Site icon Vistara News

WPL 2024 : ಆರ್​ಸಿಬಿ ಚಾಂಪಿಯನ್ ಆದ ಬಳಿಕ ಸೃಷ್ಟಿಯಾದ ಕೆಲವು ಮೀಮ್ಸ್​ಗಳು ಇಲ್ಲಿವೆ

RCB Women

ನವದೆಹಲಿ : ಮಹಿಳಾ ಪ್ರೀಮಿಯರ್ ಲೀಗ್ (WPL 2024) ಟೂರ್ನಿಯ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿತು. ಈ ಮೂಲಕ ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಆರ್​​ಸಿಬಿ ಇತಿಹಾಸ ಸೃಷ್ಟಿಸಿತು. ಈ ಗೆಲುವು ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಅಚ್ಚರಿಗೆ ಗೆಲುವಾಗಿತ್ತು. ಆದರೆ, ಟ್ರೋಫಿ ಗೆದ್ದ ಬಳಿಕ ಅವರೆಲ್ಲರ ಸಂಭ್ರಮ ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಇದೇ ವೇಳೆ ಸೋಶಿಯಲ್​ ಮೀಡಿಯಾಗಳಲ್ಲಿ ಆರ್​​ಸಿಬಿ ಗೆಲುವಿನ ಕುರಿತ ಕೆಲವು ಮೀಮ್ಸ್​ಗಳು ಹರಿದವು ಅವುಗಳನ್ನು ಈ ಕೆಳಗೆ ನೀಡಲಾಗಿದೆ.

ಪಂದ್ಯದಲ್ಲಿ ಏನಾಯಿತು?

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ತಂಡ 19.3 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 115 ರನ್ ಬಾರಿಸಿ 8 ವಿಕೆಟ್​ ವಿಜಯ ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ ತಂಡ ಉತ್ತಮ ಆರಂಭ ಪಡೆದ ಹೊರತಾಗಿಯೂ ಸರಾಸರಿ ರನ್​ಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿತು. ಆದಾಗ್ಯೂ ನಿಧಾನವಾಗಿ ರನ್​ ಪೇರಿಸಿ ಗೆಲುವು ಸಾಧಿಸಿದರು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಆರಂಭ ಪಡೆಯಿತು. ಕೇವಲ 71. ಓವರ್​ಗಳಲ್ಲಿ 64 ರನ್ ಬಾರಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 27 ಎಸೆಗಳಲ್ಲಿ 44 ರನ್ ಬಾರಿಸಿ ಮಿಂಚಿದರು. ಆದರೆ, ಅಬ್ಬರದ ಆಟ ಮುಂದುವರಿಸಲು ಹೋದ ಅವರು ಮೊಲಿನೆಕ್ಸ್ ಎಸೆತಕ್ಕೆ ಶ್ರೇಯಾಂಕ ಪಾಟೀಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಡೆಲ್ಲಿ ಸತತವಾಗಿ ಎರಡು ವಿಕೆಟ್​ಗಳನ್ನು ಕಳೆದುಕೊಂಡಿತು. ಉತ್ತಮ ಫಾರ್ಮ್​ನಲ್ಲಿದ್ದ ಜೆಮಿಮಾ ರೋಡ್ರಿಗಸ್​ ಹಾಗೂ ಅಲೈಸ್​ ಕಾಪ್ಸಿ ಶೂನ್ಯಕ್ಕೆ ಔಟಾದರು. ಮೊಲಿನೆಕ್ಸ್ ಒಂದೇ ಓವರ್​ನಲ್ಲಿ 3 ವಿಕೆಟ್​ ಪಡೆಯುವ ಮೂಲಕ ಡೆಲ್ಇಯ ಅಬ್ಬರ ಕಡಿಮೆ ಮಾಡಿದರು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಚಾಂಪಿಯನ್​ ಆರ್​​ಸಿಬಿ ಮಹಿಳೆಯರು ಯುವ ಅಥ್ಲೀಟ್​​ಗಳಿಗೆ ಪ್ರೇರಣೆ

ಬಳಿಕ ಮರಿಜ್ನೆ ಕಾಪ್​ (8) ಹಾಗೂ ಜೆಸ್ ಜೊನಾಸೆನ್​ 3 ರನ್ ಬಾರಿಸಿದರು. ರಾಧಾ ಯಾದವ್​ ನಂತರದಲ್ಲಿ 9 ಎಸೆತಕ್ಕೆ 12 ರನ್ ಬಾರಿಸಿದರು. ಮಿನ್ನು ಮಣಿ 5 ಹಾಗೂ ಅರುಂಧತಿ ರೆಡ್ಡಿ 10, ಶಿಖಾ ಪಾಂಡೆ 5 ರನ್ ಬಾರಿಸಿದರು. ಆರ್​ಸಿಬಿ ಪರ ಶ್ರೇಯಾಂಕ ಪಾಟೀಲ್​ 12 ರನ್ ನೀಡಿ 4 ವಿಕೆಟ್​ ಕಬಳಿಸಿದರೆ ಸೋಫಿ ಮೊಲಿನೆಕ್ಸ್​ 20 ರನ್​ ನೀಡಿ 3 ವಿಕೆಟ್​ ತಮ್ಮದಾಗಿಸಿಕೊಂಡರು. ಆಶಾ ಶೋಭನಾ ಕೂಡ 14 ರನ್​ಗೆ 2 ವಿಕೆಟ್​ ಉರುಳಿಸಿದರು.

ಗೆಲುವಿನ ಬಳಿಕ ಕಂಡ ಕೆಲವು ಮೀಮ್ಸ್​ಗಳು ಈ ರೀತಿ ಇವೆ

Exit mobile version