WPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಗುಜರಾತ್: ಆರ್​ಸಿಬಿಗೆ 19 ರನ್​ ಸೋಲು - Vistara News

ಕ್ರೀಡೆ

WPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಗುಜರಾತ್: ಆರ್​ಸಿಬಿಗೆ 19 ರನ್​ ಸೋಲು

ಗುಜರಾತ್​ ಜೈಂಟ್ಸ್(Gujarat Giants)​ ತಂಡ ಬಲಿಷ್ಠ ಆರ್​ಸಿಬಿ(Royal Challengers Bangalore) ವಿರುದ್ಧ 19 ರನ್​ಗಳ ಗೆಲುವು ಸಾಧಿಸಿ ಈ ಬಾರಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

VISTARANEWS.COM


on

Gujarat Giants vs Royal Challengers Bangalore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನಾಯಕಿ ಬೆತ್ ಮೂನಿ(85*) ಮತ್ತು ಲಾರಾ ವೊಲ್ವಾರ್ಡ್ಟ್(76) ಅವರ ಆಕರ್ಷಕ ಅರ್ಧಶತಕ ನೆರವಿನಿಂದ ಗುಜರಾತ್​ ಜೈಂಟ್ಸ್(Gujarat Giants)​ ತಂಡ ಬಲಿಷ್ಠ ಆರ್​ಸಿಬಿ(Royal Challengers Bangalore) ವಿರುದ್ಧ 19 ರನ್​ಗಳ ಗೆಲುವು ಸಾಧಿಸಿ ಈ ಬಾರಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಗುಜರಾತ್​ ಆರಂಭಿಕ ಆಟಗಾರ್ತಿಯರಾದ ಬೆತ್ ಮೂನಿ ಮತ್ತು ಲಾರಾ ವೊಲ್ವಾರ್ಡ್ಟ್ ಅವರ ಆಕ್ರಮಣಕಾರಿ ಬ್ಯಾಟಿಂಗ್​ನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 199 ರನ್​ ಬಾರಿಸಿ ತನ್ನ ಟಾಸ್​ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಬೃಹತ್​ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಆರ್​ಸಿಬಿ ಅಂತಿಮ ಹಂತದಲ್ಲಿ ಸತತ ವಿಕೆಟ್​ ಕಳೆದುಕೊಂಡು ವಿಕೆಟ್​ಗೆ ರನ್​ ಗಳಿಸಿ ಸೋಲೊಪ್ಪಿಕೊಂಡಿತು. ಸತತ 4 ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್​ ಜೈಂಟ್ಸ್ ಮೊದಲ ಗೆಲುವಿನ ನಗೆ ಬೀರಿತು.

ಬೃಹತ್​ ಮೊತ್ತದ ಜತೆಯಾಟವಾಡಿದ ಮೂನಿ-ವೊಲ್ವಾರ್ಡ್ಟ್


ಗೆಲ್ಲಲೇ ಬೇಕು ಎಂದು ಪಣತೊಟ್ಟು ಆಡಲಿಳಿದ ಗುಜರಾತ್​ ತಂಡದ ನಾಯಕಿ ಬೆತ್ ಮೂನಿ ಇನಿಂಗ್ಸ್​ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅವರ ಜತೆಗಾರ್ತಿ ವೊಲ್ವಾರ್ಡ್ಟ್ ಕೂಡ ಇದೇ ರೀತಿಯ ಆಟಕ್ಕೆ ಹೊಂದಿಕೊಂಡು ಬಿರುಸಿನ ಬ್ಯಾಟಿಂಗ್​ ನಡೆಸಿದರು. ಉಭಯ ಆಟಗಾರರ ಸ್ಫೋಟಕ ಬ್ಯಾಟಿಂಗ್​ನಿಂದ ತಂಡ ವಿಕೆಟ್​ ನಷ್ಟವಿಲ್ಲದೆ 6 ಓವರ್​ಗಳ ಪವರ್​ ಪ್ಲೇಯಲ್ಲಿ 59 ರನ್​ ಕಲೆಹಾಕಿತು.

ಪವರ್​ ಪ್ಲೇ ಮುಗಿದರೂ ಮೂನಿ ಮತ್ತು ವೊಲ್ವಾರ್ಡ್ಟ್ ಬ್ಯಾಟಿಂಗ್​ ಜೋಶ್​ ಕಡಿಮೆಯಾಗಲಿಲ್ಲ. ಆರ್​ಸಿಬಿ ಬೌಲರ್​ಗಳಿಗೆ ಚಳಿ ಬಿಡಿಸಿದರು. ಅನುಭವಿ ಟೀಮ್​ ಇಂಡಿಯಾದ ಆಟಗಾರ್ತಿಯಾಗಿರುವ ರೇನುಕಾ ಸಿಂಗ್​ ಅವರಂತೂ ಸರಿಯಾಗಿ ದಂಡಿಸಿಕೊಂಡರು. ಅಬ್ಬರ ಬ್ಯಾಟಿಂಗ್​ ಕಂಡು ವಿಚಲಿತರಾದ ಅವರು ಹಲವು ವೈಡ್​ ಎಸೆತಗಳನ್ನು ಕೂಡ ಎಸೆದರು. ಕಳೆದ ಪಂದ್ಯದಲ್ಲಿ ಘಾತಕ ಬೌಲಿಂಗ್​ ನಡೆಸಿ ವಿಕೆಟ್​ ಕಿತ್ತಿದ್ದ ಸೋಫಿ ಡಿವೈನ್​ ಈ ಪಂದ್ಯದಲ್ಲಿ ವಿಕೆಟ್​ ಲೆಸ್​ ಜತೆಗೆ ದುಬಾರಿಯಾಗಿ ಕಂಡು ಬಂದರು. 3 ಓವರ್​ಗೆ 37 ರನ್​ ಬಿಟ್ಟುಕೊಟ್ಟರು.

ಶತಕದತ್ತ ಮುನ್ನುಗುತ್ತಿದ್ದ ವೊಲ್ವಾರ್ಡ್ಟ್ ಅವರು ರನೌಟ್​ ಬಲೆಗೆ ಬಿದ್ದು ವಿಕೆಟ್​ ಕಳೆದುಕೊಂಡರು. 45 ಎಸೆತಗಳಿಂದ 13 ಬೌಂಡರಿ ಬಾರಿ 76 ರನ್​ ಚಚ್ಚಿದರು. ವೊಲ್ವಾರ್ಡ್ಟ್ ಮತ್ತು ಮೂನಿ ಸೇರಿಕೊಂಡು ಮೊದಲ ವಿಕೆಟ್​ಗೆ ಬರೋಬ್ಬರಿ 140 ರನ್​ ಜತೆಯಾಟ ನಡೆಸಿದರು. ಈ ಮೊತ್ತ ಕೇವಲ 13 ಓವರ್​ನಲ್ಲಿ ದಾಖಲಾಗಿತ್ತು. ವೊಲ್ವಾರ್ಡ್ಟ್ ವಿಕೆಟ್​ ಪತನದ ಬಳಿಕ ಫೋಬೆ ಲಿಚ್ಫೀಲ್ಡ್ 18 ರನ್​ ಗಳಿಸಿದ್ದು ಬಿಟ್ಟರೆ, ಬಳಿಕ ಬಂದವರೆಲ್ಲ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್​ ಕೈಚೆಲ್ಲಿದರು. ಮೂನಿ 12 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿ ಅಜೇಯ 85 ರನ್​ ಗಳಿಸಿದರು.

ಇದನ್ನೂ ಓದಿ WPL 2024: ಅತೀ ವೇಗದ ಬೌಲಿಂಗ್‌ ಮೂಲಕ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್‌ನ ಶಬ್ನಿಮ್ ಇಸ್ಮಾಯಿಲ್

ದಿಟ್ಟ ಹೋರಾಟ ನಡೆಸಿ ಸೋತ ಆರ್​ಸಿಬಿ


ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ ಮೊದಲ ಎರಡು ಓವರ್​ನಲ್ಲಿ ಕೇವಲ 7 ರನ್​ ಮಾತ್ರ ಗಳಿಸಿತು. ಮೂರನೇ ಓವರ್​ನಲ್ಲಿ ನಾಯಕಿ ಸ್ಮೃತಿ ಮಂಧಾನಾ ಬಿರುಸಿನ ಬ್ಯಾಟಿಂಗ್​ ನಡೆಸಿ 17 ರನ್​ ಬಾರಿಸಿದರು. ಇಲ್ಲಿಂದ ಚೇತರಿಕೆ ಕಂಡ ಆರ್​ಸಿಬಿ ಬಳಿಕ ಸರಾಗವಾಗಿ ರನ್​ ಗಳಿಸಿಸುತ್ತಲೇ ಸಾಗಿತು. ವಿಕೆಟ್​ ಕೂಡ ಬೀಳುತ್ತಿತ್ತು. ಆದರೆ, ಕ್ರೀಸ್​ಗೆ ಬಂದ ಆಟಗಾರ್ತಿಯರೆಲ್ಲರೂ ಕಡಿಮೆ ಎಸೆತಗಳಿಂದ ಕನಿಷ್ಠ 20 ಪ್ಲಸ್​ ಮೊತ್ತ ದಾಖಲಿಸಿದರು. ಎಲ್ಲಿಸ್​ ಪೆರ್ರಿ ಅವರು 24 ರನ್​ಗಳಿಗೆ 23 ಎಸೆತ ಎದುರಿಸಿದರು.

ಅಂತಿಮ ಹಂತದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಅವರು ಎಬಿಡಿ ಶೈಲಿಯಲ್ಲಿ ಬ್ಯಾಟ್​ ಬೀಸಿ ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿಸಿದರು. ಆದರೆ ಅವರು ರನೌಟ್​ ಆದರು. ಈ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಆರ್​ಸಿಬಿ ಸೋಲು ಕೂಡ ಖಚಿತವಾಯಿತು. ವೇರ್ಹ್ಯಾಮ್ ಕೇವಲ 22 ಎಸೆತಗಳಿಂದ 48 ರನ್​ ಚಚ್ಚಿದರು. ಒಟ್ಟು ಈ ಪಂದ್ಯದಲ್ಲಿ 7 ರನೌಟ್​ಗಳು ದಾಖಲಾದವು. ಆರಂಭಿಕ 2 ಓವರ್​ನಲ್ಲಿ ರನ್​ ಹರಿದು ಬಾರದ್ದೇ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Saina Nehwal: ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದ ಸೈನಾ ನೆಹ್ವಾಲ್‌

Saina Nehwal: ನನ್ನನ್ನು ಹೆತ್ತವರು ಬ್ಯಾಡ್ಮಿಂಟನ್‌ಗೆ ಬದಲಾಗಿ ಟೆನಿಸ್‌ಗೆ ಸೇರಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತಿದೆ. ನಾನು ಬ್ಯಾಡ್ಮಿಂಟನ್​ ಬಿಟ್ಟು ಟೆನಿಸ್​ ಅಥವಾ ಕ್ರಿಕೆಟ್​ ಆಡುತ್ತಿದ್ದರೆ ನನ್ನ ಬಳಿ ಹೆಚ್ಚು ಹಣ ಮತ್ತು ಶಕ್ತಿ ಇರುತ್ತಿತ್ತು” ಎಂದು ಸೈನಾ ಹೇಳಿದ್ದಾರೆ

VISTARANEWS.COM


on

Saina Nehwal
Koo

ನವದೆಹಲಿ: ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ, ಭಾರತದ ಅನುಭವಿ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್(Saina Nehwal)​ ಅವರು ತಾನು ಬ್ಯಾಡ್ಮಿಂಟನ್​ ಆಡುವ ಬದಲು ಟೆನಿಸ್​ ಆಡುತ್ತಿದ್ದರೆ ಇನ್ನೂ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ “ಅವಳ ಕಥೆ-ನನ್ನ ಕಥೆ’ ಉಪನ್ಯಾಸ ಸರಣಿಯಲ್ಲಿ ಈ ವಿಚಾರವನ್ನು ಸೈನಾ ಹೇಳಿದರು.

“ನನ್ನನ್ನು ಹೆತ್ತವರು ಬ್ಯಾಡ್ಮಿಂಟನ್‌ಗೆ ಬದಲಾಗಿ ಟೆನಿಸ್‌ಗೆ ಸೇರಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತಿದೆ. ನಾನು ಬ್ಯಾಡ್ಮಿಂಟನ್​ ಬಿಟ್ಟು ಟೆನಿಸ್​ ಅಥವಾ ಕ್ರಿಕೆಟ್​ ಆಡುತ್ತಿದ್ದರೆ ನನ್ನ ಬಳಿ ಹೆಚ್ಚು ಹಣ ಮತ್ತು ಶಕ್ತಿ ಇರುತ್ತಿತ್ತು” ಎಂದು ಸೈನಾ ಹೇಳಿದರು.

ನಾನು ಯಾವುದಾದರೊಂದು ಟೂರ್ನಿಯಲ್ಲಿ ಸೋತರೆ ಸಾಕು ಎಲ್ಲ ಕಡೆಗಳಿಂದ ಟೀಕೆಗಳು ಬರುತ್ತದೆ. ಬ್ಯಾಡ್ಮಿಂಟನ್​ ಎನ್ನುವುದು ಅಷ್ಟು ಸುಲಭದ ಆಟವಲ್ಲ. ಇಲ್ಲಿ ಉಸಿರು ತೆಗೆಯಲು ಕೂಡ ಕಷ್ಟಪಡಬೇಕು. ಇದು ಬ್ಯಾಡ್ಮಿಂಟನ್​ ಆಡಿದವರಿಗೆ ಮಾತ್ರ ಇದರ ಕಷ್ಟ ಅರಿವಾಗುತ್ತದೆ. ನಾನು ಒಬ್ಬರ ಬಗ್ಗೆ ಟೀಕೆ ಮಾಡುವುದು ಸಲಭ. ಆದರೆ ಈ ಕಷ್ಟ ಏನೆಂಬುದು ಕ್ರೀಡಾಪಟುಗಳಿಗೆ ಮಾತ್ರ ತಿಳಿದಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ Droupadi Murmu: ಸೈನಾ ನೆಹ್ವಾಲ್ ಜತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರಂಭಿಸಿರುವ ಅವಳ ಕಥೆ-ನನ್ನ ಕಥೆ (ಹರ್‌ ಸ್ಟೋರಿ – ಮೈ ಸ್ಟೋರಿ) ಉಪ ನ್ಯಾಸ ಸರಣಿಯ ಸೈನಾ ಈ ಮಾತುಗಳನ್ನಾಡಿದ್ದಾರೆ. ಪದ್ಮ ಪ್ರಶಸ್ತಿ ಪುರಸ್ಕೃತ‌ ಎಲ್ಲ ಮಹಿಳಾ ಸಾಧಕರು ತಮ್ಮ ಕಥೆಗಳನ್ನು ಉಪನ್ಯಾಸದ ರೂಪದಲ್ಲಿ ಹೇಳಿಕೊಳ್ಳಲಿದ್ದಾರೆ. 2 ದಿನಗಳ ಹಿಂದಷ್ಟೇ ದ್ರೌಪದಿ ಮುರ್ಮು ಜತೆ ಸೈನಾ ಬ್ಯಾಡ್ಮಿಂಟನ್​ ಆಡಿದ ವಿಡಿಯೊ ವೈರಲ್​ ಆಗಿತ್ತು.

ಇತ್ತೀಚಿನ ಕೆಲ ವರ್ಷಗಳಿಂದ ಸೈನಾ ನೆಹ್ವಾಲ್​ ಅವರು ಗಾಯದ ಸಮಸ್ಯೆಯಿಂದ ತಮ್ಮ ಫಾರ್ಮ್​ ಕಳೆದುಕೊಂಡಿದ್ದಾರೆ. ಯಾವುದೇ ಟೂರ್ನಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಕಷ್ಟಪಟ್ಟು ಮೊದಲ ಸುತ್ತು ದಾಟುವುದೇ ದೊಡ್ಡ ಸಾಧನೆಯಾಗಿದೆ.

ಹಿಂದೊಮ್ಮೆ ದಾವಣಗೆರೆ ಲೋಕಸಭಾ ಕ್ಷೇತ್ರದ (Davangere Lok Sabha constituency) ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ (Gayatri Siddeshwar) ವಿರುದ್ಧ ಮಾತನಾಡುವಾಗ, “ಮಹಿಳೆಯರು ಅಡುಗೆ ಮಾಡಲು ಲಾಯಕ್ಕು” ಎಂಬಂತೆ ಹೇಳಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸೈನಾ ನೆಹ್ವಾಲ್​ ವಾಗ್ದಾಳಿ ನಡೆಸಿದ್ದರು.

ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್​ ಅಭಿಯಾನವೊಂದನ್ನು ಆರಂಭಿಸಿತ್ತು. ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್​ ನಾಯಕರೊಬ್ಬರು ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್​ನ ನಿಜವಾದ ಮನಸ್ಥಿಯನ್ನು ತೋರಿಸುತ್ತದೆ’ ಎಂದು ಶಿವಶಂಕರಪ್ಪ ಹೇಳಿಯನ್ನು ಖಂಡಿಸಿದ್ದರು.

Continue Reading

ಕ್ರೀಡೆ

John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

John Cena: ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಇಂದು(ಜುಲೈ 12) ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಜುಲೈ 13 ಮತ್ತು 14 ರಂದು ಎರಡು ದಿನಗಳ ಕಾಲ ವಿವಿಧ ಜನರಿಗೆ ಆರತಕ್ಷತೆ ಆಯೋಜಿಸಲಾಗಿದೆ.

VISTARANEWS.COM


on

John Cena
Koo

ಮುಂಬಯಿ: ಕಳೆದ ವಾರವಷ್ಟೇ ಡಬ್ಲ್ಯೂ ಡಬ್ಲ್ಯೂಇ(WWE) ಬಾಕ್ಸಿಂಗ್​ಗೆ ವಿದಾಯ ಹೇಳಿದ್ದ ಜಾನ್​ ಸೀನ(John Cena) ಅವರು ಮುಂಬಯಿಯಲ್ಲಿ ನಡೆಯುತ್ತಿರುವ ಮುಕೇಶ್‌ ಅಂಬಾನಿ(Mukesh Ambani) ಪುತ್ರ ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೊವನ್ನು ಪಿಟಿಐ ಸುದ್ದಿ ಸಂಸ್ಥೆ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಜಾನ್​ ಸೀನ ಅವರಿಗೆ ಭಾರತದಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದು, ಅವರನ್ನು ಕಾಣುತ್ತಿದಂತೆ ಅಭಿಮಾನಿಗಳು ಜೋರಾಗಿ ಜಾನ್​ ಸೀನ… ಜಾನ್​ ಸೀನ ಎಂದು ಕೂಗಿದ್ದಾರೆ. ಈ ವೇಳೆ ಜಾನ್​ ಸೀನ ಅಭಿಮಾನಿಗಳತ್ತ ಖುಷಿಯಲ್ಲಿ ಕೈ ಬೀಸಿದ್ದಾರೆ.

‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದ ಟಿ-ಶರ್ಟ್​ ಧರಿಸಿ ಸೀನಾ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದರು. ಈ ವರ್ಷ ನಡೆಯುವ 2024ರ ರಾಯಲ್ ರಂಬಲ್, ಎಲಿಮಿನೇಶನ್ ಚೇಂಬರ್ ಮತ್ತು ರಸಲ್ ಮೇನಿಯಾ 41ರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ನಿವೃತ್ತಿಯಾಗಲಿದ್ದಾರೆ. 2002ರಲ್ಲಿ ಡಬ್ಲ್ಯೂ ಡಬ್ಲ್ಯೂಇ ಕಂಪನಿಗೆ ಸೇರಿದ ಜಾನ್ ಸೀನ 13 ಬಾರಿ ಡಬ್ಲ್ಯೂ ಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಗೆಲುವು ಸಾಧಿಸಿದ್ದಾರೆ.

ಹೆಚ್ಚು ಸ್ಪರ್ಧಾತ್ಮಕ ಆದ ಮತ್ತು ಅಪಾಯಕಾರಿಯೆ ಆದ ‘ರೆಸ್ಟಲ್ ಮೇನಿಯಾ’ ಎಂಬ ವಾರ್ಷಿಕ ಇವೆಂಟಿನಲ್ಲಿ ಸೀನಾ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸೋತಿರುವ ಉದಾಹರಣೆ ಹೆಚ್ಚು ದೊರೆಯುವುದಿಲ್ಲ. ಆತನ ನಗು ಮತ್ತು ಆಟಿಟ್ಯುಡ್ ಯಾರ ಮನಸ್ಸನ್ನಾದರೂ ಸೆಳೆಯದೆ ಇರಲು ಸಾಧ್ಯವಿಲ್ಲ!

ಇದನ್ನೂ ಓದಿ John Cena: ‘ನೆವರ್‌ ಗೀವ್‌ ಅಪ್‌’ ಎಂದಿದ್ದ ಜಾನ್ ಸೀನ ರಸ್ಲಿಂಗ್ ವೃತ್ತಿಜೀವನಕ್ಕೆ ದಿಢೀರ್​ ವಿದಾಯ ಘೋಷಣೆ

ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಇಂದು(ಜುಲೈ 12) ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಜುಲೈ 13 ಮತ್ತು 14 ರಂದು ಎರಡು ದಿನಗಳ ಕಾಲ ವಿವಿಧ ಜನರಿಗೆ ಆರತಕ್ಷತೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹಲವು ರಾಜಕೀಯ, ಕೈಗಾರಿಕೆ, ಕ್ರೀಡಾ ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಕಳೆದ ವಾರ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ(Anant-Radhika sangeet ceremony) ಟೀಮ್ ಇಂಡಿಯಾದ ಹಲವು ಆಟಗಾರರು ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು. ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್​ ಧೋನಿ(MS Dhoni), ಹಾರ್ದಿಕ್​ ಪಾಂಡ್ಯ(Hardik Pandya), ಇಶಾನ್​ ಕಿಶನ್(ishan kishan) ಮತ್ತು ​ಕೃಣಾಲ್​ ಪಾಂಡ್ಯ(krunal pandya) ಸಮಾರಂಭದಲ್ಲಿ ಭಾಗಿಯಾಗಿರುವ ವಿಡಿಯೊ ವೈರಲ್​ ಆಗಿತ್ತು. ಇದೇ ವೇಳೆ ಟಿ20 ವಿಶ್ವಕಪ್​ ಗೆದ್ದ ನಾಯಕ ರೋಹಿತ್​ ಶರ್ಮ, ಉಯನಾಯಕ ಹಾರ್ದಿಕ್​ ಪಾಂಡ್ಯ ಮತ್ತು ಸೂರ್ಯಕುಮಾರ್​ ಯಾದವ್​ ಅವರನ್ನು ನೀತಾ ಅಂಬಾನಿ ವಿಶೇಷವಾಗಿ ಅಭಿನಂದಿಸಿದ್ದರು.

Continue Reading

ಕ್ರೀಡೆ

Team India Bowling Coach: ಮಾರ್ನೆ ಮಾರ್ಕೆಲ್​ ಟೀಮ್​ ಇಂಡಿಯಾದ ಬೌಲಿಂಗ್​ ಕೋಚ್​​?

Team India Bowling Coach: ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ.

VISTARANEWS.COM


on

Team India Bowling Coach
Koo

ಮುಂಬಯಿ: ಟೀಮ್​ ಇಂಡಿಯಾದ(Team India) ನೂತನ ಬೌಲಿಂಗ್​ ಕೋಚ್(Team India Bowling Coach)​ ಆಗಿ ಜಹೀರ್​ ಖಾನ್(Zaheer Khan)​ ಅಥವಾ ಲಕ್ಷ್ಮೀಪತಿ ಬಾಲಾಜಿ(Lakshmipathy Balaji) ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮುಖ್ಯ ಕೋಚ್​ ಗೌತಮ್​ ಗಂಭೀರ್(Gautam Gambhir)​ ಅವರು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್​(Morne Morkel) ಅವರನ್ನು ಬೌಲಿಂಗ್​ ಕೋಚ್​ ಆಗಿ ನೇಮಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮಾರ್ಕೆಲ್​ ಅವರು ಪಾಕಿಸ್ತಾನದ ಬೌಲಿಂಗ್‌ ಕೋಚ್‌ ಹುದ್ದೆಗೆ ಕಳೆದ ವರ್ಷ ರಾಜೀನಾಮೆ ನೀಡಿದ್ದರು. ಸದ್ಯ ಅವರು ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಕೆಲ್​, ಗಂಭೀರ್ ಜತೆ ಐಪಿಎಲ್​ನಲ್ಲಿ ಹಲವು ವರ್ಷ ಜತೆಯಾಗಿ ಆಡಿದ ಮತ್ತು ಕೋಚಿಂಗ್​ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇವರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸಹಾಯಕ ಕೋಚ್ ಆಗಿ ನೆದರ್ಲೆಂಡ್‌ನ ಮಾಜಿ ಕ್ರಿಕೆಟಿಗ ಡ್ಯಾನ್ ಟೆನ್ ಡೊಶ್ಚಾಟೆ ಅವರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬ್ಯಾಟಿಂಗ್​ ಕೋಚ್​ ಆಗಿ ಅಭಿಷೇಕ್ ನಾಯರ್ ಆಯ್ಕೆಯಾಗುವ ಸಾಧ್ಯತೆ ಇದೆ.

ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ. ಜುಲೈ 26, 27 ಹಾಗೂ 29 ರಂದು ಟಿ20 ಪಂದ್ಯಗಳು ನಡೆಯಲಿದೆ. ಟಿ20 ಪಂದ್ಯಗಳಿಗೆ ಪಲ್ಲೆಕೆಲ್ಲೆ ಆತಿಥ್ಯ ವಹಿಸಲಿದೆ. ಏಕದಿನ ಸರಣಿ ಆಗಸ್ಟ್​ 1, 4 ಹಾಗೂ 7 ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇದನ್ನೂ ಓದಿ Shahid Afridi: ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತ ತಂಡವನ್ನು ಪಾಕ್​ಗೆ ಕರೆತರುವ ಉಪಾಯ ಮಾಡಿದ ಮಾಜಿ ನಾಯಕ

ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಸೇರಿ ಕೆಲ ಆಟಗಾರರಿಗೆ ವಿಶ್ರಾಂತಿ ಸಿಗಲಿದೆ ಎಂದು ತಿಳಿದುಬಂದಿದೆ. ಏಕದಿನ ಸರಣಿಯಲ್ಲಿ ಕೆ.ಎಲ್​ ರಾಹುಲ್, ಟಿ20 ಸರಣಿಯಲ್ಲಿ ಹಾರ್ದಿಕ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

ಕೋಚ್​ ಹುದ್ದೆಗೆ ಗಂಭೀರ್​ ಅವರನ್ನು ಆಯ್ಕೆ ಮಾಡುವ ಮುನ್ನ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿವೆ.​

ಹೌದು ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಬಿಸಿಸಿಐ ಗಂಭೀರ್​ ಅವರನ್ನು ಕೋಚ್​ ಆಗಿ ನೇಮಕ ಮಾಡುವಾಗ ಕೊಹ್ಲಿಯನ್ನು ಒಂದು ಮಾತು ಕೂಡ ಕೇಳದೇ ಇರುವುದು ಕೊಹ್ಲಿ ಮತ್ತು ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Continue Reading

ಕ್ರೀಡೆ

Shahid Afridi: ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತ ತಂಡವನ್ನು ಪಾಕ್​ಗೆ ಕರೆತರುವ ಉಪಾಯ ಮಾಡಿದ ಮಾಜಿ ನಾಯಕ

Shahid Afridi: ನಾವು ನೀಡುವ ಆತಿಥ್ಯದಿಂದ ಭಾರತದ ಆತಿಥ್ಯವನ್ನೇ ಕೊಹ್ಲಿ ಮರೆಯಬೇಕು. ಅಷ್ಟರಮಟ್ಟಿಗೆ ನಾವು ಅವರನ್ನು ನೋಡಿಕೊಳ್ಳುತ್ತೇವೆ. ವಿರಾಟ್ ಯಾವಾಗ ಪಾಕಿಸ್ತಾನಕ್ಕೆ ಬರುತ್ತಾರೆ ಎಂದು ಇಲ್ಲಿನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎಂದು ಶಾಹಿದ್‌ ಅಫ್ರಿದಿ ಹೇಳಿದ್ದಾರೆ.

VISTARANEWS.COM


on

Shahid Afridi
Koo

ಕರಾಚಿ: ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy 2025) ಟೂರ್ನಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲಿದೆಯಾ?, ಭಾರತ ಪಂದ್ಯಗಳು ತಟಸ್ಥ ತಾಣದಲ್ಲಿ ನಡೆಯಲಿದೆಯಾ? ಎಂದು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶಾಹಿದ್‌ ಅಫ್ರಿದಿ(Shahid Afridi) ಅವರು ವಿರಾಟ್​ ಕೊಹ್ಲಿ(Virat Kohli) ಕುರಿತು ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಭಾರತ ತಂಡವನ್ನು ಹೇಗಾದರೂ ಪಾಕಿಗೆ ಕರೆತರಲು ಶತ ಪ್ರಯತ್ನ ಮಾಡುತ್ತಿದೆ. ಜತೆಗೆ ಕೆಲ ಮಾಜಿ ಆಟಗಾರರು ಭಾರತೀಯ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ, ಇದೀಗ ಈ ಸಾಲಿಗೆ ಅಫ್ರಿದಿ ಕೂಡ ಸೇರಿಕೊಂಡಿದ್ದಾರೆ. ಕೊಹ್ಲಿ ಬಗ್ಗೆ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಇದನ್ನೂ ಓದಿ Champions Trophy 2025: ಚಾಂಪಿಯನ್ಸ್​ ಟ್ರೋಫಿ ಹೈಬ್ರಿಡ್ ಮಾದರಿಗೆ ಒತ್ತಾಯಿಸಿದ ಬಿಸಿಸಿಐ

ಹೌದು, ಸಂರ್ದಶನವೊಂದರಲ್ಲಿ ಮಾತನಾಡಿದ ಅಫ್ರಿದಿ, ‘ಸಚಿನ್​ ತೆಂಡೂಲ್ಕರ್​ ಅವರಿಗೆ ಪಾಕಿಸ್ತಾನದಲ್ಲಿ ಇರುವ ಅಭಿಮಾನಿಗಳಂತೆ ವಿರಾಟ್​ ಕೊಹ್ಲಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ವಿಚಾರವನ್ನು ನಾನು ಮತ್ತೆ ಹೇಳಬೇಕೆಂದಿಲ್ಲ. ಏಕೆಂದರೆ ಈಗಾಗಲೇ ಕೊಹ್ಲಿ ಆಟವನ್ನು ನೋಡಲು ಪಾಕ್​ ಅಭಿಮಾನಿಗಳು ಸ್ಟ್ರೇಡಿಯಂನಲ್ಲಿ ಕಾಣಿಸಿಕೊಂಡ ಹಲವು ನಿದರ್ಶನಗಳಿವೆ. ಕೊಹ್ಲಿ ಚಾಂಪಿಯನ್ಸ್​ ಟ್ರೋಫಿ ಆಡಲು ನಮ್ಮ ದೇಶಕ್ಕೆ ಬರಬೇಕು ಎನ್ನುವುದು ನನ್ನ ಹಾಗು ಅವರ ಅಭಿಮಾನಿಗಳ ಬಯಕೆಯಾಗಿದೆ” ಎಂದು ಹೇಳಿದರು.

“ನಾವು ನೀಡುವ ಆತಿಥ್ಯದಿಂದ ಭಾರತದ ಆತಿಥ್ಯವನ್ನೇ ಕೊಹ್ಲಿ ಮರೆಯಬೇಕು. ಅಷ್ಟರಮಟ್ಟಿಗೆ ನಾವು ಅವರನ್ನು ನೋಡಿಕೊಳ್ಳುತ್ತೇವೆ. ವಿರಾಟ್ ಯಾವಾಗ ಪಾಕಿಸ್ತಾನಕ್ಕೆ ಬರುತ್ತಾರೆ ಎಂದು ಇಲ್ಲಿನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ” ಎಂದು ಹೇಳಿದ್ದಾರೆ.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಇದಾದ ಬಳಿಕ ಪಾಕ್​ಗೆ ಭಾರತ ತಂಡ ಕಾಲಿಟ್ಟಿಲ್ಲ.

 ಭಾರತದ ಪಂದ್ಯಗಳು ಮಾತ್ರ ಸಾಗರೋತ್ತರ ತಟಸ್ಥ ಸ್ಥಳದಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿಗೆ ಮನವಿ ಸಲ್ಲಿಸಿದೆ ಎಂದು ಎಎನ್​ಐ ವರದಿ ಮಾಡಿದೆ. ದುಬೈ ಅಥವಾ ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಐಸಿಸಿಗೆ ಕೇಳಿಕೊಂಡಿರುವುದಾಗಿ ವರದಿಯಾಗಿದೆ.

ಕಳೆದ ವರ್ಷ ಪಾಕ್​ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡವು ಪಾಕ್​ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್​ ಟ್ರೋಫಿಯನ್ನೂ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಿ ಭಾರತದ ಪಂದ್ಯಗಳನ್ನು ಪಾಕ್​ನಿಂದ ಹೊರಗೆ ನಡೆಸುವಂತೆ ಐಸಿಸಿಗೆ ಬಿಸಿಸಿಐ ಕೇಳಿಕೊಂಡಿರುವುದಾಗಿ ವರದಿಯಾಗಿದೆ.

Continue Reading
Advertisement
Prajwal Revanna Case
ಕರ್ನಾಟಕ26 seconds ago

Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿದ್ದ ಎಸ್‌ಐಟಿ ಅರ್ಜಿ ವಿಚಾರಣೆ 3 ವಾರ ಮುಂದೂಡಿಕೆ

Saina Nehwal
ಕ್ರೀಡೆ2 mins ago

Saina Nehwal: ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದ ಸೈನಾ ನೆಹ್ವಾಲ್‌

Kangana Ranaut
ದೇಶ14 mins ago

Kangana Ranaut: ನನ್ನನ್ನು ಭೇಟಿಯಾಗಲು ಬರುವವರು ಆಧಾರ್‌ ಕಾರ್ಡ್‌ ತನ್ನಿ ಎಂದ ಕಂಗನಾ ರಣಾವತ್;‌ ಏನ್‌ ದೌಲತ್ತು ನೋಡಿ!

Shiva Rajkumar Starrer 45 Movie Poster Released By Rishab Shetty
ಸ್ಯಾಂಡಲ್ ವುಡ್14 mins ago

Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ʻ45ʼ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ!

Anant Radhika Wedding
ವಾಣಿಜ್ಯ17 mins ago

Anant Radhika Wedding: ನಿಶ್ಚಿತಾರ್ಥದಿಂದ ಮದುವೆಯವರೆಗೆ; ಹೀಗಿತ್ತು ಅಂಬಾನಿ ಮಗನ ಮದುವೆಯ ಗತ್ತು!

Fraud Case CCB police arrest fraudster
ಕರ್ನಾಟಕ19 mins ago

Fraud Case : ‌ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

Akshay Kumar tests positive for COVID-19 will miss Anant Ambani wedding
ಬಾಲಿವುಡ್37 mins ago

Akshay Kumar:  ಅಕ್ಷಯ್ ಕುಮಾರ್‌ಗೆ ಕೋವಿಡ್‌ ಪಾಸಿಟಿವ್; ಅನಂತ್ ಅಂಬಾನಿ ಮದುವೆಗೆ ಗೈರು!

Anant Radhika Wedding
ವಾಣಿಜ್ಯ39 mins ago

Anant Radhika Wedding: ಮಗನ ಮದುವೆ ಸಂದರ್ಭದಲ್ಲಿ ಕಾಶಿಗೆ ಗೌರವ; ನೀತಾ ಅಂಬಾನಿಯ ಈ ವಿಡಿಯೊ ನೋಡಿ

Arvind Kejriwal
ದೇಶ46 mins ago

Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಶಾಕ್‌! ಜು.25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Drowned in water
ಕಲಬುರಗಿ57 mins ago

Drowned In Water : ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಇಳಿದಾಗ ಕೊಚ್ಚಿ ಹೋದ ಯುವತಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effect
ಮಳೆ23 hours ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ3 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ3 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ3 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ4 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 days ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ5 days ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌