Site icon Vistara News

WTC Final 2023: ಭಾರತ-ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಹೈಲೆಟ್ಸ್​

WTC Final 2023

ಲಂಡನ್​: ರೋಚಕ ಘಟ್ಟ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯ ನಾಲ್ಕನೇ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಹೈಲೆಟ್ಸ್​ ಇಲ್ಲಿದೆ.

Sukhesha Padibagilu

444 ರನ್​ಗಳ ಗುರಿ ಬೆನ್ನಟ್ಟುತ್ತಾ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತದ ಮೊದಲ ವಿಕೆಟ್​ ಪತನ. ಶುಭ್​ಮನ್ ಗಿಲ್​ 18 ರನ್​ಗಳಿಗೆ ಔಟ್​​. ಭಾರತದ ಮೊತ್ತ 7.1 ಓವರ್​​ಗಳಲ್ಲಿ 41.

Sukhesha Padibagilu

ಭಾರತಕ್ಕೆ 444 ರನ್ ಟಾರ್ಗೆಟ್ ಎದುರಾಗಿದೆ. ಫೈನಲ್​ ಪಂದ್ಯದ ಉಳಿದ ಅವಧಿಯಲ್ಲಿ ಒಟ್ಟು 137 ಓವರ್​ಗಳು ಬಾಕಿ ಇದೆ. ಭೋಜನ ವಿರಾಮದ ನಂತರ ತ್ವರಿತ ರನ್ ಗಳಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿತು. ಸ್ಟಾರ್ಕ್ ಮತ್ತು ಕ್ಯೇರಿ ಅದಕ್ಕೆ ಪೂರಕವಾಗಿ ಆಡಿದರು. ಅವರಿಬ್ಬರು ಏಳನೇ ವಿಕೆಟ್ ಗೆ 120 ಎಸೆತಗಳಲ್ಲಿ 93 ರನ್ ಸೇರಿಸಿದರು. ಭಾರತಕ್ಕೆ ಈ ಮೊತ್ತವನ್ನು ದಾಟುವುದು ದೊಡ್ಡ ಸವಾಲು.

Sukhesha Padibagilu

443 ರನ್​ಗಳ ಮುನ್ನಡೆ ಪಡೆದಿರುವ ಆಸ್ಟ್ರೇಲಿಯಾ. ಭಾರತ ತಂಡದ ಗೆಲುವಿಗೆ 444 ರನ್​ಗಳ ಗುರಿ. ಭಾರತ ತಂಡದ ಪರ 3 ವಿಕೆಟ್ ಪಡೆದ ರವೀಂದ್ರ ಜಡೇಜಾ. ತಲಾ 2 ವಿಕೆಟ್​ ಉರುಳಿಸಿದ ಉಮೇಶ್ ಯಾದವ್​.

Sukhesha Padibagilu

ಎರಡನೇ ಇನಿಂಗ್ಸ್​​ನಲ್ಲಿ 8 ವಿಕೆಟ್​ಗೆ 270 ರನ್​ ಬಾರಿಸಿ ಡಿಕ್ಲೇರ್​ ಮಾಡಿಕೊಂಡ ಆಸ್ಟ್ರೇಲಿಯಾ!

Sukhesha Padibagilu

66 ರನ್​ ಬಾರಿಸಿ ಕ್ರೀಸ್​ನಲ್ಲಿರುವ ಅಲೆಕ್ಸ್​ ಕ್ಯೇರಿ.

Exit mobile version