರು ಕೂಡ ಆಗಿದ್ದಾರೆ.
ಇದನ್ನೂ ಓದಿ ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ ಕನಸೊಂದು ಸಾಕಾರಗೊಂಡದ್ದು 2011ರ ವಿಶ್ವಕಪ್ನಲ್ಲಿ…
5. ಮಿಚೆಲ್ ಸ್ಟಾರ್ಕ್(MA Starc)
ಪ್ರಸ್ತುತ ಆಸ್ಟ್ರೇಲಿಯಾ ತಂಡದಲ್ಲಿ ಆಡುತ್ತಿರುವ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು 5ನೇ ಸ್ಥಾನ ಪಡೆದಿದ್ದಾರೆ. ಸದ್ಯ ಅವರು 18 ಪಂದ್ಯಗಳನ್ನು ಆಡಿ 49* ವಿಕೆಟ್ ಪಡೆದಿದ್ದಾರೆ. ಈ ಬಾರಿ 6 ವಿಕೆಟ್ ಪಡೆದರೆ ನಾಲ್ಕನೇ ಸ್ಥಾನಕ್ಕೇರುವ ಮೂಲಕ ವಾಸಿಂ ಅಕ್ರಮ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. 2015ರ ವಿಶ್ವಕಪ್ ವಿಜೇತ ತಂಡದಲ್ಲಿ ಸ್ಟಾರ್ಕ್ ಕೂಡ ಆಡಿದ್ದರು. ಇದು ಅವರಿಗೆ ಮೂರನೇ ವಿಶ್ವಕಪ್ ಟೂರ್ನಿಯಾಗಿದೆ. ಪ್ರಸ್ತುತ ವಿಶ್ವಕಪ್ ಆಡುತ್ತಿರುವ ಮತೋರ್ವ ವೇಗಿ ಕಿವೀಸ್ನ ಟ್ರೆಂಟ್ ಬೌಲ್ಟ್ 39* ವಿಕೆಟ್ ಪಡೆದು 10ನೇ ಸ್ಥಾನದಲ್ಲಿದ್ದಾರೆ. ಇವರಿಗೂ ಈ ಬಾರಿ ಹಲವು ಮಾಜಿ ಆಟಗಾರರ ದಾಖಲೆಯನ್ನು ಮುರಿಯುವ ಸುವರ್ಣ ಅವಕಾಶವಿದೆ.