ಲಂಡನ್: ವಿವಾದಾತ್ಮಕ ಕ್ಯಾಚ್ಗೆ(Controversial Catch) ಔಟ್ ನೀಡಿದ ಅಂಪೈರ್ ವಿರುದ್ಧ ಶುಭಮನ್ ಗಿಲ್(Shubman Gill) ಅವರು ಇನ್ಸ್ಟಾಗ್ರಾಮ್ನಲ್ಲಿ ಮತ್ತು ಟ್ವಿಟರ್ನಲ್ಲಿ ಪ್ರಕಟಿಸುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಪೈರ್ ಅವರು ಈ ನಿರ್ಧಾರ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಐಸಿಸಿ ನಿಯಮದ ವಿರುದ್ಧವೂ ಛೀಮಾರಿ ಹಾಕಿದ್ದಾರೆ.
ಆಸ್ಟ್ರೇಲಿಯಾ ತಂಡ ನೀಡಿದ 444 ರನ್ಗಳನ್ನು ಬೆನ್ನಟ್ಟುತ್ತಿದ್ದ ವೇಳೆ 19 ಎಸೆತಗಳಲ್ಲಿ 18 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಗಿಲ್ ಅವರು ಸ್ಲಿಪ್ನಲ್ಲಿ ನಿಂತಿದ್ದ ಕ್ಯಾಮರೂನ್ ಗ್ರೀನ್ಗೆ(Cameron Green) ಕ್ಯಾಚ್ ನೀಡಿದರು. ಆದರೆ ಈ ಕ್ಯಾಚ್ ಸ್ಪಷ್ಟವಾಗಿ ಕಾಣಿಸಿದ ಕಾರಣ ಪೀಲ್ಡ್ ಅಂಪೈರ್ ಅವರು ಅಂತಿಮ ನಿರ್ಧಾರಕ್ಕೆ ಮೂರನೇ ಅಂಪೈರ್ ಮೊರೆ ಹೋದರು. ಈ ವೇಳೆ ಟಿವಿ ರೀಪ್ಲೆಯಲ್ಲಿ ಚೆಂಡು ನೆಲಕ್ಕೆ ತಾಗಿದಂತೆ ಮತ್ತು ಕೈಯಲ್ಲಿ ಚೆಂಡು ಇರುವಂತೆ ಕಾಣಯತ್ತಿತ್ತು. ಕೆಲ ಕಾಲ ಇದನ್ನು ಪರೀಕ್ಷಿಸಿದ ಮೂರನೇ ಅಂಪೈರ್ ಅಂತಿಮವಾಗಿ ಔಟ್ ಎಂದು ನಿರ್ಧಾರ ಪ್ರಕಟಿಸಿದರು.
ಇದನ್ನೂ ಓದಿ WTC FInal : ಚೀಟರ್, ಚೀಟರ್… ಗಿಲ್ಗೆ ಔಟ್ ನೀಡಿದ ಅಂಪೈರ್ ವಿರುದ್ಧ ಅಭಿಮಾನಿಗಳ ಕಿಡಿ
ಚೆಂಡು ನೆಲಕ್ಕೆ ತಾಗಿರುವುದನ್ನು ಕಂಡ ಟೀಮ್ ಇಂಡಿಯಾ ಅಭಿಮಾನಿಗಳು ಅಂಪೈರ್ ಅವರ ಈ ತೀರ್ಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಶುಭಮನ್ ಗಿಲ್ ಕೂಡ ಅಂಪೈರ್ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದಾತ್ಮಕ ಕ್ಯಾಚ್‌ನ ಸ್ಕ್ರೀನ್‌ಶಾಟ್ ತೆಗೆದು ಅದನ್ನು ಇನ್‌ಸ್ಟಾಗ್ರಾಮ್ ಸ್ಟೋರಿ ಮತ್ತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ.
🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023
ಇದನ್ನೂ ಓದಿ WTC Final 2023: ಆಸ್ಟ್ರೇಲಿಯಾ ವಿರುದ್ಧ ಹೊಸ ಮೈಲುಗಲ್ಲು ತಲುಪಿದ ವಿರಾಟ್ ಕೊಹ್ಲಿ
ಕ್ಯಾಚ್‌ನ ಚಿತ್ರವನ್ನು ಪೋಸ್ಟ್ ಮಾಡುವುದರ ಜತೆಗೆ ಕನ್ನಡಿ ಮತ್ತು ಫೇಸ್‌ಪಾಮ್(Facepalm) ಎಮೋಜಿಯನ್ನು ಒಳಗೊಂಡಿರುವ ಕ್ರಿಪ್ಟಿಕ್ ಶೀರ್ಷಿಕೆ ನೀಡಿದ್ದಾರೆ. ಇದೇ ವೇಳೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕ್ಯಾಚ್‌ನ ಚಿತ್ರದೊಂದಿಗೆ ಚಪ್ಪಾಳೆ ಬಾರಿಸುವ ಇಮೋಜಿ ಹಾಕಿ ಅಂಪೈರ್ ತೀರ್ಪಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.