ಬೆಂಗಳೂರು: ಏಕದಿನ ವಿಶ್ವಕಪ್ನಲ್ಲಿ(World Cup History) ಹಲವು ಸಾಧನೆಗಳಿವೆ, ಇಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ. ಈ ಬಾರಿಯ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದೆ. ದೇಶದ 10 ತಾಣಗಳಲ್ಲಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ.
ರಿಕಿ ಪಾಂಟಿಂಗ್(RT Ponting)
ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರು ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಹೊಂದಿದ್ದಾರೆ. 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್ ಗೆದ್ದ ಸಾಧನೆ ಮಾಡಿದ್ದಾರೆ. 1996-2011ರ ತನಕದ ವಿಶ್ವಕಪ್ ಪಯಣದಲ್ಲಿ 46 ಪಂದ್ಯಗಳನ್ನು ಆಡಿ 28 ಕ್ಯಾಚ್ ಪಡೆದರು.
ಇದನ್ನೂ ಓದಿ World Cup History: ಲಾರ್ಡ್ಸ್ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿದ ‘ಕಪಿಲ್ ಡೆವಿಲ್ಸ್’
ಜೋ ರೂಟ್(Joe Root)
ಪ್ರಸ್ತುತ ಇಂಗ್ಲೆಂಡ್ ತಂಡದ ಪರ ಆಡುತ್ತಿರುವ ಜೋ ರೂಟ್ ಅವರು ಅತ್ಯಧಿಕ ಕ್ಯಾಚ್ ಪಡೆದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 2015-2019ರ ಸಾಲಿನಲ್ಲಿ 17 ಪಂದ್ಯಗಳನ್ನು ಆಡಿ 20 ಕ್ಯಾಚ್ ಪಡೆದಿದ್ದಾರೆ. ಈ ಬಾರಿಯೂ ವಿಶ್ವಕಪ್ನಲ್ಲಿಯೂ ಅವರು ಸ್ಥಾನ ಪಡೆದಿದ್ದು ಇನ್ನು 9 ಕ್ಯಾಚ್ ಪಡೆದರೆ ರಿಕಿ ಪಾಂಟಿಂಗ್ ಸರ್ವಕಾಲಿಕ ದಾಖಲೆ ಪತನಗೊಳ್ಳಲಿದೆ.
ಸನತ್ ಜಯಸೂರ್ಯ(sanath jayasuriya)
ಶ್ರೀಲಂಕಾದ ಮಾಜಿ ಡ್ಯಾಶಿಂಗ್ ಓಪನರ್ ಸನತ್ ಜಯಸೂರ್ಯ ಅವರು 1992-2007ರ ಅವಧಿಯಲ್ಲಿ ಒಟ್ಟು 38 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 18 ಕ್ಯಾಚ್ಗಳನ್ನು ಪಡೆದಿದ್ದಾರೆ. 1996ರ ವಿಶ್ವಕಪ್ ಗೆಲುವಿನಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ ಕನಸೊಂದು ಸಾಕಾರಗೊಂಡದ್ದು 2011ರ ವಿಶ್ವಕಪ್ನಲ್ಲಿ…
ಕ್ರಿಸ್ ಗೇಲ್ (Chris Gayle)
ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ವಿಶ್ವಕೊ್ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದರೂ ವಿಶ್ವಕಪ್ ಗೆಲ್ಲದ ಕೊರಗು ಅವರನ್ನು ಸದಾ ಕಾಡುವುದು ಖಚಿತ. 2003-2019ರ ವರೆಗೆ 35 ವಿಶ್ವಕಪ್ ಪಂದ್ಯಗಳಲ್ಲಿ ತಂಡವನ್ನು ಪ್ರತಿ ನಿಧಿಸಿದ್ದಾರೆ. ಈ ವೇಳೆ 17 ಕ್ಯಾಚ್ಗಳನ್ನು ಹಿಡಿದಿದ್ದಾರೆ. 2015 ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧ 215 ರನ್ ಬಾರಿಸಿ ಮಿಂಚಿದ್ದರು. ಈ ಬಾರಿ ವಿಂಡೀಸ್ ತಂಡ ಅರ್ಹತೆಯನ್ನು ಪಡೆಯುವಲ್ಲಿ ವಿಫಲವಾಗಿದೆ.
ಫಾಫ್ ಡು ಪ್ಲೆಸಿಸ್(faf du plessis)
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಸಾಧಕರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. 23 ಪಂದ್ಯಗಳಿಂದ 16 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಕಳೆದ ಬಾರಿ ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಇವರ ನಾಯಕತ್ವದಲ್ಲೇ ದಕ್ಷಿಣ ಆಫ್ರಿಕಾ ಕಣಕ್ಕಿಳಿದಿತ್ತು. ಆಡಿದ 9 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯ ಮಾತ್ರ ಗೆದ್ದಿತ್ತು.
ಇದನ್ನೂ ಓದಿ World Cup History: ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಸಾಧಕರಿವರು
ಅನಿಲ್ ಕುಂಬ್ಳೆ(Anil Kumble)
ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಅವರು ವಿಶ್ವಕಪ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಆಟಗಾರನಾಗಿದ್ದಾರೆ. 1996-2007 ಅವಧಿಯಲ್ಲಿ ಅವರು 18 ವಿಶ್ವಕಪ್ ಪಂದ್ಯಗಳನ್ನು ಆಡಿ 14 ಕ್ಯಾಚ್ ಹಿಡಿದ್ದಾರೆ. ಒಟ್ಟು 31 ವಿಕೆಟ್ ಪಡೆದಿದ್ದಾರೆ. 32 ರನ್ಗೆ 4 ವಿಕೆಟ್ ಕೆಡವಿದ್ದು ಅವರ ವೈಯಕ್ತಿ ಸಾಧನೆಯಾಗಿದೆ.
ಇದನ್ನೂ ಓದಿ World Cup History: ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್
ವಿರಾಟ್ ಕೊಹ್ಲಿ(virat kohli)
ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಸದ್ಯ ವಿಶ್ವಕಪ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ 14 ಸ್ಥಾನದಲ್ಲಿದ್ದಾರೆ. ಅಲ್ಲದೆ ಭಾರತೀಯ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಈ ವರೆಗೆ 26 ವಿಶ್ವಕಪ್ ಪಂದ್ಯವನ್ನು ಆಡಿದ್ದು 14 ಕ್ಯಾಚ್ಗಳನ್ನು ಹಿಡಿದ್ದಾರೆ. ಈ ಬಾರಿ ಅವರು 6 ಕ್ಯಾಚ್ ಹಿಡಿದರೆ ಕುಂಬ್ಳೆ ದಾಖಲೆ ಪತನಗೊಂಡು ಅತ್ಯಧಿಕ ಕ್ಯಾಚ್ ಪಡೆದ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಕ್ಯಾಚ್ಗಳ ಸಂಖ್ಯೆ 7ರ ಗಡಿ ದಾಟಿದರೆ ವಿಶ್ವ ದಾಖಲೆಯ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದ್ದಾರೆ. ಒಟ್ಟಾರೆ ಈ ಬಾರಿ ಕ್ಯಾಚ್ಗಳ ದಾಖಲೆಯ ರೇಸ್ನಲ್ಲಿ ಕೊಹ್ಲಿ ಮತ್ತು ರೂಟ್ ನಡುವೆ ಪೈಪೋಟಿ ಇರಲಿದೆ.