ನವದೆಹಲಿ: ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Boxing World Championships) ಭಾರತದ ನೀತು ಗಂಗಾಸ್(Nitu Ghanghas) ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲ ಪದಕ ಖಾತ್ರಿಗೊಂಡಿದೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಾಮನ್‌ವೆಲ್ತ್ ಕೂಟದ ಚಾಂಪಿಯನ್ ನೀತು ಅವರು ಜಪಾನ್‌ನ ಮಡೊಕಾ ವಡಾ ಅವರನ್ನು ಮಣಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದರು. ನೀತು ಅವರ ಪ್ರಬಲ ಪಂಚ್‌ಗಳಿಗೆ ಪ್ರತಿರೋಧ ನೀಡಲು ವಿಫಲವಾದ ಮಡೊಕಾ ವಡಾ ಸೋಲೊಪ್ಪಿಕೊಂಡರು.
22 ವರ್ಷದ ಹರ್ಯಾಣದ ನೀತು 16ನೇ ಸುತ್ತಿನ ಪಂದ್ಯದಲ್ಲಿ ತಜಕಿಸ್ಥಾನದ ಸುಮೈಯಾ ಕೊಸಿಮೊವಾ ವಿರುದ್ಧ ಆರ್‌ಎಸ್‌ಸಿ ಆಧಾರದಲ್ಲಿ ಜಯ ಸಾಧಿಸಿದ್ದರು. ಸದ್ಯ ಅವರ ಪ್ರದರ್ಶನವನ್ನು ಗಮನಿಸುವಾಗ ಈ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದನ್ನು ಇರಿಸಬಹುದು.
ಇದನ್ನೂ ಓದಿ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಪ್ರಿ-ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ನೀತು, ಪ್ರೀತಿ, ಮಂಜು
ಲವ್ಲಿನಾ ಬೊರ್ಗೊಹೈನ್ ಮತ್ತು ನಿಖತ್ ಜರೀನ್ ಕೂಟ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಉಭಯ ಬಾಕ್ಸರ್ಗಳು ಇಲ್ಲಿ ಮೇಲುಗೈ ಸಾಧಿಸಿದರೆ ಭಾರತಕ್ಕೆ ಮೂರು ಪದಕ ಖಾತ್ರಿಗೊಳ್ಳಲಿದೆ.