Site icon Vistara News

Bajrang Punia : ಪದ್ಮ ಶ್ರೀ ಪ್ರಶಸ್ತಿಯನ್ನು ಫುಟ್​ಪಾತ್​ ಮೇಲೆ ಇಟ್ಟು ಹೋದ ಬಜರಂಗ್ ಪೂನಿಯಾ!

Medal 1

ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟಕ್ಕೆ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್ ಅವರ ಆಪ್ತ ಸಂಜಯ್​ ಸಿಂಗ್ ಆಯ್ಕೆಯಾದ ಬಳಿಕ ಅಂತಾರಾಷ್ಟ್ರೀಯ ಕುಸ್ತಿಪಟುಗಳ ಬಣವೊಂದು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದಿದೆ. ಮಾಜಿ ಒಲಿಂಪಿಯನ್​ ಸಾಕ್ಷಿ ಮಲಿಕ್​ ಗುರವಾರ ತಮ್ಮ ಬೂಟ್​ ಮೇಜಿನ ಮೇಲಿಟ್ಟು ನಿವೃತ್ತಿ ಘೋಷಿಸಿದ್ದರೆ, ಶುಕ್ರವಾರ ವಿಶ್ವ ಚಾಂಪಿಯನ್​ ಬಜ್​ರಂಗ್​ ಪೂನಿಯಾ (Bajrang Punia) ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿಸುವುದಾಗಿ ಘೋಷಿಸಿದ್ದಾರೆ. ಪ್ರಶಸ್ತಿಯನ್ನು ನೀಡಲು ಹೋಗುತ್ತಿದ್ದ ಅವರಿಗೆ ತಡೆಯೊಡ್ಡಿದ್ದ ಕಾರಣ ಪದಕವನ್ನು ಅವರು ನವದೆಹಲಿಯ ಕರ್ತವ್ಯ ಪಥದ ಫುಟ್​ಪಾತ್​ನಲ್ಲಿಟ್ಟು ಮರಳಿದ್ದಾರೆ.

ಕರ್ತವ್ಯ ಪಥದಲ್ಲಿ ಪದ್ಮಶ್ರೀ ಬಿಟ್ಟು ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ, ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪದಕವನ್ನು ಮನೆಗೆ ಕೊಂಡೊಯ್ಯುವುದಿಲ್ಲ. ಹೀಗಾಗಿ ಅಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಾರೆ.

ನಾನು ಮೊದಲೇ ಹೇಳಿದಂತೆ ನಾವು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗಾಗಿ ಹೋರಾಡುತ್ತಿದ್ದೆವು. ಅವರಿಗೆ ನ್ಯಾಯ ದೊರಕಿಸಿಕೊಡಲು ನನಗೆ ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಶಸ್ತಿಯನ್ನು ಹಿಂದಿರುಗಿಸಲು ನಾನು ಇಲ್ಲಿಗೆ ಬಂದಿದ್ದೇನೆ/ ಆದಾಗ್ಯೂ, ನನಗೆ ಭೇಟಿಗೆ ಅವಕಾಶ ನೀಡಿದ ಕಾರಣ ನಾನು ಪ್ರಧಾನಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿಗೆ ಬಿಡುವಿಲ್ಲದ ವೇಳಾಪಟ್ಟಿ ಇದೆ. ಆದ್ದರಿಂದ ನಾನು ಪ್ರಧಾನಿಗೆ ಬರೆದ ಪತ್ರದ ಜತೆ ನನ್ನ ಪ್ರಶಸ್ತಿಯನ್ನು ಇಡುತ್ತಿದ್ದೇನೆ. ನಾನು ಈ ಪದಕವನ್ನು ನನ್ನ ಮನೆಗೆ ಕೊಂಡೊಯ್ಯುವುದಿಲ್ಲ” ಎಂದು ಪುನಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ನಡೆದ ಬಹುನಿರೀಕ್ಷಿತ ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಮಾಜಿ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಅನಿತಾ ಶಿಯೋರನ್ ಅವರನ್ನು 33 ಮತಗಳ ಅಂತರದಿಂದ ಸೋಲಸಿದ್ದರು. ಸಂಜಯ್​ 40 ಓಟು ಪಡೆದಿದ್ದರೆ, ಅನಿತಾಗೆ ಕೇವಲ 7 ಮತಗಳು ಬಿದ್ದಿದ್ದವು.

ಸಂಜಯ್ ಸಿಂಗ್ ಅವರ ಆಯ್ಕೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಒಲಿಂಪಿಯನ್​ ಸಾಕ್ಷಿ ಮಲಿಕ್​ , ಪುನಿಯಾ ಮತ್ತು ವಿನೇಶ್ ಫೋಗಟ್ ಕ್ರೀಡೆಯನ್ನು ತೊರೆಯುವುದಾಗಿ ಹೇಳಿದ್ದರು. ಪ್ರತಿಭಟನಾರ್ಥವಾಗಿ ಅವರು ಶೂಗಳನ್ನು ಬಿಚ್ಚಿ ಮೇಜಿನ ಮೇಲೆ ಇಟ್ಟಿದ್ದರು.

ನಾವು ನ್ಯಾಯಕ್ಕಾಗಿ ಹೋರಾಡಿದ್ದೇವೆ. ಆದರೆ, ಆದರೆ ಯಾರ ವಿರುದ್ಧ ಹೋರಾಡಿದ್ದೇವೊ ಅವರ ವ್ಯವಹಾರ ಪಾಲುದಾರ ಮತ್ತು ಆಪ್ತ ಸಹಾಯಕ ಸಂಜಯ್​ ಸಿಂಗ್​ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ನಾನು ಕುಸ್ತಿಯನ್ನು ತ್ಯಜಿಸುತ್ತೇನೆ. ಇಂದಿನಿಂದ ನೀವು ನನ್ನನ್ನು ಕುಸ್ತಿ ಮ್ಯಾಟ್​ ಮೇಲೆ ನೋಡುವುದಿಲ್ಲ” ಎಂದು ಮಲಿಕ್ ಹೇಳಿದರು.

ಇದನ್ನೂ ಓದಿ : Team India : ಭಾರತ ಕ್ರಿಕೆಟ್​ ತಂಡದ ಆಟಗಾರರಿಗೆ ಮಾನಸಿಕ ಒತ್ತಡದ ಸಮಸ್ಯೆ?

ಸ್ಥಳದಿಂದ ಹೊರಡುವ ಮೊದಲು ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಮಲಿಕ್ ತೀವ್ರ ದುಃಖ ವ್ಯಕ್ತಪಡಿಸಿದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದಿಂದಾಗಿ ಆಗಸ್ಟ್ 12 ರಂದು ನಿಗದಿಯಾಗಿದ್ದ ಡಬ್ಲ್ಯುಎಫ್ಐ ಚುನಾವಣೆಗಳನ್ನು ಸೆಪ್ಟೆಂಬರ್ 25 ರವರೆಗೆ ಮುಂದೂಡಲಾಗಿತ್ತು.

ಜೂನ್​ನಲ್ಲಿ ನಿಗದಿಯಾಗಿದ್ದ ಚುನಾವಣೆಗಳು ಹಲವು ಬಾರಿ ಮುಂದೂಡಿಕೆಯಾಗಿದ್ದವು. ಪೂನಿಯಾ ಮತ್ತು ಮಲಿಕ್ ಈ ತಿಂಗಳ ಆರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿ ಡಬ್ಲ್ಯುಎಫ್ಐ ಚುನಾವಣೆ ಬಗ್ಗೆ ಚರ್ಚಿಸಿದ್ದರು. ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ನಂತರ ದೇಶದ ಉನ್ನತ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ 5 ತಿಂಗಳ ಸುದೀರ್ಘ ಪ್ರತಿಭಟನೆ ನಡೆಸಿದ್ದರು.

Exit mobile version