Site icon Vistara News

WTC Final 2023: ಬಾಲ್ ಟ್ಯಾಂಪರಿಂಗ್ ನಡೆಸಿದರೇ ಆಸೀಸ್​ ಆಟಗಾರರು; ಕ್ಯಾಮೆರಾಗೆ ಸೆರೆಸಿಕ್ಕ ದೃಶ್ಯದಲ್ಲೇನಿದೆ?

Ball Tampering

ಲಂಡನ್​: ವಿಶ್ವ ಕ್ರಿಕೆಟ್​ನಲ್ಲಿ ಮತ್ತೆ ಆಸೀಸ್​ ಆಟಗಾರರ ವಿರುದ್ಧ ಬಾಲ್ ಟ್ಯಾಂಪರಿಂಗ್(Ball Tampering) ಆರೋಪ ಕೇಳಿ ಬಂದಿದೆ. ಭಾರತ ವಿರುದ್ಧ ಸಾಗುತ್ತಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ(WTC Final 2023) ಆಸೀಸ್​ ಆಟಗಾರರು ಬೌಲ್​ ಟ್ಯಾಂಪರಿಂಗ್ ನಡೆಸಿದ್ದಾರೆ ಎಂದು ಪಾಕ್​ ತಂಡ ಮಾಜಿ ಆಟಗಾರ ಬಾಸಿತ್‌ ಅಲಿ(Basit Ali) ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಯೂಟ್ಯೂಬ್ ವಿಡಿಯೊದಲ್ಲಿ ಮಾತನಾಡಿದ ​ಬಾಸಿತ್‌ ಅಲಿ, ಆಸ್ಟ್ರೇಲಿಯಾದ ಇಷ್ಟು ದೊಡ್ಡ ಕುತಂತ್ರವನ್ನು ಯಾರೊಬ್ಬರೂ ಗಮನಿಸದಿರುವುದು ಆಘಾತಕಾರಿ ವಿಷಯವಾಗಿದೆ. ಚೆಂಡನ್ನು ಎದುರಿಸಿದ ಭಾರತೀಯ ಬ್ಯಾಟರ್‌ಗಳು ಕೂಡಾ ಪ್ರತಿಕ್ರಿಯೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ ಎಂದಿದ್ದಾರೆ.

ಭಾರತದ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಆಸೀಸ್ ಆಟಗಾರರು ಚೆಂಡನ್ನು ಟ್ಯಾಂಪರಿಂಗ್‌ ಮಾಡಿದ್ದಾರೆ. ಇದೇ ಕಾರಣಕ್ಕೆ ಪ್ರಮುಖ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ(Virat Kohli) ಮತ್ತು ಚೇತೇಶ್ವರ ಪೂಜಾರ(Cheteshwar Pujara) ಅವರ ವಿಕೆಟ್‌ ಬಿದ್ದಿದೆ. ಪೂಜಾರ ಮತ್ತು ಕೊಹ್ಲಿ ಅವರ ವಿಕೆಟ್‌ ಕ್ರಮವಾಗಿ ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ಕಬಳಿಸಿದರು. ಕೊಹ್ಲಿ ಔಟಾದ ಬಾಲ್ ಸರಿಯಾಗಿ ಗಮನಿಸಿದರೆ ಇಲ್ಲಿ ಚೆಂಡಿನ ಹೊಳಪು ಹೊರಗೆ ಕಾಣುತ್ತಿತ್ತು. ಆದರೆ ಚೆಂಡು ಬೇರೆ ಕಡೆಗೆ ಚಲಿಸುತ್ತಿತ್ತು. ಜಡೇಜಾ ಅವರು ಚೆಂಡನ್ನು ಬಾರಿಸುತ್ತಿದ್ದಾಗ ಚೆಂಡು ಓವರ್ ಪಾಯಿಂಟ್‌ಗೆ ಹಾರುತ್ತಿತ್ತು. ಇದು ಹೇಗೆ ಸಾಧ್ಯ. ಅಂಪೈರ್‌ಗಳ ಕುರುಡು ತನವೇ ಇದಕ್ಕೆ ಸಾಕ್ಷಿ. ಪೂಜಾರ ಅವರ ವಿಕೆಟ್​ ಕೀಳುವಾಗಲು ಇದೇ ರೀತಿ ಚೆಂಡು ತಂತ್ರ ಉಪಯೋಗಿಸಿದ್ದಾರೆ ಎಂದು ಪಾಕ್​ ಮಾಜಿ ಆಟಗಾರ ಗಂಭಿರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ WTC Final 2023: ಬ್ರಾಡ್ಮನ್-ಬಾರ್ಡರ್ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್​

ಬಾಸಿತ್‌ ಅಲಿ ಅವರು ಮಾಡಿರುವ ಆರೋಪವನ್ನು ಗಮನಿಸುವಾಗ ಅವರ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಇರುವಂತೆ ತೋರುತ್ತಿದೆ. ಏಕೆಂದರೆ ಮಾರ್ನಸ್​ ಲಬುಶೇನ್​ ಅವರು ಜೆರ್ಸಿಯ ಒಳಭಾಗದ ಉಡುಪಿನಿಂದ ಚೆಂಡನ್ನು ಉಜ್ಜುತ್ತಿರುವ ವಿಡಿಯೊವೊಂದು ವೈರಲ್​ ಆಗಿದೆ.

Exit mobile version