Site icon Vistara News

WTC Final 2023: ಕೊಹ್ಲಿಯನ್ನು ಹೊಗಳಿ ರೋಹಿತ್​ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ ಸ್ಟಾರ್​ ನಟಿ!

Troll Rohit Sharma

ಹೈದರಾಬಾದ್​: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್(WTC Final 2023)​ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ರೋಹಿತ್​ ಶರ್ಮಗೆ(Rohit Sharma) ತೆಲುಗಿನ ವಿವಾದಾತ್ಮಕ ನಟಿ ಶ್ರೀ ರೆಡ್ಡಿ(sri reddy) ಅವರು ಟ್ವಿಟರ್​ನಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಆದರೆ ಕಿಂಗ್​ ವಿರಾಟ್​ ಕೊಹ್ಲಿ(virat kohli) ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಲಂಡನ್‌ನ ಅತ್ಯಂತ ಪುರಾತನವೂ ಆದ ಕೆನ್ನಿಂಗ್ಟನ್‌ ಓವಲ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ 469 ರನ್​ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್​ ನಡೆಸಿದ ಭಾರತ 296 ರನ್​ ಗಳಿಸಿ 173 ರನ್​ಗಳ ಹಿನ್ನಡೆ ಅನುಭವಿಸಿದೆ. ಸದ್ಯ ಆಸೀಸ್​ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿದೆ.

ರೋಹಿತ್​ ಶರ್ಮ ಅವರು ಟಾಸ್​ ಸೋತು ಬೌಲಿಂಗ್​ ಆರಿಸಿದ್ದೇ ತಂಡದ ಹಿನ್ನಡೆಗೆ ಪ್ರಮುಖ ಕಾರಣ ಎಂದಿರುವ ಶ್ರೀ ರೆಡ್ಡಿ ಅವರು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದೇನು ಐಪಿಎಲ್ ನಾಯಕತ್ವ​ ಎಂದುಕೊಂಡಿದ್ದಾರಾ?, ನಿಮ್ಮ ನಾಯಕತ್ವವನ್ನು ನೋಡಿ ವಿರಾಟ್​ ಕೊಹ್ಲಿ ನಗುತ್ತಿದ್ದಾರೆ. ದಿನವಿಡಿ ಫೀಲ್ಡಿಂಗ್ ಮತ್ತು ಬೌಲಿಂಗ್ ಮಾಡಬೇಕಾದರೆ ಆಟಗಾರರಿಗೆ ನೀವು ಜೋಶ್​ ತುಂಬುವ ಮೂಲಕ ಸ್ಫೂರ್ತಿಯಾಗಬೇಕು. ಆದರೆ ನೀವೇ ಸಪ್ಪೆ ಮೋರೆ ಹಾಕಿ ಮೈದಾನದಲ್ಲಿ ನಿಂತರೆ ಹೇಗೆ?, ಇದಕ್ಕೆಲ್ಲ ವಿರಾಟ್​ ಕೊಹ್ಲಿಯನ್ನು ನೋಡಿ ಕಲಿಯಬೇಕು. ಅವರು ಆಟಗಾರರನ್ನು ಸದಾ ಹುರಿದುಂಬಿಸುತ್ತಿರುತ್ತಾರೆ. ನಿಮ್ಮ ನಾಯಕತ್ವ ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ” ಎಂದು ಟ್ವೀಟ್​ ಮೂಲಕ ರೋಹಿತ್​ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದರ ಜತೆಗೆ ಮೊಹಮ್ಮದ್​ ಸಿರಾಜ್ ಬಗ್ಗೆಯೂ ಕಟುವಾದ ಕಾಮೆಂಟ್ ಮಾಡಿದ್ದು, ಸಿರಾಜ್ ಎಷ್ಟು ಚೀಪ್ ಬೌಲಿಂಗ್ ನಡೆಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ WTC Final 2023: ದಾಖಲೆ ಬರೆದ ಅಜಿಂಕ್ಯ ರಹಾನೆ; 296ಕ್ಕೆ ಭಾರತ ಆಲೌಟ್​

ಶ್ರೀ ರೆಡ್ಡಿ ಮಾಡಿರುವ ಈ ಟ್ವೀಟ್​ಗೆ ರೋಹಿತ್​ ಶರ್ಮ ಅಭಿಮಾನಿಗಳು ಸರಿಯಾದ ರೀತಿಯಲ್ಲಿಯೇ ತಿರುಗೇಟು ನೀಡಿದ್ದಾರೆ. ಕ್ರಿಕೆಟ್​ ಬಗ್ಗೆ ತಿಳಿಯದ ನೀವು ಈ ರೀತಿ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಿಮ್ಮ ಈ ಟ್ವೀಟ್​ ನಿಂದ ರೋಹಿತ್​ ನಾಯಕತ್ವದ ಮೇಲೆ ಯಾವುದೇ ಪ್ರಭಾವವು ಬೀರುವುದಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.

Exit mobile version