ಮುಂಬಯಿ: ಸೋಫಿಯಾ ಡಂಕ್ಲಿ(65) ಮತ್ತು ಹರ್ಲೀನ್ ಡಿಯೋಲ್(67) ಅವರ ಸೊಗಸಾದ ಅರ್ಧಶತಕದ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 201 ರನ್ ಬಾರಿಸಿ ಸವಾಲೊಡ್ಡಿದೆ.
ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವನಿತಾ ಪ್ರೀಮಿಯರ್ ಲೀಗ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ತಂಡ ತನ್ನ ಆಯ್ಕೆಗೆ ತಕ್ಕಂತೆ ಆಟವಾಡುವಲ್ಲಿ ಯಶಸ್ಸು ಸಾಧಿಸಿತು. ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದೆ. ಆರ್ಸಿಬಿ ಗೆಲುವಿಗೆ 202 ರನ್ ಬಾರಿಸಿಬೇಕಿದೆ.
ಆರಂಭದಲ್ಲಿ ರಕ್ಷಣಾತ್ಮ ಆಟಕ್ಕೆ ಮುಂದಾದ ಗುಜರಾತ್ ಬಳಿಕ ಬಿರುಸಿನ ಆಟವಾಡಲು ಆರಂಭಿಸಿತು. 1.4 ಓವರ್ ಆದಾಗಲು ಗುಜರಾತ್ ತಂಡದ ಖಾತೆ ತೆರೆಯಲಿಲ್ಲ .ಆದರೆ ಬಳಿಕ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದ ಸೋಫಿಯಾ ಡಂಕ್ಲಿ ಬೌಂಡರಿ ಸಿಕ್ಸರ್ಗಳ ಮೂಲಕ ಆರ್ಸಿಬಿ ಬೌಲರ್ಗಳ ಬೆವರಿಳಿಸಿದರು.
ಮೊದಲ ಓವರ್ ಮೇಡನ್ ಆಗಿದ್ದರೂ ಬಳಿಕ 4 ಓವರ್ ಮುಕ್ತಾಯಗೊಂಡಾಗ ತಂಡದ ಮೊತ್ತ 50ರ ಸಮೀಪಕ್ಕೆ ತಪುಲಿತು. ಬಿರುಸಿನ ಬ್ಯಾಟಿಂಗ್ ನಡೆಸಿ ಸೋಫಿಯಾ ಡಂಕ್ಲಿ ಕೇಲವ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ 65 ರನ್ ಗಳಿಸಿದ ವೇಳೆ ಸಿಕ್ಸರ್ ಬಾರಿಸುವ ಯತ್ನದಲ್ಲಿ ಶ್ರೇಯಾಂಕ ಪಾಟೀಲ್ಗೆ ವಿಕೆಟ್ ಒಪ್ಪಿಸಿದರು. ಅವರ ಅರ್ಧಶತಕದ ಆಟದಲ್ಲಿ 3 ಸಿಕ್ಸರ್ ಮತ್ತು ಬರೋಬ್ಬರಿ 11 ಬೌಂಡರಿ ಸಿಡಿಯಿತು.
ಇದನ್ನೂ ಓದಿ WPL 2023: ಯುಪಿ ವಾರಿಯರ್ಸ್ ಮೇಲೆ ಸವಾರಿ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್;42 ರನ್ ಗೆಲುವು
ಸೋಫಿಯಾ ಡಂಕ್ಲಿ ವಿಕೆಟ್ ಪತನದ ಬಳಿಕ ಆಡಲಿಳಿದ ಹರ್ಲೀನ್ ಡಿಯೋಲ್ ಆರಂಭದಿಂದಲೇ ಅಟ್ಯಾಕಿಂಗ್ ಬ್ಯಾಟಿಂಗ್ಗೆ ಒತ್ತು ಕೊಟ್ಟು ತಂಡದ ಮೊತ್ತವನ್ನು ಹಿಗ್ಗಿಸುವುದರ ಜತೆಗೆ ಅರ್ಧಶತಕವನ್ನು ಪೂರೈಸಿದರು. ತಮ್ಮ ಎಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಿ ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಬಾರಿಸಿದರು. ಒಟ್ಟು 45 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 67 ರನ್ ಬಾರಿಸಿದರು. ಡಿಯೋಲ್ ವಿಕೆಟ್ ಕೂಡ ಶ್ರೇಯಾಂಕ ಪಾಲಾಯಿತು. ಹೀದರ್ ನೈಟ್ 2 ವಿಕೆಟ್ ಕಿತ್ತು ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಗುಜರಾತ್ ಜೈಂಟ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 201 (ಸೋಫಿಯಾ ಡಂಕ್ಲಿ 65, ಹರ್ಲೀನ್ ಡಿಯೋಲ್ 67, ಹೀದರ್ ನೈಟ್ 17ಕ್ಕೆ 2, ಶ್ರೇಯಾಂಕ ಪಾಟೀಲ್ 32ಕ್ಕೆ 2.