ಅಹಮದಾಬಾದ್: ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಅಮೋಘ 82 ರನ್ ಬಾರಿಸಿದ್ದರು. ಆದರೆ, ಖುಷಿಯಲ್ಲಿದ್ದ ಅವರು ವಿಕೆಟ್ ಕೀಪಿಂಗ್ಗೆ ಬರುವಾಗ ಪ್ಯಾಂಟ್ ಉಲ್ಟಾ-ಪಲ್ಟಾ ಹಾಕಿಕೊಂಡು ಬಂದು ಮುಜುಗಕ್ಕೆ ಒಳಗಾದರು. ತಕ್ಷಣದಲ್ಲೇ ಅವರು ಪ್ಯಾಂಟ್ ಬದಲಾಯಿಸಲು ಮುಂದಾದರೂ ಅಂಪೈರ್ಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯದ ಹೊತ್ತಿಗೆ ಸ್ವಲ್ಪ ಮಟ್ಟಿಗೆ ಗೊಂದಲ ಉಂಟಾಯಿತು.
ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡ 2 ವಿಕೆಟ್ ನಷ್ಟಕ್ಕೆ 227 ರನ್ ಬಾರಿಸಿತು. ಆರಂಭಿಕರಾಗಿ ಬ್ಯಾಟ್ ಮಾಡಿದ್ದ ವೃದ್ಧಿಮಾನ್ ಸಾಹ 43 ಎಸೆತಗಳಿಗೆ 81 ರನ್ ಬಾರಿಸಿದ್ದರು.ಈ ಮೂಲಕ ಅವರು ಹಿರಿಯ ಆಟಗಾರರ ಶಹಬ್ಬಾಸ್ಗಿರಿಗೆ ಪಾತ್ರರಾಗಿದ್ದರು. ಎರಡನೇ ಇನಿಂಗ್ಸ್ ಆರಂಭವಾಗುವ ಹೊತ್ತಿಗೆ ವೃದ್ಧಿಮಾನ್ ಸಾಹ ವಿಕೆಟ್ ಕೀಪಿಂಗ್ಗೆ ಗ್ಲವ್ಸ್ ಹಾಕಿಕೊಂಡು ಬಂದರು. ಆದರೆ, ಬರುವ ಅರ್ಜೆಂಟಲ್ಲಿ ಪ್ಯಾಂಟ್ ಹಿಂದೆ, ಮುಂದೆ ಹಾಕಿಕೊಂಡು ಬಂದಿದ್ದರು. ಹೀಗಾಗಿ ಪ್ರಾಯೋಜಕ ಸಂಸ್ಥೆಗಳ ಲೋಗೋ ಹಿಂದಿನ ಭಾಗಕ್ಕೆ ಬಂತು. ತಕ್ಷಣ ಅವರು ಪ್ಯಾಂಟ್ ಬದಲಾಯಿಸಲು ಮುಂದಾದರು. ಆದರೆ, ಅಂಪೈರ್ ಅದಕ್ಕೆ ಅವಕಾಶ ಕೊಡಲಿಲ್ಲ.
ಇದನ್ನೂ ಓದಿ : IPL 2023 : ವೃದ್ಧಿಮಾನ್ ಸಾಹಸಕ್ಕೆ ಶಹಬ್ಬಾಸ್ ಎಂದ ವಿರಾಟ್ ಕೊಹ್ಲಿ
ಒಂದು ಬಾರಿ ತಂಡ ಕಣಕ್ಕೆ ಇಳಿದ ಬಳಿಕ ಒಂದು ಓವರ್ ಪೂರ್ಣಗೊಂಡ ಬಳಿಕ ಮಾತ್ರ ಆಟಗಾರರನ್ನು ಬದಲಾಯಿಸಲು ಸಾಧ್ಯವಿದೆ. ಹೀಗಾಗಿ ತಕ್ಷಣವೇ ವಾಪಸ್ ಹೊರಟಿದ್ದ ವೃದ್ಧಿಮಾನ್ ಅವರನ್ನು ಅಂಪೈರ್ ತಡೆದರು. ಆ ಓವರ್ ಪೂರ್ಣಗೊಂಡ ಬಳಿಕ ಅವರು ಬದಲಿ ವಿಕೆಟ್ಕೀಪರ್ ಶ್ರೀಕರ್ ಭರತ್ ಅವರನ್ನು ಕರೆಸಿಕೊಂಡು ಹೋದರು. ಆದರೆ ತಕ್ಷಣದಲ್ಲೇ ಅವರು ವಾಪಸ್ ಬರಲಿಲ್ಲ.
ಪಂದ್ಯದಲ್ಲಿ ಏನಾಯಿತು?
ಬ್ಯಾಟಲ್ ಆಫ್ ಬ್ರದರ್ಸ್” ಎಂದೇ ಕರೆಯಲ್ಪಟ್ಟ ಭಾನುವಾರದ ಐಪಿಎಲ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ 56 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಲಕ್ನೋ ವಿರುದ್ಧ ಗುಜರಾತ್ ಅಜೇಯ ದಾಖಲೆಯನ್ನು ಉಳಿಸಿಕೊಂಡಿತು. ಉಭಯ ತಂಡಗಳು ಐಪಿಎಲ್ನಲ್ಲಿ ಇದುವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿದ್ದು ನಾಲ್ಕೂ ಪಂದ್ಯದಲ್ಲಿಯೂ ಹಾರ್ದಿಕ್ ಪಡೆ ಮೇಲುಗೈ ಸಾಧಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ತಂಡ ಶುಭಮನ್ ಗಿಲ್(ಅಜೇಯ 94) ಮತ್ತು ವೃದ್ಧಿಮಾನ್ ಸಾಹಾ(81) ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಬಾರಿಸಿತು. ಜವಾಬಿತ್ತ ಲಕ್ನೋ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಶರಣಾಯಿತು. ಗುಜರಾತ್ ಈ ಗೆಲುವಿನೊಂದಿಗೆ 16 ಅಂಕ ಸಂಪಾದಿಸಿ ಪ್ಲೇ ಆಫ್ ಸನಿಹಕ್ಕೆ ಬಂದು ನಿಂತಿದೆ.