Site icon Vistara News

WPL 2023: ​ಲ್ಯಾನಿಂಗ್,ಜೊನಾಸೆನ್‌ ಸ್ಫೋಟಕ ಬ್ಯಾಟಿಂಗ್​; ಯುಪಿ ಗೆಲುವಿಗೆ 212 ರನ್​ ಗುರಿ

WPL 2023: Meg Lanning, Jonassen explosive batting; UP target of 212 runs to win

WPL 2023: Meg Lanning, Jonassen explosive batting; UP target of 212 runs to win

ಮುಂಬಯಿ: ಮಳೆ ಪೀಡಿತ ಪಂದ್ಯದಲ್ಲಿ ನಾಯಕಿ ಮೆಗ್​ ಲ್ಯಾನಿಂಗ್ ಮತ್ತು ಜೆಸ್‌ ಜೊನಾಸೆನ್‌ ಅವರ ವಿಸ್ಫೋಟಕ ಬ್ಯಾಟಿಂಗ್​ ನರೆವಿನಿಂದ ಯುಪಿ ವಾರಿಯರ್ಸ್(UP Warriorz)​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್(Delhi Capitals) 211 ರನ್​ ಪೇರಿಸಿ ಸವಾಲೊಡ್ಡಿದೆ.

ಮುಂಬಯಿಯ ಡಾ. ಡಿ.ವೈ. ಪಾಟೀಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 211 ರನ್​ ಬಾರಿಸಿತು. ಯುಪಿ ವಾರಿಯರ್ಸ್ ಗೆಲುವಿಗೆ 212 ರನ್​ ಬಾರಿಸಬೇಕಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಉತ್ತಮ ಆರಂಭ ಪಡೆಯಿತು. ಆರ್​ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಮೆಗ್​ ಲ್ಯಾನಿಂಗ್​ ಈ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್​ ಪ್ರತಾಪವನ್ನು ಮುಂದುವರಿಸಿದರು. ಆದರೆ ಶಫಾಲಿ ವರ್ಮ ಕೇವಲ 17 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಯುಪಿ ಬೌಲರ್​ಗಳನ್ನು ಕಾಡಿದ ಮೆಗ್​ ಲ್ಯಾನಿಂಗ್​ 42 ಎಸೆತ ಎದುರಿಸಿ 10 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 70 ರನ್​ ಬಾರಿಸಿದರು. ಈ ವಿಕೆಟ್​ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ ಪಾಲಾಯಿತು.

ಮಳೆಯ ಬಳಿಕ ಮಂಕಾದ ಡೆಲ್ಲಿ

9 ಓವರ್​ ಪೂರ್ಣಗೊಂಡ ವೇಳೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಈ ವೇಳೆ ಡೆಲ್ಲಿ ತಂಡ 1 ವಿಕೆಟ್​ ಕಳೆದುಕೊಂಡು 87 ರನ್​ ಕಲೆಹಾಕಿತ್ತು. ಆದರೆ ಮಳೆ ನಿಂತ ಬಳಿಕ ಆಡಲಿಳಿದ ಡೆಲ್ಲಿ ಸತತ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮರಿಜಾನೆ ಕಾಪ್​(16) ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಅಲೈಸ್‌ ಕ್ಯಾಪ್ಸಿ 21 ರನ್​ ಬಾರಿಸಿದರು.

ರನ್​ ಗತಿ ಕುಂಟಿತಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಅಂತಿಮ ಮೂರು ಓವರ್​ಗಳ ಆಟದಲ್ಲಿ ಜೆಸ್‌ ಜೊನಾಸೆನ್‌ ಮತ್ತು ಜೆಮಿಮಾ ರೋಡ್ರಿಗಸ್​ ಸ್ಫೋಟಕ ಬ್ಯಾಟಿಂಗ್​ ನಡೆಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅಲ್ಲಿಯ ವರೆಗೆ ಹಿಡಿತ ಸಾಧಿಸಿದ ಯುಪಿ ಬೌಲರ್​ಗಳು ಇವರ ಆರ್ಭಟದ ಮುಂದೆ ಸರಿಯಾಗಿ ದಂಡಿಸಿಕೊಂಡರು. ಅಂತಿಮವಾಗಿ ಡೆಲ್ಲಿ ತಂಡ 200ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಜೆಸ್‌ ಜೊನಾಸೆನ್‌ 20 ಎಸೆತ ಎದುರಿಸಿ ಅಜೇಯ 42 ರನ್​ ಬಾರಿಸಿದರು. ಈ ಇನಿಂಗ್ಸ್​ ವೇಳೆ 3 ಬೌಂಡರಿ ಮತ್ತು ಮೂರು ಸಿಕ್ಸರ್​ ಸಿಡಿಯಲ್ಪಟ್ಟಿತು. ಜೆಮಿಮಾ 34 ರನ್​ ಗಳಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ WPL 2023: ಆರ್​ಸಿಬಿ VS ಗುಜರಾತ್​; ಯಾರಿಗೆ ಒಲಿಯಲಿದೆ ಮೊದಲ ಗೆಲುವು?​

ಸಂಕ್ಷಿಪ್ತ ಸ್ಕೋರ್​: ಡೆಲ್ಲಿ ಕ್ಯಾಪಿಟಲ್ಸ್;​ 20 ಓವರ್​ಗಳಲ್ಲಿ 4 ವಿಕೆಟ್​ಗೆ 212(ಮೆಗ್​ ಲ್ಯಾನಿಂಗ್​ 70, ಜೆಸ್‌ ಜೊನಾಸೆನ್‌ 42* ಜೆಮಿಮಾ ರೋಡ್ರಿಗಸ್ 34* ಶಬ್ನಿಮ್ ಇಸ್ಮಾಯಿಲ್ 29ಕ್ಕೆ 1)

Exit mobile version