ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್(delhi capitals) ಭಾನುವಾರದ(ಮಾರ್ಚ್ 5) ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಬಲಿಷ್ಠ ತಂಡಗಳೆರಡರ ಈ ಕಾದಾಟ ಕೂಟದ ರೋಚಕ ಪಂದ್ಯಗಳಲ್ಲೊಂದಾಗುವ ಎಲ್ಲ ಸಾಧ್ಯತೆ ಇದೆ.
ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಮಾಹಿತಿ ಇಂತಿದೆ. ಕೂಟದ ಹರಾಜಿನಲ್ಲೇ ಅತ್ಯಧಿಕ 3.40 ಕೋಟಿ ರೂ.ಗೆ ಮಾರಾಟಗೊಂಡ ಏಡಗೈ ಬ್ಯಾಟರ್ ಸ್ಮೃತಿ ಮಂಧಾನಾ, ಎಲ್ಲಿಸ್ ಪೆರ್ರಿ, ಹೀತರ್ ನೈಟ್, ಸೋಫಿ ಡಿವೈನ್ ಹೀಗೆ ಹಲವು ಸಮಕಾಲೀನ ಶ್ರೇಷ್ಠ ಆಟಗಾರ್ತಿಯರನ್ನೊಳಗೊಂಡ ಆರ್ಸಿಬಿ ಮೇಲ್ನೋಟ್ಟಕ್ಕೆ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ.
ಇನ್ನೊಂದೆಡೆ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅಷ್ಟೇ ಬಲಿಷ್ಠವಾಗಿದೆ. ಸರ್ವಾಧಿಕ 5 ಟಿ20 ವಿಶ್ವಕಪ್ ವಿಜೇತ ಆಸೀಸ್ ತಂಡದ ಸ್ಟಾರ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಡೆಲ್ಲಿ ತಂಡದ ಸಾರಥಿಯಾಗಿದ್ದಾರೆ. ಇವರೊಂದಿಗೆ ಲೇಡಿ ಸೆಹವಾಗ್ ಖ್ಯಾತಿಯ ಶಫಾಲಿ ವರ್ಮ, ಜಿಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್ ತಂಡದ ಪ್ರಮುಖ ಆಟಗಾರ್ತಿಯರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇವರೆಲ್ಲ ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ.
ಸಂಭಾವ್ಯ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನಾ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಹೀತರ್ ನೈಟ್/ಡೇನ್ ವಾನ್ ನೀಕರ್ಕ್, ದಿಶಾ ಕಸಟ್, ಕನಿಕಾ ಅಹುಜಾ, ಮೆಗಾನ್ ಶಟ್, ಪ್ರೀತಿ ಬೋಸ್/ ಸಹನಾ ಪವಾರ್, ರೇಣುಕಾ ಸಿಂಗ್, ಕೋಮಲ್ ಜಂಜಾದ್.
ಇದನ್ನೂ ಓದಿ WPL 2023: ಗುಜರಾತ್ ಜೈಂಟ್ಸ್ಗೆ ಆಘಾತ; ಟೂರ್ನಿಯಿಂದ ಹೊರಬಿದ್ದ ತಂಡದ ನಾಯಕಿ!
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮ, ಜಾಸಿಯಾ ಅಖ್ತರ್, ಜೆಮಿಮಾ ರೋಡ್ರಿಗಸ್, ಮರಿಜಾನ್ ಕಾಪ್, ಅಲೈಸ್ ಕ್ಯಾಪ್ಸಿ/ ಲಾರಾ ಹ್ಯಾರಿಸ್, ತನಿಯಾ ಭಾಟಿಯಾ, ಜೆಸ್ ಜೊನಾಸೆನ್, ರಾಧಾ ಯಾದವ್, ಶಿಖಾ ಪಾಂಡೆ, ಪೂನಂ ಯಾದವ್.