ಬೆಂಗಳೂರು: ಶುಕ್ರವಾರ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2ನೇ ಆವೃತ್ತಿಯ ಡಬ್ಲ್ಯುಪಿಎಲ್(WPL 2024) ಟೂರ್ನಿಯ 8ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್(UP Warriorz) 6 ವಿಕೆಟ್ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(WPL Points Table) ಒಂದು ಸ್ಥಾನ ಮೇಲೇರಿದೆ. ಸದ್ಯ ಮೂರನೇ ಸ್ಥಾನ ಪಡೆದುಕೊಂಡಿದೆ.
ಯುಪಿ ಗೆಲುವಿನಿಂದಾಗಿ ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್(mumbai indians) ಒಂದು ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದೆ. ಹ್ಯಾಟ್ರಿಕ್ ಸೋಲಿಗೆ ತುತ್ತಾದ ಗುಜರಾತ್ ಜೈಂಟ್ಸ್ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.
ಸದ್ಯ 3 ಪಂದ್ಯಗಳನ್ನಾಡಿ 2 ಗೆಲುವು 1 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿದ್ದರೆ, ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಡೆಲ್ಲಿ ಮತ್ತು ಆರ್ಸಿಬಿ ಸಮಾನ 4 ಅಂಕ ಹೊಂದಿದ್ದರೂ ಕೂಡ ರನ್ ರೇಟ್ನಲ್ಲಿ ಮುಂದಿರುವ ಕಾರಣ ಡೆಲ್ಲಿಗೆ ಅಗ್ರಸ್ಥಾನ ಲಭಿಸಿದೆ.
ಅಂಕ ಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಡೆಲ್ಲಿ ಕ್ಯಾಪಿಟಲ್ಸ್ | 3 | 2 | 1 | 4 (+1.271) |
ಆರ್ಸಿಬಿ | 3 | 2 | 1 | 4 (+0.705) |
ಯುಪಿ ವಾರಿಯರ್ಸ್ | 3 | 2 | 1 | 4 (+0.211) |
ಮುಂಬೈ ಇಂಡಿಯನ್ಸ್ | 3 | 2 | 1 | 4 (-0.182) |
ಗುಜರಾತ್ ಜೈಂಟ್ಸ್ | 3 | 0 | 3 | 0 (-1.995) |
ಹ್ಯಾಟ್ರಿಕ್ ಸೋಲು ಕಂಡ ಗುಜರಾತ್
ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಗುಜರಾತ್ ತಂಡ ಹ್ಯಾಟ್ರಿಕ್ ಸೋಲು ಕಂಡ ಅವಮಾನಕ್ಕೆ ಸಿಲುಕಿತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಜೈಂಟ್ಸ್ ಫೋಬೆ ಲಿಚ್ಫೀಲ್ಡ್(35) ಮತ್ತು ಆಶ್ಲೀಗ್ ಗಾರ್ಡನರ್(30) ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 142ರನ್ ಬಾರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ಆರಂಭದಲ್ಲಿ ನಾಟಕೀಯ ಕುಸಿತ ಕಂಡೂ ಕೂಡ ನಾಲ್ಕನೇ ಕ್ರಮಾಂಕದಲ್ಲಿ ಗ್ರೇಸ್ ಹ್ಯಾರಿಸ್ ನಡೆಸಿದ ಬಿರುಸಿನ ಬ್ಯಾಟಿಂಗ್ ಪ್ರದರ್ಶನದಿಂದ 15.4 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 143 ರನ್ ಬಾರಿಸಿ ಗೆಲುವು ದಾಖಲಿಸಿತು.
ಇದನ್ನೂ ಓದಿ WPL 2024: ಹ್ಯಾಟ್ರಿಕ್ ಸೋಲಿಗೆ ತುತ್ತಾದ ಗುಜರಾತ್; ಯುಪಿಗೆ 6 ವಿಕೆಟ್ ಜಯ
#UPW registered their second win on the trot with a 6-wicket win over #GG 👌👌
— Women's Premier League (WPL) (@wplt20) March 1, 2024
Match Highlights 🎥🔽 #TATAWPL | #UPWvGG
ಚೇಸಿಂಗ್ ವೇಳೆ 90 ರನ್ಗೆ 4 ಪ್ರಮುಖ ಆಟಗಾರ್ತಿಯರನ್ನು ಕಳೆದುಕೊಂಡ ಯುಪಿ ವಾರಿಯರ್ಸ್ ಒಂದು ಹಂತದಲ್ಲಿ ಆತಂಕಕ್ಕೆ ಸಿಲುಕಿತು. ಆದರೆ, ಕ್ರೀಸ್ ಕಚ್ಚಿ ನಿಂತಿದ್ದ ಹ್ಯಾರಿಸ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಸಿಕ್ಸರ್ ಮತ್ತು ಬೌಂಡರಿ ಸುರಿಮಳೆಗೈದು ಗುಜರಾತ್ ಬೌಲರ್ಗಳ ಬೆವರಿಳಿಸಿದರು. 33 ಎಸೆತಗಳನ್ನು ಎದುರಿಸಿ ನಿಂತ ಅವರು 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 60 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ದೀಪ್ತಿ ಶರ್ಮಾ ಅಜೇಯ 17 ರನ್ ಕಲೆಹಾಕಿದರು. ಗುಜರಾತ್ ಪರ ತನುಜಾ ಕನ್ವರ್ 2 ವಿಕೆಟ್ ಕಡೆವಿದರು.