ಮುಂಬಯಿ: ಶನಿವಾರದ ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಡಬಲ್ ಹೆಡ್ಡರ್ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಅಜೇಯ ಮುಂಬೈ ಇಂಡಿಯನ್ಸ್(UP Warriorz) ತಂಡ ಯುಪಿ ವಾರಿಯರ್ಸ್(UP Warriorz) ವಿರುದ್ಧ 127 ರನ್ ಗಳಿಸಿ ಸವಾಲೊಡ್ಡಿದೆ.
ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಭರ್ತಿ 20 ಓವರ್ ಬ್ಯಾಟಿಂಗ್ ನಡೆಸಿ 127 ರನ್ಗೆ ಸರ್ವಪತನ ಕಂಡಿತು. ಎದುರಾಳಿ ಯುಪಿ ವಾರಿಯರ್ಸ್ ಗೆಲುವಿಗೆ 128 ರನ್ ಬಾರಿಸಬೇಕಿದೆ.
ಆಡಿದ 5 ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವೈಪಲ್ಯ ಕಂಡಿತು. ಯಾಸ್ತಿಕಾ ಭಾಟಿಯಾ(7), ನ್ಯಾಟ್ ಸಿವರ್-ಬ್ರಂಟ್(5) ಅವರು ಈ ಪಂದ್ಯದಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿದರು. ಈ ಮೂಲಕ ಒಂದಂಕಿಗೆ ಸೀಮಿತರಾದರು.
ಇದನ್ನೂ ಓದಿ WPL 2023 : ಗುಜರಾತ್ ತಂಡಕ್ಕೆ 11 ರನ್ ವಿಜಯ, ಬ್ಯಾಟಿಂಗ್ ಬೌಲಿಂಗ್ನಲ್ಲಿ ವೈಫಲ್ಯ ಎದುರಿಸಿದ ಡೆಲ್ಲಿ
ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ನಡೆಸಿದ ಸಣ್ಣ ಮಟ್ಟದ ಹೋರಾಟದಿಂದ ತಂಡ ನೂರರ ಗಡಿ ದಾಟುವಲ್ಲಿ ಯಶಸ್ಸು ಸಾಧಿಸಿತು. ಕೌರ್ 25 ರನ್ ಬಾರಿಸಿದರೆ ಮ್ಯಾಥ್ಯೂಸ್ 35 ರನ್ ಗಳಿಸಿದರು. ಅಂತಿಮ ಕ್ಷಣದಲ್ಲಿ ಐಸ್ಸಿ ವೋಂಗ್ ಸಿಡಿದು ನಿಂತ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 19 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 32 ರನ್ ಬಾರಿಸಿ ರನೌಟ್ ಆದರು.
ಯುಪಿ ಪರ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಮತ್ತು ಇಂಗ್ಲೆಂಡ್ ತಂಡದ ಸೋಫಿ ಎಕ್ಲೆಸ್ಟೋನ್ ತಮ್ಮ ಸ್ಪಿನ್ ಮಾಜಿಕ್ ಮೂಲಕ ಮುಂಬೈಗೆ ಶಾಕ್ ನೀಡಿದರು. ಸೋಫಿ ಎಕ್ಲೆಸ್ಟೋನ್ 15 ರನ್ಗೆ ಮೂರು ವಿಕೆಟ್ ಉರುಳಿಸಿದರೆ, ರಾಜೇಶ್ವರಿ ಗಾಯಕ್ವಾಡ್ 4 ಓವರ್ ಎಸೆದು 16 ರನ್ ವೆಚ್ಚದಲ್ಲಿ 2 ವಿಕೆಟ್ ಕಲೆಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ದಿಪ್ತಿ ಶರ್ಮಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 127 ರನ್ಗೆ ಆಲೌಟ್(ಹೇಲಿ ಮ್ಯಾಥ್ಯೂಸ್ 35, ಹರ್ಮನ್ಪ್ರೀತ್ ಕೌರ್ 25, ಐಸ್ಸಿ ವೋಂಗ್ 32, ಸೋಫಿ ಎಕ್ಲೆಸ್ಟೋನ್ 15ಕ್ಕೆ 3, ರಾಜೇಶ್ವರಿ ಗಾಯಕ್ವಾಡ್ 16ಕ್ಕೆ 2, ದೀಪ್ತಿ ಶರ್ಮಾ 35ಕ್ಕೆ 2