Site icon Vistara News

ಅನುಭವಿ ಆಟಗಾರ್ತಿಯರನ್ನು ಹಿಂದಿಕ್ಕಿ ಕೋಟಿ ಮೊತ್ತ ಪಡೆದ ಕರ್ನಾಟಕದ 21 ವರ್ಷದ ವೃಂದಾ ದಿನೇಶ್

WPL 2024 Auction

ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ 2024ರ(WPL 2024 Auction) ಮಿನಿ ಹರಾಜಿನಲ್ಲಿ ಅನ್​ಕ್ಯಾಪ್ಡ್​ ಆಟಗಾರ್ತಿಯರಿಗೆ ಈ ಬಾರಿ ಅದೃಷ್ಟ ಖುಲಾಯಿಸಿದೆ. ಕರ್ನಾಟಕದ 21 ವರ್ಷದ ವೃಂದಾ ದಿನೇಶ್(vrinda dinesh) ಮತ್ತು ಚಂಡೀಗಢ್​ನ ಕಶ್ವಿ ಗೌತಮ್(Kashvee Gautam) ಅವರು ಕೋಟಿ ಮೊತ್ತಕ್ಕೆ ಸೇಲ್​ ಸೇಲ್​ ಆಗಿದ್ದಾರೆ.

ಕರ್ನಾಟಕದ ಯುವ ಬ್ಯಾಟರ್ ಆಗಿರುವ ವೃಂದಾ ದಿನೇಸ್​ ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ತಂಡವು ಫೈನಲ್ ತಲುಪುವಲ್ಲಿ ವೃಂದಾ ಪ್ರಮುಖ ಪಾತ್ರ ವಹಿಸಿದ್ದರು. 11 ಇನ್ನಿಂಗ್ಸ್‌ ಗಳಲ್ಲಿ 47.70 ರ ಸರಾಸರಿಯಲ್ಲಿ 477 ರನ್ ಗಳಿಸಿದ್ದರು. ವೃಂದಾ ಇತ್ತೀಚೆಗಷ್ಟೇ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದರು.

ವೃಂದಾ ದಿನೇಶ್ ಅವರ ಬ್ಯಾಟಿಂಗ್​ ಪ್ರದರ್ಶನ ಕಂಡಿದ್ದ ಕಾರಣ ಎಲ್ಲ 5 ಫ್ರಾಂಚೈಸಿಗಳು ಅವರ ಖರೀದಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿತು. ಅಂತಿಮವಾಗಿ 1.3 ಕೋಟಿ ರೂ.ಗೆ ಯುಪಿ ವಾರಿಯರ್ಸ್ ತಂಡಕ್ಕೆ ಸೇಲ್​ ಆದರು. ಆರ್​ಸಿಬಿ ಕೂಡ ಇವರ ಖರೀದಿಗೆ ಪ್ರಯತ್ನಪಟ್ಟಿತ್ತಾದರೂ ಹೆಚ್ಚಿನ ಹಣ ಉಳಿಕೆ ಇರದ ಕಾರಣ ಅಸಾಧ್ಯವಾಯಿತು.

ದಾಖಲೆ ಬರೆದ ಕಶ್ವಿ ಗೌತಮ್

ಆರಂಭಿಕ ಹಂತದಲ್ಲಿ ಕನ್ನಡತಿ ವೃಂದಾ ದಿನೇಶ್ ಅವರು ಡಬ್ಲ್ಯುಪಿಎಲ್​ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ಅನ್​ಕ್ಯಾಪ್ಡ್​ ಪ್ಲಯರ್​ ಎನ್ನುವ ಕೀರ್ತಿಗೆ ಪಾತ್ರವಾದರೂ ಈ ಸಂತಸ ಹಚ್ಚು ಕಾಲ ಉಳಿಯಲಿಲ್ಲ. ಕಶ್ವಿ ಗೌತಮ್ ಅವರು ಬರೋಬ್ಬರಿ 2 ಕೋಟಿ ರೂ. ಪಡೆದು ಈ ದಾಖಲೆಯನ್ನು ತಮ್ಮ ಹಸರಿಗೆ ಬರೆದರು. ಗುಜರಾತ್ ಜೈಂಟ್ಸ್ ತಂಡವು ಕಶ್ವಿ ಗೌತಮ್ ಅವರನ್ನು ಬರೋಬ್ಬರಿ 2 ಕೋಟಿ ರೂ ನೀಡಿ ಹರಾಜಿನಲ್ಲಿ ಖರೀದಿಸಿದೆ.

20ರ ಹರೆಯದ ಕಶ್ವಿ ಅವರು 2020ರಲ್ಲಿ ನಡೆದಿದ್ದ ಅಂಡರ್​-19 ಟೂರ್ನಿಯಲ್ಲಿ 10 ವಿಕೆಟ್‌ಗಳನ್ನು ಕಿತ್ತಿದ್ದರು. ಅಲ್ಲದೆ ಹ್ಯಾಟ್ರಿಕ್ ವಿಕೆಟ್​ ಕೂಡ ಕಿತ್ತಿದ್ದರು. ಪಂಜಾಬ್‌ನ ಚಂಡೀಗಢ್‌ನಲ್ಲಿ ಜನಿಸಿದ್ದ ಅವರು ದೇಶೀಯ ಕ್ರಿಕೆಟ್‌ನಲ್ಲಿ ಉನ್ನತ ಪ್ರದರ್ಶನಗಳನ್ನು ನೀಡಿದ್ದಾರೆ. ಕಳೆದ ಬಾರಿ ಇವರು ಅನ್​ಸೋಲ್ಡ್​ ಆಗಿದ್ದರು. ಮುಂಬೈನಲ್ಲಿ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಎ ಸರಣಿಯಲ್ಲಿ ಕಶ್ವಿ ಗೌತಮ್ ಭಾಗವಹಿಸಿದ್ದರು. ಅವರು ಭಾರತ ಎ ಪರ ಎರಡು ಪಂದ್ಯಗಳನ್ನು ಆಡಿ ಮೂರು ವಿಕೆಟ್ ಪಡೆದಿದ್ದರು.

ಇದನ್ನೂ ಓದಿ WPL 2024: ಅನ್​ಸೋಲ್ಡ್​ ಆದ ಕನ್ನಡತಿ ವೇದಾ ಕೃಷ್ಣಮೂರ್ತಿ; 2 ಕೋಟಿ ಪಡೆದ ಅನ್ನಾಬೆಲ್

2 ಕೋಟಿ ಪಡೆದ ಅನ್ನಾಬೆಲ್

ಆಸ್ಟ್ರೇಲಿಯಾ ತಂಡದ ಸ್ಟಾರ್​ ಆಲ್​ರೌಂಡರ್​ ಅನ್ನಾಬೆಲ್ ಸತರ್ಲ್ಯಾಂಡ್ ಅವರು ಸದ್ಯ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದ ಆಟಗಾರ್ತಿಯಾಗಿದ್ದಾರೆ. 5 ಫ್ರಾಂಚೈಸಿಗಳ ತೀವ್ರ ಪೈಪೋಟಿಯಲ್ಲಿ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿತು. ದಕ್ಷಿಣ ಆಫ್ರಿಕಾ ತಂಡ ಹಿರಿಯ ಮತ್ತು ಅನುಭವಿ ಬೌಲರ್​ ಶಬ್ನಿಮ್ ಇಸ್ಮಾಯಿಲ್ ಅವರು 1.20 ಕೋಟಿ ರೂ.ಗೆ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ಪಾಲಾದರು.

Exit mobile version