ಮುಂಬಯಿ: ಪುರುಷರ ಐಪಿಎಲ್ನಂತೆ ನಡೆಯುವ ಪ್ರತಿಷ್ಠಿತ ವುಮೆನ್ಸ್ ಪ್ರೀಮಿಯರ್ ಲೀಗ್ (WPL Auction 2024) ಸೀಸನ್-2ರ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಾಳೆ(ಡಿ.9)ರಂದು ಮುಂಬೈನಲ್ಲಿ ನಡೆಯಲಿದೆ. ಈಗಾಗಲೇ 5 ಫ್ರಾಂಚೈಸಿಗಳು ಈ ಹರಾಜಿಗಾಗಿ ಎಲ್ಲ ಸಿದ್ಧತೆಯನ್ನು ನಡೆಸಿದೆ. ಅಲ್ಲದೆ ಆಟಗಾರ್ತಿಯ ಪಟ್ಟಿಯನ್ನು ರಚಿಸಿದ್ದು ಖರೀದಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಲು ಕಾತರಗೊಂಡಿದ್ದಾರೆ. 30 ಸ್ಲಾಟ್ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.
ಈಗಾಗಲೇ ಒಟ್ಟು 165 ಆಟಗಾರ್ತಿಯರು ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಐದು ಫ್ರಾಂಚೈಸಿಗಳು ಒಟ್ಟು 60 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, 29 ಮಂದಿಯನ್ನು ರಿಲೀಸ್ ಮಾಡಿದೆ. ಒಂದು ಫ್ರಾಂಚೈಸಿಗೆ ಒಟ್ಟು 18 ಆಟಗಾರ್ತಿಯರನ್ನು ಮಾತ್ರ ಖರೀದಿ ಮಾಡಬಹುದು.
Gearing up for the big day 🔨
— Women's Premier League (WPL) (@wplt20) December 8, 2023
Are YOU ready❓
Less than 24 hours to go for #TATAWPLAuction 2024⏳ pic.twitter.com/Bwt8XGA01k
ಎಷ್ಟು ಗಂಟೆಗೆ ಬಿಡ್ಡಿಂಗ್ ಪ್ರಾರಂಭ?
ಎರಡನೇ ಆವೃತ್ತಿಯ ಈ ಟೂರ್ನಿಯ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಾಳೆ(ಶನಿವಾರ ಡಿ.9) ಮಧ್ಯಾಹ್ನ 2.30 ರಿಂದ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಪೋರ್ಟ್ಸ್-18 ಚಾನೆಲ್ನಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ ಜಿಯೋ ಸಿನಿಮಾ ಆ್ಯಪ್ನಲ್ಲಿ ಮತ್ತು ವೆಬ್ಸೈಟ್ನಲ್ಲಿ ಈ ಹರಾಜು ಪ್ರಕ್ರಿಯೆಯ ಲೈವ್ ಸ್ಟ್ರೀಮಿಂಗ್ ಇರಲಿದೆ.
ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ
ಯುವ ಆಟಗಾರ್ತಿಯರಿಗೆ ದುಬಾರಿ ಮೊತ್ತ ಸಾಧ್ಯತೆ
ಎಲ್ಲ 5 ತಂಡಗಳ ತವರಿನಲ್ಲಿ ಪಂದ್ಯಗಳು ನಡೆಯಲಿದೆ. ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಬಾರಿ ಚಾಂಪಿಯನ್ ಯಾರಗಲಿದ್ದಾರೆ ಎನ್ನುವುದು ಟೂರ್ನಿಯ ಕುತೂಹಲವಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮತ್ತು ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಯುವ ಆಟಗಾರ್ತಿಯರಿಗೆ ಈ ಬಾರಿ ದುಬಾರಿ ಮೊತ್ತ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ IPL 2024: ಶಮಿಗೆ ಬಿಗ್ ಆಫರ್ ನೀಡಿದ ಐಪಿಎಲ್ ಫ್ರಾಂಚೈಸಿ; ಶಮಿ ನಿರ್ಧಾರವೇನು?
1⃣ Day To GO! ⏳
— Women's Premier League (WPL) (@wplt20) December 8, 2023
The #TATAWPLAuction is almost here 🥳 pic.twitter.com/HaZPOyBk8L
ಯಾವ ತಂಡಕ್ಕೆ ಎಷ್ಟು ಆಟಗಾರ್ತಿಯರು ಬೇಕು?
ಐದು ತಂಡಗಳಾದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್,ಗುಜರಾತ್ ಜೈಂಟ್ಸ್,ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿಸಿಕೊಂಡಿರುವ ಆಟಗಾರ್ತಿಯರು, ತಮ್ಮ ಬಳಿ ಇರುವ ಮೊತ್ತ ಹಾಗೂ ಬೇಕಿರುವ ಆಟಗಾರ್ತಿಯ ವಿವರ ಇಂತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸ್ಟಾರ್ ಆಟಗಾರ್ತಿಯರ ಪಡೆಯನ್ನೇ ಹೊಂದಿದ್ದರೂ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು 8 ಆಟಗಾರ್ತಿಯನ್ನು ಖರೀದಿ ಮಾಡಬಹುದಾಗಿದೆ. ಸದ್ಯ ಫ್ರಾಂಚೈಸಿ ಬಳಿ 3.35 ಕೋಟಿ ರೂ. ಮೊತ್ತ ಲಭ್ಯವಿದೆ.
ಮುಂಬೈ ಇಂಡಿಯನ್ಸ್
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನು 5 ಆಟಗಾರ್ತಿಯನ್ನು ಖರೀದಿ ಮಾಡಬಹುದು. ಸದ್ಯ 13 ಆಟಗಾರರನ್ನು ಉಳಿಸಿಕೊಂಡಿದ್ದು 4 ಆಟಗಾರರನ್ನು ಬಿಡುಗಡೆ ಮಾಡಿದೆ. ಮುಂಬೈ ಬಳಿಯಿರುವ ಉಳಿಕೆ ಮೊತ್ತ 2.1 ಕೋಟಿ ರೂ. ಸ್ಟಾರ್ ಆಟಗಾರ್ತಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಕಾರಣ ಈ ಬಾರಿ ದೇಶಿಯ ಆಟಗಾರ್ತಿಯರಿಗೆ ಮಣೆ ಹಾಕಬದುದು.
ಯುಪಿ ವಾರಿಯರ್ಸ್
ಯುಪಿ ವಾರಿಯರ್ಸ್ ತಂಡದ ಬಳಿ ಇನ್ನು 4 ಕೋಟಿ ರೂ. ಉಳಿದಿದೆ. 5 ಆಟಗಾರರನ್ನು ಬಿಡುಗಡೆ ಮಾಡಿದೆ. 13 ಆಟಗಾರ್ತಿಯನ್ನು ಖರೀದಿ ಮಾಡಬೇಕಿದೆ. ಬಲಿಷ್ಠ ಆಟಗಾರ್ತಿಯನ್ನು ಕಳೆದ ಬಾರಿ ಹೊಂದಿದ್ದರೂ ನಿರೀಕ್ಷಿತ ಪ್ರದರ್ಶನ ಮಾತ್ರ ಕಂಡು ಬಂದಿರಲಿಲ್ಲ. ಹೀಗಾಗಿ ಕೇವಲ 5 ಆಟಗಾರ್ತಿಯನ್ನು ಉಳಿಸಿಕೊಂಡು ಉಳಿದ ಎಲ್ಲ ಆಟಗಾರ್ತಿಯನ್ನು ತಂಡದಿಂದ ಕೈಬಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್
ಇತ್ತೀಚೆಗೆ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಆಸೀಸ್ ತಂಡದ ಮೆಗ್ ಲ್ಯಾನಿಂಗ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ 15 ಆಟಗಾರರನ್ನು ಉಳಿಸಿಕೊಂಡಿದ್ದಾರೆ. 2.25 ಕೋಟಿ ರೂ. ಹರಾಜು ಮೊತ್ತ ಹೊಂದಿದೆ. ಮೂರು ಆಟಗಾರ್ತಿಯನ್ನು ಖರೀದಿ ಮಾಡಬಹುದಾಗಿದೆ.
ಗುಜರಾತ್ ಜೈಂಟ್ಸ್
ಗುಜರಾತ್ ಜೈಂಟ್ಸ್ ಗರಿಷ್ಠ 11 ಆಟಗಾರರನ್ನು ಬಿಡುಗಡೆ ಮಾಡಿದ್ದು ಕೇವಲ 7 ಆಟಗಾರ್ತಿಯನ್ನು ಮಾತ್ರ ಉಳಿಸಿಕೊಂಡಿದೆ. ಗುಜರಾತ್ ಜೈಂಟ್ಸ್ ಬಳಿ 5.95 ಕೋಟಿ ರೂ. ಹರಾಜು ಮೊತ್ತವಿದೆ. ಈ ಹಣದಲ್ಲಿ ಮತ್ತೆ 11 ಆಟಗಾರ್ತಿಯರನ್ನು ಖರೀದಿ ಮಾಡಬೇಕಿದೆ.