Site icon Vistara News

Wrestlers Protest: ಏಷ್ಯನ್​ ಗೇಮ್ಸ್​ ಆಡುತ್ತೇವೆ ಆದರೆ… ಸರ್ಕಾರಕ್ಕೆ ವಾರ್ನಿಂಗ್​​ ಕೊಟ್ಟ ಕುಸ್ತಿಪಟುಗಳು

wrestlers protest

ನವದೆಹಲಿ: ಕ್ರೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್(anurag thakur)​ ಜತೆ ಸಭೆ ನಡೆಸಿದ ಬಳಿಕ ಜೂನ್​ 15ರ ವರೆಗೆ ಬ್ರಿಜ್​ ಭೂಷಣ್​ ಶರಣ್​ ಸಿಂಗ್(Brij Bhushan Sharan Singh)​ ವಿರುದ್ಧದ ಪ್ರತಿಭಟನೆಯಿಂದ(Wrestlers Protest) ಹಿಂದೆ ಸರಿದಿರುವ ಕುಸ್ತಿಪಟುಗಳು ಇದೀಗ ಕೇಂದ್ರಕ್ಕೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ.

ತಾತ್ಕಾಲಿಕವಾಗಿ ಪ್ರತಿಭನೆಯಿಂದ ಹಿಂದೆ ಸರಿದಿರುವ ಕುಸ್ತಿಪಟುಗಳು ತಮ್ಮ ಕೇಂದ್ರೀಯ ಉದ್ಯೋಗಕ್ಕೆ ಮರಳಿದ್ದಾರೆ. ಇದೀಗ ಮುಂಬರುವ ಏಷ್ಯನ್​ ಗೇಮ್ಸ್​ನಲ್ಲಿ ಪಾಲ್ಗೊಳ್ಳುವ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ. ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಒಲಿಂಪಿಯನ್​ ಕುಸ್ತಿಪಟು ಸಾಕ್ಷಿ ಮಲಿಕ್(sakshi malik) ಅವರು “​ನಾವು ನಡೆಸುತ್ತಿರುವ ಪ್ರತಿಭಟನೆಯ ಕುರಿತಾದ ಎಲ್ಲ ಸಮಸ್ಯೆಗಳು ಬಗೆಹರಿದಲ್ಲಿ ಮಾತ್ರವೇ ನಾವೆಲ್ಲರೂ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧೆ ಮಾಡಲಿದ್ದೇವೆ. ಮಾನಸಿಕವಾಗಿ ನಾವು ಎಷ್ಟು ಕುಗ್ಗಿ ಹೋಗಿದ್ದೇವೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಸಮಸ್ಯೆ ಬಗೆ ಹರಿದರೆ ಮಾತರ ಈ ಟೂರ್ನಿಯಲ್ಲಿ ದೇಶಕ್ಕಾಗಿ ಆಡಲಿದ್ದೇವೆ” ಎಂದು ಸಾಕ್ಷಿ ಮಲಿಕ್​ ಹೇಳಿದ್ದಾರೆ.

ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮಹತ್ವದ ತಿರುವು

ಇದೇ ವೇಳೆ ಮಾತನಾಡಿದ ಸಾಕ್ಷಿ ಮಲಿಕ್​ ಈ ಪ್ರಕರಣದಲ್ಲಿ ನಮ್ಮ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ. ಬ್ರಿಜ್​ ಭೂಷಣ್​ ವಿರುದ್ಧ ಪ್ರಕರಣ ದಾಖಲಿಸಿದ್ದ ಅಪ್ರಾಪ್ತ ಬಾಲಕಿಯ ತಂದೆಯ ಮೇಲೂ ಒತ್ತಡ ಬಿದ್ದಿರುವ ಕಾರಣದಿಂದ ಅವರು ಸುಳ್ಳು ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಸದ್ಯ ಅನುರಾಗ್​ ಠಾಕೂರ್​ ಅವರ ಬರವಸೆಯ ಮೇರೆಗೆ ಜೂನ್​ 15ರ ತನಕ ಪ್ರತಿಭಟನೆಯಿಂದ ಹಿಂದೆ ಸರಿದಿರುವ ಕುಸ್ತಿಪಟುಗಳು ಜೂನ್​ 15ರ ಬಳಿಕ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಸದ್ಯದ ಕುತೂಹಲ. ಈ ಮಧ್ಯೆ ಕುಸ್ತಿಪಟುಗಳು ಮಹಿಳಾ ಮಹಾ ಪಂಚಾಯಿತಿ ಮತ್ತು ಸೋನೆಪತ್‌ನಲ್ಲಿನ ಮಹಾ ಪಂಚಾಯತ್‌ಗೆ ಭೇಟಿ ನೀಡಿ ಕೆಲವು ಚರ್ಚೆಗಳನ್ನು ನಡೆಸಿದ್ದಾರೆ. ಆದರೆ ಯಾವ ವಿಚಾರದಲ್ಲಿ ಇವರು ಚರ್ಚಿಸಿದ್ದಾರೆ ಎಂದು ಎಲ್ಲೂ ಬಹಿರಂಗಗೊಂಡಿಲ್ಲ.

Exit mobile version