WPL Points Table: ಯುಪಿ​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಮುಂಬೈ - Vistara News

ಕ್ರೀಡೆ

WPL Points Table: ಯುಪಿ​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಮುಂಬೈ

ಯುಪಿ ಗೆಲುವಿನಿಂದಾಗಿ ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಒಂದು ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದೆ

VISTARANEWS.COM


on

Sophie Ecclestone
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶುಕ್ರವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ 2ನೇ ಆವೃತ್ತಿಯ ಡಬ್ಲ್ಯುಪಿಎಲ್(WPL 2024)​ ಟೂರ್ನಿಯ 8ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್(UP Warriorz)​ 6 ವಿಕೆಟ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(WPL Points Table) ಒಂದು ಸ್ಥಾನ ಮೇಲೇರಿದೆ. ಸದ್ಯ ಮೂರನೇ ಸ್ಥಾನ ಪಡೆದುಕೊಂಡಿದೆ.

ಯುಪಿ ಗೆಲುವಿನಿಂದಾಗಿ ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್(mumbai indians)​ ಒಂದು ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದೆ. ಹ್ಯಾಟ್ರಿಕ್​ ಸೋಲಿಗೆ ತುತ್ತಾದ ಗುಜರಾತ್​​ ಜೈಂಟ್ಸ್ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

​ಸದ್ಯ 3 ಪಂದ್ಯಗಳನ್ನಾಡಿ 2 ಗೆಲುವು 1 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಅಗ್ರಸ್ಥಾನದಲ್ಲಿದ್ದರೆ, ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಡೆಲ್ಲಿ ಮತ್ತು ಆರ್​ಸಿಬಿ ಸಮಾನ 4 ಅಂಕ ಹೊಂದಿದ್ದರೂ ಕೂಡ ರನ್​ ರೇಟ್​ನಲ್ಲಿ ಮುಂದಿರುವ ಕಾರಣ ಡೆಲ್ಲಿಗೆ ಅಗ್ರಸ್ಥಾನ ಲಭಿಸಿದೆ.

ಅಂಕ ಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​3214 (+1.271)
ಆರ್​ಸಿಬಿ​3214 (+0.705)
ಯುಪಿ ವಾರಿಯರ್ಸ್​​3214 (+0.211)
ಮುಂಬೈ ಇಂಡಿಯನ್ಸ್​​3214 (-0.182)
ಗುಜರಾತ್​ ಜೈಂಟ್ಸ್​3030 (-1.995)

ಹ್ಯಾಟ್ರಿಕ್​ ಸೋಲು ಕಂಡ ಗುಜರಾತ್​


ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಗುಜರಾತ್​ ತಂಡ ಹ್ಯಾಟ್ರಿಕ್​ ಸೋಲು ಕಂಡ ಅವಮಾನಕ್ಕೆ ಸಿಲುಕಿತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಜೈಂಟ್ಸ್​ ಫೋಬೆ ಲಿಚ್ಫೀಲ್ಡ್(35) ಮತ್ತು ಆಶ್ಲೀಗ್ ಗಾರ್ಡನರ್(30) ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 142ರನ್ ಬಾರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡ ಆರಂಭದಲ್ಲಿ ನಾಟಕೀಯ ಕುಸಿತ ಕಂಡೂ ಕೂಡ ನಾಲ್ಕನೇ ಕ್ರಮಾಂಕದಲ್ಲಿ ಗ್ರೇಸ್​ ಹ್ಯಾರಿಸ್ ನಡೆಸಿದ ಬಿರುಸಿನ ಬ್ಯಾಟಿಂಗ್​ ಪ್ರದರ್ಶನದಿಂದ 15.4 ಓವರ್​ನಲ್ಲಿ 4 ವಿಕೆಟ್​ ಕಳೆದುಕೊಂಡು 143 ರನ್ ಬಾರಿಸಿ ಗೆಲುವು ದಾಖಲಿಸಿತು.

ಇದನ್ನೂ ಓದಿ WPL 2024: ಹ್ಯಾಟ್ರಿಕ್​ ಸೋಲಿಗೆ ತುತ್ತಾದ ಗುಜರಾತ್; ಯುಪಿಗೆ 6 ವಿಕೆಟ್​ ಜಯ

ಚೇಸಿಂಗ್​ ವೇಳೆ 90 ರನ್​ಗೆ 4 ಪ್ರಮುಖ ಆಟಗಾರ್ತಿಯರನ್ನು ಕಳೆದುಕೊಂಡ ಯುಪಿ ವಾರಿಯರ್ಸ್ ಒಂದು ಹಂತದಲ್ಲಿ​ ಆತಂಕಕ್ಕೆ ಸಿಲುಕಿತು. ಆದರೆ, ಕ್ರೀಸ್​ ಕಚ್ಚಿ ನಿಂತಿದ್ದ ಹ್ಯಾರಿಸ್ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಸಿಕ್ಸರ್​ ಮತ್ತು ಬೌಂಡರಿ ಸುರಿಮಳೆಗೈದು ಗುಜರಾತ್​ ಬೌಲರ್​ಗಳ ಬೆವರಿಳಿಸಿದರು. 33 ಎಸೆತಗಳನ್ನು ಎದುರಿಸಿ ನಿಂತ ಅವರು 9 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 60 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ದೀಪ್ತಿ ಶರ್ಮಾ ಅಜೇಯ 17 ರನ್​ ಕಲೆಹಾಕಿದರು. ಗುಜರಾತ್​ ಪರ ತನುಜಾ ಕನ್ವರ್ 2 ವಿಕೆಟ್​ ಕಡೆವಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

Match Fixing: ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಅವರ ವಿರುದ್ಧ ಅಟಾರ್ನಿ ಜನರಲ್ ಇಲಾಖೆ ಕೊಲಂಬೊ ಹೈಕೋರ್ಟ್​ನಲ್ಲಿ ದೋಷಾರೋಪಗಳ ಪಟ್ಟಿ ಸಲ್ಲಿಸಿದೆ. ವಿಶ್ವದಾದ್ಯಂತದ ಕೆಲವು ಪ್ರಮುಖ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಬಗ್ಗೆ ಅನುಮಾನಗಳು ವ್ಯಕ್ತಗೊಂಡಿವೆ.

VISTARANEWS.COM


on

Match Fixing
Koo

ಬೆಂಗಳೂರು: ಹಿರಿಯ ಕ್ರಿಕೆಟಿಗರನ್ನು ಒಳಗೊಂಡಿರುವ ಲೆಜೆಂಡ್ಸ್​ ಕ್ರಿಕೆಟ್​ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ (Match Fixing) ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಲೆಜೆಂಡ್ಸ್ ಕ್ರಿಕೆಟ್ ಲೀಗ್ 2024 ರ ತಂಡದ ವ್ಯವಸ್ಥಾಪಕ ಯೊನಿ ಪಟೇಲ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಲಾಗಿದೆ. ಶ್ರೀಲಂಕಾದ ಕೊಲಂಬೊ ಹೈಕೋರ್ಟ್​​ನಲ್ಲಿ ಈಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನ್ಯೂಜಿಲೆಂಡ್​ನ ಮಾಜಿ ಆಟಗಾರ ನೀಲ್ ಬ್ರೂಮ್ ಮತ್ತು ಶ್ರೀಲಂಕಾದ ಮಾಜಿ ಆಟಗಾರ ಉಪುಲ್ ತರಂಗ ನೀಡಿದ ದೂರಿನ ನಂತರ ಈ ತನಿಖೆ ಆರಂಭಗೊಂಡಿದೆ.

ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಅವರ ವಿರುದ್ಧ ಅಟಾರ್ನಿ ಜನರಲ್ ಇಲಾಖೆ ಕೊಲಂಬೊ ಹೈಕೋರ್ಟ್​ನಲ್ಲಿ ದೋಷಾರೋಪಗಳ ಪಟ್ಟಿ ಸಲ್ಲಿಸಿದೆ. ವಿಶ್ವದಾದ್ಯಂತದ ಕೆಲವು ಪ್ರಮುಖ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಬಗ್ಗೆ ಅನುಮಾನಗಳು ವ್ಯಕ್ತಗೊಂಡಿವೆ.

ಮಾರ್ಚ್ 8 ರಿಂದ ಮಾರ್ಚ್ 19 ರವರೆಗೆ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಏಳು ತಂಡಗಳನ್ನು ಒಳಗೊಂಡ ಪಂದ್ಯಾವಳಿ ನಡೆದಿತ್ತು. ಬ್ರೂಮ್ ಪಂಜಾಬ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದರೆ, ಉಪುಲ್​ ತರಂಗ ಕ್ಯಾಂಡಿ ಸ್ಯಾಂಪ್ ಆರ್ಮಿ ತಂಡದ ಭಾಗವಾಗಿದ್ದರು. ಪಂದ್ಯಗಳನ್ನು ಫಿಕ್ಸ್ ಮಾಡುವಂತೆ ಯೊನಿ ಪಟೇಲ್ ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಇಬ್ಬರೂ ಆರೋಪಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಪ್ರಕರಣವನ್ನು ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕೈಗೆತ್ತಿಕೊಂಡಾಗ ಅಟಾರ್ನಿ ಜನರಲ್ ಪರವಾಗಿ ಹಾಜರಾದ ಹಿರಿಯ ರಾಜ್ಯ ವಕೀಲರು ಈ ವಿಷಯವನ್ನು ಬಹಿರಂಗಪಡಿಸಿದರು. ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರ ತಂಡದ ವ್ಯವಸ್ಥಾಪಕ ಯೊನಿ ಪಟೇಲ್ ವಿರುದ್ಧ ದೋಷಾರೋಪ ಸಲ್ಲಿಕೆಯಾಗಿದೆ.

ಉದ್ಘಾಟನೆ ಮತ್ತು ಫೈನಲ್ ಹೊರತುಪಡಿಸಿ, ಪ್ರತಿ ದಿನವೂ ಡಬಲ್ ಹೆಡರ್ ಆಗಿತ್ತು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ಕಿಂಗ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಯಾರ್ಕ್ ಸೂಪರ್ ಸ್ಟಾರ್ ಸ್ಟ್ರೈಕರ್ಸ್ ತಂಡವನ್ನು 20 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

ಈ ಪಂದ್ಯಾವಳಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ, ಕ್ರಿಸ್ ಗೇಲ್, ರಾಸ್ ಟೇಲರ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಮ್ಯಾಟ್ ಪ್ರಿಯರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಡೇನಿಯಲ್ ಕ್ರಿಶ್ಚಿಯನ್ ಮತ್ತು ಮೊಹಮ್ಮದ್ ಇರ್ಫಾನ್ ಅವರಂತಹ ಅಂತರರಾಷ್ಟ್ರೀಯ ಕ್ರಿಕೆಟ್​​ನ ಪ್ರಮುಖರು ಭಾಗವಹಿಸಿದ್ದರು.

ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸಮಯದಲ್ಲಿ ಏನಾಯಿತು?

ತನಿಖೆಯ ಪ್ರಕಾರ, ಫಿಕ್ಸರ್ ಕಳಪೆ ಪ್ರದರ್ಶನ ನೀಡಲು ಮತ್ತು ಪಂದ್ಯದ ಫಲಿತಾಂಶವನ್ನು ಮಾರ್ಪಡಿಸಲು ಹಣದ ಪ್ರಸ್ತಾಪಗಳೊಂದಿಗೆ ಆಟಗಾರರನ್ನು ಸಂಪರ್ಕಿಸಿದ್ದ ಏತನ್ಮಧ್ಯೆ, ಯೊನಿ ಮತ್ತು ಎಲ್​​ಇಎಲ್​​ನ ಮತ್ತೊಬ್ಬ ತಂಡದ ವ್ಯವಸ್ಥಾಪಕ ಪಿ ಆಕಾಶ್ ಶ್ರೀಲಂಕಾವನ್ನು ತೊರೆಯದಂತೆ ಈಗಾಗಲೇ ಪ್ರಯಾಣ ನಿರ್ಬಂಧಿಸಲಾಗಿದೆ.

ಲೆಜೆಂಡ್ಸ್ ಕ್ರಿಕೆಟ್ ಲೀಗ್ ಬಗ್ಗೆ

ಪಂದ್ಯಾವಳಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್​​ನ ಏಳು ತಂಡಗಳು ಭಾಗವಹಿಸಿದ್ದವು. ಎಲ್ಲಾ ಪಂದ್ಯಗಳು ಮಾರ್ಚ್ 8 ರಿಂದ 19 ರವರೆಗೆ ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದವು.

Continue Reading

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ಮುಹೂರ್ತ ಫಿಕ್ಸ್‌​; ಈ ದಿನ ಘೋಷಣೆ

T20 World Cup 2024: ಸದ್ಯಕ್ಕೆ ಆರಂಭಿಕ ಸ್ಥಾನಕ್ಕೆ ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​ ಮತ್ತು ಅಭಿಷೇಕ್​ ಶರ್ಮ, ಆಲ್​ರೌಂಡರ್​ ಕೋಟಾದಲ್ಲಿ ಶಿವಂ ದುಬೆ ಮತ್ತು ಹಾರ್ದಿಕ್​ ಪಾಂಡ್ಯ ನಡುವೆ ತೀವ್ರ ಪೈಪೋಟಿ ಇದೆ. ರೋಹಿತ್​ ಶರ್ಮ ಜತೆ ಕೊಹ್ಲಿ ಇನಿಂಗ್ಸ್​ ಆರಂಭಿಸಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

VISTARANEWS.COM


on

T20 World Cup 2024
Koo

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್ ಜಂಟಿ ಆತಿಥ್ಯದಲ್ಲಿ ಜೂನ್​ 1 ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ತಂಡ ಪ್ರಕಟಿಸಲು ಮೇ 1 ಅಂತಿಮ ದಿನವಾಗಿದೆ. ಹೀಗಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 20 ದೇಶಗಳು ಬಲಿಷ್ಠ ತಂಡವನ್ನು ರಚಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಭಾರತ ತಂಡ(t20 world cup 2024 india squad) ಏಪ್ರಿಲ್ 28 ಅಥವಾ 29ರಂದು ಪ್ರಕಟಗೊಳ್ಳಲಿದೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ.

ಏಪ್ರಿಲ್​ 27ರಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಭೆ ನಡೆಯಲಿದ್ದು, ಬಳಿಕ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಜತೆಗೂಡಿ ತಂಡವನ್ನು ಘೋಷಣೆ ಮಾಡಲಿದ್ದಾರೆ ಎಂದು ಕ್ರಿಕ್​ಇನ್ಫೋ ತಿಳಿಸಿದೆ.

ಕಳೆದ ವಾರ ಕೆಲ ಮಾಧ್ಯಗಳಲ್ಲಿ ವರದಿಯಾದ ಪ್ರಕಾರ ಯಾವುದೇ ಹೊಸ ಮುಖಗಳಿಗೆ ಮಣೆ ಹಾಕದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಹೀಗಾಗಿ ಹಿರಿಯ ಆಟಗಾರರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜಾ, ಕುಲ್​ದೀಪ್​ ಯಾದವ್​ ಮೊಹಮ್ಮದ್​ ಸಿರಾಜ್​ ಜತೆ ಯುವ ಆಟಗಾರರಾದ ಅರ್ಶ್​ದೀಪ್​ ಸಿಂಗ್, ರಿಂಕು ಸಿಂಗ್​​ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಸದ್ಯಕ್ಕೆ ಆರಂಭಿಕ ಸ್ಥಾನಕ್ಕೆ ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​ ಮತ್ತು ಅಭಿಷೇಕ್​ ಶರ್ಮ, ಆಲ್​ರೌಂಡರ್​ ಕೋಟಾದಲ್ಲಿ ಶಿವಂ ದುಬೆ ಮತ್ತು ಹಾರ್ದಿಕ್​ ಪಾಂಡ್ಯ ನಡುವೆ ತೀವ್ರ ಪೈಪೋಟಿ ಇದೆ. ರೋಹಿತ್​ ಶರ್ಮ ಜತೆ ಕೊಹ್ಲಿ ಇನಿಂಗ್ಸ್​ ಆರಂಭಿಸಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ; ರಣಜಿ ತಂಡ ಕಾಣಲ್ಲವೇ ಎಂದ ಮೋಹನ್‌ದಾಸ್‌ ಪೈ

ರಿಷಭ್​ ಪಂತ್​ ಅವರು ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿದ್ದರೆ, 2ನೇ ಕೀಪರ್ ಆಯ್ಕೆಗೆ ಒಟ್ಟು 4 ಮಂದಿ ಆಟಗಾರರ ನಡುವೆ ತೀವ್ರ ಸ್ಪರ್ಧೆ ಇದೆ. ರಾಹುಲ್​, ಜಿತೇಶ್​ ಶರ್ಮ, ಇಶಾನ್​ ಕಿಶನ್​ ಮತ್ತು ಸಂಜು ಸ್ಯಾಮ್ಸನ್ ಇವರಲ್ಲಿ ಒಬ್ಬರು ಆಯ್ಕೆಯಾಗಬಹುದು. ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್‌ ಯಾದವ್‌ ಮತ್ತು ಹರ್ಷಿತ್​ ರಾಣಾ ಮೀಸಲು ಬೌಲರ್​ಗಳಾಗಿ ತಂಡದೊಂದಿಗೆ ಪ್ರಯಾಣಿಸಬಹುದು. ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್​ ಅಯ್ಯರ್​ಗೆ ಸ್ಥಾನ ಸಿಗುವುದು ಬಹುತೇಕ ಡೌಟ್​ ಎನ್ನಲಾಗಿದೆ.

ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

Continue Reading

ಕ್ರಿಕೆಟ್

IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

Mahesh Babu: ಸದ್ಯ ಹೈದರಾಬಾದ್​ ಆಡಿದ 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಏಪ್ರಿಲ್​ 25 ರಂದು ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ವಿರುದ್ಧ 287 ರನ್​ ಬಾರಿಸಿ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ತಂಡವೆಂಬ ದಾಖಲೆ ನಿರ್ಮಿಸಿತ್ತು.

VISTARANEWS.COM


on

Mahesh Babu
Koo

ಹೈದರಾಬಾದ್​: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಪ್ರಚಂಡ ಬ್ಯಾಟಿಂಗ್​ ಮೂಲಕ ಪಂದ್ಯದಿಂದ ಪಂದ್ಯಕ್ಕೆ ಬೃಹತ್​ ಮೊತ್ತ ಪೇರಿಸಿ ದಾಖಲೆ ಬರೆಯುತ್ತಿರುವ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡದ ಆಟಗಾರರು ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಇದೇ ವೇಳೆ ​ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು(Mahesh Babu) ಅವರು ಆಟಗಾರರನ್ನು ಭೇಟಿಯಾಗಿದ್ದಾರೆ. ಈ ಫೋಟೊವನ್ನು ಫ್ರಾಂಚೈಸಿ ತನ್ನ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಹೈದರಾಬಾದ್​ ತಂಡದ ನಾಯಕ ಪ್ಯಾಟ್​ ಕಮಿನ್ಸ್​, ಕನ್ನಡಿಗ ಮಯಾಂಕ್​ ಅಗರ್ವಾಲ್​, ರಾಹುಲ್​ ತ್ರಿಪಾಠಿ, ಅಭಿಷೇಕ್​ ಶರ್ಮ ಸೇರಿ ಕೆಲ ಆಟಗಾರರು ನೆಚ್ಚಿನ ನಟನೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಜತೆಗೆ ಕೆಲ ಕಾಲ ಕುಶಲೋಪರಿ ನಡೆಸಿದ್ದಾರೆ.


ಸದ್ಯ ಹೈದರಾಬಾದ್​ ಆಡಿದ 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಏಪ್ರಿಲ್​ 25 ರಂದು ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ವಿರುದ್ಧ 287 ರನ್​ ಬಾರಿಸಿ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ತಂಡವೆಂಬ ದಾಖಲೆ ನಿರ್ಮಿಸಿತ್ತು. ಇದಕ್ಕೂ ಮುನ್ನ ಮುಂಬೈ ವಿರುದ್ಧ 277 ರನ್​ ಬಾರಿಸಿತ್ತು. ಒಟ್ಟು ಈ ಬಾರಿಯ ಐಪಿಎಲ್​ನಲ್ಲಿ ಮೂರು ಬಾರಿ 200 ಪ್ಲಸ್​ ಮೊತ್ತ ಪೇರಿಸಿದ ಸಾಧನೆ ಹೈದರಾಬಾದ್​ ತಂಡದ್ದು.

ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್

ಜೈಪುರ: ರಾಜಸ್ಥಾನ್​ ರಾಯಲ್ಸ್​(Rajasthan Royals) ತಂಡದ ಗೆಲುವಿನ ನಾಗಲೋಟ ಮತ್ತೆ ಮುಂದುವರಿದಿದೆ. ಸೋಮವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians)​ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಅಂಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜತೆಗೆ 14 ಅಂಕದೊಂದಿಗೆ ಬಹುತೇಕ ಪ್ಲೇ ಆಫ್​ ಟಿಕೆಟ್​ ಖಚಿತ ಪಡಿಸಿಕೊಂಡಿದೆ. ಇನ್ನೊಂದು ಗೆಲುವು ಸಾಧಿಸಿದರೆ ಇದು ಅಧಿಕೃತಗೊಳ್ಳಲಿದೆ. ಸೋಲು ಕಂಡ ಮುಂಬೈ ತಂಡದ ಪ್ಲೇ ಆಫ್​ ಹಾದಿ ಕಠಿಣಗೊಂಡಿದೆ.

ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​87114 (+0.698)
ಕೆಕೆಆರ್​​75210 (+1.206)
ಹೈದರಾಬಾದ್​​75210 (+0.914)
ಚೆನ್ನೈ ಸೂಪರ್​ ಕಿಂಗ್ಸ್​​​​7428 (+0.726)
ಲಕ್ನೋ7438 (+0.123)
ಗುಜರಾತ್8448 (-1.055)
ಮುಂಬೈ8356 (-0.227)
ಡೆಲ್ಲಿ8356 (-0.477)
ಪಂಜಾಬ್​8264 (-0.292)
ಆರ್​ಸಿಬಿ8172 (-1.046)
Continue Reading

ಕ್ರೀಡೆ

Rafael Nadal: ಲೇವರ್‌ ಕಪ್‌ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್​ ನಡಾಲ್‌ ನಿವೃತ್ತಿ!

Rafael Nadal: ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್​ನಿಂದ ದೂರ ಉಳಿದಿದ್ದ ನಡಾಲ್​ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್‌ ಇಂಟರ್‌ನ್ಶಾಶನಲ್‌ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದಿಂದ ಹಿಂದೆ ಸರಿದಿದ್ದರು. ಇದೀಗ ಲೇವರ್‌ ಕಪ್‌ ಟೂರ್ನಿ ನಡಾಲ್​ಗೆ ವಿದಾಯದ ಟೂರ್ನಿಯಾಗುವ ಸಾಧ್ಯತೆ ಇದೆ.

VISTARANEWS.COM


on

Rafael Nadal
Koo

ಪ್ಯಾರಿಸ್‌: ಪದೇ ಪದೇ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, ಸ್ಪೇನ್‌ನ ರಾಫೆಲ್ ನಡಾಲ್(Rafael Nadal)​ ಅವರು 2024ರ ಲೇವರ್‌ ಕಪ್‌(Laver Cup 2024) ಟೆನಿಸ್‌ ಟೂರ್ನಿಯಲ್ಲಿ ಆಡಲಿದ್ದಾರೆ. ಅದೇ ಅವರ ಕೊನೆ ಟೂರ್ನಿಯಾಗುವ(rafael nadal retirement) ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್​ನಿಂದ ದೂರ ಉಳಿದಿದ್ದ ನಡಾಲ್​ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್‌ ಇಂಟರ್‌ನ್ಶಾಶನಲ್‌ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದಿಂದ ಹಿಂದೆ ಸರಿದಿದ್ದರು. ಇದೀಗ ಲೇವರ್‌ ಕಪ್‌ ಟೂರ್ನಿ ನಡಾಲ್​ಗೆ ವಿದಾಯದ ಟೂರ್ನಿಯಾಗುವ ಸಾಧ್ಯತೆ ಇದೆ.

ಇದೇ ವರ್ಷಾರಂಭದಲ್ಲಿ 37 ವರ್ಷದ ನಡಾಲ್ ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ ಎಂದು ಹೇಳಿದ್ದರು. ‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ಚೇತರಿಸಿ ಟೆನಿಸ್​ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು.

ಇದನ್ನೂ ಓದಿ Rafael Nadal: ಫ್ರೆಂಚ್​ ಓಪನ್, ಒಲಿಂಪಿಕ್ಸ್​ ಟೂರ್ನಿಯಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ ನಡಾಲ್​

ಆದರೆ, ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ. ಹೀಗಾಗಿ ಅವರು ಅಂತಿಮ ನಿರ್ಧಾರವೊಂದನ್ನು ಕೈಗೊಂಡಿದ್ದು ಲೇವರ್‌ ಕಪ್‌ ಬಳಿಕ ವಿದಾಯ ಘೋಷಿಸ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ಟೆನಿಸ್​ ದಿಗ್ಗಜ ರಫೆಲ್‌ ನಡಾಲ್‌ ಅವರನ್ನು ಐಟಿ ಸಂಸ್ಥೆ ಇನ್ಫೋಸಿಸ್(Infosys) ಬ್ರ್ಯಾಂಡ್‌ ಅಂಬಾಸಿಡರ್(global ambassador) ಆಗಿ ನೇಮಿಸಿತ್ತು. ಮುಂದಿನ ಮೂರು ವರ್ಷಗಳ ಕಾಲ ನಡಾಲ್​ ಅವರು ಇನ್ಫೋಸಿಸ್​ನ ಬ್ರ್ಯಾಂಡ್‌ ಅಂಬಾಸಿಡರ್ ಆಗಿರಲಿದ್ದಾರೆ.

“ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಗೌರವಾನ್ವಿತ ಟೆನಿಸ್​ ಚಾಂಪಿಯನ್​ ಆಗಿರುವ ರಫೆಲ್‌ ನಡಾಲ್‌ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಹೆಮ್ಮೆಯಾಗುತ್ತಿದೆ” ಎಂದು ಇನ್ಫೋಸಿಸ್​ನ ಸಿಇಒ ಮತ್ತು ಎಂಡಿ ಆಗಿರುವ ಸಲೀಲ್ ಪರೇಖ್ ಹೇಳಿದ್ದರು. ಎಟಿಪಿ ಟೂರ್, ರೋಲ್ಯಾಂಡ್-ಗ್ಯಾರೋಸ್, ಆಸ್ಟ್ರೇಲಿಯನ್ ಓಪನ್ ಮತ್ತು ಸೇರಿ ಟೆನಿಸ್ ಹಾಲ್ ಆಫ್ ಫೇಮ್‌ಗೆ ಡಿಜಿಟಲ್ ಇನ್ನೋವೇಶನ್ ಪಾಲುದಾರರಾಗಿ, ಬ್ರಾಂಡ್ ಇನ್ಫೋಸಿಸ್ ಜಾಗತಿಕವಾಗಿ ಎಐ, ಕ್ಲೌಡ್, ಡೇಟಾವನ್ನು ಬಳಸಿಕೊಂಡು ಒಂದು ಬಿಲಿಯನ್ ಅಭಿಮಾನಿಗಳಿಗೆ ಟೆನಿಸ್​ ಕುರಿತ ಮಾಹಿತಿಯನ್ನು ನೀಡಲು ಸದಾ ಸಿದ್ಧ ಎಂದು ಇನ್ಫೋಸಿಸ್ ತನ್ನ ಹೇಳಿಕೆಯಲ್ಲಿ ಪ್ರಕಟಿಸಿತ್ತು.

Continue Reading
Advertisement
Lok Sabha Election 2024 BJP released Pick pocket Congress poster
Lok Sabha Election 20248 mins ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Match Fixing
ಕ್ರೀಡೆ10 mins ago

Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

Ballari lok sabha constituency congress candidate e Tukaram election campaign in Ballari city
ಬಳ್ಳಾರಿ12 mins ago

Lok Sabha Election 2024: ಪಂಚ ಗ್ಯಾರಂಟಿ ಜಾರಿ ಮಾಡಿ ನುಡಿದಂತೆ ನಡೆದಿದ್ದು ಕಾಂಗ್ರೆಸ್ ಸರ್ಕಾರ: ಈ.ತುಕಾರಾಂ

Murugha Seer
ಕರ್ನಾಟಕ15 mins ago

Murugha Seer: ಪೋಕ್ಸೊ ಕೇಸ್‌ನಲ್ಲಿ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ; 4 ತಿಂಗಳು ಜೈಲಿಗೆ

T20 World Cup 2024
ಕ್ರಿಕೆಟ್24 mins ago

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ಮುಹೂರ್ತ ಫಿಕ್ಸ್‌​; ಈ ದಿನ ಘೋಷಣೆ

BrahMos Missiles
ಪ್ರಮುಖ ಸುದ್ದಿ32 mins ago

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

Reliance Jio
ವಾಣಿಜ್ಯ37 mins ago

Reliance Jio: ಡಾಟಾ ಟ್ರಾಫಿಕ್‌; ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರ ಹೊಮ್ಮಿದ ರಿಲಯನ್ಸ್ ಜಿಯೊ

CM Siddaramaiah Congress protests against Centre Go back to Modi and Amit Shah announced
ಕರ್ನಾಟಕ52 mins ago

CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ

Mahesh Babu
ಕ್ರಿಕೆಟ್1 hour ago

IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

arvind kejriwal in tihar jail
ದೇಶ1 hour ago

Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು23 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ24 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌