Site icon Vistara News

WTC 2023-25 Points Table: ಆರರಿಂದ ಅಗ್ರಸ್ಥಾನಕ್ಕೇರಿದ ಟೀಮ್​ ಇಂಡಿಯಾ

Mukesh Kumar struck in his first over of the Test

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯ ಸೋತಾಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ(WTC 2023-25 Points Table) ಅಗ್ರಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ್ದ ಭಾರತ, ಇದೀಗ ದ್ವಿತೀಯ ಪಂದ್ಯದಲ್ಲಿ ಗೆಲುವು ಸಾಧಿಸಿ 6ನೇ ಸ್ಥಾನದಿಂದ ಮತ್ತೆ ಅಗ್ರಸ್ಥಾನಕ್ಕೆ ಜಿಗಿದಿದೆ. ಅಗ್ರಸ್ಥಾನದಲ್ಲಿದ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನಕ್ಕೆ ಜಾರಿದೆ.

​ಭಾರತ ತಂಡ ಸದ್ಯ ಈ ಗೆಲುವಿನಿಂದಾಗಿ ಆಡಿದ ಮೂರು ಟೆಸ್ಟ್​ಗಳಲ್ಲಿ ಒಂದು ಸೋಲು 2 ಗೆಲುವು ಮತ್ತು 1 ಡ್ರಾ ಸಾಧಿಸಿ ಶೇ. 54.16 ಗೆಲುವಿನ ಪ್ರತಿಶತದೊಂದಿಗ ಅಗ್ರಸ್ಥಾನ ಪಡೆದಿದೆ. ಶೇ. 50 ಗೆಲುವಿನ ಪ್ರತಿಶತ ಸಾಧಿಸಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ನಿಗದಿತ ಅವಧಿಯೊಳಗೆ ಓವರ್​ ಪೂರ್ಣಗೊಳಿಸಿದ ಕಾರಣಕ್ಕೆ ಭಾರತ ತಂಡಕ್ಕೆ ಐಸಿಸಿ ದಂಡ ವಿಧಿಸಿತ್ತು. ಈ ಪರಿಣಾಮ -2 ಫೆನಾಲ್ಟಿ ಅಂಕವೂ ಕೂಡ ಭಾರತಕ್ಕೆ ಸಿಕ್ಕಿದೆ.

ಒಂದು ಸ್ಥಾನ ಕುಸಿತ ಕಂಡ ಆಸ್ಟ್ರೇಲಿಯಾ


ನ್ಯೂಜಿಲ್ಯಾಂಡ್​ ತಂಡ ಗೆಲುವಿನ ಶೇಕಡಾವಾರು 50 ರೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಶೇಕಡಾ 50 ರೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಗೆದ್ದರೆ ಮತ್ತೆ ಮೇಲೇರುವ ಅವಕಾಶ ಕಮಿನ್ಸ್​ ಬಳಗದ ಮುಂದಿದೆ. ವೆಸ್ಟ್ ಇಂಡೀಸ್ 16.67 ಶೇಕಡಾದೊಂದಿಗೆ ಏಳನೇ ಮತ್ತು ಇಂಗ್ಲೆಂಡ್ 15 ಶೇಕಡಾದೊಂದಿಗೆ ಎಂಟನೇ ಸ್ಥಾನದಲ್ಲಿದೆ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನ 45.83 ಶೇಕಡಾವಾರು ಅಂಕದೊಂದಿಗೆ 5ನೇ ಸ್ಥಾನ ಪಡೆದಿದೆ.

ಇದನ್ನೂ ಓದಿ Dean Elgar Retirement: ಡೀನ್​ ಎಲ್ಗರ್​ಗೆ ಸ್ಮರಣೀಯ ಬೀಳ್ಕೊಡುಗೆ ಮಾಡಿದ ಟೀಮ್​ ಇಂಡಿಯಾ

ಅಂಕಪಟ್ಟಿ ಹೀಗಿದೆ


ಪಂದ್ಯ ಗೆದ್ದ ಭಾರತ


ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಈ ಟೆಸ್ಟ್​ ಪಂದ್ಯ ಕೇವಲ ಎರಡನೇ ದಿನಕ್ಕೆ ಮುಕ್ತಾಯ ಕಂಡಿತು. ಗುರುವಾರ ಮೂರು ವಿಕೆಟ್ ನಷ್ಟಕ್ಕೆ 62 ರನ್ ಮತ್ತು 36 ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಐಡೆನ್​ ಮಾರ್ಕ್ರಮ್​ ಅವರ ಶತಕದ ಸಾಹಸದಿಂದ 176 ರನ್​ಗೆ ಆಲೌಟ್​ ಆಯಿತು. 79 ರನ್ ಗೆಲುವಿನ ಗುರಿ ಪಡೆದ ಭಾರತ 3 ವಿಕೆಟ್​ ನಷ್ಟಕ್ಕೆ 80 ರನ್​ ಬಾರಿಸಿ 7 ವಿಕೆಟ್​ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು ಡ್ರಾದೊಂದಿಗೆ ಮುಕ್ತಾಯಗೊಳಿಸಿತು. ಜತೆಗೆ ಕೇಪ್​ ಟೌನ್​ನಲ್ಲಿ ಟೆಸ್ಟ್​ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹಿರಿಮೆಗೆ ಭಾರತ ತಂಡ ಪಾತ್ರವಾಯಿತು.


79 ರನ್​ ಚೇಸಿಂಗ್​ ವೇಳೆ ಭಾರತ ಪರ ಯಶಸ್ವಿ ಜೈಸ್ವಾಲ್​ ಬಿರುಸಿನ ಬ್ಯಾಟಿಂಗ್ ನಡೆಸಿ 6 ಬೌಂಡರಿ ನೆರವಿನಿಂದ 28 ರನ್​ ಬಾರಿಸಿದರು. ಶುಭಮನ್​ ಗಿಲ್​ 10, ವಿರಾಟ್​ ಕೊಹ್ಲಿ 12 ರನ್​ಗೆ ವಿಕೆಟ್​ ಕೈಚೆಲ್ಲಿದರು. ನಾಲ್ಕನೇ ವಿಕೆಟ್​ಗೆ ಬಂದ ಶ್ರೇಯಸ್​ ಅಯ್ಯರ್​ ಬೌಂಡರಿ ಬಾರಿಸಿ ಭಾರತದ ಗೆಲುವನ್ನು ಸಾರಿದರು. ನಾಯಕ ರೋಹಿತ್​ 17 ರನ್​ ಬಾರಿಸಿ ಅಜೇಯಾಗಿ ಉಳಿದರು. ಭಾರತದ ಪರ ಬಿಗು ದಾಳಿ ಸಂಘಟಿಸಿದ ಜಸ್​ಪ್ರೀತ್​ ಬುಮ್ರಾ 6, ಮುಖೇಶ್ ಕುಮಾರ್ 2, ಸಿರಾಜ್ ಮತ್ತು ಪ್ರಸಿದ್ಧ್​ ಕೃಷ್ಣ ತಲಾ ಒಂದು ವಿಕೆಟ್ ಪಡೆದರು. ಸಿರಾಜ್​ ಮೊದಲ ಇನಿಂಗ್ಸ್​ನಲ್ಲಿ 15 ರನ್​ಗೆ 6 ವಿಕೆಟ್​ ಕಿತ್ತು ಮಿಂಚಿದ್ದರು.

Exit mobile version