Site icon Vistara News

WPL 2023: ಸೋಫಿ ಡಿವೈನ್‌ ಸ್ಫೋಟಕ ಬ್ಯಾಟಿಂಗ್​; ಆರ್​ಸಿಬಿಗೆ 8 ವಿಕೆಟ್​ ಗೆಲುವು

WPL 2023: Sophie Devine's explosive batting; 8 wicket win for RCB

WPL 2023: Sophie Devine's explosive batting; 8 wicket win for RCB

ಮುಂಬಯಿ: ಸೋಫಿ ಡಿವೈನ್‌(99) ಅವರ ಸ್ಫೊಟಕ ಬ್ಯಾಟಿಂಗ್​ ನರೆವಿನಿಂದ ಗುಜರಾತ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಭರ್ಜರಿ 8 ವಿಕೆಟ್​ಗಳ ಗೆಲುವು ಸಾಧಿಸಿದೆ. ಆದರೆ ಸೋಫಿ ಡಿವೈನ್‌ 99 ರನ್​ಗೆ ಔಟಾಗುವ ಮೂಲಕ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಮೊದಲ ಶತಕ ಬಾರಿಸಿದ ಅವಕಾಶವೊಂದನ್ನು ಕಳೆದುಕೊಂಡರು.

ಶನಿವಾರದ ಮಹಿಳಾ ಪ್ರೀಮಿಯರ್​ ಲೀಗ್​ನ ಡಬಲ್​ ಹೆಡ್ಡರ್​ ಮುಖಾಮುಖಿಯ ದ್ವಿತೀಯ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 188 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿ ಕೇವಲ 15.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 189 ರನ್​ ಬಾರಿಸಿ ಗೆಲುವಿನ ಜಯಭೇರಿ ಬಾರಿಸಿತು.

ಸೋಫಿ ಡಿವೈನ್‌ ಅದ್ಭುತ ಬ್ಯಾಟಿಂಗ್​

ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿಗೆ ನ್ಯೂಜಿಲ್ಯಾಂಡ್​ ತಂಡದ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್‌ ಅವರು ಆರಂಭದಿಂದಲೇ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯೊಂದಿಗೆ ಗೆಲುವಿನ ವಿಶ್ವಾಸ ಮೂಡಿಸಿದರು. ಎದುರಾಳಿ ಗುಜರಾತ್​ ಜೈಂಟ್ಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿ. ಮೈದಾನದ ಮೂಲೆ ಮೂಲೆಗೂ ಎಬಿಡಿ ವಿಲಿಯರ್ಸ್​ ರೀತಿಯಲ್ಲಿ ಬ್ಯಾಟ್​ ಬೀಸಿ ಸಿಕ್ಸರ್​ ಬಾರಿಸುವ ಮೂಲಕ ನೆರದಿದ್ದ ಪ್ರೇಕ್ಷಕರನ್ನು ರಂಚಿಸಿದರು. ಇದರಲ್ಲಿ ಒಂದು ಸಿಕ್ಸರ್​ 90 ಮೀಟರ್​ ದೂರ ಸಾಗಿತು.

ಇದನ್ನೂ ಓದಿ WPL 2023: ಮುಂಬೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಯುಪಿ ವಾರಿಯರ್ಸ್​; ಹೀಲಿ ಪಡೆಗೆ 5 ವಿಕೆಟ್​ ಗೆಲುವು

ಒಟ್ಟು 36 ಎಸೆತ ಎದುರಿಸಿದ ಅವರು ಬರೋಬ್ಬರಿ 8 ಸಿಕ್ಸರ್​ ಮತ್ತು 9 ಬೌಂಡರಿ ನೆರವಿನಿಂದ 99 ರನ್​ ಬಾರಿಸಿದರು. ಆದರೆ ಕೇವಲ ಒಂದು ರನ್​ ಅಂತರದಿಂದ ಶತಕ ವಂಚಿತರಾದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಕಿಮ್​ ಗ್ರಾತ್​ ಅವರಿಗೆ ವಿಕೆಟ್ ಒಪ್ಪಿಸಿದರು. ಮಹಿಳಾ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ಇವರ ಹೆಸರಿನಲ್ಲಿದೆ. 2021ರಲ್ಲಿ ನಡೆದ ನ್ಯೂಜಿಲ್ಯಾಂಡ್​ನ ಸ್ಥಳೀಯ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಅವರು 36 ಎಸೆತಗಳಿಂದ ಶತಕ ಬಾರಿಸಿ ಮಿಂಚಿದ್ದರು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್‌ ಇಂಡೀಸ್‌ನ ಡಿಯಾಂಡ್ರಾ ಡಾಟಿನ್‌ ಹೆಸರಲ್ಲಿತ್ತು. ಅವರು 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೇವಲ 38 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.​

ನಾಯಕಿ ಸ್ಮೃತಿ ಮಂಧಾನ 31 ಎಸೆತಗಳಿಂದ 37 ರನ್​ ಬಾರಿಸಿದರು. ಅಂತಿಮವಾಗಿ ಹೀತರ್‌ ನೈಟ್‌ ಅಜೇಯ 22 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರ್​ಸಿಬಿ ಇದೇ ಆಟವನ್ನು ಈ ಮೊದಲು ಆಡುತ್ತಿದ್ದರೆ ಇದೀಗ ಎಲಿಮಿನೇಟ್​ ಪ್ರವೇಶ ಪಡೆಯಬಹುದಾಗಿತ್ತು. ಗುಜರಾತ್​ ಪರ ಕಿಮ್​ ಗ್ರಾತ್​ ಮತ್ತು ನಾಯಕಿ ಸ್ನೇಹ್​ ರಾಣಾ ತಲಾ ಒಂದು ವಿಕೆಟ್​ ಕಿತ್ತರು.

ಸಂಕ್ಷಿಪ್ತ ಸ್ಕೋರ್​: ಗುಜರಾತ್​ ಜೈಂಟ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ಗೆ 188(ಲಾರಾ ವೊಲ್ವಾರ್ಡ್ಟ್ 68, ಆಶ್ಲೀಗ್ ಗಾರ್ಡ್ನರ್ 41, ಶ್ರೇಯಾಂಕ ಪಾಟೀಲ್​ 17ಕ್ಕೆ 2). ರಾಯಲ್​ ಚಾಲೆಂಜರ್ಸ್​ ಬೆಂಗಳೂರು: 15.3 ಓವರ್​ಗಳಲ್ಲಿ 2 ವಿಕೆಟ್​ಗೆ 189(ಸೋಫಿ ಡಿವೈನ್‌ 99, ಮಂಧಾನ 37)

Exit mobile version