ಮುಂಬಯಿ: ಚೊಚ್ಚಲ ಆವೃತ್ತಿಯ ಹಾಗೂ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್(WPL 2023)ಗೆ ಅಧಿಕೃತ ಚಾಲನೆ(wpl opening ceremony) ದೊರೆತಿದೆ. ಬಾಲಿವುಡ್ ನಟಿಯರಾದ ಕೃತಿ ಸನೂನ್(Kriti Sanon), ಕಿಯಾರ ಆಡ್ವಾನಿ(Kiara Advani) ಮತ್ತು ಭಾರತೀಯ ಮೂಲಕ ಕೆನಡಾದ ಖ್ಯಾತ ಸಿಂಗರ್ ಎಪಿ ಧಿಲ್ಲೋನ್(AP Dhillon) ಅವರ ಸಮ್ಮುಖದಲ್ಲಿ ನಡೆದ ವರ್ಣರಂಜಿತ ನೃತ್ಯ ಮತ್ತು ಹಾಡುಗಳ ಮೂಲಕ ಈ ಟೂರ್ನಿ ಆರಂಭಗೊಂಡಿದೆ.
ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. 5 ತಂಡಗಳ ನಡುವೆ ಐಪಿಎಲ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ. ವಿಶ್ವದ ತಾರಾ ಆಟಗಾರ್ತಿಯರೆಲ್ಲ ಒಟ್ಟುಗೂಡುವ ಕಾರಣದಿಂದ ಈ ಟೂರ್ನಿ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ WPL 2023: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನ ಗೀತೆ ಬಿಡುಗಡೆ
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣ್ ಧುಮಾಲ್ ಸೇರಿದಂತೆ ಹಲವು ಬಿಸಿಸಿಐ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಇನ್ನು ಈ ಸಮಾರಂಭದಲ್ಲಿ ಎಲ್ಲ 5 ತಂಡಗಳ ಆಟಗಾರ್ತಿಯರು ಪಾಲ್ಗೊಂಡಿದ್ದರು. ಇದುವರೆಗೆ ವಿದೇಶದಲ್ಲಿ ಮಾತ್ರ ನಡೆಯುತ್ತಿದ್ದ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಇದೀಗ ಭಾರತದಲ್ಲಿಯೂ ಆರಂಭಗೊಂಡಿದೆ. ಇದರೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ರಂಗದಲ್ಲಿ ನೂತನ ಹೊಸ ಶಕೆ ಆರಂಭವಾಗಿದೆ.