Site icon Vistara News

WPL 2023: ಕಾಪ್​ ಬೌಲಿಂಗ್​ ದಾಳಿಗೆ ಕಂಗಾಲಾದ ಗುಜರಾತ್​ ಜೈಂಟ್ಸ್​; ಡೆಲ್ಲಿ ಗೆಲುವಿಗೆ 106 ರನ್​ ಸವಾಲು

WPL 2023: Gujarat Giants Confused by Cop Bowling Attack; 106 runs challenge for Delhi victory

WPL 2023: Gujarat Giants Confused by Cop Bowling Attack; 106 runs challenge for Delhi victory

ಮುಂಬಯಿ: ಹಿರಿಯ ವೇಗಿ ಮರಿಜಾನ್​ ಕಾಪ್​(Marizanne Kapp) ಅವರ ಘಾತಕ ಬೌಲಿಂಗ್​ ದಾಳಿಗೆ ಕಂಗಾಲಾದ ಗುಜರಾತ್​ ಜೈಂಟ್ಸ್​​ ತಂಡ 105 ರನ್​ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್​ ಗೆಲುವಿಗೆ 106 ರನ್​ ಬಾರಿಸಬೇಕಿದೆ.

ಮುಂಬಯಿಯ ಡಿವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್​ ಲೀಗ್​ನ(WPL 2023) ಶನಿವಾರದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ಜೈಂಟ್ಸ್ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 105 ರನ್​ ಬಾರಿಸಿ ಸವಾಲೊಡ್ಡಿದೆ.

ಇನಿಂಗ್ಸ್​ ಆರಂಭಿಸಿದ ಗುಜರಾತ್​ ಜೈಂಟ್ಸ್​ ಸ್ಥಿತಿ ಆರಂಭದಿಂದಲೇ ಶೋಚನೀಯವಾಗಿತ್ತು. ಖಾತೆ ತೆರೆಯುವ ಮುನ್ನವೇ ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ತಂಡದ ಮೊತ್ತ 20 ರನ್ ದಾಟುವ ವೇಳೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಇನ್ನೇನು 50 ರನ್​ ಆಗುವಷ್ಟರಲ್ಲಿ ಗಂಟುಮೂಟೆ ಕಟ್ಟುತ್ತದೆ ಎಂದು ಭಾವಿಸಲಾಗಿತ್ತು. ಮರಿಜಾನ್​ ಪಾಕ್​ ಒಂದರ ಹಿಂದೆ ಒಂದರಂತೆ ವಿಕೆಟ್​ ಕೀಳುತ್ತಲೇ ಸಾಗಿದರು.

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಸೋಫಿಯಾ ಡಂಕ್ಲಿ ಅವರನ್ನು ಈ ಪಂದ್ಯದಿಂದ ಹೊರಗಿಟ್ಟು ಪ್ರಯೋಗ ನಡೆಸಿದ ಗುಜರಾತ್​ ಕೈ ಸುಟ್ಟುಕೊಂಡಿತು. ಬೆತ್​ ಮೂನಿ ಅವರ ಬದಲು ತಂಡಕ್ಕೆ ಸೇರ್ಪಡೆಯಾಗ ದಕ್ಷಿಣ ಆಫಿಕಾದ ಹಾರ್ಡ್​ ಹಿಟ್ಟರ್​ ಲಾರಾ ವೊಲ್ವಾರ್ಡ್ಟ್ ಕೇವಲ 1 ರನ್​ಗೆ ಸೀಮಿತಗೊಂಡು ನಿರಾಸೆ ಅನುಭವಿಸಿದರು. ಹರ್ಲೀನ್​ ಡಿಯೋಲ್​ ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ವಿಫಲವಾದದ್ದು ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು. ಡಿಯೋಲ್​ 20 ರನ್​ ಗಳಿಸಿದರು.​

ಕೆಳ ಕ್ರಮಾಂಕದಲ್ಲಿ ಕಿಮ್ ಗಾರ್ತ್(ಅಜೇಯ 32) ಮತ್ತು ಜಾರ್ಜಿಯಾ(22) ಅವರು ಸಣ್ಣ ಮಟ್ಟದ ಹೋರಾಟವೊಂದನ್ನು ನಡೆಸಿದ ಕಾರಣ ತಂಡ ನೂರರ ಗಟಿ ದಾಟಿತು. ಡೆಲ್ಲಿ ಪರ ಮರಿಜಾನ್​ ಕಾಪ್​ 4 ಓವರ್​ ಬೌಲಿಂಗ್​ ನಡೆಸಿ 15 ರನ್​ ವೆಚ್ಚದಲ್ಲಿ ಪ್ರಮುಖ 5 ವಿಕೆಟ್​ ಕಿತ್ತು ಮಿಂಚಿದರು. ಹಿರಿಯ ಬೌಲರ್​ ಶಿಖಾ ಪಾಂಡೆ 26ಕ್ಕೆ ಮೂರು, ರಾಧಾ ಯಾದವ್​ 19ಕ್ಕೆ 1 ವಿಕೆಟ್​ ಉರುಳಿಸಿದರು.

ಇದನ್ನೂ ಓದಿ WPL 2023 : ಆರ್​ಸಿಬಿಯದ್ದು ಅದೇ ರಾಗ, ಯುಪಿ ವಿರುದ್ಧ ಮೊದಲು ಬ್ಯಾಟ್​ ಮಾಡಿ 138 ರನ್​ಗಳಿಗೆ ಆಲ್​ಔಟ್​

ಸಂಕ್ಷಿಪ್ತ ಸ್ಕೋರ್​: ಗುಜರಾತ್​ ಜೈಂಟ್ಸ್​; 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 105.​ (ಕಿಮ್ ಗಾರ್ತ್ ಅಜೇಯ 32, ಜಾರ್ಜಿಯಾ 22, ಮರಿಜಾನ್​ ಕಾಪ್​ 15ಕ್ಕೆ 5, ಶಿಖಾ ಪಾಂಡೆ 26ಕ್ಕೆ 3.

Exit mobile version