ಬೆಂಗಳೂರು: ಕರ್ನಾಟಕ ಮೂಲದ, ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ(veda krishnamurthy) ಅವರು ಕೊನೆಗೂ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024ರ ಹರಾಜಿನಲ್ಲಿ(WPL Auction 2024) ಸೋಲ್ಡ್ ಆಗಿದ್ದಾರೆ. ಅವರನ್ನು ಗುಜರಾತ್ ಜೈಂಟ್ಸ್ ತಂಡ ಮೂಲ ಬೆಲೆ 30 ಲಕ್ಷ ರೂ. ನೀಡಿ ಖರೀದಿ ಮಾಡಿದೆ.
ಆರಂಭಿಕ ಹಂತದ ಬಿಡ್ಡಿಂಗ್ನಲ್ಲಿ ಅವರು ಅನ್ಸೋಲ್ಡ್ ಆಗಿದ್ದರು. ಬಳಿಕ ದ್ವಿತೀಯ ಸುತ್ತಿನ ಬಿಡ್ಡಿಂಗ್ನಲ್ಲಿ ಅವರನ್ನು ಗುಜರಾತ್ ಜೈಂಟ್ಸ್ ತನ್ನ ಪಾಳಯಕ್ಕೆ ಸೇರಿಸಿಕೊಂಡಿತು. ಮೊದಲ ಹಂತದಲ್ಲಿ ಖರೀದಿ ಮಾಡದಿದ್ದಾಗ ನಿರಾಸೆಗೊಂಡಿದ್ದ ಅವರು ಬಳಿಕದ ಸುತ್ತಿನಲ್ಲಿ ಖರೀದಿಯಾದ ಕಾರಣ ಸಂತಸಗೊಂಡಿದ್ದಾರೆ. ಕ್ರಿಕೆಟ್ಗೆ ಮರಳುವ ಅವರ ಕನಸು ಮತ್ತೆ ಚಿಗುರೊಡೆದಿದೆ.
2011 ರಲ್ಲಿ ಭಾರತ ವನಿತಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ ಅವರು ಟೀಮ್ ಇಂಡಿಯಾ ಪರ 48 ಏಕ ದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೇ ವರ್ಷ ಅವರು ಕರ್ನಾಟಕದ ಮಾಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಸಪ್ತಪದಿ ತುಳಿದಿದ್ದರು.
Indian batter Veda Krishnamurthy, attracted a bid of INR 30 L from Gujarat Giants.
— Female Cricket (@imfemalecricket) December 9, 2023
Gujarat Giants fans, how's the josh? 🥳#CricketTwitter | #WPLAuction | #WPL2024 pic.twitter.com/iEgCvAPFke
ಉತ್ತಮ ಫೀಲ್ಡರ್
31 ವರ್ಷದ ವೇದಾ ಕೃಷ್ಣಮೂರ್ತಿ ಚಿಕ್ಕಮಗಳೂರಿನವರಾಗಿದ್ದು, 18ರ ಹರೆಯದಲ್ಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವೇದಾ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಅತ್ಯುತ್ತಮ ಫೀಲ್ಡರ್ ಆಗಿದ್ದಾರೆ. 2020ರ ಟಿ20 ವಿಶ್ವಕಪ್ ವೇಳೆ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಸಲ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಈಗ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆಡುವ ಮೂಲಕ ಮತ್ತೆ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ WPL Auction 2024: ಹರಾಜಿನ ಬಳಿಕ ಎಲ್ಲ 5 ತಂಡಗಳ ಆಟಗಾರ್ತಿಯರ ಪಟ್ಟಿ ಹೀಗಿದೆ
Veda Krishnamurthy sold for INR 30 lakhs to Gujarat Giants.#WPL #WPLAuction #GG #GujaratGiants #VedaKrishnamurthy #WomensCricket #CricketTwitter pic.twitter.com/QI0suOroGp
— The Sportz (@TheSportzIndia) December 9, 2023
ಗುಜರಾತ್ ಜೈಂಟ್ಸ್ ತಂಡ
ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.
ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು
ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಹಾಗೂ ಭಾರತದ ಅನ್ಕ್ಯಾಪ್ಡ್ ಆಟಗಾರ್ತಿ ಕಾಶ್ವಿ ಗೌತಮ್ ಈ ಬಾರಿಯ ಬಿಡ್ಡಿಂಗ್ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು. ಉಭಯ ಆಟಗಾರ್ತಿಯರರು ತಲಾ 2 ಕೋಟಿ ಮೊತ್ತಕ್ಕೆ ಸೇಲ್ ಆದರು. ಕರ್ನಾಟಕದ ವೃಂದಾ ದಿನೇಶ್ 1.3 ಕೋಟಿ ರೂ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1.2 ಕೋಟಿ ರೂ., ಆಸ್ಟ್ರೇಲಿಯಾದ ಯುವ ಆಟಗಾರ್ತಿ ಫೋಬಿ ಲಿಚ್ ಫೀಲ್ಡ್ 1 ಕೋಟಿ ರೂ.ಗೆ ಸೇಲ್ ಆದರು.
Here is the final set of players who were bought in the final round of WPL 2024 auction.#AshwaniKumari #SophieMolineux #TarannumPathan #WPL #WPL2024 #WPL2024Auction #WPLAuction #WomensPremierLeague #Cricket #SBM pic.twitter.com/YdjZbL7JJU
— SBM Cricket (@Sbettingmarkets) December 9, 2023