ಬೆಂಗಳೂರು: ಮಹಿಳಾ ಕ್ರಿಕೆಟಿಗರ ವರ್ಣರಂಜಿತ ಟಿ20 ಕ್ರಿಕೆಟ್ ಲೀಗ್ ಡಬ್ಲ್ಯೂಪಿಎಲ್ (WPL 2024) 2ನೇ ಆವೃತ್ತಿಗೆ ನಾಳೆ ಚಾಲನೆ ಸಿಗಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(m chinnaswamy stadium) ಬಾಲಿವುಡ್ ಗ್ಲ್ಯಾಮರ್‌ನೊಂದಿಗೆ ಉದ್ಘಾಟನ ಸಮಾರಂಭ ನಡೆಯಲಿದೆ. ಟೂರ್ನಿಯ ವೇಳಾಪಟ್ಟಿ, ತಂಡಗಳು, ಸ್ವರೂಪ ಮತ್ತು ನಾಯಕಿಯರ ಕುರಿತ ಸಂಪೂರ್ಣ ಮಾಹಿತಿ ಇಂತಿದೆ.
ಮಾರ್ಚ್ 17ಕ್ಕೆ ಫೈನಲ್
ಕಳೆದ ವರ್ಷದ ಸಂಪೂರ್ಣ ಕೂಟವು ಮುಂಬೈನಲ್ಲಿ ನಡೆದಿದ್ದು, ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.
Lights 💡
— Women's Premier League (WPL) (@wplt20) February 21, 2024
Camera 📸
And a whole lot of fun as the five Captains assembled for the Captains Day briefing.#TATAWPL season 2 starts on February 23.
Get your tickets NOW at https://t.co/jP2vYAWukG! pic.twitter.com/6sAfod4QLV
ಮೀಸಲು ದಿನ ಇದೆಯೇ?
ಫೈನಲ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಮಳೆ ಬಂದು ಸಮಸ್ಯೆಯಾದರೆ ಮೀಸಲು ದಿನ ಇರಲಿದೆ. ಆದರೆ ಲೀಗ್ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಪಂದ್ಯ ಪೂರ್ಣಗೊಳ್ಳಲಿದ್ದರೆ ಉಭಯ ತಂಡಗಳಿಗೂ ಸಮಾನ ಅಂಕ ಹಂಚಲಾಗುವುದು.
ಇದನ್ನೂ ಓದಿ WPL 2024: ಡಬ್ಲ್ಯುಪಿಎಲ್ ಉದ್ಘಾಟನೆಗೆ ಬಾಲಿವುಡ್ ನಟ ಶಾರುಖ್ ಖಾನ್ ಪ್ರಧಾನ ಆಕರ್ಷಣೆ
ಸ್ವರೂಪದಲ್ಲಿ ಬದಲಾವಣೆ ಇಲ್ಲ!
2ನೇ ಆವೃತ್ತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ಅದೇ ಸ್ವರೂಪದಲ್ಲಿ ಟೂರ್ನಿ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ತಂಡಗಳು ಪ್ಲೇ ಆಫ್ ಗಳಿಗೆ ಅರ್ಹತೆ ಪಡೆಯುತ್ತವೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ನಲ್ಲಿ ಆಡಲಿವೆ.
ತಂಡಗಳು ಮತ್ತು ನಾಯಕಿಯರು
ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್), ಸ್ಮೃತಿ ಮಂಧಾನ (ಆರ್‌ಸಿಬಿ), ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್), ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್), ಮತ್ತು ಬೆತ್ ಮೂನಿ (ಗುಜರಾತ್ ಜೈಂಟ್ಸ್).
5️⃣ Captains. 1️⃣ Goal 🏆
— Women's Premier League (WPL) (@wplt20) February 21, 2024
The stage is set for #TATAWPL 2024 🏟️ pic.twitter.com/XkhMWXMXmd
ಡಬ್ಲ್ಯುಪಿಎಲ್ 2024ರ ಪೂರ್ಣ ತಂಡಗಳು
ಆರ್‌ಸಿಬಿ: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವಾರೆಹಮ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಶುಭಾ ವಾರೇಹಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್.
ಡೆಲ್ಲಿ ಕ್ಯಾಪಿಟಲ್ಸ್ : ಜೆಮಿಮಾ ರೋಡ್ರಿಗಸ್, ಲಾರಾ ಹ್ಯಾರಿಸ್, ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಸ್ನೇಹಾ ದೀಪ್ತಿ, ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಸ್ ಜೊನಾಸೆನ್, ಮರಿಜಾನ್ನೆ ಕಪ್, ಮಿನ್ನಿ ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ತನಿಯಾ ಭಾಟಿಯಾ, ಟೈಟಾಸ್ ಸಾಧು, ಅನ್ನಾಪರ್ ಮೊನ್‌ಡಾಲ್ ಯಾದವ್, ಪೂನಮ್ ಸುಥರ್ ಯಾದವ್, ಅಶ್ವನಿ ಕುಮಾರಿ.
ಮುಂಬೈ ಇಂಡಿಯನ್ಸ್ : ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮನ್ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹೇಲಿ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್, ಜಿಂಟಿಮಣಿ ಕಲಿತಾ, ನಟಾಲಿ ಸೀವರ್, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಯಾಸ್ತಿಕಾ ಭಾಟಿಯಾ, ಸೈಕಾ ಇಶಾಕ್, ಶಬ್ನಿಮ್ ಇಸ್ಮಾಯಿಲ್, ಎಸ್ ಸಜನಾ, ಅಮನದೀಪ್ ಕೌರ್, ಫಾತಿಮಾ ಜಾಫರ್, ಕೀರ್ತನಾ ಬಾಲಕೃಷ್ಣನ್.
ಗುಜರಾತ್ ಜೈಂಟ್ಸ್ : ಆ್ಯಶ್ಲೇ ಗಾರ್ಡನರ್, ಬೆತ್ ಮೂನಿ (ನಾಯಕಿ), ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್, ಕ್ಯಾಥ್ರಿನ್ ಚೀಟ್ಲ್, ಕ್ಯಾಥ್ರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.
ಯುಪಿ ವಾರಿಯರ್ಸ್ : ಅಲಿಸಾ ಹೀಲಿ (ನಾಯಕಿ), ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್ ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಗ್ರಾತ್, ಡೇನಿಯಲ್ ವ್ಯಾಟ್, ವೃಂದಾ ದಿನೇಶ್, ಪೂನಮ್ ಖೆನ್ನಾರ್, ಸೈಮಾ ಠಾಕೋರ್, ಗೌನ್ಹೆರ್ ಸುಲ್ತಾನಾ.
ಪೂರ್ಣ ವೇಳಾಪಟ್ಟಿ
ಫೆಬ್ರವರಿ 23- ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು
ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು
ಫೆಬ್ರವರಿ 25- ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು
ಫೆಬ್ರವರಿ 26 -ಯುಪಿ ವಾರಿಯರ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು
ಫೆಬ್ರವರಿ 27- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್: ಬೆಂಗಳೂರು
ಫೆಬ್ರವರಿ 28- ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು
ಫೆಬ್ರವರಿ 29- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು
ಮಾರ್ಚ್ 1-ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್; ಬೆಂಗಳೂರು
ಮಾರ್ಚ್ 2-ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು
ಮಾರ್ಚ್ 3- ಗುಜರಾತ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು
ಮಾರ್ಚ್ 4- ಯುಪಿ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಬೆಂಗಳೂರು
ಮಾರ್ಚ್ 5 -ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ
ಮಾರ್ಚ್ 6 – ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ
ಮಾರ್ಚ್ 7 – ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ
ಮಾರ್ಚ್ 8 – ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ
ಮಾರ್ಚ್ 9-ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ
ಮಾರ್ಚ್ 10-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ
ಮಾರ್ಚ್ 11- ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ
ಮಾರ್ಚ್ 12- ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು; ದೆಹಲಿ
ಮಾರ್ಚ್ 13-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ
ಮಾರ್ಚ್ 15 -ಎಲಿಮಿನೇಟರ್: ದೆಹಲಿ
ಮಾರ್ಚ್ 17 -ಫೈನಲ್: ದೆಹಲಿ