WPL 2023: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್​ ಲೀಗ್ ಪಂದ್ಯಗಳ ಟಿಕೆಟ್​ ಬುಕಿಂಗ್​ ಆರಂಭ - Vistara News

ಕ್ರಿಕೆಟ್

WPL 2023: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್​ ಲೀಗ್ ಪಂದ್ಯಗಳ ಟಿಕೆಟ್​ ಬುಕಿಂಗ್​ ಆರಂಭ

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ ಪಂದ್ಯಾಟಗಳ ಟಿಕೆಟ್​ ಬುಕ್‌ ಮೈ ಶೋ (BookMyShow) ದಲ್ಲಿ ಲಭ್ಯವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

VISTARANEWS.COM


on

WPL 2023: Ticket booking for the much-awaited Women's Premier League matches begins
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: 2023ರ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್(WPL 2023)​ ಉದ್ಘಾಟನಾ ಕಾರ್ಯಕ್ರಮ ಬಾಲಿವುಡ್​ ನಟಿಯರಾದ ಕೃತಿ ಸನೂನ್(Kriti Sanon)​, ಕಿಯಾರ ಆಡ್ವಾನಿ(Kiara Advani) ಮತ್ತು ಭಾರತೀಯ ಮೂಲಕ ಕೆನಡಾದ ಖ್ಯಾತ ಸಿಂಗರ್​ ಎಪಿ ಧಿಲ್ಲೋನ್(AP Dhillon) ಅವರ ಸಮ್ಮುಖದಲ್ಲಿ ನಡೆಯಲಿದೆ ಎಂದು ಬಿಸಿಸಿಐ(BCCI) ಖಚಿತಪಡಿಸಿದೆ.

ಬಹುನಿರೀಕ್ಷಿತ ಈ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 4 ರಂದು ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಟೂರ್ನಿಯ ಎಲ್ಲ ಪಂದ್ಯಗಳ ಟಿಕೆಟ್ ಬುಕಿಂಗ್​ ಈಗಾಗಲೇ ಆರಂಭವಾಗಿದೆ.

ಪಂದ್ಯಗಳ ಟಿಕೆಟ್​ ಬುಕ್‌ ಮೈ ಶೋ (BookMyShow) ದಲ್ಲಿ ಲಭ್ಯವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಇದರ ಜತೆಗೆ ಮಹಿಳೆಯರ ಕ್ರಿಕೆಟ್​ ಉತ್ತೇಜನದ ಸಲುವಾಗಿ ಬಿಸಿಸಿಐ ಮಹಿಳೆಯರಿಗೆ ಉಚಿತ ಪ್ರವೇಶವನ್ನು ನೀಡಿದೆ. ವನಿತೆಯರ ಪ್ರೀಮಿಯರ್‌ ಲೀಗ್​ನ(WPL 2023) ಟೈಟಲ್‌ ಪ್ರಾಯೋಜಕತ್ವದ ಹಕ್ಕು ಟಾಟಾ ಸಮೂಹ(Tata Group)ವಹಿಸಿಕೊಂಡಿದೆ.

ಇದನ್ನೂ ಓದಿ WPL 2023: ಕೌರ್ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಲಿದೆ; ​ನೀತಾ ಅಂಬಾನಿ ವಿಶ್ವಾಸ

“ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನ ಉದ್ಘಾಟನಾ ​ಕಾರ್ಯಕ್ರಮ ಮಾರ್ಚ್​ 4 ಶನಿವಾರ ಸಂಜೆ 5 ಗಂಟೆಗೆ ಆರಂಭವಾಗಲಿದೆ” ಎಂದು ಟೂರ್ನಿಯ ಸಂಘಟಕರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪಂದ್ಯವನ್ನು ಜಿಯೋ ಸಿನಿಮಾ ಆ್ಯಪ್​ನಲ್ಲಿ ನೋಡಬಹುದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

Paris Olympics 2024: ಪುರುಷರ ತಂಡವು ಕ್ವಾರ್ಟರ್ ಫೈನಲ್​ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ. ಹೀಗಾಗಿ ಹಾಕಿಯಲ್ಲಿ ಭಾರತಕ್ಕೆ ಮತ್ತೊಂದು ಪ್ರಮುಖ ಪಂದ್ಯವಾಗಿದೆ. ಶೂಟಿಂಗ್​ನಲ್ಲಿ ವಿಜಯ್​ವೀರ್​ ಸಿಧು ಮತ್ತು ಅನೀಶ್ ಭನ್ವಾಲಾ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಪುರುಷರ 25 ಮೀಟರ್ ರ್ಯಾಪಿಡ್​ ಫೈರ್ ಪಿಸ್ತೂಲ್​​ಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಾರೆ. ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ ಮಹಿಳಾ ಸ್ಕೀಟ್ ಅರ್ಹತಾ 2 ನೇ ದಿನಕ್ಕೆ ಮರಳಲಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟದ 9ನೇ ದಿನದ ಸ್ಪರ್ಧೆಗಳು ಭಾನುವಾರ ನಡೆಯಲಿವೆ. ಟೋಕಿಯೊ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಭಾರತದ ನಾಲ್ಕನೇ ಪದಕವನ್ನು ಗಳಿಸಲು ಆಗಸ್ಟ್ 4ರಂದು ಕ್ವಾರ್ಟರ್ ಫೈನಲ್​​ನಲ್ಲಿ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಸೆಮಿಫೈನಲ್ ನಲ್ಲಿ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸುವ ಮೂಲಕ ಪದಕ ಗಳಿಸುವ ಗುರಿ ಹೊಂದಿದ್ದಾರೆ ಭಾರತದ ಯಾವುದೇ ಪುರುಷ ಶಟ್ಲರ್ ಇದುವರೆಗೆ ಫೈನಲ್ ತಲುಪಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಪುರುಷರ ತಂಡವು ಕ್ವಾರ್ಟರ್ ಫೈನಲ್​ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ. ಹೀಗಾಗಿ ಹಾಕಿಯಲ್ಲಿ ಭಾರತಕ್ಕೆ ಮತ್ತೊಂದು ಪ್ರಮುಖ ಪಂದ್ಯವಾಗಿದೆ. ಶೂಟಿಂಗ್​ನಲ್ಲಿ ವಿಜಯ್​ವೀರ್​ ಸಿಧು ಮತ್ತು ಅನೀಶ್ ಭನ್ವಾಲಾ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಪುರುಷರ 25 ಮೀಟರ್ ರ್ಯಾಪಿಡ್​ ಫೈರ್ ಪಿಸ್ತೂಲ್​​ಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಾರೆ. ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ ಮಹಿಳಾ ಸ್ಕೀಟ್ ಅರ್ಹತಾ 2 ನೇ ದಿನಕ್ಕೆ ಮರಳಲಿದ್ದಾರೆ.

ಅಥ್ಲೆಟಿಕ್ಸ್​​ನಲ್ಲಿ ಪಾರುಲ್ ಚೌಧರಿ ಮಹಿಳೆಯರ 3,000 ಮೀಟರ್ ಸ್ಟೀಪಲ್ಚೇಸ್ ರೌಂಡ್ 1 ರಲ್ಲಿ ಭಾಗವಹಿಸಿದರೆ, ಜೆಸ್ವಿನ್ ಆಲ್ಡ್ರಿನ್ ಪುರುಷರ ಲಾಂಗ್ ಜಂಪ್ ಅರ್ಹತೆಯಲ್ಲಿ ಸ್ಪರ್ಧಿಸಲಿದ್ದಾರೆ. ವಿಷ್ಣು ಸರವಣನ್ ಮತ್ತು ನೇತ್ರಾ ಕುಮನನ್ ತಮ್ಮ ತಮ್ಮ ಸೇಯ್ಲಿಂಗ್​ ಸ್ಪರ್ಧೆಗಳಲ್ಲಿ ಇನ್ನೂ ಎರಡು ರೇಸ್ ಗಳಿಗೆ ಮರಳಲಿದ್ದಾರೆ.

ಇದನ್ನೂ ಓದಿ: Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

ಆಗಸ್ಟ್ 4 ರಂದು ) ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಶೂಟಿಂಗ್: 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತಾ ಹಂತ 1: ವಿಜಯ್​ವೀರ್​ ಸಿಧು ಮತ್ತು ಅನೀಶ್ ಭನ್ವಾಲಾ – ಮಧ್ಯಾಹ್ನ 12.30ಕ್ಕೆ

25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತಾ ಹಂತ 2: ವಿಜಯ್​ವೀರ್​ ಸಿಧು ಮತ್ತು ಅನೀಶ್ ಭನ್ವಾಲಾ – ಸಂಜೆ 4.30ಕ್ಕೆ

ಮಹಿಳಾ ಸ್ಕೀಟ್ ಅರ್ಹತಾ (ದಿನ 2): ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ – ಮಧ್ಯಾಹ್ನ 1 ಗಂಟೆಗೆ

ಮಹಿಳಾ ಸ್ಕೀಟ್ ಫೈನಲ್ (ಅರ್ಹತೆ ಪಡೆದರೆ): ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ – ಸಂಜೆ 7 ಗಂಟೆಗೆ

ಗಾಲ್ಫ್: ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇ (ರೌಂಡ್ 4): ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ – ಮಧ್ಯಾಹ್ನ 12.30ಕ್ಕೆ

ಹಾಕಿ: ಪುರುಷರ ಕ್ವಾರ್ಟರ್ ಫೈನಲ್: ಭಾರತ ವಿರುದ್ಧ ಗ್ರೇಟ್ ಬ್ರಿಟನ್ – ಮಧ್ಯಾಹ್ನ 1:30ಕ್ಕೆ

ಅಥ್ಲೆಟಿಕ್ಸ್

ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ರೌಂಡ್ 1: ಪಾರುಲ್ ಚೌಧರಿ – ಮಧ್ಯಾಹ್ನ 1:35ಕ್ಕೆ

ಪುರುಷರ ಲಾಂಗ್ ಜಂಪ್ ಅರ್ಹತೆ: ಜೆಸ್ವಿನ್ ಆಲ್ಡ್ರಿನ್ – ಮಧ್ಯಾಹ್ನ 2:30ಕ್ಕೆ

ಬಾಕ್ಸಿಂಗ್: ಮಹಿಳೆಯರ 75 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್: ಚೀನಾ ಸ್ಪರ್ಧಿ ವಿರುದ್ಧ ಲೊವ್ಲಿನಾ ಬೊರ್ಗೊಹೈನ್ 3:02ಕ್ಕೆ

ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಸೆಮಿಫೈನಲ್: ಲಕ್ಷ್ಯ ಸೇನ್ ವಿರುದ್ಧ ವಿಕ್ಟರ್ ಅಕ್ಸೆಲ್ಸನ್ (ಡೆನ್ಮಾರ್ಕ್) – ಮಧ್ಯಾಹ್ನ 3:30ಕ್ಕೆ

ಸೇಯ್ಲಿಂಗ್​: ಪುರುಷರ ಡಿಂಗಿ ರೇಸ್ 7 ಮತ್ತು 8: ವಿಷ್ಣು ಸರವಣನ್ – ಮಧ್ಯಾಹ್ನ 3:35ಕ್ಕೆ

ಮಹಿಳಾ ಡಿಂಗಿ ರೇಸ್ 7 ಮತ್ತು 8: ನೇತ್ರಾ ಕುಮನನ್ – ಸಂಜೆ 6:05.ಕ್ಕೆ

Continue Reading

ಕ್ರೀಡೆ

Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

Wasim Jaffer :

VISTARANEWS.COM


on

Wasim Jaffer
Koo

ಬೆಂಗಳೂರು : ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (PCA) ಮುಂಬರುವ ದೇಶೀಯ ಋತುವಿನಲ್ಲಿ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ (Wasim Jaffer) ಅವರನ್ನು ಹಿರಿಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಬದಲಿಗೆ ವಾಸಿಮ್ ಜಾಫರ್ ಅವರನ್ನು ಪಂಜಾಬ್ ರಾಜ್ಯ ತಂಡದ ಮುಖ್ಯ ಕೋಚ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಐಪಿಎಲ್ 2025 ರ ಋತುವಿನಲ್ಲಿ ವಾಸಿಮ್ ಜಾಫರ್ ಅವರು ಟ್ರೆವರ್ ಬೇಲಿಸ್ ಅವರಿಂದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಬಹುದು ಎಂಬ ವದಂತಿಗಳು ಇದ್ದವು. ಜಾಫರ್ 2019 ರಿಂದ 2021 ರವರೆಗೆ ತಂಡದ ಬ್ಯಾಟಿಂಗ್ ತರಬೇತುದಾರರಾಗಿ ಕೆಲಸ ಮಾಡಿದ್ದರು. ನಂತರ ಬ್ಯಾಟಿಂಗ್ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.

ಜಾಫರ್​ ಉತ್ತರಾಖಂಡ ಮತ್ತು ಒಡಿಶಾ ರಾಜ್ಯ ಕ್ರಿಕೆಟ್ ತಂಡಗಳ ಮುಖ್ಯ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ. ಜಾಫರ್ ಉತ್ತರಾಖಂಡದೊಂದಿಗಿನ ಅವಧಿಯಲ್ಲಿ ಆಟಗಾರರಿಂದ ಆಯ್ಕೆ ಪಕ್ಷಪಾತದ ಆರೋಪಗಳನ್ನು ಎದುರಿಸಿದ್ದರಉ. ಭಾರತದ ಮಾಜಿ ಆರಂಭಿಕ ಬ್ಯಾಟರ್​​ ಅಂತಿಮವಾಗಿ ಋತುವಿನ ಮಧ್ಯದಲ್ಲಿ ರಾಜೀನಾಮೆ ನೀಡಿದ್ದರುನಂತರ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು.

ವಾಸಿಮ್ ಜಾಫರ್ ತಂಡವನ್ನು ಯಶಸ್ಸನ್ನು ಸಾಧಿಸಲು ಪ್ರೇರೇಪಿಸುತ್ತಾರೆ

ಪಿಸಿಎ ಅಧ್ಯಕ್ಷ ಅಮರ್ಜೀತ್ ಸಿಂಗ್ ಮೆಹ್ತಾ ಅವರು ವಾಸಿಮ್ ಜಾಫರ್ ಅವರನ್ನು ಪಂಜಾಬ್ ಪುರುಷರ ಹಿರಿಯ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದನ್ನು ದೃಢಪಡಿಸಿದ್ದಾರೆ. ಜಾಫರ್ ಅವರ ಅನುಭವ ಮತ್ತು ಪರಿಣತಿ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಅಮರ್ಜೀತ್ ಹೇಳಿದ್ದಾರೆ. ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಳ್ಳಲು ಪಿಸಿಎ ಬಯಸುವುದಿಲ್ಲ ಎಂದು ಅವರು ಹೇಳಿದರು.

“ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆಲ್ಲುವುದು ನಮ್ಮ ಮುಖ್ಯ ಗುರಿ. ಆದ್ದರಿಂದ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲು ನಾವು ಸರ್ವಾನುಮತದಿಂದ ನಿರ್ಧರಿಸಿದ್ದೇವೆ. ಅವರ ಅನುಭವ ಮತ್ತು ಪರಿಣತಿಯೊಂದಿಗೆ, ಜಾಫರ್ ತಂಡವನ್ನು ಯಶಸ್ಸನ್ನು ಸಾಧಿಸಲು ಪ್ರೇರೇಪಿಸುತ್ತಾರೆ ಎಂದು ನಮಗೆ ವಿಶ್ವಾಸವಿದೆ. ಅವರು ದೇಶದ ಅತ್ಯುತ್ತಮ ದೀರ್ಘ ಸ್ವರೂಪದ ಆಟಗಾರರಲ್ಲಿ ಒಬ್ಬರು, ಮತ್ತು ಅವರನ್ನು ಮಂಡಳಿಯಲ್ಲಿ ಹೊಂದುವ ಅವಕಾಶವನ್ನು ಕಳೆದುಕೊಳ್ಳಲು ನಾವು ಬಯಸಲಿಲ್ಲ”ಎಂದು ಅಮರ್ಜೀತ್ ಸಿಂಗ್ ಮೆಹ್ತಾ ತಿಳಿಸಿದ್ದಾರೆ.

ಪಂಜಾಬ್ ಇತ್ತೀಚೆಗೆ ವೈಟ್-ಬಾಲ್ ಕ್ರಿಕೆಟ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಮತ್ತು ಈಗ ರೆಡ್-ಬಾಲ್ ಕ್ರಿಕೆಟ್​ನಲ್ಲಿ ಸ್ಥಿರತೆಯನ್ನು ಸಾಧಿಸುವತ್ತ ಗಮನ ಹರಿಸಲು ಬಯಸಿದೆ ಎಂದು ಪಿಸಿಎ ಅಧ್ಯಕ್ಷರು ಒತ್ತಿ ಹೇಳಿದರು.

ಕಳೆದ ಋತುವಿನಲ್ಲಿ ಪಂಜಾಬ್ ತಂಡವು ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆ ತಂಡದ ಸಾಲ್ವಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಿದ್ದು, ನಾಯಕ ಮನ್ದೀಪ್ ಸಿಂಗ್ ತ್ರಿಪುರಾ ಸೇರಲಿದ್ದಾರೆ. ಸಾಳ್ವಿ ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡದ ಬೌಲಿಂಗ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2022-23ರ ಋತುವಿನಲ್ಲಿ ಪಂಜಾಬ್ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ತಲುಪಿತು. ಆದರೆ ಸೌರಾಷ್ಟ್ರ ವಿರುದ್ಧ ಸೋತಿತ್ತು. ಇತ್ತೀಚಿನ ಆವೃತ್ತಿಯಲ್ಲಿ ನಾಕೌಟ್​ಗೆ ಅರ್ಹತೆ ಪಡೆಯಲು ವಿಫಲವಾಯಿತು.

ಇದನ್ನೂ ಓದಿ: Kavya Maran : ಐಪಿಎಲ್​ ಆಟಗಾರರ ಹರಾಜಿನ ನಿಯಮಗಳ ಬಗ್ಗೆ ಕಾವ್ಯಾ ಮಾರನ್ ಇಟ್ಟಿರುವ ಬೇಡಿಕೆಗಳು ಇವು…

ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಾಸಿಂ ಜಾಫರ್. ಅವರು ತಮ್ಮ ವೃತ್ತಿಜೀವನದಲ್ಲಿ ಪಂದ್ಯಾವಳಿಯಲ್ಲಿ 238 ಇನ್ನಿಂಗ್ಸ್ ಗಳಲ್ಲಿ 12,038 ರನ್ ಗಳಿಸಿದ್ದಾರೆ. ಮಾಜಿ ಬಲಗೈ ಬ್ಯಾಟರ್​ 2008-09 ಮತ್ತು 2009-10ರಲ್ಲಿ ಮುಂಬೈ ರಾಜ್ಯ ತಂಡವನ್ನು ಎರಡು ರಣಜಿ ಪ್ರಶಸ್ತಿಗಳಿಗೆ ಮುನ್ನಡೆಸಿದ್ದರು. ಅವರು ೨೦೧೦ ರ ಆರಂಭದಲ್ಲಿ ದುಲೀಪ್ ಟ್ರೋಫಿ ವಿಜಯಕ್ಕೆ ಪಶ್ಚಿಮ ವಲಯವನ್ನು ಮುನ್ನಡೆಸಿದರು.

Continue Reading

ಕ್ರಿಕೆಟ್

Kavya Maran : ಐಪಿಎಲ್​ ಆಟಗಾರರ ಹರಾಜಿನ ನಿಯಮಗಳ ಬಗ್ಗೆ ಕಾವ್ಯಾ ಮಾರನ್ ಇಟ್ಟಿರುವ ಬೇಡಿಕೆಗಳು ಇವು…

Kavya Maran : ನಾವು ನಾಲ್ಕು ಉಳಿಸಿಕೊಳ್ಳುವ ಆಟಗಾರರು ಮತ್ತು ಎರಡು ಆರ್​ಟಿಎಂ ​ ಅಥವಾ ಎಲ್ಲಾ ಆರು ಉಳಿಸಿಕೊಳ್ಳುವ ಅಥವಾ ಎಲ್ಲಾ ಆರು ಆರ್​ಟಿಎಂ ​ ಆಯ್ಕೆಯನ್ನು ಬಯಸುತ್ತೇವೆ. ಆಟಗಾರನೊಂದಿಗಿನ ಚರ್ಚೆಯ ಆಧಾರದ ಮೇಲೆ ಉಳಿಸಿಕೊಳ್ಳುವ ಅಥವಾ ಆರ್​ಟಿಎಂ ಅನ್ನು ಬಳಸಬೇಕೇ ಎಂಬ ಆಯ್ಕೆಯು ಫ್ರಾಂಚೈಸಿಗೆ ಇರಬೇಕು,” ಎಂದು ಮಾರನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Kavya Maran
Koo

ಬೆಂಗಳೂರು: ಐಪಿಎಲ್ 2024 ರಲ್ಲಿ ಸನ್​​ರೈಸರ್ಸ್ ಹೈದರಾಬಾದ್ ಅದ್ಭುತ ಪ್ರದರ್ಶನ ನೀಡಿತ್ತು. ಪಂದ್ಯಾವಳಿಯ ಅತ್ಯುತ್ತಮ ತಂಡಗಳಲ್ಲಿ ಒಂದಾಗಿ ರನ್ನರ್ ಅಪ್ ಸ್ಥಾನವನ್ನು ಗಳಿಸಿತ್ತು. ಸಹ ಮಾಲೀಕರಾದ ಕಾವ್ಯಾ ಮಾರನ್ (Kavya Maran ) ಅವರು ಆಟಗಾರರ ಪ್ರದರ್ಶನದಿಂದ ಸಂತೋಷಪಟ್ಟಿದ್ದರು. ಈಗ ಪಂದ್ಯಾವಳಿಯ 2025 ರ ಆವೃತ್ತಿಗೆ ತಂಡದಲ್ಲಿ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಆದಾಗ್ಯೂ, ಮೆಗಾ-ಹರಾಜು ಬರುತ್ತಿರುವುದರಿಂದ ಮುಂದಿನ ಆವೃತ್ತಿಗೆ ಮುಂಚಿತವಾಗಿ ಪ್ರತಿ ತಂಡವು ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯ ಬಗ್ಗೆ ಸಾಕಷ್ಟು ಸ್ಪಷ್ಟತೆ ಇಲ್ಲದ ಕಾರಣ ಕೆಲವೊಂದು ಚರ್ಚೆಗಳು ನಡೆಯುತ್ತಿವೆ.

ಪ್ರತಿ ತಂಡಕ್ಕೆ ಕನಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಅಥವಾ ರೈಟ್ ಟು ಮ್ಯಾಚ್ (ಆರ್ ಟಿಎಂ) ಕಾರ್ಡ್ ಗಳ ಮೂಲಕ ಹರಾಜಿನಲ್ಲಿ ಅವರನ್ನು ಖರೀದಿಸುವ ಅವಕಾಶವನ್ನು ಹೊಂದಿರಬೇಕು ಎಂದು ಮಾರನ್ ಬಿಸಿಸಿಐಯನ್ನು ಕೋರಿದ್ದಾರೆ. ಕೆಲವೊಮ್ಮೆ ಆಟಗಾರರನ್ನು ಉಳಿಸಿಕೊಳ್ಳುವ ಮೊತ್ತದಿಂದ ಸಂತೋಷವಾಗಿಲ್ಲ ಅಥವಾ ಅವರು ಉಳಿಸಿಕೊಳ್ಳುವ ಮೊದಲ ಆಟಗಾರನಾಗಲು ಬಯಸಿದ್ದರೆ ಆಟಿಎಂ ಕಾರ್ಡ್​ಗಳನ್ನು ಮರಳಿ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆಟಗಾರರನ್ನು ಆರ್ಟಿಎಂ ಕಾರ್ಡ್ ಬಳಸಿ ಖರೀದಿಸಿದರೆ ಹಣದ ಬಗ್ಗೆ ಗೊಂದಲ ಹೊಂದಿರವಲು ಅವಕಾಶವಿರುವುದಿಲ್ಲ ಎಂದು ಅವರು ಹೇಳಿದ್ದಾರೆ. .

ನಾವು ನಾಲ್ಕು ಉಳಿಸಿಕೊಳ್ಳುವ ಆಟಗಾರರು ಮತ್ತು ಎರಡು ಆರ್​ಟಿಎಂ ​ ಅಥವಾ ಎಲ್ಲಾ ಆರು ಉಳಿಸಿಕೊಳ್ಳುವ ಅಥವಾ ಎಲ್ಲಾ ಆರು ಆರ್​ಟಿಎಂ ​ ಆಯ್ಕೆಯನ್ನು ಬಯಸುತ್ತೇವೆ. ಆಟಗಾರನೊಂದಿಗಿನ ಚರ್ಚೆಯ ಆಧಾರದ ಮೇಲೆ ಉಳಿಸಿಕೊಳ್ಳುವ ಅಥವಾ ಆರ್​ಟಿಎಂ ಅನ್ನು ಬಳಸಬೇಕೇ ಎಂಬ ಆಯ್ಕೆಯು ಫ್ರಾಂಚೈಸಿಗೆ ಇರಬೇಕು,” ಎಂದು ಮಾರನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಳಿಸಿಕೊಳ್ಳುವ ಮೊತ್ತವು ಕಡಿಮೆ ಮಟ್ಟದಲ್ಲಿದೆ ಎಂದು ಭಾವಿಸಿದಾಗ ಆಟಗಾರ ಹರಾಜಿಗೆ ಹೋಗಲು ಆದ್ಯತೆ ನೀಡಿದ ಹಲವಾರು ಉದಾಹರಣೆಗಳಿವೆ. ಅನೇಕ ಆಟಗಾರರು ತಾವು ಮೊದಲ ಉಳಿಸಿಕೊಳ್ಳಬೇಕು ಎಂದು ಭಾವಿಸಿದ ನಿದರ್ಶನಗಳಿವೆ. ಮೊದಲನೆಯದಾಗಿ ಉಳಿಸಿಕೊಳ್ಳದಿದ್ದರೆ ಹರಾಜಿನಲ್ಲಿ ಇರಿಸಲು ಕಾವ್ಯ ಕೇಳಿದ್ದಾರೆ. ನಾವು ಆಟಗಾರರಿಗೆ ಇರುವ ಬೆಲೆಯಲ್ಲಿ ಉಳಿಸಿಕೊಳ್ಳಲು ಅಥವಾ ಆರ್​ಟಿಎಂ ಮಾಡಲು ಅವಕಾಶ ನೀಡಬಹುದು. ಇದರಿಂದ ಉಳಿಸಿಕೊಳ್ಳುವ ಬೆಲೆಯ ಬಗ್ಗೆ ಆಟಗಾರನಿಗೆ ಅಸಮಾಧಾನವಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು” ಎಂದು ಕಾವ್ಯಾ ವಿವರಿಸಿದ್ದಾರೆ.

ಇದನ್ನೂ ಓದಿ: Champions Trophy 2025 : ಚಾಂಪಿಯನ್ಸ್​ ಟ್ರೋಫಿಗಾಗಿ 544 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಐಸಿಸಿ

ಬಿಸಿಸಿಐ ಉಳಿಸಿಕೊಳ್ಳಲು ಮಾತ್ರ ಅವಕಾಶ ನೀಡಿದರೆ, ಫ್ರಾಂಚೈಸಿಗಳು ಆಟಗಾರರಿಗೆ ಸೈಡ್ ಕಾಂಟ್ರಾಕ್ಟ್​ಗಳನ್ನು ನೀಡಬೇಕಾಗುತ್ತದೆ ಎಂದು ಎಸ್ಆರ್​ಎಚ್​ ಸಹ ಮಾಲೀಕರು ಹೇಳಿದ್ದಾರೆ. ಆದಾಗ್ಯೂ, ಅವರು ಆರ್​ಟಿಎಂ ಕಾರ್ಡ್​ಗಳ ಬಳಕೆಗೆ ಅವಕಾಶ ನೀಡಿದರೆ, ಸೈಡ್ ಡೀಲ್​ಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತವೆ ಮತ್ತು ಹೆಚ್ಚಿನ ಆರ್ಥಿಕ ಪಾರದರ್ಶಕತೆ ಇರುತ್ತದೆ ಎಂಬುದು ಅವರು ಹೇಳಿಕೆಯಾಗಿದೆ.

Continue Reading

ಪ್ರಮುಖ ಸುದ್ದಿ

Champions Trophy 2025 : ಚಾಂಪಿಯನ್ಸ್​ ಟ್ರೋಫಿಗಾಗಿ 544 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಐಸಿಸಿ

Champions Trophy 2025 : ಕೊಲಂಬೊದಲ್ಲಿ ನಡೆದ ಕಳೆದ ಎಜಿಎಂ ಸಭೆಯಲ್ಲಿ, ಈ ವಿಷಯವನ್ನು ವಿವಿಧ ವೇದಿಕೆಗಳಲ್ಲಿ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ನಡೆಯಲಿಲ್ಲ. ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಲು ಐಸಿಸಿ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಅದನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಅನ್ನು ಅಂತಿಮಗೊಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ದೃಢಪಡಿಸಿದೆ.

VISTARANEWS.COM


on

Champions Trophy 2025
Koo

ಬೆಂಗಳೂರು: 2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ (Champions Trophy 2025 ) ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 65 ಮಿಲಿಯನ್ ಡಾಲರ್ (544 ಕೋಟಿ ರೂಪಾಯಿ) ಬಜೆಟ್ ಅನ್ನು ಬಿಡುಗಡೆಗೆ ಅನುಮೋದನೆ ನೀಡಿದೆ. ಇದರಲ್ಲಿ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳೂ ಸೇರಿಕೊಂಡಿವೆ. ಯಾಕೆಂದರೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಕಾರಣ ಹೆಚ್ಚುವರಿ ಮೊತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೀಡಲಾಗಿದೆ. ಪ್ರತ್ಯೇಕ ಸ್ಥಳವನ್ನು ವ್ಯವಸ್ಥೆ ಮಾಡಿದರೆ ಬಜೆಟ್ ವೆಚ್ಚ ಹೆಚ್ಚಾಗುತ್ತದೆ. ಭದ್ರತಾ ಕಾಳಜಿಗಳಿಂದಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಆತಿಥೇಯ ರಾಷ್ಟ್ರ ತನ್ನ ಮನಸ್ಸನ್ನು ಬದಲಾಯಿಸಿಲ್ಲ. ಹೀಗಾಗಿ ಕುತೂಹಲ ಮೂಡಿದೆ.

ಕೊಲಂಬೊದಲ್ಲಿ ನಡೆದ ಕಳೆದ ಎಜಿಎಂ ಸಭೆಯಲ್ಲಿ, ಈ ವಿಷಯವನ್ನು ವಿವಿಧ ವೇದಿಕೆಗಳಲ್ಲಿ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ನಡೆಯಲಿಲ್ಲ. ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಲು ಐಸಿಸಿ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಅದನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಅನ್ನು ಅಂತಿಮಗೊಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ದೃಢಪಡಿಸಿದೆ. ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್​ನಲ್ಲಿನ ತನ್ನ ಸೌಲಭ್ಯಗಳನ್ನು ಅಭಿವೃದ್ದಿ ಮಾಡಲು ಪಾಕಿಸ್ತಾನಕ್ಕೆ ದೊಡ್ಡ ಮೊತ್ತವನ್ನು ನಿಗದಿಪಡಿಸಲಾಗಿದೆ. ಅದೇ ಬಜೆಟ್ ಅನ್ನು ಪಾಕಿಸ್ತಾನದ ಹೊರಗೆ ಆಯೋಜಿಸುವ ಪಂದ್ಯಗಳಿಗೂ ಬಳಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಪಿಸಿಬಿ ಆತಿಥೇಯ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಈವೆಂಟ್ ಬಜೆಟ್ ಅನ್ನು ರಚಿಸಲು ಮ್ಯಾನೇಜ್ಮೆಂಟ್​ನೊಂದಿಗೆ ಕೆಲಸ ಮಾಡಿದೆ. ಅದನ್ನು ಅನುಮೋದನೆಗೆ ಸಲ್ಲಿಸಲಾಗಿದೆ. ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವುದು ಅಗತ್ಯವಿದ್ದರೆ ಈವೆಂಟ್ ಅನ್ನು ಆಯೋಜಿಸುವ ವೆಚ್ಚದ ಹೆಚ್ಚಳದ ಅಂದಾಜನ್ನು ಮ್ಯಾನೇಜ್ಮೆಂಟ್ ಅನುಮೋದಿಸಿದೆ” ಎಂದು ಸಿಇಸಿಯ ತಿಳಿಸಿದೆ.

ಮಾರ್ಚ್ 2024 ರಲ್ಲಿ ಪಾಕಿಸ್ತಾನದಲ್ಲಿ ಯೋಜನಾ ಸಭೆ ಮತ್ತು ಉದ್ದೇಶಿತ ಪಂದ್ಯದ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ. ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಎಲ್ಲಾ ಮೂರು ಸ್ಥಳಗಳಲ್ಲಿ ಗಮನಾರ್ಹ ಪ್ರಮಾಣದ ನವೀಕರಣ ನಡೆಯುತ್ತಿವೆ” ಎಂದು ಅದು ಹೇಳಿದೆ.

ಇದನ್ನೂ ಓದಿ: IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ

ಆಟಗಾರರಿಗೆ ಮೂಲಸೌಕರ್ಯ ಮತ್ತು ಇತರ ಅಗತ್ಯ ವಸ್ತುಗಳ ಅಭಿವೃದ್ಧಿಗೆ 35 ಮಿಲಿಯನ್ ಡಾಲರ್, ಭಾಗವಹಿಸುವಿಕೆ ಮತ್ತು ಬಹುಮಾನದ ಹಣಕ್ಕಾಗಿ 20 ಮಿಲಿಯನ್ ಡಾಲರ್ ಮತ್ತು ಉತ್ಪಾದನೆಗಾಗಿ ಉಳಿದ 10 ಮಿಲಿಯನ್ ಡಾಲರ್ ನಿಗದಿಪಡಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಐಸಿಸಿ ಪಂದ್ಯಾವಳಿಯ ಕರಡು ವೇಳಾಪಟ್ಟಿ ಸಹ ವಿನ್ಯಾಸಗೊಳಿಸಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿ 20 ರಂದು ಆಡಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದೆ.

Continue Reading
Advertisement
friendshipday fashion
ಫ್ಯಾಷನ್2 hours ago

Friendshipday Fashion: ಮಾನ್ಸೂನ್‌‌‌ನಲ್ಲಿ ಟ್ರೆಂಡಿಯಾದ ಫ್ರೆಂಡ್‌‌‌ಶಿಪ್‌ ಡೇ ಫ್ಯಾಷನ್‌ ಥೀಮ್‌

Kerala Tour
ಪ್ರವಾಸ2 hours ago

Kerala Tour: ಕೇರಳದಲ್ಲಿ ನೋಡಲೇಬೇಕಾದ 10 ಅದ್ಭುತ ಸ್ಥಳಗಳಿವು!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

karnataka weather Forecast
ಮಳೆ2 hours ago

Karnataka Weather : ಮುಂದುವರಿಯಲಿದೆ ವಿಪರೀತ ಮಳೆ; ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌

Shravan 2024
Latest2 hours ago

Shravan 2024: ನಾಳೆಯಿಂದ ಶ್ರಾವಣ ಮಾಸ ಆರಂಭ; ಶುಭ ಕಾರ್ಯಗಳನ್ನು ಮಾಡಲು ಈ ತಿಂಗಳು ಸೂಕ್ತ ಏಕೆ?

Dina Bhavishya
ಭವಿಷ್ಯ3 hours ago

Dina Bhavishya : ಕೌಟುಂಬಿಕ ಕಲಹಗಳಿಗೆ ಧ್ವನಿ ಆಗ್ಬೇಡಿ; ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು

Uttar Pradesh
ದೇಶ7 hours ago

ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

Wasim Jaffer
ಕ್ರೀಡೆ8 hours ago

Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

Ayodhya
ದೇಶ8 hours ago

Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

Wayanad Landslide
ಕರ್ನಾಟಕ9 hours ago

Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ19 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌