Site icon Vistara News

WPL 2024 Points Table: ಅಂಕಪಟ್ಟಿಯಲ್ಲಿ ಖಾತೆ ತೆರೆದ ಗುಜರಾತ್ ಜೈಂಟ್ಸ್

Gujarat Giants vs Royal Challengers Bangalore Women

ನವದೆಹಲಿ: ಬುಧವಾರ ನಡೆದ ಡಬ್ಲ್ಯುಪಿಎಲ್​(WPL 2024) ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡ ಗುಜರಾತ್(Gujarat Giants)​ ವಿರುದ್ಧ ಸೋಲು ಕಂಡರೂ ಕೂಡ ಅಂಕಪಟ್ಟಿಯಲ್ಲಿ ತನ್ನ 2ನೇ ಸ್ಥಾನವನ್ನು ಕಳೆದುಕೊಂಡಿಲ್ಲ. ಆದರೆ, ರನ್​ ರೇಟ್​ನಲ್ಲಿ ಕುಸಿತ ಕಂಡಿದೆ. ಕೊನೆಯ ಸ್ಥಾನಿಯಾಗಿದ್ದ ಗುಜರಾತ್​ ಜೈಂಟ್ಸ್​ ಮೊದಲ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ(WPL 2024 Points Table) ಖಾತೆ ತೆರೆದಿದೆ.

ಡೆಲ್ಲಿ ತಂಡ 8 ಅಂಕದೊಂದಿಗೆ ಮೊದಲ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಯುಪಿ ವಾರಿಯರ್ಸ್​ ಮುಖಾಮುಖಿಯಾಗಲಿವೆ. ಇಲ್ಲಿ ಯಾರೇ ಗೆದ್ದರೂ ಒಂದು ಸ್ಥಾನಗಳ ಏರಿಕೆ ಖಚಿತ. ಈ ತಂಡ ಯಾವುದು ಎನ್ನುವುದು ಇಂದಿನ ಪಂದ್ಯದ ಕುತೂಹಲ. ಮುಂಬೈ ಗೆದ್ದರೆ ಆರ್​ಸಿಬಿ ಒಂದು ಸ್ಥಾನ ಕುಸಿತ ಕಾಣಲಿದೆ. ಯುಪಿ ಗೆದ್ದರೆ ಆರ್​ಸಿಬಿ ಯಥಾಸ್ಥಿತಿಯಂತೆ ದ್ವಿತೀಯ ಸ್ಥಾನದಲ್ಲೇ ಉಳಿಯಲಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​​5418 (+1.301)
ಆರ್​ಸಿಬಿ​​6336 (+0.038)
ಮುಂಬೈ ಇಂಡಿಯನ್ಸ್​​​5326 (+0.018)
ಯುಪಿ ವಾರಿಯರ್ಸ್​5234 (-0.073)
ಗುಜರಾತ್​ ಜೈಂಟ್ಸ್​5140 (-1.278)

ಗೆಲುವಿನ ಖಾತೆ ತೆರೆದ ಗುಜರಾತ್​

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಗುಜರಾತ್​ ನಾಯಕಿ ಬೆತ್ ಮೂನಿ(85*) ಮತ್ತು ಲಾರಾ ವೊಲ್ವಾರ್ಡ್ಟ್(76) ಅವರ ಆಕರ್ಷಕ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 199 ರನ್​ ಬಾರಿಸಿ ತನ್ನ ಟಾಸ್​ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಬೃಹತ್​ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಆರ್​ಸಿಬಿ ಅಂತಿಮ ಹಂತದಲ್ಲಿ ಸತತ ವಿಕೆಟ್​ ಕಳೆದುಕೊಂಡು ವಿಕೆಟ್​ಗೆ ರನ್​ ಗಳಿಸಿ ಸೋಲೊಪ್ಪಿಕೊಂಡಿತು. ಸತತ 4 ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್​ ಜೈಂಟ್ಸ್ ಮೊದಲ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ WPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಗುಜರಾತ್: ಆರ್​ಸಿಗೆ 19 ರನ್​ ಸೋಲು

ಶತಕದತ್ತ ಮುನ್ನುಗುತ್ತಿದ್ದ ವೊಲ್ವಾರ್ಡ್ಟ್ ಅವರು ರನೌಟ್​ ಬಲೆಗೆ ಬಿದ್ದು ವಿಕೆಟ್​ ಕಳೆದುಕೊಂಡರು. 45 ಎಸೆತಗಳಿಂದ 13 ಬೌಂಡರಿ ಬಾರಿ 76 ರನ್​ ಚಚ್ಚಿದರು. ವೊಲ್ವಾರ್ಡ್ಟ್ ಮತ್ತು ಮೂನಿ ಸೇರಿಕೊಂಡು ಮೊದಲ ವಿಕೆಟ್​ಗೆ ಬರೋಬ್ಬರಿ 140 ರನ್​ ಜತೆಯಾಟ ನಡೆಸಿದರು. ಈ ಮೊತ್ತ ಕೇವಲ 13 ಓವರ್​ನಲ್ಲಿ ದಾಖಲಾಗಿತ್ತು. ವೊಲ್ವಾರ್ಡ್ಟ್ ವಿಕೆಟ್​ ಪತನದ ಬಳಿಕ ಫೋಬೆ ಲಿಚ್ಫೀಲ್ಡ್ 18 ರನ್​ ಗಳಿಸಿದ್ದು ಬಿಟ್ಟರೆ, ಬಳಿಕ ಬಂದವರೆಲ್ಲ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್​ ಕೈಚೆಲ್ಲಿದರು. ಮೂನಿ 12 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿ ಅಜೇಯ 85 ರನ್​ ಗಳಿಸಿದರು.

Exit mobile version