Site icon Vistara News

World Cup Points Table: ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

Mohammed Shami struck twice in two balls in his very first over

ಮುಂಬಯಿ: ಶ್ರೀಲಂಕಾ ವಿರುದ್ಧ 302 ರನ್​ಗಳ ಗೆಲುವು ಸಾಧಿಸುವ ಮೂಲಕ ಹಾಲಿ ಆವೃತ್ತಿಯ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ ಭಾರತ ತಂಡ, ಅಂಕಪಟ್ಟಿಯಲ್ಲಿಯೂ(World Cup Points Table) ಮತ್ತೆ ಅಗ್ರಸ್ಥಾನಕ್ಕೇರಿದೆ. ಬುಧವಾರದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಿ ಮೊದಲ ಸ್ಥಾನಕ್ಕೇರಿದ್ದ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನಕ್ಕೆ ಜಾರಿದೆ.

ಭಾರತ ತಂಡ ಲಂಕಾ ವಿರುದ್ಧ ಗೆಲ್ಲುವ ಮೂಕಲ ವಿಶ್ವಕಪ್​ನಲ್ಲಿ ಆಡಿದ ಎಲ್ಲ 7 ಪಂದ್ಯಗಳನ್ನು ಗೆದ್ದು 14 ಅಂಕದೊಂದಿಗೆ +2.102 ರನ್​ ದಾಖಲಿಸಿದೆ. ಸದ್ಯ ಭಾರತಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯ ಸೋತರೂ ಭಾರತಕ್ಕೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಏಕೆಂದರೆ ಭಾರತ ಈಗಾಗಲೇ ಸೆಮಿಗೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ಇನ್ನುಳಿದ ಮೂರು ಸ್ಥಾನಕ್ಕೆ ಕನಿಷ್ಠ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ IND vs SL: ಜಹೀರ್​ ಖಾನ್​,ಜಾವಗಲ್ ಶ್ರೀನಾಥ್ ದಾಖಲೆ ಮುರಿದ ಮೊಹಮ್ಮದ್​ ಶಮಿ

ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಮತ್ತು ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ ಕಾಣಿಸಿಕೊಂಡಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ಭಾರಿ ರನ್​ ರೇಟ್​ನಿಂದ ಗೆದ್ದರೆ 8 ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೇರುವ ಸಾಧ್ಯತೆ ಇದೆ. ಒಂದೆಮ್ಮೆ ಆಘ್ಫನ್​ 4ನೇ ಸ್ಥಾನಕ್ಕೇರಿದರೆ ಕಿವೀಸ್​ 5ಕ್ಕೆ ಕುಸಿಯಲಿದೆ.

ನೂತನ ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ77014+2.102
ದಕ್ಷಿಣ ಆಫ್ರಿಕಾ76112+2.290
ಆಸ್ಟ್ರೇಲಿಯಾ​6428+0.970
ನ್ಯೂಜಿಲ್ಯಾಂಡ್7438+0.484
ಪಾಕಿಸ್ತಾನ7346-0.024
ಅಫಘಾನಿಸ್ತಾನ6336-0.718
ಶ್ರೀಲಂಕಾ 7254-1.162
ನೆದರ್ಲ್ಯಾಂಡ್ಸ್6244-1.277
ಬಾಂಗ್ಲಾದೇಶ​ 7162-1.446
ಇಂಗ್ಲೆಂಡ್​​​ 6152-1.652

ಭರ್ಜರಿ ಮೊತ್ತದ ಗೆಲುವು ಸಾಧಿಸಿದ ಭಾರತ

ಇಲ್ಲಿನ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ, ವಿರಾಟ್​ ಕೊಹ್ಲಿ (88), ಶುಭಮನ್​ ಗಿಲ್(92)​ ಮತ್ತು ಶ್ರೇಯಸ್​ ಅಯ್ಯರ್(82)​ ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 357 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ಕಂಡು ಆರಂಭದಲ್ಲೇ ಬೆದರಿದ ಲಂಕಾ ನಾಟಕೀಯ ಕುಸಿತ ಕಂಡು 19.4 ಓವರ್​ಗಳಲ್ಲಿ 55 ರನ್​ಗೆ ಆಲೌಟ್​ ಆಗಿ ಹೀನಾಯ ಸೋಲಿಗೆ ತುತ್ತಾಯಿತು. ಭಾರತ ತಂಡ ಈ ಗೆಲುವಿನೊಂದಿಗೆ ಅಜೇಯ 7 ಗೆಲುವು ಸಾಧಿಸಿ 14 ಅಂಕದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದೆ.

ಶ್ರೀಲಂಕಾ ಈ ತಂಡದಲ್ಲಿ ಸೋಲು ಕಂಡರೂ ಕೆಟ್ಟ ದಾಖಲೆಯಿಂದ ಪಾರಾಯಿತು. ವಿಶ್ವಕಪ್​ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್​ ಆದ ದಾಖಲೆ ಕೆನಡಾ ಹೆಸರಿನಲ್ಲಿದೆ. 2003ರಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ವಿರುದ್ಧ 36 ರನ್​ಗೆ ಕೆನಡಾ ಆಲೌಟ್​ ಆಗಿತ್ತು. ಸದ್ಯ ಲಂಕಾ 55 ರನ್​ ಗಳಿಸಿ ಈ ಅನಗತ್ಯ ದಾಖಲೆಯಿಂದ ಪಾರಾಗಿದೆ.

Exit mobile version