ಲಂಡನ್: ರೋಚಕ ಘಟ್ಟ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಾಲ್ಕನೇ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಹೈಲೆಟ್ಸ್ ಇಲ್ಲಿದೆ.
444 ರನ್ಗಳ ಗುರಿ ಬೆನ್ನಟ್ಟುತ್ತಾ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತದ ಮೊದಲ ವಿಕೆಟ್ ಪತನ. ಶುಭ್ಮನ್ ಗಿಲ್ 18 ರನ್ಗಳಿಗೆ ಔಟ್. ಭಾರತದ ಮೊತ್ತ 7.1 ಓವರ್ಗಳಲ್ಲಿ 41.
ಭಾರತಕ್ಕೆ 444 ರನ್ ಟಾರ್ಗೆಟ್ ಎದುರಾಗಿದೆ. ಫೈನಲ್ ಪಂದ್ಯದ ಉಳಿದ ಅವಧಿಯಲ್ಲಿ ಒಟ್ಟು 137 ಓವರ್ಗಳು ಬಾಕಿ ಇದೆ. ಭೋಜನ ವಿರಾಮದ ನಂತರ ತ್ವರಿತ ರನ್ ಗಳಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿತು. ಸ್ಟಾರ್ಕ್ ಮತ್ತು ಕ್ಯೇರಿ ಅದಕ್ಕೆ ಪೂರಕವಾಗಿ ಆಡಿದರು. ಅವರಿಬ್ಬರು ಏಳನೇ ವಿಕೆಟ್ ಗೆ 120 ಎಸೆತಗಳಲ್ಲಿ 93 ರನ್ ಸೇರಿಸಿದರು. ಭಾರತಕ್ಕೆ ಈ ಮೊತ್ತವನ್ನು ದಾಟುವುದು ದೊಡ್ಡ ಸವಾಲು.
443 ರನ್ಗಳ ಮುನ್ನಡೆ ಪಡೆದಿರುವ ಆಸ್ಟ್ರೇಲಿಯಾ. ಭಾರತ ತಂಡದ ಗೆಲುವಿಗೆ 444 ರನ್ಗಳ ಗುರಿ. ಭಾರತ ತಂಡದ ಪರ 3 ವಿಕೆಟ್ ಪಡೆದ ರವೀಂದ್ರ ಜಡೇಜಾ. ತಲಾ 2 ವಿಕೆಟ್ ಉರುಳಿಸಿದ ಉಮೇಶ್ ಯಾದವ್.
ಎರಡನೇ ಇನಿಂಗ್ಸ್ನಲ್ಲಿ 8 ವಿಕೆಟ್ಗೆ 270 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡ ಆಸ್ಟ್ರೇಲಿಯಾ!
66 ರನ್ ಬಾರಿಸಿ ಕ್ರೀಸ್ನಲ್ಲಿರುವ ಅಲೆಕ್ಸ್ ಕ್ಯೇರಿ.