Site icon Vistara News

ICC World Cup 2023 : ವಿಶ್ವ ಕಪ್​ ಸೆಮಿ, ಫೈನಲ್ ಪಂದ್ಯದ ಟಿಕೆಟ್​ ಮಾರಾಟ ಶುರು

ICC World Cup 2023

ಬೆಂಗಳೂರು: ವಿಶ್ವಕಪ್ (ICC World Cup 2023) ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್ ಗಳ ಬಿಡುಗಡೆಯ ದಿನಾಂಕವನ್ನು ಐಸಿಸಿ ಮತ್ತು ಬಿಸಿಸಿಐ ಪ್ರಕಟಿಸಿದೆ. ಮೊದಲ ಸೆಮಿಫೈನಲ್ ನವೆಂಬರ್ 15 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಸೆಮಿಫೈನಲ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಆಯೋಜನೆಗೊಂಡಿದೆ. ಫೈನಲ್ ಪಂದ್ಯ ಭಾನುವಾರ (ನವೆಂಬರ್ 19) ಅಹಮದಾಬಾದ್​ನಲ್ಲಿ ನಡೆಯಲಿದೆ. ಈ ಮೂರು ಪಂದ್ಯಗಳ ಟಿಕೆಟ್ ಮಾರಾಟವು ಇಂದು (ನವೆಂಬರ 9) ರಾತ್ರಿ 8:00 ರಿಂದ ಮಾರಾಟವಾಗಲಿದೆ.

ಬಿಸಿಸಿಐ ಟ್ವಿಟರ್​ನಲ್ಲಿ ಈ ಮಾಹಿತಿಯನ್ನು ದೃಢಪಡಿಸಿದೆ ಮತ್ತು ಪ್ರಮುಖ ಪಂದ್ಯಗಳಿಗೆ ಟಿಕೆಟ್ ಕಾಯ್ದಿರಿಸಲು ಉತ್ಸಾಹವನ್ನು ತೋರಿಸುವಂತೆ ಅಭಿಮಾನಿಗಳನ್ನು ಒತ್ತಾಯಿಸಿದೆ. ಮೊದಲ ಬ್ಯಾಚ್ ಟಿಕೆಟ್​ಗಳನ್ನು ಐಸಿಸಿ ವೆಬ್​ಸೈಟ್​ ಮತ್ತು ಬಿಸಿಸಿಐನ ಟಿಕೆಟಿಂಗ್ ಪಾಲುದಾರ ಬುಕ್​ಮೈ ಶೋನದಲ್ಲಿ ಇಂದು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಹೇಳಿದೆ.

ಇಲ್ಲಿಯವರೆಗೆ, ಬುಕ್ ಮೈ ಶೋ ಅಪ್ಲಿಕೇಶನ್ನಲ್ಲಿ ಟಿಕೆಟ್ ಕಾಯ್ದಿರಿಸುವ ಆಹ್ಲಾದಕರ ಅನುಭವವನ್ನು ಅಭಿಮಾನಿಗಳು ಹೊಂದಿಲ್ಲ. ಟಿಕೆಟ್ ಸಿಗದ ಕಾರಣ ಅಭಿಮಾನಿಗಳು ತಮ್ಮ ಹತಾಶೆಯನ್ನು ಹೊರ ಹಾಕಿದ್ದು , ಬುಕ್ ಮೈಶೋ ಕ್ಷಮೆಯಾಚಿಸಿದೆ. ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿರುವುದರಿಂದ ಟಿಕೆಟ್​ ಪಡೆಯಲು ಈಗಾಗಲೇ ಅಭಿಮಾಣಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಅಭಿಮಾನಿಗಳಿಗೆ ಕೊನೆಯ ಅವಕಾಶ

ಸತತ ಎಂಟು ಗೆಲುವುಗಳ ನಂತರ ಭಾರತ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ರೋಹಿತ್ ಶರ್ಮಾ ಮತ್ತು ಬಳಗ ಮೊದಲ ಸ್ಥಾನವನ್ನು ಖಚಿತಪಡಿಸಿದೆ. ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್​​ನಲ್ಲಿ ಭಾರತ ನ್ಯೂಜಿಲೆಂಡ್, ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನವನ್ನು ಎದುರಿಸಲಿದೆ. ಪಾಕಿಸ್ತಾನ ಸೆಮಿಫೈನಲ್​​ಗೆ ಅರ್ಹತೆ ಪಡೆದರೆ, ಭಾರತ ಕೋಲ್ಕತ್ತಾದ ನಡುವಿನ ಪಂದ್ಯ ಈಡನ್​ಗಾರ್ಡನ್ಸ್​ನಲ್ಲಿ ನಡೆಯಲಿದೆ.

ಟಿಕೆಟ್ ಪಡೆಯುವುದ ಹೇಗೆ?

ಭಾರತ- ಪಾಕ್ ಪಾಂಡ್ಯ ರೋಚಕ

ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳು ಈ ಬಾರಿ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್(world cup semi final 2023)​ನಲ್ಲಿ ಮುಖಾಮುಖಿಯಾಗಬೇಕೆಂದು ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ(Sourav Ganguly) ಅವರು ​ಬಯಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IND vs PAK: ಭಾರತಕ್ಕೆ ಸೆಮಿಯಲ್ಲಿ ಪಾಕ್​ ಎದುರಾದರೆ ತಾಣ ಬದಲಾವಣೆ!; ಕಾರಣ ಏನು?

“ವಿಶ್ವಕಪ್​ ಕುರಿತ ಸ್ಪೋರ್ಟ್ಸ್ ತಕ್‌ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಗಂಗೂಲಿ ಅವರು ಈ ಬಯಕೆ ವ್ಯಕ್ತಪಡಿಸಿದರು.” ಪಾಕಿಸ್ತಾನ ಸೆಮಿಫೈನಲ್ ತಲುಪಬೇಕು. ಅಲ್ಲದೆ ಭಾರತದ ವಿರುದ್ಧ ಆಡಬೇಕೆಂದು ನಾನು ಬಯಸುತ್ತೇನೆ. ಇತ್ತಂಡಗಳ ಮಧ್ಯೆ ನಡೆಯುವ ಸೆಮಿಫೈನಲ್​ಗಿಂತ ದೊಡ್ಡ ಪಂದ್ಯ ಮತ್ತೊಂದಿಲ್ಲ. ನಡೆಯಲು ಸಾಧ್ಯವೂ ಇಲ್ಲ” ಎಂದು ಗಂಗೂಲಿ ಹೇಳಿದ್ದಾರೆ.

ಕೋಲ್ಕೊತಾದಲ್ಲಿ ಪಂದ್ಯ

ಭಾರತ ತಂಡದ ಸೆಮಿಫೈನಲ್​ ತಾಣ ಈಗಾಗಲೇ ನಿಗದಿಯಾಗಿದೆ. ಆದರೆ ಎದುರಾಳಿ ಮಾತ್ರ ಇನ್ನಷ್ಟೆ ನಿಗದಿಯಾಗಬೇಕಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಭಾರತ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನವೆಂಬರ್​ 15ರಂದು ಪಂದ್ಯ ಆಡಬೇಕಿದೆ. ಆದರೆ ಇದೀಗ ಪಾಕಿಸ್ತಾನ ತಂಡ ಎದುರಾದರೆ ಈ ಪಂದ್ಯದ ಸ್ಥಳ ಬದಲಾಗುವ ಸಾಧ್ಯತೆ ಅಧಿಕ ಎಂದು ವರದಿಯಾಗಿದೆ.

Exit mobile version