ಮುಂಬಯಿ: 2023ರ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2023) ಉದ್ಘಾಟನಾ ಕಾರ್ಯಕ್ರಮ ಬಾಲಿವುಡ್ ನಟಿಯರಾದ ಕೃತಿ ಸನೂನ್(Kriti Sanon), ಕಿಯಾರ ಆಡ್ವಾನಿ(Kiara Advani) ಮತ್ತು ಭಾರತೀಯ ಮೂಲಕ ಕೆನಡಾದ ಖ್ಯಾತ ಸಿಂಗರ್ ಎಪಿ ಧಿಲ್ಲೋನ್(AP Dhillon) ಅವರ ಸಮ್ಮುಖದಲ್ಲಿ ನಡೆಯಲಿದೆ ಎಂದು ಬಿಸಿಸಿಐ(BCCI) ಖಚಿತಪಡಿಸಿದೆ.
ಬಹುನಿರೀಕ್ಷಿತ ಈ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 4 ರಂದು ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಟೂರ್ನಿಯ ಎಲ್ಲ ಪಂದ್ಯಗಳ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ.
ಪಂದ್ಯಗಳ ಟಿಕೆಟ್ ಬುಕ್ ಮೈ ಶೋ (BookMyShow) ದಲ್ಲಿ ಲಭ್ಯವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಇದರ ಜತೆಗೆ ಮಹಿಳೆಯರ ಕ್ರಿಕೆಟ್ ಉತ್ತೇಜನದ ಸಲುವಾಗಿ ಬಿಸಿಸಿಐ ಮಹಿಳೆಯರಿಗೆ ಉಚಿತ ಪ್ರವೇಶವನ್ನು ನೀಡಿದೆ. ವನಿತೆಯರ ಪ್ರೀಮಿಯರ್ ಲೀಗ್ನ(WPL 2023) ಟೈಟಲ್ ಪ್ರಾಯೋಜಕತ್ವದ ಹಕ್ಕು ಟಾಟಾ ಸಮೂಹ(Tata Group)ವಹಿಸಿಕೊಂಡಿದೆ.
ಇದನ್ನೂ ಓದಿ WPL 2023: ಕೌರ್ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಲಿದೆ; ನೀತಾ ಅಂಬಾನಿ ವಿಶ್ವಾಸ
“ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನ ಉದ್ಘಾಟನಾ ಕಾರ್ಯಕ್ರಮ ಮಾರ್ಚ್ 4 ಶನಿವಾರ ಸಂಜೆ 5 ಗಂಟೆಗೆ ಆರಂಭವಾಗಲಿದೆ” ಎಂದು ಟೂರ್ನಿಯ ಸಂಘಟಕರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪಂದ್ಯವನ್ನು ಜಿಯೋ ಸಿನಿಮಾ ಆ್ಯಪ್ನಲ್ಲಿ ನೋಡಬಹುದಾಗಿದೆ.